ಒಟ್ಟು 21 ಕಡೆಗಳಲ್ಲಿ , 11 ದಾಸರು , 21 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನಘಸಂಪದನೆಂದು ಮನದೊಳಗೆ ನಲಿದಿಂತು ಜನಕನಿತ್ತನು ಎನ್ನ ನಿನಗಿಂದು ದಾನಕ್ಕೆ ಕೈನೀಡಿ ದಾನಮಂ ತಾಂ ಬೇಡಿ ದಾನಿಯಂ ಪಾತಾಳಕೀಡು ಮಾಡಿ ಮಾನಾಭಿಮಾನವಿಂತೇನೇನುಮಿಲ್ಲದೆಯೆ ದಾನವನ ಮನೆಗಾವನೇನ ಪೇಳ್ವೆ ತಿರುಕ ಹಾರುವನಿವಗೆ ಅರಸಿಯಾನಾದೆನೇ ಮರುಗಲ್ಕೆ ಫಲವೇನೊ ಅರಿಯೆನಿನ್ನು ಸಟೆನುಡಿಯಿನೆಲ್ಲರಂ ಮರುಳುಗೊಳಿಪ ಕುಟಿಲಗಾರನದೆಂತÀು ಸುಖವಪಡಿಪ ಚಟುಲಮತಿಕೇಳೆನ್ನಮನದಿಷ್ಟ ಸಲಿಪ ಸಟೆಯಲ್ಲವೆನ್ನೆರೆಯ ಶೇಷಗಿರಿಪ
--------------
ನಂಜನಗೂಡು ತಿರುಮಲಾಂಬಾ
ಅರುಣಾನುಜ ವೈರಿಯಾ ಭರಣನ ಮಿತ್ರನ ತೋರೇ ಪ ಉರಗಾ ಹರಿಧ್ವಜಪಿತನಾ | ಅರಿಪಿತ ಸಂಹಾರಕನಾ | ಗಿರಿಜಾವಲ್ಲಭರಿಯನಾ | ಶರಗರ್ಭನನುತನ ತೋರೆ 1 ಶೂರರಾಯನಂದನಾ | ಅರಸಿ ಯಣ್ಣನ ಮದನನಾ | ಮೈರೋಚನ ಆತ್ಮಜನಾ | ವರದನ ತಂದು ತೋರೆ 2 ಗಿರಿ ರಿಪುತನು ಸಂಭವನಾ | ಅರಸಿಯಣ್ಣನನುಜನಾ | ಗುರುವರ ಮಹಿಪತಿ ಪ್ರೀಯನಾ | ಹರಿಣಾನೇತ್ರನೀ ತೋರೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಆವದೇವರಿಗುಂಟೀ ವೈಭವ ಪ ಸಾರ್ವಭೌಮ ನೀನೆ ಸಕಲ ಭಾವಜನಯ್ಯ ಅ.ಪ ಸಿರಿಯರೆಂಟುಮಂದಿ ನಿನಗೆ ಅರಸಿಯರು ಕರುಣಶರಧಿ ಸುರರು ಮೂವತ್ತು ಮೂರು ಕೋಟಿ ಚರಣಸೇವಕರಯ್ಯ ಹರಿಯೆ1 ಅನುದಿನವು ಎಡೆಬಿಡದೆ ಮನು ಸುಜನ ಸಂತತಿ ಘನವೇದಘೋಷದಿಂದ ನೆನೆದು ಪೂಜಿಪರಪರಿಮಿತ ಲೀಲೆ 2 ಕೋಟಿಸೂರ್ಯಪ್ರಕಾಶ ನಿನ್ನ ಆಟ ಬಲ್ಲವರಾರು