ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದಕೊ ಕಾಶಿಯನು ಮನವೇ ಬೆದಕುಗೊಳ್ಳಲು ಬೇಡ ತೋರುವೆನು ಪ ಬಲ್ಲವನಾದರೆ ಇಲ್ಲಿಯೆ ಕಾಶಿ ಕಲ್ಲೆದೆಯಾದವನಲ್ಲವೆ ದೋಷಿ ಎಲ್ಲವ ತಿಳುಹುವೆ ಚಲ್ವ ಸಂತೋಷಿ ಸೊಲ್ಲ ಲಾಲಿಸಿ ಕೇಳು ಪೇಳ್ವೆ ನಿರ್ದೋಷಿ 1 ಕಾಶಿಯ ದರುಶನವಿಲ್ಲದ ಜನರು ವಿ- ಶೇಷವಾಗಿಯೆ ಇಲ್ಲಿ ನಡೆಕೊಂಬುತಿಹರು ದೂಷಣ ಮಾಡದೆ ಪೋಷಿಸುವವರು ಕಾಶಿಗಿಮ್ಮಡಿಯಾಗಿ ಲೇಸ ಪಡೆಯುವರು 2 ವೇದವನೋದಿದ ವಿಪ್ರನೆ ಕಾಶಿ ವಾದಗಳಿಲ್ಲದ ಸೋದರನೆ ಕಾಶಿ ಆ ಧನ ಕೈಯೊಳು ಇದ್ದರೆ ಕಾಶಿ ಮಾಧವ ಧ್ಯಾನವು ಮನದೊಳು ಕಾಶಿ 3 ಅವ್ವೆ ತಂದೆಯ ಸೇವೆ ಮಾಳ್ಪುದೆ ಕಾಶಿ ದೇವರ ಪೂಜೆಯ ನೋಳ್ಪುದೆ ಕಾಶಿ ಜೀವರಕ್ಷಣ್ಯವ ಮಾಳ್ಪುದೆ ಕಾಶಿ ಭಾವಶುದ್ಧತ್ವದಿ ಇಪ್ಪುದೆ ಕಾಶಿ 4 ಗುರುಗಳಿಗೆರಗುವ ಪರಿಯೊಂದು ಕಾಶಿ ಹಿರಿಯರ ಆಜ್ಞೆಯೊಳಿರುವುದು ಕಾಶಿ ಪರವುಪಕಾರವು ಸ್ಥಿರವಾದ ಕಾಶಿ ಕರೆದು ಮೃಷ್ಟಾನ್ನವನೆರೆವುದು ಕಾಶಿ 5 ಅರಳಿಯ ವೃಕ್ಷವ ನೆಟ್ಟರೆ ಕಾಶಿ ಕೆರೆ ಬಾವಿ ಕಟ್ಟಲು ಇಷ್ಟದ ಕಾಶಿ ಅರವಟ್ಟಿ ನೀರಿರಿಸಲು ದೃಷ್ಟ ಕಾಶಿ ಸಿರಿಲಕ್ಷ್ಮಿಯರಸನ ಕರೆವುದು ಕಾಶಿ 6 ದುಷ್ಟರ ಸಂಗವ ಬಿಡುವುದೆ ಕಾಶಿ ಕಷ್ಟದ ಮಾರ್ಗವ ತೊರೆವುದು ಕಾಶಿ ಶಿಷ್ಟರ ಸೇರುವುದು ಇಷ್ಟದ ಕಾಶಿ ಬೆಟ್ಟದ ಒಡೆಯನ ನೆನೆವುದೆ ಕಾಶಿ 7 ಏಕಾದಶಿ ಉಪವಾಸವೆ ಕಾಶಿ ಆಕಳ ದಾನವ ಮಾಳ್ಪುದೆ ಕಾಶಿ ಬೇಕಾದುದಿದ್ದರೆ ಮನೆಯೆಲ್ಲ ಕಾಶಿ ಕಾಕು ಸೇವೆಯಿಲ್ಲದ ಮನುಜನೆ ಕಾಶಿ 8 ಉದಯದಿ ಸ್ನಾನವ ಮಾಳ್ಪುದೆ ಕಾಶಿ ಪದುಮನಾಭನ ಧ್ಯಾನ ಮೃದುವಾದ ಕಾಶಿ ಕದನವಿಲ್ಲದ ಊರ ನೋಡಲು ಕಾಶಿ ಉದರವು ತುಂಬಲು ಬಡವಗೆ ಕಾಶಿ 9 ರುದ್ರ ದೇವನ ಪೂಜೆ ಇದ್ದಲ್ಲಿ ಕಾಶಿ ವಿಧ್ಯುಕ್ತ ಮಾರ್ಗದಿ ನಡೆವುದು ಕಾಶಿ ಬದ್ಧವಾಗೈವರ ಕಟ್ಟಲು ಕಾಶಿ ಶುದ್ಧವಾದ ಹೆಂಡತಿ ಮುದ್ದಿನ ಕಾಶಿ 10 ಸನ್ಯಾಸ ಮಾರ್ಗವು ಚೆನ್ನಾದ ಕಾಶಿ ಅನ್ಯಾಯವಿಲ್ಲದ ಅರಸನೆ ಕಾಶಿ ಕನ್ಯಾದಾನವು ಮುನ್ನಿನ ಕಾಶಿ ಮನ್ನಿಸಿಕೊಂಡರೆ ತನ್ನಲ್ಲೆ ಕಾಶಿ 11 ಅಧ್ಯಾತ್ಮ ವಿದ್ಯೆಯ ಹೊದ್ದಲು ಕಾಶಿ ಬದ್ಧ ನಡೆನುಡಿ ಇದ್ದರೆ ಕಾಶಿ ಮಧ್ವರಾಯನು ಕುಳಿತಿದ್ದಲ್ಲಿ ಕಾಶಿ ಪದುಮನಾಭನ ನೆನವಿದ್ದರೆ ಕಾಶಿ 12 ದಾನದೊಳಗೆ ಸಮಾಧಾನವೆ ಕಾಶಿ ಮಾನದೊಳಗೆ ಅಭಿಮಾನವೆ ಕಾಶಿ ಸ್ನಾನದೊಳಗೆ ಭಕ್ತಿ ಸ್ನಾನವೆ ಕಾಶಿ ಜ್ಞಾನದೊಳಗೆ ಶುದ್ಧಜ್ಞಾನವೆ ಕಾಶಿ 13 ದೇವರೊಳಗೆ ಸಾಲಿಗ್ರಾಮವೆ ಕಾಶಿ ಜೀವರೊಳಗೆ ಗೋವುಚಯವೆಲ್ಲ ಕಾಶಿ ಹೂವಿನೊಳಗೆ ಬಿಲ್ವಪತ್ರಿಯೆ ಕಾಶಿ 14 ಹಲವು ಮಾತುಗಳೇನೀಪರಿ ಕಾಶಿ ಛಲ ಭಕ್ತಿಯಿದ್ದರೆ ಜಲವೆಲ್ಲ ಕಾಶಿ ಒಲವುಳ್ಳ ವರಾಹತಿಮ್ಮಪ್ಪನೆ ಕಾಶಿ ಕುಲವೃಕ್ಷವೆಂಬುದು ಫಲವಾದ ಕಾಶಿ 15
--------------
ವರಹತಿಮ್ಮಪ್ಪ
