ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನಿದೇನಿದನ್ಯಾಯ ಕೇಳಲಾಗದಯ್ಯ ಧ್ಯಾನದಿಂದಾನೆಂಬ ಹೀನ ಜನರ್ವಚನ ಪ ಪರಮಪುರುಷರ ಚರಿತ ಪರಮ ಭಕ್ತಿಯಲಿಂದ ಬರೆದೋದಿಕೇಳಿದರೆ ಪರಮಪದವೆನುತ ವರವೇದ ಸ್ಮøತಿವಾಕ್ಯ ಅರಿದರಿದು ಸಚ್ಚರಿತ ಬರೀಬಾರದೆನ್ನುವ ನರಗುರಿಗಳ ವಚನ 1 ಕನಸುಮನಸಿನೊಳೊಮ್ಮೆ ಜನಕಜೆಯವರನಂಘ್ರಿ ನೆನೆವರ್ಗೆ ಭವಬಂಧವಿನಿತಿಲ್ಲವೆನುತ ಮನುಮುನಿಗಳ್ಬರೆದಿಟ್ಟ ಘನತರದ ವಚನಗಳನು ಮನನ ಮಾಡಳಿವ ಬಿನಗುಜನರ್ವಚನ 2 ಬೀಳುತೇಳುತಲೊಮ್ಮೆ ನೀಲಶ್ಯಾಮನ ದಿವ್ಯ ಮೇಲು ಮಹಿಮೆಯ ಮನದಾಲಿಸಲು ಜವನ ದಾಳಿ ಸೋಂಕದು ಎಂದು ಶೀಲದೊರೆದ್ವಚನಗಳ ಕೇಳಿ ತಿಳಿಯದ ಮಹ ಕೀಳುಜನರ್ವಚನ 3 ಹರಿನಾಮ ಕೀರ್ತನೆಯಿಂ ಜರಾಮರಣ ಕಂಟಕª À ಕಿರಿದು ಮಾಡಿ ದಾಟಿದರು ಗುರುಹಿರಿಯರೆಲ್ಲ ನಿರುತ ನಿಜ ತಿಳಿಯದೆ ಹರಿಸ್ಮರಣೆ ಸ್ಮರಿಸದೆ ಬರಿದೆ ಬ್ರಹ್ಮೆಂಬ ಮಹನರಕಿಗಳ ವಚನ 4 ಪರಮ ಶ್ರೀಗುರುರೂಪ ವರದ ಶ್ರೀರಾಮನಂ ನೆರೆನಂಬಿ ಒಲಿಸದೆ ಗುರುವಾಗಿ ಜಗದಿ ಅರಿವಿತ್ತು ಆತ್ಮನ ಕರುಹು ತೋರಿಸಿ ಪರಮ ಪರತರದ ಮೋಕ್ಷಮಂ ಕರುಣಿಸುಯೆಂತು 5
--------------
ರಾಮದಾಸರು
ನೀ ಪಾಲಿಸದಿರಲು ನಾ ಪೋಗುವುದು ಎತ್ತ ನೀ ಪೇಳೊ ಪರಮ ಪುರುಷಾ ಅಗಣಿತ ನಾಮ ಸುರ ಪ್ರೇಮ ಸ್ವರ್ಣ ಗಿರಿವಾಸ ನರಕೇಶ ಭೂಷಾ ಪ ಉದರ ಚಿಂತಿಯಲಿ ಉದಯದಲಿ ಯೆದ್ದು ಅವರಿವರ ಸದನದಲ್ಲಿಗೆ ಹೋಗದೆ ಮೃದು ವಾಕ್ಯವಾಡದಲೆ ಮದ ಗರ್ವ ಬಲದಿಂದ ಎದುರಾದವರ ಜರಿದೆ ಮನಸಿನ ಕ್ಲೇಶದ ಪರಸುದತಿಯರನೀಕ್ಷಿಸಿ ವಿದಿತ ಕರ್ಮಗಳ ತೊರೆದೆ ಒದಗಿ ಬಂದ ಪುಣ್ಯ ಬರಿಗೈದು ಪಾಪದ ಹುದಲೊಳಗೆ ಬಿದ್ದು ಸಂಪದವಿಗೆ ದೂರದವನಾ1 ಉತ್ತಮರ ನಿಂದಿಸಿದೆ ಉಚಿತಾರ್ಥ ತಿಳಿಯದಲೆ ಹೆತ್ತವರನ್ನ ಜರಿದೆ ಹತ್ತೆಗರೆದು ಪರಿಪಾಲಿಸಿದ ದಾತರನು ಹೊತ್ತಾಕೆ ಪ್ರೀತಿ ಪೇಳುವೆ ಮತ್ತೆ ಧರ್ಮವೆಯಿಲ್ಲಾ ಮಹಾಕೃಪಣನಾಗಿ ಪರ ವಿತ್ತಾಶೆ ಪೋಗಿ ಮುಳವೆ ಚಿತ್ತಪಲ್ಲಟವಾಗಿ ವಿಷವೆಂಬ ಹಾವಿನ ಹುತ್ತಿನೊಳು ಬಿದ್ದು ಪುನಿತನಾಗದವನಾ 2 ಗುರು ನಿಂದಕರ ನೋಡಿ ಸರವಾಗಿ ಪೋಗಳುವೆನೊ ವೇದ ಸಮ್ಮತವೆ ಬಿಟ್ಟು ಮರೆವೆ ನಿನ್ನಯ ಸ್ಮರಣೆ ಗತಿಗೆ ಸಾಧನವೆಂದು ಅರಿದರಿದು ಬುದ್ಧಿಗೆಟ್ಟು ಹರಿವಾಸರದುಪವಾಸ ಮಾಡುವ ಜನರಿಗೆ ಮುರಳಾಡಿ ಮುಟ್ಟಿಯಲಿಟ್ಟು ಜಾಗರ ತೊರೆದು ಹಿರಿ ಪಾಮರನಾಗಿ ಹರಣ ಸ್ಥಿರವೆಂದು ಮದುಕರಿಯಂತೆ ತಿರುಗುವೆ ನಾ3 ಕಾಸಿಗೆ ಕಾಸು ಘರ್ತಿಸಿ ಗಳಿಸಿ ಬಿಡದೆ ಮೀಸಲಾ ಪದಾರ್ಥವೆಂಬೆ ದೋಷಕ್ಕೆ ಗುರಿಯಾಗಿ ದುರ್ಜನರ ಒಡಗೂಡಿ ರಾಸಿ ದುರನ್ನ ಉಂಬೆ ಆಶೆಯನು ತೊರಿಯದಲೆ ಉಪರಾಗ ಪರ್ವದಲಿ ಕಾಸು ದಾನವನು ಕೊಂಬೆ ಲೇಸಾದರೆ ಹಿಗ್ಗಿ ಹಾರೈಸುವೆನು ಇಷ್ಟು ಕ್ಲೇಶ ಬಂದರೆ ದೈವವೆಂದು ದೂಷಿಸುವೆನಾ4 ಒಂದೇ ಎರಡೇ ಎನ್ನ ಅಪರಾಧ ಪೇಳಿದರೆ ಎಂದೆಗೆಂದಿಗೆ ಸವಿಯದು ನೊಂದು ದುಶ್ಚಿತ್ತದಲಿ ನೀನೆ ಗತಿ ಎಂದು ಬಾಗಿಲ ಕಾಯಿದುದು ಬಂದು ಮಾತುರದಲ್ಲಿ ಬಲು ದಯಾಳು ಎನ್ನ ಸಂದೇಹವನು ತೊಡೆದು ಮುಂದಾದರೂ ಭವದ ಅಂಧ ಕೂಪದೊಳಿಡದೆ ಪೊಂದಿಸುವ ನಿನ್ನವರೊಳಗೆ ವಿಜಯವಿಠ್ಠಲ ಎನಗೆ 5
--------------
ವಿಜಯದಾಸ
ಬೇಡಿಕೊಂಬುವೆನಯ್ಯ ಬೇಗ ಬಾರಯ್ಯ ಮಾಡು ಎನ್ನೊಳೂ ದಯ ಪಂಢರಿರಾಯ ಪ ನಾಶನ ಜಗದೊಳಗೆ ಭಾಷಗಡಕನು ಆಗಿ ಸಾಸಿರೊರುಷಿರ್ದೇನು ಹೇ ಈ ಜನುಮ ಶೇಷನಯನನೆ ನಿನ್ನ ದಾಸನ ಅತಿಶಯ ದೋಷವನು ಗಣಿಸದೆ ಪೋಷಿಸೈ ಈಶ 1 ಅರಿದರಿದು ಪತಂಗ ಉರಿಯೊಳಗೆ ಬೀಳ್ವಂತೆ ಖರೆಯ ಈ ಸಂಸಾರ ಸ್ಥಿರವೆಂದು ನಂಬಿ ಪರಿಪರಿಯ ಪಾಪಂಗಳಿರಯದೆ ಮಾಡಿ ನಾ ನರಕಕ್ಕೆ ಗುರಿಯಾದೆ ಪೊರೆಯೊ ಶ್ರೀ ಹರಿಯೆ 2 ಸಿಂಧುಶಯನನೆ ಎನ್ನ ಮಂದಮತಿಯತನದ ಲಿಂದ ಮಾಡಿದ ಪಾಪ ಚಿಂದಿಸೈ ಬೇಗ ಹಿಂದಕಾದದ್ದಾಯ್ತು ಮುಂದೆ ಎನ್ನಯ ಬವಣಿ ಚಂದಾಗಿ ತಿದ್ದಯ್ಯ ತಂದೆ ಶ್ರೀರಾಮ 3
--------------
ರಾಮದಾಸರು