ಜಗದಿ ಆಟವಾಡುವಿ ಅಗಮ್ಯಚರಿತ ಸಾಟಿಯಿಲ್ಲದೆ ಧನವ ಕಲಸಿ 3 ಕರೆಸಿ ಅಸಮಭಕುತ ಜನರ ವರವ ನೀಡಿ ಮುಡಿಪುಗೊಂಡು ಮೆರೆವಿ ಪರಮ ಉತ್ಸವದೊಡನೆ ಗಿರಿಯ ಭೂವೈಕುಂಠಮೆನಿಸಿ 4 ಕಿಂಕರ ಜನರ ಪೊರೆಯಲೋಸುಗ ವೆಂಕಟಾದ್ರಿಯಲ್ಲಿ ನಿಂದಿ ವೆಂಕಟೇಶ ಕಿಂಕರಜನರ ಸಂಕಟಹರ ಶ್ರೀರಾಮಪ್ರಭೋ 5
--------------
ರಾಮದಾಸರು
ಎಷ್ಟು ಭಾಗ್ಯ ಎಷ್ಟು ಭಾಗ್ಯಕೃಷ್ಣನ ಮುಖವ ದಿಟ್ಟಿಸಿ ನೋಡಿ ಸುಖಿಸುವ ಸಭೆಯ ಜನರು ಪ. ಕಡಗ ಸರಪಳಿಯು ದಿವ್ಯ ಬೆಡಗಿನಾಭರಣಮುಕುಟ ಕಡಿಗಂಟೆ ಮುತ್ತುಗಳ ಜಡವುತಕಡಿಗಂಟೆ ಮುತ್ತುಗಳ ಜಡವುತಲಿ ರಂಗನಾಯಕನ ಎಡಬಲದಿ ಕುಳಿತ ಅರಸಿಯರು ಸಖಿಯೆ 1 ಕೆತ್ತಿಗೆ ಕುಸುರಾದ ಉತ್ತಮ ಆಭರಣಗಳುಮುತ್ತಿನ ಮಾಲೆಗಳು ಅಲಗುತಮುತ್ತಿನ ಮಾಲೆಗಳು ಅಲಗುತ ರಂಗಯ್ಯನ ಹತ್ತಿರ ಕುಳಿತ ದೊರೆಗಳು ಸಖಿಯೆ2 ಕುಂಡಲ ಮಂಡಿತ ಪಂಡಿತರೆಲ್ಲರುಭೂಮಂಡಲ ಪತಿಯ ಸ್ತುತಿಸುತ ಭೂಮಂಡಲ ಪತಿಯ ಸ್ತುತಿಸುತ ಸಭೆಯಲಿತಂಡ ತಂಡದಿ ಕುಳಿತಾರೆ ಸಖಿಯೆ 3 ಋಗ್ವೇದಾದಿಗಳೆಲ್ಲರು ಶಬ್ದವಾದದಿಂದಲಿರುಕ್ಮಿಣಿ ಪತಿಯ ಸ್ತುತಿಸುತರುಕ್ಮಿಣಿ ಪತಿಯನೆ ಸ್ತುತಿಸುತ ಸಭೆಯಲಿಹಿಗ್ಗಿ ಹರುಷದಲಿ ಕುಳಿತಾರೆ ಸಖಿಯೆ 4 ಮಿಂಚು ಮಡಿಯುಟ್ಟು ಪಂಚ ಮುದ್ರೆಯನೆ ಧರಿಸಿ ಚಂಚಲಾಕ್ಷನ ಸಭೆಯೊಳು ಚಂಚಲಾಕ್ಷನ ಸಭೆಯೊಳು ಜೋಯಿಸರುಪಂಚಾಂಗ ಹೇಳುತ ಕುಳಿತಾರೆ ಸಖಿಯೆ 5 ತಾಳ ಮದ್ದಳೆ ದಿವ್ಯ ಮೇಲೆ ತಂಬೂರಿಯವರು ಮೇಲು ಸ್ವರದಿಂದ ಸಭೆಯೊಳುಮೇಲು ಸ್ವರದಿಂದ ನುಡಿಸುತ ಕುಳಿತಾರೆ ಕಾಳಿ ಮರ್ದನನ ಸಭೆಯೊಳು ಸಖಿಯೆ 6 ಚಲುವ ರಾಮೇಶನ ಆದರದಿ ಸ್ತುತಿಸುತಲೆವೇದಗೋಚರನ ಸಭೆಯೊಳು ವೇದಗೋಚರನ ಸಭೆಯೊಳಗೆ ಹರುಷದಿಯಾದವರೆಲ್ಲ ಕುಳಿತಾರೆ ಸಖಿಯೆ 7
