ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಂಕಟ ಪರಿಹರಿಸಿ ಸಂಪದವಿಯ ಕೊಡುವ ಪ ಬಲನ ಭೂಸುರಹತ ಪೋಗಾಡಿದ ಮಂತ್ರ | ಬಲಿಯ ಕನಕ ಸ್ತೇಯ ಕಳದ ಮಂತ್ರಾ || ಬಲವಂತ ವೃಷಭನ್ನ ಸಂಹರಿಸಿದ ಮಂತ್ರಾ | ಕಲಿಯುಗದೊಳಗಿದೆ ಸಿದ್ಧ ಮಂತ್ರಾ || 1 ವೃದ್ಧ ಬ್ರಾಹ್ಮಣಗೆ ಪ್ರಾಯವನು ಕೊಟ್ಟ ಮಂತ್ರಾ | ಶುದ್ಧನ್ನ ಪರಿಶುದ್ದ ಮಾಳ್ಪ ಮಂತ್ರಾ | ಉದ್ಧರಿಸಿ ಕಾವ್ಯನ್ಯೊಂಚಿ ? ಮಾಡಿದ ಮಂತ್ರಾ | ಶ್ರದ್ಧೆಯನು ಪಾಲಿಸುವ ಸುಲಭ ಮಂತ್ರಾ2 ಗುರು ತಲ್ಪಕನ ದೋಷ ನಾಶನ ಮಾಡಿದ ಮಂತ್ರಾ | ಹರನ ಸುತ ಬರಲವನ ಪೊರೆದ ಮಂತ್ರಾ | ಸ್ಮರಿಸಲಾಕ್ಷಣ ಒಮ್ಮೆ ಮುಂದೆ ನಿಲುವ ಮಂತ್ರಾ | ಅರಸರಿಗೆ ವಲಿದಿಪ್ಪ ಆದಿ ಮಂತ್ರಾ 3 ಅಜ ಭವಾದಿಗಳಿಗೆ ಪಟ್ಟಗಟ್ಟಿದ ಮಂತ್ರಾ | ಗಜ ಮೊದಲಾದವರ ಕಾಯ್ದ ಮಂತ್ರಾ | ರಜ ದೂರವಾಗಿದ್ದ ರಮ್ಯವಾದ ಮಂತ್ರಾ | ಕುಜನ ಕುಲವನಕೆ ಕುಠಾರ ಮಂತ್ರಾ 4 ಪ್ರಣವ ಪೂರ್ವಕದಿಂದ ಜಪಿಸಲು ವೊಲಿವ ಮಂತ್ರಾ | ಅಣು ಮಹದಲೀ ಪರಿಪೂರ್ಣ ಮಂತ್ರಾ | ಸಿರಿ ವಿಜಯವಿಠ್ಠಲನ ಮಂತ್ರಾ | ಕ್ಷಣ ಕ್ಷಣಕೆ ಬಲ್ಲವರಿಗೆ ಪ್ರಾಣ ಮಂತ್ರಾ 5
--------------
ವಿಜಯದಾಸ
ಕೆಟ್ಟಿತು ಕೆಲಸವೆಲ್ಲ - ಲೋಕದಿ ಕಾಮನಟ್ಟುಳಿದಶನವಾಯಿತು ಪ.ಬಟ್ಟೆ ತಪ್ಪಿ ಮುಂದೆ ಕೆಟ್ಟು ಕರ್ಮಿಯಾಗಿಬಿಟ್ಟು ಮುಂದಣ ಪಥವ - ಹೇ ದೇವಾ ಅಪಸತ್ಯ ಕಾಮ ಕರ್ಮವು ಧರ್ಮದ ಬಲಮತ್ತೆ ಅಡಗಿಹೋಯಿತುಎತ್ತ ನೋಡಲು ನೀಚವೃತ್ತಿಯೆತುಂಬಿಅತ್ಯಂತ ಪ್ರಬಲವಾಯ್ತೋ ಹೇ ದೇವಾ 1ಹೊತ್ತುಹೊತ್ತಿಗೆ ಹಲವು ಲಂಪಟತನದಲಿಚಿತ್ತ ಚಂಚಲವಾಯಿತುಸತ್ತು ಹುಟ್ಟುವ ಸುಳಿಯಲ್ಲದೆ ಮತ್ತೊಂದುಗೊತ್ತು