ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರವಿದೂರನೆ ತವ ಮಹಿಮೆಯು ಘನ್ನ ಪ ಬಂಡಿಕಾಲನು ಪಿಡಿದೆಯಂತೆ | ಹತ್ತು ಬಂಡಿರಾಯಗೆ ಸುತ ನೀನಾದಿಯಂತೆ ಬಂಡಿ ಅಸುರನ ಕೊಂದಿಯಂತೆ | ಧುರದಿ ಬಂಡಿ ನಡಸಿ ನರನ ಸಲಹಿದೆಯಣತೆ 1 ತಂದೆ ತಂದೆಗೆ ತಂದೆಯಂತೆ | ಜಗದ ತಂದೆ ನಿನಗೆ ತಂದೆ ತಾಯಿಗಳಂತೆ ತಂದೆ ನೃಪಾಲನ ಸುತೆಗೀಶನಂತೆ 2 ಸಿಂಧೂರದ್ವಯ ವರದನಂತೆ | ಮಧ್ಯ ಸಿಂಧೂರವದನವು ನಿನಗಿಹುದಂತೆ ಸಿಂಧು ಮಂದಿರ ನಿನಗಂತೆ ಶಾಮ ಸುಂದರ ನಿನಗೆ ಭಕ್ತರ ಚಿಂತೆಯಂತೆ 3
--------------
ಶಾಮಸುಂದರ ವಿಠಲ
ಕೈವಲ್ಯಪತಿ ವಿಠಲ | ಇವಳ ನೀ ಸಲಹೋ ಪ ದೇವದೇವೊತ್ಮತವ | ದಾಸ್ಯಕಾಂಕ್ಷಿಪಳಾ ಅ.ಪ. ಗುರುಗಳೊಂದಗೆ ಯಾತ್ರೆ | ಭರದಿ ಸ್ವಪ್ನದಿಗೈದು |ಮರಳಿ ಕೊಲ್ಹಾಪುರದ | ಶಿರಿರಮೆಯ ಕಂಡೂ |ಮರುತ ದರ್ಶನದಿಂದ | ವರಸು ಉಪದೇಶಕ್ಕೆತರುಣಿ ಶುದ್ಧಳು ಇಹಳು | ಉರಗಾದ್ರಿವಾಸಾ 1 ತೈಜಸನು ನೀನಾಗಿ ನೈಜದಂಕಿತ ಪ್ರಾಪ್ತಿಮಾಜದಲೆ ಸೂಚಿಸಿಹೆ | ಭ್ರಾಜಿಷ್ಣು ಮೂರ್ತೇ|ಯೋಜಿಸಿದೆ ಅದಕಾಗಿ | ತರಳೆಗಂಕಿತವನ್ನುರಾಜಿಸೋ ಮನದಿ ತವ | ನೈಜರೂಪವನೂ 2 ತರತಮದ ಸುಜ್ಞಾನ | ಹರಿಗುರೂ ಸದ್ಭಕ್ತಿಮರುತ ಮತ ದೀಕ್ಷೆಯನು | ಪರಮ ವೈರಾಗ್ಯಕರುಣಿಸುತ ಸಂಸಾರ ಶರಧಿಯನೆ ದಾಂಟಿಸೊಅರವಿದೂರನೆ ಹರಿಯೆ | ಪ್ರಾರ್ಥಿಸುವೆ ನಿನ್ನಾ 3 ಕರ್ಮ ನಿಷ್ಕಾಮದಲಿ | ಪೇರ್ಮೆಯಲಿ ಚರಿಪಂತೆಭರ್ಮಗರ್ಭನ ಪಿತನೆ | ಸನ್ಮನವನಿತ್ತೂ |ನಿರ್ಮಮತೆ ನೀಡಿ | ಕರ್ಮನಿರ್ಲೇಪದಲಿಹಮ್ರ್ಯ ವೈಕುಂಠವನು | ಗಮಿಪ ತೆರಮಾಡೋ 4 ಭಾವುಕರ ಪರಿಪಾಲ | ಭೂವೈಕುಂಠಲೋಲದೇವದೇವೋತ್ತಮನೆ | ಗೋವಿಂದ ಮೂರ್ತೇ |ನೀ ವೊಲಿಯದಿಲ್ಲ ಗುರು | ಗೋವಿಂದ ವಿಠ್ಠಲನೆಸೇವಕಳ ಪೊರೆಯಲ್ಕೆ | ಪ್ರಾರ್ಥಿಸುವೆ ಹರಿಯೇ 5
--------------
ಗುರುಗೋವಿಂದವಿಠಲರು
ಶ್ರೀಹರಿಯ ಸ್ತುತಿ ಅಂಬುಜಾಕ್ಷನೆ ಪಾಲಿಸೊ ಅಂಬುಜಾಕ್ಷನೆ ಕೇಳು ಕಂಬುಕಂಧರ ನಿನ್ನ ನಂಬಿದ ಜನರನು ಇಂಬಾಗಿರಕ್ಷಿಸುವ ಪ ಹರಿಯೆ ನೀ ಭಕುತರ ಸುರತರುವೆಂದು ಅರಿದು ನಿನ್ನಡಿಗೆ ಬಂದು ಕರುಣಾಸಿಂಧು ವರವೇನು ಎನ್ನ ಪರಿಚರ್ಯವೆಲ್ಲವನು ಜರಿದು ಎನ್ನನು ಪೊರಿಯೆಂದು ಭಕ್ತರ ಬಂಧು ಕರಿವರದನೀತರಿವಿದುರುಳನ ಪೊರೆವಿ ಸುಜನರ ಅರವಿದೂರನೆ ಸ್ಮರಣೆಮಾತ್ರದಿ ತರಣಿಸುತನ ಪುರದಭಯವನು ಪರಿಹರಿಸುವಿ 1 ಭವರೋಗವೈದ್ಯ ನೀ ಅವಧಿಯೂ ಇಲ್ಲದೆ ಸ್ವವಶವ್ಯಾಪಿಯಾಗಿ ದಿವಿಜಯ ಪೊರೆವಿ ಭಕುತರ ಕಾಯ್ಯಿ ಅವನೀಲಿ ಜನಿಸಿದ ಪವನ ವೈರಿಯ ಕವಿಶಿ ಮೋಹದಿ ಕೆಡಿಶಿದಿ ನರನನ್ನು ಪೊರದಿ ಅವನಿಪಿತ ನಿನ್ನ ಯುವತಿ ವೇಷವ ಕವಿಗಳೆಲ್ಲರು ಸ್ತವನ ಮಾಳ್ಪರು ಪವನ ಪ್ರಿಯನೆ ಭುವನ ತಾತನೆ ಶಿವಗೆ ವರವಿತ್ತೆ ಪವನನಯ್ಯನೆ 2 ತರಳ ಪ್ರಹ್ಲಾದನ ಪೊರೆದು ಪಾಂಚಾಲಿಗೆ ವರವಿತ್ತೆ ಕರಿಪುರಾಡರಸರ ಪ್ರಭುವೆ ಸುರತರು ವೇಷಶರಣಾಗತರನು ಪೊರೆವನೆಂಬ ನಿಜ ಬಿರುದನು ಮೆರಿಸುತ ಶಿರಿಯಿಂದೊಪ್ಪುತ ವರ ಭಕ್ತಾಗ್ರೇಸರ ನರಪಾಂಬರೀಷನ ಪೊರೆವಂಥ ಸುರಪತಿ ಶಿರಿವತ್ಸಾಂಕಿತನೆ 3
--------------
ಸಿರಿವತ್ಸಾಂಕಿತರು