ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೆರೆನಂಬು ಮನವೆ ಹರಿಯ ಸಿರಿಯನಾಳುವ ದೊರಿಯ ಧ್ರುವ ಸ್ಮರಿಸಿದಾಕ್ಷಣ ಕರಿಯ ಸೆರೆಯಬಿಡಿಸಿದನರಿಯ ಚರಣಕಮಲಯುಗ್ಮಮರಿಯ 1 ಧರಿಯೊಳು ದ್ರೌಪದಿ ಮೊರಿಯ ಹರಿ ಕೇಳಿದ ನೀನರಿಯ ಅರಿತು ನಡೆವನೀ ಪರಿಯ ಸಾರುತಿದೆ ಶ್ರುತಿ ಖರಿಯ 2 ಅರವಿನೊಳು ಮನ ಹರಿಯ ತೋರುವ ಘನ ಅಶ್ಚರ್ಯ ತರಳ ಮಹಿಪತಿದೊರಿಯ ನೆರೆನಂಬಿರೊ ಈ ಪರಿಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಲಗೊಳ್ಳಿರೊ ಭಾವ ಭಕ್ತಿಯಿಂದ ನೆಲೆಯಗೊಂಡು ಮೂಲವಿಡಿದು ನಿಜಮೂಲ ಮೂರ್ತಿಯ ಬಲಗೊಳ್ಳಿ 1 ಏರಿ ನೋಡಿ ಅರುಚಕ್ರದಾಟಿ ತೋರುತಿಹ್ಯ ಪೂರ್ಣಾನಂದ ಶ್ರೀ ಗುರುಮೂರ್ತಿಯ ಬಲಗೊಳ್ಳಿ 2 ಸೆರಗವಿಡಿದು ನೋಡಿ ಕರಗಿಮನ ಅರವಿನೊಳು ಬೆರೆದು ಕೂಡಿ ಹರಿ ಪರಬ್ರಹ್ಮನ ಬಲಗೊಳ್ಳಿ 3 ಆಸಿಯನೆ ಜರೆದು ನಿರಾಸಿಯಲ್ಲಿ ಧ್ಯಾಸವಿಡಿದು ಲೇಸಾಗಿ ಕೂಡಿರೊ ವಾಸುದೇವನ ಬಲಗೊಳ್ಳಿ 4 ಮೂರು ಗುಣಕೆ ಮೀರಿ ತೋರಿತಿಹ್ಯ ನಿರ್ಗುಣನ ನೆರೆದು ಕೂಡಿ ನಿಜ ನಿರುಪಮನ ಬಲಗೊಳ್ಳಿ 5 ಸಹಸ್ರದಳಮಂಟಪದೊಳು ಸೋಹ್ಯವರಿತು ಸಾಯಸದಿಂದ ಶ್ರೀಹರಿಯ ಬಲಗೊಳ್ಳಿ 6 ತಾನೆ ತಾನಾಗಿಹ್ಯ ತನುವಿನೊಳು ಆನಂದೋಬ್ರಹ್ಮ- ಙÁ್ಞನದಿಂದ ನೋಡಿ ಙÁ್ಞನಸಾಗರನ ಬಲಗೊಳ್ಳಿ 7 ಮನವಿಡಿದು ಮಾಡಿರೊ ಧ್ಯಾನ ಮೌನ ಅನುದಿನ ಅನುಕೂಲಾಗುವ ಅನಂತ ಗುಣನ ಬಲಗೊಳ್ಳಿ 8 ಕಣ್ದೆರೆದು ನೋಡಿ ತನ್ನೊಳಗೆ ತಾನೆ ತಿಳಿದು ತನುಮನರ್ಪಿಸಿ ಗುರುಮೂರ್ತಿಯ ಬ¯ಗೊಳ್ಳಿ 9 ಗುರು ಕರುಣದೊಲವಿಂದ ಪಡೆದು ಪೂರ್ಣ ಹರಿಯು ಸುಖ ಸೂರ್ಯಾಡಿ ಪರಮ ಅನಂದ ಸುಪಥ 10 ಅರ್ತುಕೂಡಿದ ನೋಡಿ ಅರ್ತಿಯಿಂದ ಮಹಿಪತಿಯ ಬೆರ್ತುಕೂಡಿದ ಮನ ಕರ್ತುಗುರುವಿನ ಬಲಗೊಳ್ಳಿ 11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಲುಸೂಕ್ಷ್ಮ ಗುರು ಗೂಢವಿದ್ಯ ನೆಲೆವಂತಗಿದು ನಿಜವಾಗುದು ಸಾಧ್ಯ ಧ್ರುವ ಕಣ್ಣಿನ ಕೊನೆ ಮುಟ್ಟಿನೋಡಿ ನಿಜಖೂನ ಉನ್ಮನವಾಗಿ ಬೆರೆದಾಡುವ ನಿಜಸ್ಥಾನ ಚೆನ್ನಾಗ್ಯಾದಾನಂದ ಘನ ಭಿನ್ನವಿಲ್ಲದೆ ಮಾಡಿ ನಿಜಗುರು ಧ್ಯಾನ 1 ಜಾಗ್ರ ನಿದ್ರೆಯ ಮಧ್ಯ ಅರವಿನೊಳು ನಿಜಗೂಡಿ ಶೀಘ್ರ ಸಿದ್ಧಾಂತನುಭವಿಸಿ ತಾಂ ನಿಜಮಾಡಿ ಅಗ್ರ ಗುರುಪಾದವನು ಕೂಡಿ ಶುಕ ಮುನಿಗಳಿಗಿದೆ ನೋಡಿ 2 ಶಿರದಲಿ ಕರವಿಟ್ಟು ನೋಡಿ ನಿಜವರ್ಮ ಹರಿಸಿ ಅನೇಕ ಜನ್ಮಾಂತರದ ದುಷ್ಕರ್ಮ ತರಳಮಹಿಪತಿಗಿದೆ ಸುಬ್ರಹ್ಮ ಗುರು ಭಾಸ್ಕರಸ್ವಾಮಿ ಶ್ರೀಪಾದ ಧರ್ಮ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು