ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವೈಷ್ಣವನಾರೆಂದು ದೃಷ್ಟಿಸಿ ಸೃಷ್ಟಿಯೊಳು ವಿಷ್ಣುನರಿತವನೆ ವೈಷ್ಣವನು| 1 ಭಕ್ತಿರಸದೊಳು ಮುಣುಗಿ ಭಕ್ತಿಗೈದುವ ಗತಿಯ ಯುಕ್ತಿ ತಿಳಿದವನೆ ವೈಷ್ಣವನು 2 ಹರಿ ಪರಂದೈವೆಂದು ಹರಿಯ ಕೊಂಡಾಡುತಲಿ ಹರಿಯ ನೆನೆಯುವನೆ ವೈಷ್ಣವನು 3 ಹರಿ:ಓಂ ತತ್ಸದಿತಿಯೆಂಬ ಹರಿವಾಕ್ಯವನು ಅರಿತವನೆ ಪರಮ ವೈಷ್ಣವನು 4 ಹರಿಧ್ಯಾನ ನೆಲೆಗೊಂಡು ಹರಿನಾಮ ಬಲಗೊಂಡು ಹರಿಯ ಸ್ಮರಿಸುವವನೆ ವೈಷ್ಣವನು 5 ಪರದೆ ಇಲ್ಲದೆ ಪಾರ ಬ್ರಹ್ಮಸ್ವರೂಪನು ಗುರುತ ಕಂಡವನೇ ಪರಮ ವೈಷ್ಣವನು6 ಗುರುಕೃಪೆಯಿಂದ ಪರಗತಿ ಸಾಧನವು ಮುಟ್ಟಿ ಅರಿತು ಬೆರೆದನೆ ಪರಮ ವೈಷ್ಣವನು 7 ಮೂಲ ಮೂರುತಿಗ್ಯಾಗಿ ಮೇಲಗಿರಿಯನೇರುವ ಕೀಲ ತಿಳಿದವನೆ ವೈಷ್ಣವನು 8 ಉಂಟಾಗಿ ಇರುಳ್ಹಗಲಿ ಗಂಟ್ಹಾಕಿ ಹರಿಪಾದ ಬಂಟನಾದವನೆ ವೈಷ್ಣವನು 9 ಕಂಟಕ ನೀಗಿ ಮೂರು ಬಲೆಯನು ದಾಟಿ ಮೀರಿ ನಿಂದವನೇ ವೈಷ್ಣವನು 10 ಆಶಿಯನೆ ಜರಿದು ನಿರಾಶೆಯನು ಬಲಿದು ಹರಿದಾಸನಾದವನೆ ವೈಷ್ಣವನು 11 ದ್ವಾದಶನಾದವನು ಸಾಧಿಸಿ ಕೇಳುತಲಿ ಭೇದಿಸಿದವನೆ ವೈಷ್ಣವನು 11 ಅನುದಿನ ಘನಸುಖವು ಅನುಭವಿಸುವನೆ ವೈಷ್ಣವನು 12 ವಿಷ್ಣುಭಕ್ತಿಯ ಸುಖವು ಮುಟ್ಟಿ ಮುದ್ರಿಸಿ ಪುಷ್ಟವಾಗಿದೋರುವನೆ ವೈಷ್ಣವನು 13 ವಿಷ್ಣುಮೂರ್ತಿಯ ಧ್ಯಾನ ದೃಷ್ಟಾಂತ ಮಹಿಪತಿಗೆ ಕೊಟ್ಟಾ ಗುರು ಪರಮ ವೈಷ್ಣವನು 14
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹಣವೆÉ ನಿನ್ನಯ ಗುಣವೇನು ಬಣ್ಣಿಪೆನೊ ಪ. ಹಣವಿಲ್ಲದವನೊಬ್ಬ ಹೆಣವೇ ಸರಿ ಕಂಡ್ಯಾ ಅ.ಪ. ಬೆಲೆಯಾಗದವನೆಲ್ಲ ಬೆಲೆಯ ಮಾಡಿಸುವಿ ಎಲ್ಲ ವಸ್ತುಗಳನಿದ್ದಲ್ಲೆ ತರಿಸುವಿ ಕುಲಗೆಟ್ಟವರ ಸತ್ಕುಲಕೆ ಸೇರಿಸುವಿ ಹೊಲೆಯನಾದರೂ ತಂದೊಳಗಿರಿಸುವಿ 1 ಅಂಗನೆಯರ ಸಂಗ ಅತಿಶಯದಿ ಮಾಡಿಸುವಿ ಶೃಂಗಾರಾಭರಣಂಗಳ ಬೇಗ ತರಿಸುವಿ ಮಂಗನಾದರೂ ಅನಂಗನೆಂದೆನಿಸುವಿ ಕಂಗಳಿಲ್ಲದವಗೆ ಮಗಳ ಕೊಡಿಸುವಿ 2 ಚರಣಕ್ಕೆ ಬಂದಂಥ ದುರಿತವನು ಬಿಡಿಸುವಿ ಸÀರುವರಿಗೆ ಶ್ರೇಷ್ಠನರನ ಮಾಡಿಸುವಿ ಅರಿಯದ ಶುಂಠನ ಅರಿತವನೆನಿಸುವಿ ಸಿರಿ ಹಯವದನನ ಸ್ಮರಣೆ ಮರೆಸುವಿ 3
--------------
ವಾದಿರಾಜ