ಸಾಂಬ ಶಿವ ಶರಣರಿಗೊಂದು ಶರಣಾರ್ಥಿ ಪ ನರಲೋಕದೊಳಗೆ ಸಂಚಾರವ ಮಾಡುವ ಪರಮಾತ್ಮ ಪರಿಪೂರ್ಣ ಎಲ್ಲ ಜೀವದೊಳೆಂದು ಅರಿತಂಥವನಿಗೊಂದು ಶರಣಾರ್ಥಿ ಮರೆಹೊಕ್ಕ ದೀನರನು ರಕ್ಷಿಪ ಪುಣ್ಯ ಪುರು ಪುರುಷ ಪ್ರಯತ್ನದಿಂದುದ್ಯೋಗವನು ಮಾಳ್ಪ ಸರಿವಂಥವರಿಗೊಂದು ಶರಣಾರ್ಥಿ 1 ಧಾರಣಿಯೊಳು ಪೆಸರೊಡೆದು ರಂಜಿಸುವಂಥ ಕಾರುಣಿಕರಿಗೊಂದು ಶರಣಾರ್ಥಿ ದವರಿಗೊಂದು ಶರಣಾರ್ಥಿ ನಿತ್ಯ ಕರ್ಮವ ರಚಿಸುವ ಚಾರು ಶೀಲರಿಗೊಂದು ಶರಣಾರ್ಥಿ ಸ್ಸಾರ ಮಾಡಿದಗೊಂದು ಶರಣಾರ್ಥಿ 2 ಕೆರೆಭಾವಿ ದೇವಾಲಯಗಳ ಕಟ್ಟಿಸಿ ದೇವರುತ್ಸವವನು ಬರಿಸುವಗೆ ದ್ಧರಿಸಿ ಭುಂಜಿಪಗೊಂದು ಶರಣಾರ್ಥಿ ಪರದಾರ ಪರದ್ರವ್ಯ ಪರದ್ರೋಹವಿಲ್ಲದ ಮಹಾ ಪುರುಷರಿಗೊಂದು ಶರಣಾರ್ಥಿ ಹರಿಹರರೊಳಗೆ ಭೇದವ ಮಾಡಿ ನಡೆಯದ ದುರಿತ ದೂರರಿಗೊಂದು ಶರಣಾರ್ಥಿ 3 ಸತ್ತು ಹುಟ್ಟುವ ಭವಶರಧಿಯ ಗೆಲುವಂಥ ಉತ್ತಮರಿಗೊಂದು ಶರಣಾರ್ಥಿ ನಿತ್ಯ ಸಾಲಿಗ್ರಾಮಂಗಳನು ಪೂಜಿಸಿ ಹರಿ ತೀರ್ಥಗೊಂಬನಿಗೊಂದು ಶರಣಾರ್ಥಿ ಕೃತ್ತಿ ವಾಸನ ಆಗಮೋಕ್ತದಿ ಪೂಜಿಪ ಭಕ್ತಿವಂತರಿಗೊಂದು ಶರಣಾರ್ಥಿ ತತ್ವ ವಿಚಾರ ವೇದಾಂತದ ಅರ್ಥವ ಯಾ ವತ್ತರಿದವಗೊಂದು ಶರಣಾರ್ಥಿ 4 ಅರವಟ್ಟಿಗೆಯನು ಚೈತ್ರದೊಳಿಕ್ಕಿ ಜನರಿಗೆ ನೀರೆರಸಿದವರಿಗೊಂದು ಶರಣಾರ್ಥಿ ಸಿರಿ ತುಳಸಿಯನ್ನು ನೇಮದಲಿ ಪೂಜಿಸುವಂಥ ಹರಿ ಶರಣರಿಗೊಂದು ಶರಣಾರ್ಥಿ ತರಣಿಯೆ ತ್ರಿಗುಣಾತ್ಮಕನೆಂದು ಹೃದಯದೊಳರಿ ದೆರಗುವಗೊಂದು ಶರಣಾರ್ಥಿ ಮರುಸುತನ ಕೋಣೆ ವಾಸ ಲಕ್ಷ್ಮೀಶನ ಚರಣ ಪಂಕಜಕೊಂದು ಶರಣಾರ್ಥಿ 5
--------------
ಕವಿ ಪರಮದೇವದಾಸರು