--------------
ಗಲಗಲಿಅವ್ವನವರು
ಕೋಲೆಂದು ಪಾಡಿರೆ ಕೋಮಲೆಯರೆಲ್ಲಾ ಅಮ್ಮಯ್ಯ ಗೋಪಾಲ ಕೃಷ್ಣಯ್ಯಗ ಶರಣಿಂದು ಕೋಲ ಪ. ಮುದ್ದು ಸುಭದ್ರ ನೀನು ಗೆದ್ದುಬರುತಿಯೆಂದುಎದ್ದ ಬೃಹಸ್ಪತಿಯು ತವಕದಿ ಕೋಲಎದ್ದ ಬೃಹಸ್ಪತಿಯು ತವಕದಿ ಅರ್ಜುನ ಸಿದ್ಧ ಮಾಡೆಂದ ರಥಗಳ ಕೋಲ 1 ಕೇಳಿರಿ ನಿಮಗೆಲ್ಲ ಭಾಳ ಬಲವದೆಕಾಳಿ ಮೊದಲಾದ ಕೆಲದೆಯರುಕಾಳಿ ಮೊದಲಾದ ಕೆಲದೆಯರು ಹರುಷದಿ ಹೇಳಿ ಬೃಹಸ್ಪತಿಯು ನುಡಿದಾನು ಕೋಲ2 ಪಾಂಡವರೆಲ್ಲರು ಉಂಡು ವೀಳ್ಯವನ್ಹಾಕಿಪುಂಡರಿಕಾಕ್ಷನ ಅರಮನೆಗೆ ಕೋಲಪುಂಡರಿಕಾಕ್ಷನ ಅರಮನೆಗೆ ಐವರುತಂಡ ತಂಡದಲೆ ನಡೆದಾರು ಕೋಲ3 ದ್ರೌಪದಿ ಸುಭದ್ರಾ ಇಬ್ಬರು ಒಂದಾಗಿಅಗಣಿತ ಒನಿತೆಯರು ಕೋಲಅಗಣಿತ ಒನಿತೆಯರು ಕೂಡಿಕೊಂಡು ತಾವುಪ್ರೇಮದಿಂದಲಿ ಬರುತಾರೆ ಕೋಲ 4 ಅರಿಷಿಣ ಕುಂಕುಮ ಗಂಧಬೆರೆಸಿ ಪರಿಮಳದಿಂದಸರಸಾದ ಸುರಭಿ ಕುಸುಮವ ಕೋಲಸರಸಾದ ಸುರಭಿ ಕುಸುಮರಾಮೇಶನ ಅರಸಿಯರಿಗೆ ಒಯ್ವೋ ಉಪಚಾರ ಕೋಲ 5
--------------
ಗಲಗಲಿಅವ್ವನವರು
ಚರಣವ ನರ್ಚಿಸುವೆ ಹರಿ ನಿನ್ನ ಮರೆಯದೆ ಕೀರ್ತಿಸುವೆ ನೀನೆ ಎನ್ನರಸ ರಕ್ಷಿಸು ಎಂದು ಪ ರಕ್ಷಿಸು ಎಂದು 1 ಸುಗುಣಂಬರೀಶ ಭೂಪಗೆ ಕೊಡಲಾಕ್ಷಣ ಗಮನ ಚನ್ನಿಗನೆ ರಕ್ಷಿಸು ಎಂದು 2 ಮುಳಿದು ಗಜವ ನೆಗಳೆಳೆಯಲು ಭಯದಲಿ ನಳಿನಾಕ್ಷ ನಿನಗೆ ದೂರಲು ಬೇಗದಲಿ ಸಾರಿ ಸುಲಲಿತ ಮಹಿಮನೆಗಳ ಸೀಳಿ ಕರಿಯನು ಸಲಹಿದೆ ದೇವ ಗೋವಳನೆ ರಕ್ಷಿಸು ಎಂದು 