ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತುಂಬಿ ಬೆಳಗುತಿರುವಿಯಂತೆ ಎ ನಗೆ ಕಾಣದ ಬಗೆಯಾಕಂತೆ ಪ ಜಗವನು ವ್ಯಾಪಿಸಿ ಬಗೆಬಗೆಯಿಂದಲಿ ಝಗಿಝಗಿಕಪೆಂಬಾನಂತ ಸ್ಮøತಿಗಳಿವೆ ಅ.ಪ ಸರಸಿಲಿ ಸ್ಮರಿಸಲು ಬಂದಂತೆ ತರುಣಿಯ ಸಭೆಯೊಳು ಕಾಯ್ದಂತೆ ಕರೆಯಲು ಕಂಬದಿ ಹೊರಟಂತೆ ತರಳಗೆ ಅಡವಿಲಿ ಒಲಿದಂತೆ ಅರಿತು ವಿಚಾರಿಸಿ ನೋಡಲಿವೆಲ್ಲ ನಿನ್ನ ಖರೆ ಪರತರಮಹಿಮ 1 ಅರಣ್ಯವಾಸಿಗಳ ಪರೀಕ್ಷಂತೆ ಅರಿತು ಪರುಷ ಕರುಣಿಸಿದಂತೆ ಚರಣದ್ವೊರೆಯ ತಮ್ಮನಂತೆ ಸ್ಥಿರಪಟ್ಟವನಿಗೆ ಕಟ್ಟ್ದಂತೆ ವರ ವೇದೋಕ್ತಿಗಳರಿತು ನೋಡಿದರೆ ಸ್ಮರಿಸುವ ಭಕುತರ ನಿರುತ ಚಿಂತಾಮಣಿ 2 ಪೊಡವಿಪಾಲನಿಗೆ ಶಾಪಂತೆ ಬಿಡದೆ ಚಕ್ರದಿಂದ ಕಾಯ್ದಂತೆ ಕಡಲ ಮಧ್ಯದಲಿ ಮನೆಯಂತೆ ದೃಢಕರಿಗೆ ಮೈ ನೆರಳಂತೆ ಕಡುದಯಾನಿಧಿ ಎನ್ನೊಡಲೊಳು ಬಿಡದಂತಿರಿಸಯ್ಯ ಒಡೆಯ ಶ್ರೀರಾಮ 3
--------------
ರಾಮದಾಸರು
ವರುಷ ಕಾರಣವಿಲ್ಲ ಹರಿಭಜನೆಗೆ |ಅರಿತ ಸಜ್ಜನರೆಲ್ಲಕೇಳಿಸಮ್ಮುದದಿಪ.ತರಳತನದಲಿ ಕಂಡ ಹರಿಯ ಧ್ರುವರಾಯನು |ಹಿರಿಯ ತಾನವನಯ್ಯ ಕಂಡನೇನೂ ? ||ತರಳ ಪ್ರಹ್ಲಾದ ನರಹರಿಯನು ತಾ ಕಂಡ |ಹಿರಿಯನವನಪ್ಪ ತಾ ಮರೆಯಲಿಲ್ಲವೇನೊ ? 1ಹಿರಿದಾಗಿ ಬಹುಕಾಲ ಮರದ ಮೇಲ್ಬಾಳುವ |ಇರುಳು ಗಣ್ಣಿನ ಗೂಗೆ ತಾ ದೊಡ್ಡದೆ ? ||ಮರೆಯಾದ ಅರಗಿಣಿ ಹರಿಕೃಷ್ಣ ಎಂದೊದರೆ |ಮರಿ ದೊಡ್ಡದೆಂತೆಂದು ಪೇಳುವರು ಬುಧರು 2ಸುರುವದಾ ಒದರುವರು ಅರಣ್ಯವಾಸಿಗಳು |ಮರದಡಿಗೆ ಬಿದ್ದ ಎಲೆಗಳ ತಿನ್ನುತ ||ಪರಮಪಾತಕಿ ಅಜಾಮಿಳನು ನಾರಗ ಎನಲು |ಭರದಿಂದ ಸಲುಹಿದನು ಪುರಂದರವಿಠಲ 3
--------------
ಪುರಂದರದಾಸರು