ಒಟ್ಟು 8 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಿತರೆ ಮನುಜ ನೀನಹುದಣ್ಣಾ ನಿಜ ದರಿವುಯಿಲ್ಲದೆ ಹ್ಯಾಂಗಹುದಣ್ಣಾ ಪ ಪರಮನಪ್ಪಣೆ ಹಿಂಗಿಹುದಣ್ಣಾ ಇದ ನರಿಯದೆ ಕೆಡುವೆ ನೀನಹುದಣ್ಣಾ ಅ.ಪ ಸಪ್ತ ಸಮುದ್ರವ ನಡೆಯಣ್ಣಾ ನಿನ ಗುಪ್ತದೆ ನಾಮವ ನುಡಿಯಣ್ಣಾ ಪ್ರಾ ಣಾಪ್ತನ ಕಂಡು ನೀ ಹಿಡಿಯಣ್ಣಾ 1 ಅಂಗಪುರೀಯೆನಬಹುದಣ್ಣಾ ಜಯ ಮಂಗಳ ನಾಯಕನಹುದಣ್ಣಾ ಜಂಗಮಗುರು ಹರಿತುಲಶಿರಾಮ ನಿಜ ಲಿಂಗನೆ ತಾನಹುದಹುದಣ್ಣ 2
--------------
ಚನ್ನಪಟ್ಟಣದ ಅಹೋಬಲದಾಸರು
ಆದಿವರಾಹನ ಚೆಲುವಪಾದವ ಕಾಣದೆ ಕಣ್ಣುವೇದನೆಯು ಆಗಿ ಬಲು ಬಾಧಿಸುತ್ತಲಿದೆಯೆನ್ನಈ ಧರೆಯೊಳಗೆ ಶುಕ್ಲನದಿಗೆ ದಕ್ಷಿಣದಲ್ಲಿದ್ದ ಮೇ-ಣ್ ದಾಡೆ ಅತ್ತಿತ್ತಂದ ಪ. ಅಷ್ಟಾ ಸ್ವಯಂ ವ್ಯಕ್ತ ಶ್ರೀಮುಷ್ಣಅಷ್ಟಾಕ್ಷರ ಮಂತ್ರವನ್ನು ಇಷ್ಟುಮಾತ್ರ ತಿಳಿದವರೆಷ್ಟು ಪುಣ್ಯ ಮಾಡಿದಾರೊಸೃಷ್ಟಿಯೊಳಗೆ ಇವರು ಶ್ರೇಷ್ಠರೆಂದು ಅರಿತರೆಕಷ್ಟವು ಬಾರದು ಎಂದೆಂದುಅಷ್ಟದಾರಿದ್ರ್ಯ ಹೋಹುದು ಅಷ್ಟೈಶ್ವರ್ಯವು ಬಾಹುದುಇಷ್ಟು ಮಾತ್ರವಲ್ಲ ಕೇಳೊ ಅಷ್ಟಪುತ್ರರು ಆಹೊರು ದೃಷ್ಟಿಬಾರದಂತೆ ಮನದಿಷ್ಟ್ಟಾರ್ಥವ ಕೊಟ್ಟು ಕಾವಅಷ್ಟದಿಕ್ಕಿನೊಡೆಯನೊಬ್ಬ 1 ವರಾಹ ಅಂಬುಜವಲ್ಲಿ ಚೆಲ್ಲಿತ್ತಾವನದಲ್ಲಿ ಇದ್ದ್ದಾದಿವರಾಹ 3 ಮಂಡೆ ಪೂ ಬಾಡದಿಂದೆನ್ನುಪುಂಡರೀಕಾಕ್ಷ ತಾ ಸವಿದುಂಡು ಮಿಕ್ಕಪ್ರಸಾದವನಾ ಪ್ರ-ಚಂಡ ಹನುಮಂತಗೆ ಕೊಟ್ಟ 4 ಭಾರವ ಮುಗಿಪೋವ್ಯಾಳೆ ಗರುಡನ ಕಂಡು ಈಗಗುರುಮಂತ್ರ ಉಪದೇಶ ಶ್ರೀ-ಹರಿಸ್ಮರಣೆಗಳಿಂದ ನರಕಬಾಧೆÉಗಳ ಇಲ್ಲದಂತೆ ಮಾಡಿ-ದರು ಶ್ರೀಹರಿಯ ವಾಲಗದಿಂದಲಿತಿರುಪತಿ ಸುತ್ತ ಶೇಷಗಿರಿಯ ವಾಸದಲ್ಲಿಪ್ಪವರಾಹ ವೆಂಕಟೇಶನಚರಣಕಮಲವನ್ನು ಹರುಷದಿಂದಲಿ ಕಂಡುಪರಮಸುಖವನಿತ್ತ ಹಯವದನನ ನಂಬಿರೊ 5
--------------
ವಾದಿರಾಜ
ಏನಿದೆತ್ತಣ ಬಯಕೆ ಎಲೊ ಮಂಕು ಜೀವನೀನು ಅರಿತರೆ ಪೇಳು ನಿಜವನೆನಗೆ ಪ ಎಂಟೆರಡು ಮಾರುತರು ಎಡೆಎಡೆಗೆ ಬರುತಿರಲುನಂಟರೈವರು ಕೂಡಿ ಆಕ್ರಮಿಸುತಿಹರುದಾಂಟುವುದು ಅಸದಳವೊ ಎರಡೊಂದು ಬಲೆಗಳಲಿಕಂಟಕದಿ ಬಲು ತಾಪದಿಂದ ಬಳಲುವರು 1 ಆರೆರಡು ದಂತಿಗಳು ದಾರಿಯೊಳು ನಿಂತಿಹವುಆರು ಮೂರು ತುರುಗಗಳು ದಾರಿಯನು ಕೊಡವುಮೂರೆರಡನೀಡಾಡಿ ತೋರುವುದು ಎನ್ನಾಣೆಸಾರಿ ಏನೇನಹುದು ಎಂಬುದನು ನೋಡು 2 ಪರರನು ನಿಂದಿಸದೆ ಪರಯೋಗ್ಯ ನೀನಾಗಿಪರರ ಪಾಪಗಳ ನೀ ಕಟ್ಟಿಕೊಳದೆಪರಮಾತ್ಮ ಕಾಗಿನೆಲೆಯಾದಿಕೇಶವರಾಯಪರಹಿತಕೆ ಸಖನೆಂದು ಭಜಿಸೆಲೊ ಮನುಜ 3
--------------
ಕನಕದಾಸ
ತಾನೇ ಬ್ರಹ್ಮ ತಾನೇ ಬ್ರಹ್ಮತಾನೇ ತಾನೆಯಾಗಿ ತನ್ನನೆ ಮರೆತರೆ ಪ ಮನಸಿನೊಳಗೆ ಕೂಡಿ ಮನಸದು ಎರಡಾಗಿಮನದ ಅರಿವ ನಿಜದರಿವನೆ ಅರಿತರೆ1 ಬುದ್ಧಿಯೊಳಗೆ ಕೂಡಿ ಬುದ್ಧಿಯದು ಎರಡಾಗಿಬುದ್ಧಿಯ ಅರಿವು ನಿಜದರಿವನೆ ಅರಿತರೆ2 ಇಂದ್ರಿಯ ದೊಳಗೆ ಕೂಡಿ ಇಂದ್ರಿಯಗಳೆರಡಾಗಿಇಂದ್ರಿಯವರಿದ ಚಿದಾನಂದನು ಅರಿತರೆ 3
--------------
ಚಿದಾನಂದ ಅವಧೂತರು
ಹಳೆಯದಾಯಿತು ಕಾಯಾ ಇನ್ನಾರೇ | ತಿಳಿ ಸ್ವಹಿತೋಪಾಯಾ ಪ ಬಾಲಕನಾಗಿ ಕೆಲವು ದಿನ ಕಳೆದೀ | ಮೌಲ್ಯ ಯೌವ್ವನದಲಿ ಉನ್ಮತ್ತನಾದಿ 1 ಸಡಿಲುತ ಬಂದವು ಅಂಗಮಾಟಗಳು | ವಡಮೂಡದು ವಿವೇಕ ಬುದ್ಧಿಗಳು 2 ಮಂಡೂಕ ಸರ್ಪ ನೋಡದೆ ಭರದಿ | ಅಂಡಲುವದು ನೊಣಕದೇ ಪರಿಯಾದಿ 3 ಏನಾದರಾಗಲಿ ಹಿಂದಿನ ಕರಣೆ | ಜ್ಞಾನದೆಚ್ಚರ ಹಿಡಿ ಮನದೊಳು ಪ್ರಾಣಿ 4 ಗುರುವರ ಮಹಿಪತಿ ನಂದನ ಪ್ರಿಯನಾ | ಅರಿತರೆ ಬಂದದೆ ಸಾರ್ಥಕ ಖೂನಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಅಂಜಲೇತಕೆ ಮನವೆ ಅನುಗಾಲವುಕಂಜನಾಭನ ಭಕುತಿ ಕೈಕೊಂಡ ಬಳಿಕ ಪನಾರಾಯಣನೆಂಬ ನಾಲ್ಕು ಅಕ್ಷರದಿಂದಘೋರಪಾಪವನೆಲ್ಲ ಕಳೆಯಬಹುದು ||ಶ್ರೀ ರಾಮನಾಮವೆಂಬ ಸಿಂಗಾಡಿ ತಕ್ಕೊಂಡುವೈರಿಷಡ್ವರ್ಗಗಳ ವಧೆ ಮಾಡಬಹುದು 1ಶ್ರೀ ಕೇಶವನೆ ಎಂಬ ಸಿದ್ಧ ಮಂತ್ರಗಳಿಂದಕಾಕುಕರ್ಮಗಳನ್ನು ಕಳೆಯಬಹುದು ||ವೈಕುಂಠಪತಿ ಎಂಬ ವಜ್ರವನೆ ತಕ್ಕೊಂಡುನೂಕಿ ಯಮಬಂಟರನು ನುಗ್ಗು ಮಾಡಲುಬಹುದು 2ಹರಿವಾಸುದೇವನೆಂಬ ಅಮೃತಪಾನಗಳಿಂದಮರಣ ಜನನಗಳೆರಡ ಜಯಿಸಬಹುದು ||ಅರಿತರೆ ಮನದೊಳಗೆ ಪುರಂದರವಿಠಲನಸರಸ ಸದ್ಗತಿಯನ್ನು ಸವಿಗಾಣಬಹುದು 3
--------------
ಪುರಂದರದಾಸರು