3 ಬೇಗದಲಿ ಕಂಬದಿಬಂದು ಸದೆದು ದಾನವನ ದಾಯದಲಿ ಕಾಯ್ದು ಪದುಮಾಕ್ಷ ನರಹರಿ ಮುದದಿ ರಕ್ಷಿಸು ಎಂದು 4 ದುರುಳ ದುಶ್ಯಾಸನ ಭೂವರ ಪಾಂಡು ತನುಜರ ಅರಸಿಯ ಸೀರೆಯ ಭರದಿ ಸೆಳೆಯಲಾಗ ಮೊರೆಯಿಡಲಕ್ಷಯ ವರವನಿತ್ತು ಸಲಹಿದ ಹರಿ ಸುತ ಕೋಣೆಯ ಲಕ್ಷ್ಮೀಶ ರಕ್ಷಿಸು ಎಂದು 5
--------------
ಕವಿ ಪರಮದೇವದಾಸರು
ಜನಕರಾಜನ ಸುತೆ ಜಾನಕಿ ಜೋ ಜೋ ಇನಕುಲತಿಲಕನರ್ಧಾಂಗಿಯೆ ಜೋ ಜೋ ಪ ಕುಂದಣ ಕೆತ್ತಿದ ಚಂದದ ತೊಟ್ಟಿಲ ಮಂದಗಮನೆಯರು ತಂದಿರಿಸಿದರು ಸುಂದರಾಂಗಿ ವೈದೇಹಿಯನೆತ್ತುವ ಆ- ನಂದದಿ ಜೋಗುಳ ಪಾಡ್ವರು ಜೋ ಜೋ 1 ರತ್ನ ಮುತ್ತುಗಳ ಕಿರೀಟವು ಹೊಳೆಯಲು ಮುತ್ತಿನ ತೊಡುಗೆಯಲಿ ರಂಜಿಸುವ ಸುಂದರಿಯ ಉತ್ತಮ ಸತಿಯರು ತೊಟ್ಟಿಲ ಪಿಡಿಯುತ ಅರ್ಥಿಯ ಜೋಗುಳ ಪಾಡ್ವರು ಜೋ ಜೋ2 ಕೌಸಲ್ಯದೇವಿಯ ಕಂದನ ರಮಣಿಯೆ ಕೌಶಿಕಯಜ್ಞದ ಪಾಲನಅರಸಿಯೆ ಹಂಸವಾಹನನ ಪಿತನ ಸತಿಯೆ ಖಳ ಧ್ವಂಸ ಮಾಡಿದ ರಘುರಾಮನರಸಿಯೆ 3 ಅಂಬುಜನಯನೆ ಪೀತಾಂಬರ ಶೋಭಿತ ಕಂಬುಕಂಠಿ ಕೋಕಿಲವಾಣಿ ಜೋ ಜೋ ತುಂಬುಗುರುಳ ಮುಖ ಕಮಲೆಯೆ ಜೋ ಜೋ ನಂಬಿದವರ ಕಾಯ್ವ ಕರುಣಿಯೆ ಜೋ ಜೋ4 ಕಮಲನಯನೆ ಕಮಲಾಲಯೆ ಜೋ ಜೋ ಕಮಲಗಂಧಿಯೆ ಕಮಲೋದ್ಭವೆ ಜೋ ಜೋ ಸತಿ ಜೋ ಜೋ ಕಮಲೆ ಹೃತ್ಕಮಲದಿ ವಾಸಿಸÀು ಜೋ ಜೋ5
--------------
ನಿಡಗುರುಕಿ ಜೀವೂಬಾಯಿ
ದುರ್ಗೆ ಪಾಲಿಸೆ ಕರುಣದಿ | ಮಹಾ ಲಕುಮಿ ದುರ್ಗೆ ಪಾಲಿಸೆ ಕರುಣದಿ ಪ. ಅಪವರ್ಗ ಪದವಿ ಇತ್ತು ದುರ್ಗಮವಾಗಿಹ ದುಃಖವ ಬಿಡಿಸಿ ಭಾರ್ಗವಿರಮಣನ ಮಾರ್ಗವ ತೋರೆ ಭೋರ್ಗರೆಯುತ ಖಳರ ನಿಗ್ರಹಿಸುವಳೆ ಅ.