ಒಟ್ಟು 5 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿರೇಶ ನಿನ್ನ ಚರಣದ್ವಂಧ್ವವನ್ನು ಬಿಡೆನೊ ಕರುಣಾ ನೊಂದಿರುವೆನೊ ಮನದಿ ಬಹಳ ಹಿಂದುಮುಂದು ತೋರದಿಹುದು ಬಂಧು ಬಳಗವೆಲ್ಲ ನೀನೆ ಎಂದಿಹೆನೊ ಅರವಿಂದಲೋಚನ ಅ.ಪ ಊರು ಊರು ಸುತ್ತಿ ದಣಿದು ಸಾರರಹಿತ ಶಾಸ್ತ್ರಗಳ ವಿ ಕಾಲ ಕಳೆದೆನೋ ಉದಾರಚರಿತ ಭೂರಿ ಕರಣದಿಂದ ನಿನ್ನ ಚಾರುಚರಣ ಸೇವೆ ರುಚಿಯು ತೋರಿ ಮನಕೆ ಸಂತಸದಿ ಮುರಾರಿ ಎನಗೆ ಗತಿಯೆನುತಲಿ 1 ದುರಿತ ಸ್ತೋಮಗಳಲಿ ಮುಳುಗಿ ಬಳಲಿದೆನೊ ನಿಸ್ಸೀಮ ಮಹಿಮ ನಾಮಸ್ಮರಣ ಮಾತ್ರದಿಂದ ಪಾಮರ ಜನರುಗಳ ಯೋಗ ಕ್ಷೇಮ ವಹಿಸಿ ಪೊರೆಯುವಂಥ ಕಾಮಧೇನು ನೀನೆಂದರಿತು 2 ಮಾತಿನಲ್ಲಿ ಮಲ್ಲರೆಂದು ಖ್ಯಾತಿ ಪಡೆದ ಜನಗಳಿರಲು ಯಾತರವನು ಇವನು ಎನ್ನದಿರು ದೂತ ಪ್ರಸನ್ನನೇ ಸೋತು ವಿವಿಧ ಕಾರ್ಯಗಳಲಿ ಆತುರದಲಿ ನಿನ್ನ ಪರಮ ಪ್ರೀತಿಯ ಪಡೆಯುವುದೇ ದೊಡ್ಡ ನೀತಿಯೆಂದು ಅರಿತು ಸತತ 3
--------------
ವಿದ್ಯಾಪ್ರಸನ್ನತೀರ್ಥರು
ಬಾರೊ ನಂದನಂದನ ಅರವಿಂದಲೋಚನ ಪ ಅರವಿಂದಲೋಚನ ಭವಬಂಧ ಮೋಚನ ಅ.ಪ ದುರುಳ ದುರ್ಯೋಧನನ ಅನುಜ ಕರದಿ ಎನ್ನ ಸೀರೆ ಪಿಡಿದು ಭರದಿ ಎಳೆಯುವ 1 ಅರಿಯದಂತೆ ಇರುವರೆಲ್ಲ ಕಿರಿಯ ಜನಗಳು ಹರಿಯೆ ಕರುಣಾನಿಧಿಯೇ ಎನ್ನ ಮೊರೆಯ ಕೇಳಲೊ 2 ಕಾಮ ಜನಕ ನಾಮಗಿರಿ ಶ್ರೀ ಸ್ವಾಮಿ ನರಹರೆ ಹೇಮಕಶಿಪು ತನುಜನಂತೆ ಪ್ರೇಮದಿ ಸಲಹೆಲೊ 3
--------------
ವಿದ್ಯಾರತ್ನಾಕರತೀರ್ಥರು
ವಂದಿಸುವೆನು ನಿನ್ನ ಅರವಿಂದಲೋಚನ- ದಿಂದ ನೋಡೊ ನೀ ಎನ್ನ ವಂದಿಸುವೆ ಅರವಿಂದಲೋಚನ- ದಿಂದ ನೋಡೊ ದಯಾಸಿಂಧು ಎನಿಸುವೆ ನಂದನಂದನನಾದ ಶ್ರೀ ಮುಕುಂದ ನೀ ಮುಚು- ಕುಂದ ವರದ ವಂದಿಸುವೆನು ನಿನ್ನ ಪ ಅಂಬರೀಷನು ಏನೋ ಮುಚುಕುಂದ ಮುನಿವರ- ನೆಂದು ರಕ್ಷಿಸುವೇನೊ ದ್ವಿಜ ತಂದವಲಕ್ಕಿ ತಿಂದ ಭಿಡೆಯಗಳೇನೊ ನೀನೆ ಸುರಧೇನು ಕಂದ ಧ್ರುವಪ್ರಹ್ಲಾದ ಕರೆಯಲು ಬಂದು ಭರದಿಂದವರ ಸಲಹಿದೆ ಮಂದಮತಿ ನಾ ಮ- ತ್ತೊಂದನರಿಯದೆ ವಂದಿಸುವೆ ನಿನ್ನ 1 ಗಜನು ಅಜಮಿಳನೇನೊ ಪಾದಾಂಬುಜ ಸ್ತುತಿಸ- ಲಜಸುತನು ನಾರದನೇನೊ ನಿಜ ಭಕುತಿಯಿಂದಿರಲ್ವಿದುರ ಉದ್ಧವನೇನೊ ನದಿಯಲ್ಲಿ ನಿನ್ನ ನಿಜಸ್ವರೂಪವ ತೋರಲಿಕ್ಕೆ ನಿನ್ನ ಬಾಂಧವಕ್ರೂರನೇ ನಾ ಕೇಳು ಘನ್ನ ಮಹಿಮ ಪ್ರಸನ್ನನಾಗಲಿಕ್ವಂದಿಸುವೆನು ನಿನ್ನ 2 ಸತ್ವರೊಳು ನಾನಲ್ಲ ಅಹಲ್ಯೆ ದ್ರೌಪದಿ ಭಕ್ತಿ ಮೊದಲೆನಗಿಲ್ಲ ಪಾಂಡವರ ದುರಿತಾಪತ್ತು ಕಳೆದ್ಯೊ ನೀಯೆಲ್ಲ ಕೇಳೆನ್ನ ಸೊಲ್ಲ ಭಕ್ತಾಧೀನನೆ ಭಯನಿವಾರಣ ಇಷ್ಟು ಭವಭಯ ಬಿಡಿಸಿ ಭೀಮೇಶಕೃಷ್ಣ ನಿನ್ನದಯ- ವಿಟ್ಟುಕರುಣಿಸೊ ವಂದಿಸುವೆನು ನಿನ್ನ 3
--------------
ಹರಪನಹಳ್ಳಿಭೀಮವ್ವ