ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂದನಂದನ ಅರವಿಂದದಳಾಕ್ಷನೆ ವಂದಿಸುವೆ ಪಾದಾರವಿಂದಗಳಿÀಗೀಗ ಪ ಪದುಮನಾಭನೆ ನಿನ್ನ ಪಾದಭಕುತಿಯೊಳಿಟ್ಟು ಸುಜನ ಸಂಗತಿ ನೀಡೊ ಸುರವಂದ್ಯ ಹರಿಯೆ ಒದಗಿ ಬರುವೊ ಮೃತ್ಯು ಮೊದಲೆ ಅರಿಯದೆ ನಾ ಕಾಲ 1 ಭೂತಳದೊಳು ಸಲಹೋ ದಾತರೆಲ್ಲಿಹರಿನ್ನು ಮಾತುಳಾಂತಕನೆ ಈ ಮಾತ ಪೇಳೆನಗೆ ಮಾತಾಪಿತರು ಮೊದಲಿಲ್ಲ ಇನ್ನನ್ಯರಿಲ್ಲ ಅ- ನಾಥನೆಂದೆನ್ನ ಕಯ್ಯ ಪ್ರೀತಿಂದೆ ಹಿಡಿ ಪ್ರಿಯ 2 ವಾಸುಕೀಶಯನನ ವರವ ಪಡೆಯದೆ ನಾ ಮೋಸಹೋದೆನೊ ಈ ಸಂಸಾರದೊಳು ಸಿಲ್ಕಿ ಶ್ರೀಶ ನೀ ಸಲಹೊ ಭೀಮೇಶ ಕೃಷ್ಣನೆ ಎನ್ನ ಘಾಸಿ ಮಾಡದೆ ಹೃಷಿಕೇಶ ಕರುಣದಿಂದ 3
--------------
ಹರಪನಹಳ್ಳಿಭೀಮವ್ವ