ಪ. ಕ್ಷೀರವಾರಿಧಿ ತನಯೆ | ಶ್ರೀ ರಮಣನ ಜಾಯೆ ನಾರಸಿಂಹನ ಅರಸಿಯೆ ಸಾರಿದೆ ನಿನ ಪದ ತೋರಿಸೆ ಹರಿಪದ ಕಾರುಣ್ಯಾತ್ಮಳೆ ಕರುಣವ ಬೀರೆ ವಾರವಾರಕೆ ನಿನ್ನ ಆರಾಧಿಸುವಂಥ ಚಾರುಮತಿಯ ನೀಡೆ ನಾರಿರನ್ನಳೆ 1 ಪದ್ಮಾವತಿಯೆ ಪದ್ಮಿನಿ | ಪದ್ಮಾಕ್ಷಿದೇವಿ ಪದ್ಮಸಂಭವೆ ಕಾಮಿನಿ ಪದ್ಮನಾಭ ಶ್ರೀ ಶ್ರೀನಿವಾಸನ ಪದ್ಮಪಾದವ ಹೃತ್ಪದ್ಮದಿ ತೋರೆ ಪದ್ಮಸರೋವರ ತೀರವಾಸಿ ಕರ ಪದ್ಮಯುತಳೆ ಮುಖಪದ್ಮವ ತೋರೆ2 ರೂಪತ್ರಯಳೆ ಕಾಮಿನಿ | ಕಾಮಪೂರಿಣೀ ತಾಪಹರಿಸೆ ಭಾಮಿನಿ ಪಾಪಗಳÉಲ್ಲವ ನೀ ಪರಿಹರಿಸುತ ಗೋಪಾಲಕೃಷ್ಣವಿಠ್ಠಲನನು ತೋರುತ ನೀ ಪರಿ ನುಡಿವೆನೆ ನೀ ಪಾಲಿಸುವುದು ಆಪವರ್ಗದಲಿ 3
--------------
ಅಂಬಾಬಾಯಿ
ಧನ್ಯತೆಯಾಂತೆನಿಂದು ದೇವಿಯಕಂಡು ಮಾನ್ಯತೆ ಪಡೆವೆನೆಂದು ಪ. ಚಿನ್ಮಯರೂಪನ ಚೆನ್ನೆ ಲಕ್ಷ್ಮಿಯ ಸಂ ಪನ್ನ ಮೂರ್ತಿಯ ಕಂಡಿನ್ನೆನಗೆಣೆಯಾರೆನೆ ಅ.ಪ. ನಾಗವೇಣಿಯರೆಲ್ಲರು ಪಾಡುತ ಶಿರ ಬಾಗಿ ವಂದಿಸುತಿರಲು ರಾಗದಿಂ ನಲವೇರೆ ಭೋಗಭಾಗ್ಯವನೀವ ಯೋಗೇಶ್ವರಿಯ ದಯಾಸಾಗರಿಯ ಕಂಡು 1 ಐದೆಯರತಿಮುದದಿ ವೈದೇಹಿಯೆ ಯೆಮ್ಮ ಆದರ್ಶ ಮಹಿಳೆಯೆಂದು ಆದಿಶಕ್ತಿಯೇ ಈ ಶ್ರೀದೇವಿ ನಿಜವೆಂದು ಆದರಿಸುತ್ತಿರಲಾಮೋದವಾಂತುದರಿಂ 2 ಅರಿದಾವುದೆಮಗಿಳೆಯೊಳು ಶೇಷಗಿರೀಶನ ಅರಸಿಯೆಮ್ಮವಳಾದಳು ದುರಿತರೋಗವು ದೂರ ಸರಿದುದು ಮನವಾರ 3
--------------
ನಂಜನಗೂಡು ತಿರುಮಲಾಂಬಾ