ಇಲ್ಲದೆ ಹೋಯಿತ್ತೋ ಹೆ ದೇವಾ 2ಪೇಳುವುದೇನಿನ್ನು ದುರ್ಜನರ ಸಂಗದೋಲಾಟ ಸೊಗಸಾಯಿತುಕೀಳು ಮೇಲು ಮೇಲು ಕೀಳಾಗಿ ನಡೆಯುವಕಾಲವೆಗ್ಗಳವಾಯಿತೋ ಹೇ ದೇವಾ3ಆಳುವ ಅರಸರಿಗೆಲ್ಲ ಕಾಂತನದಾಸೆಮೇಲು ಮೇಲಾಯಿತಯ್ಯನೀಲ ಮೇಘಶ್ಯಾಮ ನಿನ್ನಾಳೆಂಬರಿಗೆಕೂಳು ಹುಟ್ಟದೆ ಹೋಯಿತೋ ಹೇ ದೇವಾ 4ಅರಿಷಡ್ವರ್ಗದಲಿ ಸಿಲುಕಿ ಸುಜ್ಞಾನದಅರಿವು ಇಲ್ಲದೆ ಹೋಯಿತುಕರಣಾಳು ಶ್ರೀ ಪುರಂದರವಿಠಲನೆ ನಿನ್ನಸ್ಮರಣೆಯಿಲ್ಲದೆ ಹೋಯಿತೋ ಹೇ ದೇವಾ 5
--------------
ಪುರಂದರದಾಸರು
ಹೊಲೆಯ ಹೊರಗಹನೆ ಊರೊಳಗಿಲ್ಲವೆಸಲೆ ಶಾಸ್ತ್ರವನು ತಿಳಿದು ಬಲ್ಲವರು ನೋಡಿ ಪ.ಭಾಳದಲಿ ಭಸಿತ ಭಂಡಾರವಿಡದವ ಹೊಲೆಯಕೇಳಿ ಸಲೆ ಶಾಸ್ತ್ರವನು ತಿಳಿಯದವ ಹೊಲೆಯಆಳಾಗಿ ಅರಸರಿಗೆ ಕೈಮುಗಿಯದವ ಹೊಲೆಯಸೂಳೆಯರ ಕೊಡುವಾತನೇ ಶುಧ್ಧ ಹೊಲೆಯ 1ಇದ್ದ ಧನ ದಾನ - ಧರ್ಮವ ಮಾಡದವ ಹೊಲೆಯಕದ್ದು ತನ್ನೊಡಲ ಹೊರೆವಾತನೇ ಹೊಲೆಯಬದ್ಧವಹ ನಡೆ - ನುಡಿಗಳಿಲ್ಲದಿದ್ದವ ಹೊಲೆಯಮದ್ಧಿಕ್ಕಿ ಕೊಲುವವನೆ ಮರಳು ಹೊಲೆಯ 2ಆಶೆಯನು ತೋರಿ ಭಾಷೆಗೆ ತಪ್ಪುವವ ಹೊಲೆಯಲೇಸು ಉಪಕಾರಗಳನರಿಯದವ ಹೊಲೆಯಮೋಸದಲಿ ಪ್ರಾಣಕ್ಕೆ ಮುನಿಯುವವನೇ ಹೊಲೆಯಹುಸಿಮಾತನಾಡುವವನೇ ಸಹಜ ಹೊಲೆಯ3ಕೊಂಡ ಋಣವನು ತಿರುಗಿ ಕೊಡಲರಿಯದವ ಹೊಲೆiÀುಭಂಡ ಮಾತುಳಾಡುವವನೆ ಹೊಲೆಯಗಂಡ - ಹೆಂಡಿರ ನಡುವೆ ಭೇದಗೈವವ ಹೊಲೆಯಹೆಂಡರಿಚ್ಚೆಗೆ ನಡೆವ ಹೇಡಿ ಹೊಲೆಯ 4ಪರಧನಕೆ ಪರಸತಿಗೆ ಅಳುಪಿದವನೇ ಹೊಲೆಯಗುರು ಹಿರಿಯರನು ಕಂಡು ಎರಗದಿದ್ದವ ಹೊಲೆಯಅರಿತು ಆಚಾರವನು ಮಾಡದಿದ್ದವ ಹೊಲೆಯಪುರಂದರವಿಠಲನನು ನೆನೆಯದವ ಹೊಲೆಯ 5
--------------
ಪುರಂದರದಾಸರು