ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಕ್ಕೊ ಇಲ್ಲೆಹಾನೆ ಅಖಂಡ ಗುರುತಾನೆ ಬೇಕಯೆಂದವರಿಗೆ ಪೂರ್ಣ ಸಿಕ್ಕುತಾನೆ ಧ್ರುವ ಅರವ್ಹಿನ ಮುಂಧಾನೆ ಮರವ್ಹಿನ ಹಿಂಧಾನೆ ಕುರಹು ತಿಳಿದರೆ ತಾನೆ ಸ್ಥಿರವಾಗ್ಯಾನೆ 1 ಗುರುತ ಕಂಡವಘಾನೆ ಗುರುಸ್ವರೂಪಧ್ಯಾನೆ ಗುರುಕೃಪ್ಯಾದವಘಾನೆ ಗುರುತಾನೆ 2 ಅಣುರೇಣುದೊಳಘಾನೆ ಜನವನ ತುಂಬ್ಯಾನೆ ಅನುಭವಕ ತಾನೆ ಖೂನಾಘ್ಯಾನೆ 3 ಮನದ ಕೊನಿಲಿಹಾನೆ ಘನವೆ ಘನವಾಘ್ಯಾನೆ ದೀನ ಮಹಿಪತಿ ಸ್ವಾಮಿ ತಾನೆ ತಾನೆ4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೋಡುದರೊಳಗಡಗೆದ ಘನ ನೀಟ ಧ್ರುವ ಅರವ್ಹಿನ ಮುಂದದ ಮರವ್ಹಿನ ಹಿಂದದ ಕುರುಹು ತಿಳಿದರತಾ ಇರಹು ಅಗ್ಯದೆ 1 ಎರಡಕ ಬ್ಯಾರ್ಯದ ಮೂರಕ ಮಿರ್ಯದ ಗುರುಕೃಪೆ ಅದರೆ ಸಾರೆ ತಾನ್ಯದ 2 ಬಾಹ್ಯಕ ದೂರ ಗುಹ್ಯಕ ಗೂಢದ ಮಹಿಪತಿ ಮನದೊಳು ಘನವಾಗ್ಯದ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪಾದ ಕೂಡಿ ಸಾಧು ಸಂಗ ಮಾಡಿ ಭೇದಾಭೇದೀಡ್ಯಾಡಿ ಧ್ರುವ ಮರಹು ಮರಿಯ ನೀಗಿ ಅರವ್ಹಿನೊಳಗಾಗಿ ಕುರುಹ್ಹದೋರಿಕೊಡುವ ಗುರು ಬ್ರಹ್ಮಾನಂದಯೋಗಿ 1 ತಿರುಗಿನೋಡಿ ನಿಮ್ಮ ಅರಿತು ನಿಜವರ್ಮ ಪಾರಗೆಲಿಸುವದಿದು ಗುರುಪಾದ ಧರ್ಮ 2 ಕಣ್ದೆರೆದು ನೋಡಿ ತನ್ನೊಳು ಬೆರೆದಾಡಿ ಧನ್ಯವಾದ ಮಹಿಪತಿ ಗುರುಪಾದ ಕೂಡಿ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು