ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರತಿಯೆತ್ತಿದರೆ ಕೇಶವ ನಾರಾಯಣಗೆ ಪ. ಶಾಶ್ವತವೀವ ಮಾಧವ ವಾಸವವಂದ್ಯ ಗೋವಿಂದಗಾರತಿಯನೆತ್ತಿದರೆ ಅ.ಪ. ದ್ವಾಪರ ರಹಿತ ಶ್ರೀವಿಷ್ಣುವಿಗೆ ಅಪಾರ ಮಧುಸೂದನಗೆ ಪಾಪರಹಿತ ತ್ರಿವಿಕ್ರಮಗಾರತಿಯನೆತ್ತಿದರೆ1 ಸಾಧುಸೇವಿತ ವಾಮನಗೆ ಶ್ರೀಧರ ಹೃಷೀಕೇಶನಿಗೆ ಆದಿಮೂರುತಿ ಪದ್ಮನಾಭಗಾರತಿಯನೆತ್ತಿದರೆ 2 ದÁಮೋದರ ವಾಲುಳ್ಳವಗೆ(?) ಪ್ರೇಮದಿ ಸಂಕರ್ಷಣಗೆ ಕಾಮಿತಾರ್ಥವನೀವ ವಾಸುದೇವಗಾರತಿಯನೆತ್ತಿದರೆ 3 ಅನಿರುದ್ಧ ಪುರುಷೋತ್ತಮಗೆ ವಿನಯದಿಂದಲಿ ಅಧೋಕ್ಷಜಗಾರತಿಯನೆತ್ತಿದರೆ 4 ನರಸಿಂಹರೂಪನಾದವಗೆ ವರದ ಮೂರುತಿ ಅಚ್ಯುತಗೆ ಅರಿಭಯಂಕರ ಜನಾರ್ದನಗಾರತಿಯನೆತ್ತಿದರೆ 5 ಉಪೇಂದ್ರನೆಂದೆನಿಸಿಕೊಂಡವಗೆ ಅಪಾರಮಹಿಮ ಶ್ರೀಹರಿಗೆ ಗೋಪಾಲಮೂರುತಿ ಶ್ರೀಕೃಷ್ಣಗಾರತಿಯನೆತ್ತಿದರೆ 6 ಚತುರವಿಂಶತಿಮೂರುತಿಗಳಾ ಅತಿಶಯ ಧವಳವ ಪಾಡೆ ಸಿರಿ ಹಯವದನ 7
--------------
ವಾದಿರಾಜ
ಪರಮ ಸಾಹಸವಂತ ಧೀಮಂತ ಹನುಮಂತ ಪ ಸರಸರನೆ ತಾ ಬೆಳೆದ ತಾ ಮುಗಿಲ ಪರ್ಯಂತ ಅ.ಪ. ಇಳೆಯಿಂದ ನಭವ ಪರಿಯಂತವೇಕಾಕೃತಿಯು ಬೆಳಗುತಿರೆ ನೋಡಲತಿ ಚೋದ್ಯವು ವಿಲಸಿತದ ವಿಂಧ್ಯಗಿರಿಯಂತೆ ಶೋಭಿಸಿತು ಫಲಗುಣಾಗ್ರಜ ನೋಡಿ ಬೆÉರಗಾಗುತಿರಲು 1 ಪಿಂಗಾಕ್ಷಿಗಳು ದಿಕ್ತಟಂಗಳನು ಬೆಳಗುತ್ತ ಕಂಗೊಳಿಸುತಿರ್ದುದಾ ಸಮಯದಿ ಶೃಂಗಾರ ಕಾಂತಿಯಿಂ ತುಂಗವಿಕ್ರಮನ ಉ ತ್ತುಂಗ ದೇಹವು ದಿವ್ಯರಂಗು ಒಡೆದೆಸೆಯೆ 2 ಶರಧಿಶತಯೋಜನ ನೆರೆದಾಂಟಿದಾ ದೇಹ ಅರಿಭಯಂಕರ ದೇಹ ಗುರುತರದ ದೇಹ ಕರಿಗಿರೀಶನ ಚರಣ ಸರಸೀರುಹ ದ್ವಂದ್ವ ಪರಿಚರ್ಯಕ್ಕನುವಾದ ಪರಮದೇಹವಿದೆನಲು 3
--------------
ವರಾವಾಣಿರಾಮರಾಯದಾಸರು