ಒಟ್ಟು 5 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಉ) ವಿಶೇಷ ಸಂದರ್ಭದ ಹಾಡುಗಳು 486 (1) ಹೆಜ್ಜಾಜಿಕೇಶವಸುಪ್ರಭಾತ ಏಳಯ್ಯ ಜಾಜಿಪುರೀಶ ಕೇಶವರಾಯ ಬೆಳಗಾಯಿತೇಳಯ್ಯ ಎದ್ದುರುಳಯ್ಯ ಪ ಕೋಟೆ ಚನ್ನಿಗನೆಂದು ಹೆಸರಾದವನೆ ಪೇಟೆ ಚನ್ನಿಗನಾಗಿ ನೆಲೆಸಿರುವವನೆ ಏಳಯ್ಯ ಬೆಳಗಾಯಿತು 1 ಗರುಡ ವಾಹನನಾಗಿ ಕಣ್ಗಾವಲಾಗಿಹನೆ ಕು- ದುರೆ ವಾಹನನಾಗಿ ಊರೆಲ್ಲ ಕಾಯುವನೆ ಏಳಯ್ಯ ಬೆಳಗಾಯಿತು 2 ಶ್ರೀದೇವಿ ಭೂದೇವಿಯರ ನಡುವೆ ಅರಸಾಗಿ ಬಾಧೆಹೊತ್ತಾಜನರ ಹಾರೈಸುತಿರುವನೆ ಏಳಯ್ಯ ಬೆಳಗಾಯಿತು 3 ನಾರದರು ತುಂಬುರರು ದೇವತೆಗಳೆಲ್ಲ ಎ- ದುರಲಿ ನಿಂದು ವಂದಿಸುತಿಹರಲ್ಲ ಏಳಯ್ಯ ಬೆಳಗಾಯಿತು 4 ವಂದಿ ಮಾಗಧರು ಜಯಘೋಷ ಮಾಡುತ್ತ ಮಂದಿ ಮಂದಿಯೆ ನಿಂತು ನುತಿಸುತ್ತಿಹರು ಏಳಯ್ಯ ಬೆಳಗಾಯಿತು 5 ಭಂಟರು ಬಂದು ಮಂಗಳರವದಿಂದ ಗಂಟೆ ಜಾಗಟೆಗಳ ನುಡಿಸುತಲಿಹರು ಏಳಯ್ಯ ಬೆಳಗಾಯಿತು 6 ಮುನ್ನಿನ ರವಿಯು ಉದಯಿಸುತಿರುವನು ಹೊನ್ನಿನ ಕಿರಣಗಳ ಪಸರಿಸುತಿರಿವನು ಏಳಯ್ಯ ಬೆಳಗಾಯಿತು 7 ಬೀದಿಯ ಜನರೆಲ್ಲ ಬೇಗ ಬೇಗನೆ ಎದ್ದು ಹಾದಿಯ ಸಿಂಗರಿಸಿ ಕಾಯುತಲಿರುವರು ಏಳಯ್ಯ ಬೆಳಗಾಯಿತು 8 ಪೇಟೆ ಚೆನ್ನಿಗನ ಕಡೆಯಿಂದ ದಂಡೊಂದು ಭ ರಾಟೆ ವಾದ್ಯಗಳ ನುಡಿಸುತ್ತ ಬರುತಿಹುದು ಏಳಯ್ಯ ಬೆಳಗಾಯಿತು 9 ಕೊಂಬು ಕಹಳೆಗಳ ಊದುವರು ಕೆಲವರು ತುಂಬು ಮಂತ್ರಗಳ ಹೇಳುವರು ವೈಷ್ಣವರು ಏಳಯ್ಯ ಬೆಳಗಾಯಿತು 10 ಸುಮಂಗಲೆಯರು ಕಳಸ ಹೊತ್ತಿಹರು ಸುಮ್ಮಾನದಿ ಭಕುತರು ಕುಣಿಯುತಲಿಹರು ಏಳಯ್ಯ ಬೆಳಗಾಯಿತು 11 ಅಭಯ ಹಸ್ತನೆ ಏಳ ಕಮಲವದನನೆ ಏಳು ಉಭಯ ಜನರುಗಳೆಲ್ಲ ದರುಶನಕೆ ಕಾದಿಹರು ಏಳಯ್ಯ ಬೆಳಗಾಯಿತು 12 ನಿನ್ನ ಭಕ್ತರು ನಿಂತು ಧ್ಯಾನ ಮಾಡುತಲಿಹರು ಎನ್ನರಸ ಜಾಜಿಪುರ ವರದ ಕೇಶವರಾಯ ಏಳಯ್ಯ ಬೆಳಗಾಯಿತು 13
--------------
ನಾರಾಯಣಶರ್ಮರು
ಬೀದಿಯೊಳು ಯಾತರಾ ನಂಟು ಬೇಡ ದಮ್ಮಯ್ಯ ಪ ಭೇದಿಸಿ ನೋಡುವರುಂಟು ಬೆಂಬತ್ತಿ ಬಾರದಿರಯ್ಯ ಅ ಕಂಡ ಕಂಡ ಠಾವಿನಲಿ ಕಣ್ಣೆತ್ತಿ ನೋಡದಿರಯ್ಯಕಂಡಿಯೊಳು ಕೈಸನ್ನೆ ಮಾಡದಿರಯ್ಯಗಂಡನುಳ್ಳವಳ ಜೊತೆ ಭಂಡಾಟವ್ಯಾಕಯ್ಯಕೊಂಡೆಗಾತಿಯರುಂಟು ದುಡುಕದಿರಯ್ಯ 1 ಬೇಳುವೆಯ ಮಾತಾಡಿ ಗಾಳ ಹಾಕದಿರಯ್ಯಬಾಳೆ ಹಣ್ಣಿಗೆ ಕೊಡಲಿ ಬೇಕೆ ದಮ್ಮಯ್ಯಆಳುವ ಅರಸಾಗಿ ನಿನಗಾವ ಬರವಯ್ಯಮೇಳದವರ ಬಿಟ್ಟು ಮೇರೆದಪ್ಪುವರೇನಯ್ಯ 2 ನೋಡುವರು ಜನರೆಲ್ಲ ನಾಚಿಕೆ ಇಲ್ಲವೇನಯ್ಯಜೋಡು ಕಳಸವ ಹಿಡಿಯದಿರು ಜೋಕೆ ದಮ್ಮಯ್ಯಮಾಡುವ ದೈನ್ಯ ಬಲ್ಲೆ ಮದ್ದೂರು ನರಸಿಂಹಯ್ಯಕೂಡಿದ ಕನಕನಾದಿಕೇಶವ ನೀನಹುದಯ್ಯ 3
--------------
ಕನಕದಾಸ
ಸಹಜಸಮಾಧಿಸಹಜ ಬ್ರಹ್ಮವಾದುದೇಸಹಜಸಮಾಧಿಪಅರಸಾಗಿಕುಳಿತಿದ್ದು ಅರಸಾಗಿ ಮಲಗಿದ್ದುಅರಸಾಗಿ ನುಡಿವುದೇ ಸಹಜಸಮಾಧಿ1ಜಗಬೇರೆಯಾಗದೇ ತಾ ಬೇರೆಯಾಗದೇಜಗತಾನೊಂದಾದುದೇ ಸಹಜಸಮಾಧಿ2ಒಳಗೆಂಬುದಿಲ್ಲವೇ ಹೊರಗೆಂಬುದಿಲ್ಲವೇಒಳಹೊರಗು ಒಂದಾಗೆ ಸಹಜಸಮಾಧಿ3ಎಲ್ಲಿದ್ದರೇನಿಲ್ಲ ಎಲ್ಲುಂಡರೇನಿಲ್ಲಎಲ್ಲವು ತಾನಾಗೆ ಸಹಜಸಮಾಧಿ4ಚಿದ್ವಸ್ತುವಾಗಿಯೇ ಚಿನ್ಮಾತ್ರವೇ ಇದ್ದುಚಿದಾನಂದನಿಹುದೇ ಸಹಜಸಮಾಧಿ5
--------------
ಚಿದಾನಂದ ಅವಧೂತರು