ಫಲಹಾರವ ಮಾಡೋ ಪದುಮಲೋಚನನೆ| ಒಲಿದು ಶ್ರೀ ಭೂದೇವಿ ಅರಸಿಯರೊಡನೆ ಪ ಕದಳೀ ಕಪಿಥ್ಥಶರ್ಕರ ಮೋದದಿಂದಲೀ| ಒದಗಿ ಬೆಂಡುಖರ್ಜೂರಿ ಘೃತಮೋಪ್ತದಿಂದಲಿ1 ಕಳೆದ ಸಿಗುರಿಯಾ ಕಬ್ಬಿನ ಪೇರು ಬದರಿಯಾ| ಬಲಿದ ಪರಿಮಳ ರುಚಿಗಳ ಒಪ್ಪನಿಂದಾ 2 ವಸುಧೆಯೊಳುಳ್ಳ ಸಕಲ ಫಲಸಾರವಾ| ಬಿಸಿಯಾದ ಪಲ್ಗೆನೆಯ ಮಧುಸಹಿತಾ 3 ಗುರುಮಹೀಪತಿಸ್ವಾಮಿ ಶರಣ ರಕ್ಷಕನೇಮಿ| ಸುರರಿಗಮೃತವೆರೆದಾನಂದ ಕರದಲಿ4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಿಂಕವ್ಯಾತಕ್ಕೆನಮ್ಮ ಕೂಡ ಬಿಂಕವ್ಯಾತಕ್ಕೆಅಕಳಂಕ ರುಕ್ಮಿಣಿಯರಮನೆಗೆ ಅಹಂಕಾರದಲಿ ಮುಯ್ಯ ತಂದು ಪ. ವಾತನೊಡಗೂಡಿ ಜನಿಸಿ ಆತನಮದುವೆ ಮಾಡಿಕೊಂಡೆನೀತಿಯೇನ ನಿನಗೆ ದ್ರೌಪತಿಈ ಮಾತು ಕೇಳಿ ಮಂದಿ ನಗರೆ 1 ಹುಟ್ಟು ಹೊಂದು ನಾರಿ ನೀನುಎಷ್ಟೊಂದು ಗರವು ನಮ್ಮ ಕೂಡಯಾಕೆ ಕೃಷ್ಣನ ಅರಸಿ ರುಕ್ಮಿಣಿಗೆಒಂದಿಷ್ಟರೆ ದೋಷ ತೋರ ಸಖಿಯೆ2 ಜನನ ಮರಣವೆಂಬೆರಡು ಜಾಣಿ ರುಕ್ಮಿಣಿಬಲ್ಲಳೇನ ಜನನಿ ಬೊಮ್ಮಗ ಎನಸಿತಾನೆ ಜಗದಿ ಖ್ಯಾತಿ ತುಂಬಿಲ್ಲವೇನ ಈ ಜಗದಿ ಖ್ಯಾತಿ ತುಂಬಿಲ್ಲವೇನ 3 ನಿತ್ಯ ನಿತ್ಯ ಮೂರುತಿ ಕೃಷ್ಣನ ಭಜಿಸಿನಿತ್ಯ ತೃಪ್ತಳು ಎನಿಸುತಿಹಳು 4 ಅತ್ತಿಗೆಯರೆಂಬೊ ದಿವ್ಯ ಅರ್ಥನಾಮವ ಜಪಿಸಿಮತ್ತೆ ರಾಮೇಶನ ಅರಸಿಯರಿಬ್ಬರಭೃತ್ಯಳಾಗಿ ಭಾಗ್ಯವ ಪಡಿಯೆ5
--------------
ಗಲಗಲಿಅವ್ವನವರು
ಬೊಮ್ಮಗೆ ಶರಣಿಂಬೆವಮ್ಮ ನಮ್ಮ ಗುರು ಎಂದುಹಮ್ಮಿನ ಸುಭದ್ರಾ ದೇವಿಗೆ ದಮ್ಮಯ್ಯ ಎನಲೆಂದು ಪ. ವಾಚಾಭಿಮಾನಿ ನಿಜ ಬುದ್ಧಿ ಸೂಚಿಸು ನಮಗೆಂದುನಾಚಿಸಿ ದ್ರೌಪತಿಯ ಆಣೆ ಅಚೆ-ಲಿಟ್ಟೆವೆಂದು1 ಮಂದ ಜಾಸನ ಜಗಕೆ ನೀವು ತಂದೆ ಹೌದೆಂದುನಿಂದಿಸಿ ಸುಭದ್ರೆ ಪಂಥ ಹಿಂದಕ್ಕೆ ಹಾಕೆವೆಂದು2 ಸರಸಿಜಾಸನ ರಾಮೇಶನ ಅರಸಿಯರ ಗೆಲಿಸೆಂದುಸರಸದಿ ಸುಭದ್ರಾ ಪಂಥ ಬಿರುಸು ಮಾಡೆವೆಂದು 3
--------------
ಗಲಗಲಿಅವ್ವನವರು
ಭಕ್ತಿಲೇಸು ಮುಕ್ತಿಗಿಂತಲಿ ಪ ಭಕ್ತಿಲೇಸು ಮುಕ್ತಿಗಿಂತಲಿ | ಭಕ್ತಜನರಾ ಪಾಲಿಸುವನಾ | ಭಕ್ತಿಗೊಲಿದು ಫಣಿಗಣ ಲೋಕದಿ | ಯುಕ್ತಬಲಿಯ ಬಾಗಿಲಲೊಳಿಹ ರಂಗಯ್ಯನಾ | ಸುರಪ್ರೀಯನಾ ಮುನಿಧ್ಯೇಯನಾ 1 ಸರಸಿಭವನ ಕಠಾರದಿಂದ ಲೋಗದನಾ | ಅರಸೆನಿಪನಾ ತನುಭವನಾ | ಧರಿಸಿದನಾ | ಅರಸಿಯ ಜನಕನ ಕುಲರಿಯನಿಪನಾ | ಕುವರನ ಸ್ಯಂದನ ವಾಜಿಯನು ಪೊರೆದನಾ | ಗೆಲಿಸಿದನಾ | ಮೆರಿಸಿದನಾ 2 ವನರುಹಸಖನ ಪೊಂದೇರ ನಡೆಸುತಿಹನಾ | ಅನುಜನಾ ಅರಿಗಳಾ ಹರಿಯ ನಂದನನಾ | ಘನವಾಲದಿಂದ ನೊಂದಿಹ ಪುರದರಸನಾ | ಅನುಜನಾ ಸ್ಥಿರಪದವಿತ್ತು ನುಳುಹಿದನಾ | ನಿಲಿಸಿದನಾ | ಕಾಯ್ವನಾ 3 ಸಿರಿಯ ಮದನಳಿದು ಗುರುಚರಣಕೆ ಹೊಂದಿ | ದೊರಕಿ ನಿತ್ಯದಲಿ ಸಂತುಷ್ಟವಿರುತಾ | ಗುರುವರ ಮಹಿಪತಿ ಸ್ವಾಮಿಯ ಷೋಡಶ | ಪರಿಯಲಿ ತುಳಸಿಯ ತಂದು ಪೂಜೆ ಮಾಡುವ | ಪಾದ ನೋಡುವಾ | ಪಾಡುವಾ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ರಾಯ ಕಳುಹಿದ ರಂಗ ರಾಯ ಕಳುಹಿದ ಪ್ರಿಯಭಾವೆ ರುಕ್ಮಿಣಿಯರಪ್ರೇಮಭಾಳೆ ನಿಮ್ಮ ಮ್ಯಾಲೆ ಪ. ಕೇಳೋರಾಯ ನಿಮ್ಮ ಮ್ಯಾಲಿ ಬಹಳ ಪ್ರೇಮಕೃಷ್ಣರಾಯ ಹೇಳಲ್ಪಶವೆಮುಯ್ಯ ತಂದು ಏಳು ದ್ವಾರ ದಾಟಿ ಬಂದು1 ಚಂಚಲಾಕ್ಷಿ ಅರಸಿಯರು ನಿಮಗೆ ಪಂಚಪ್ರಾಣ ಕೃಷ್ಣರಾಯ ಕೆಂಚಿ ರುಕ್ಮಿಣಿಮುಯ್ಯ ತಂದುಮುಂಚಿ ಬಾಗಿಲಮನೆಯೊಳು ಇಳಿದರು 2 ಕುಂತಿದೇವಿಯರ ಅರಮನೆಗೆ ಚಿಂತಾಮಣಿಯ ತಾನೆ ಬಂದ ಎಂಥ ಸುಕೃತರಾಯ ನಿಮ್ಮಇಂಥ ಭಾಗ್ಯ ಎಲ್ಲಿ ಕಾಣೆ 3 ಸುದ್ದಿ ಕೇಳಿ ಧರ್ಮರಾಯ ಗದ್ಗದಿ ನುಡಿಯನೆ ನುಡಿದಾನಮುದ್ದು ಮುಖವ ನೋಡಿಪಾದಕೆ ಬಿದ್ದು ಧನ್ಯರಾದೆವಮ್ಮ 4 ಅಂದ ಮಾತು ಕೇಳಿರಾಯ ನಂದ ಬಟ್ಟು ನಂದ ಭಾಷ್ಪಬಿಂದು ಉದುರಿ ಬಿಗಿದು ಕಂಠಛಂದದಿ ರೋಮಗಳು ಉಬ್ಬಿ 5 ಇಂದು ಭದ್ರೆ ದ್ರೌಪತಿಗೆ ತಂದರಮ್ಮ ರುಕ್ಮಿಣಿ ಮುಯ್ಯಆನಂದದಿಂದ ಭಾವೆ ಕೃಷ್ಣಇಂದು ನಿಮ್ಮ ಅರಮನೆಗೆ 6 ಎಷ್ಟು ಸುಕೃತರಾಯ ನಿಮ್ಮ ಧಿಟ್ಟ ರಾಮೇಶತಾನೆ ಬಂದ ಅಷ್ಟ ಸೌಭಾಗ್ಯದ ಮುಯ್ಯ ಶ್ರೇಷ್ಠ ತೋರೋದಮ್ಮ ಸಭೆಯು 7
--------------
ಗಲಗಲಿಅವ್ವನವರು
ಲಕ್ಷ್ಮೀ ಮನೋಹರ ವಿಠಲ | ರಕ್ಷಿಸೋ ಹರಿಯೇ ಪ ಲಕ್ಷಿಸದಲೇ ಇವಳ | ಲಕ್ಷಾಪರಾಧಾ ಅ.ಪ. ತೈಜಸ ಮೂರ್ತಿದರುಶನವ ತಾನಿತ್ತು | ಹರುಷ ಪಡೆಸಿಹನೋಹರಿದಾಸ್ಯಕೇ ಮಾರ್ಗ | ವರಸೂಚಿ ಎಂಬಂತೆಪರಮ ಸಿದ್ಧತೆ ತೋರ್ದೆ | ವರಸತೀ ಮಣಿಗೇ 1 ಕಾರುಣಿಕ ನೆಂ | ದರಿತು ಬೇಡುವೆ ಹರಿಯೆಸರುವ ಕಾರ್ಯದಿ ನಿನ್ನ | ಸ್ಮರಣೆ ಸುಖವೀಯೋ 2 ಎರಡು ಮೂರ್ಭೇಧಗಳ | ಅರಿವನೀಕೆಗೆ ಇತ್ತುಎರಡು ನಾಲ್ಕರ ವರ್ಗ | ದೂರಗೈಸೋಮರುತಾಂತರಾತ್ಮ ನಿ | ನ್ಹೊರತು ಕಾಯುವರಾರೊಎರಡೇಳು ಭುವನಗಳ | ಅರಸಿಯೂ ಕಾಣೇ 3 ವಿಶ್ವ ಕರ್ಮ | ಸತ್ಶ್ರವಣ ಕೊಡುತಾ 4 ಭೂವಿ ಬುಧ ಹೆದ್ದೈವ | ಮಾವಿನೋದಿಯೆ ಹರಿಯೆನೀವೊಲಿಯ ದಿನ್ನಿಲ್ಲ | ಮಾವ ಕಂಸಾರೀದೇವ ದೇವೇಶ ಗುರು | ಗೋವಿಂದ ವಿಠ್ಠಲ್ಲಭಾವದೊಳು ಮೈದೋರಿ | ಕಾವುದೀಕೆಯನೂ 5
--------------
ಗುರುಗೋವಿಂದವಿಠಲರು