ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾವಮಾನಿಯೆ ತವ | ಯಾವ ಮಹಿಮೆಯೊಳೇಕಭಾವ ಪೊಗಳಲು ಆವ | ದೇವತೆಗಳಿಗಳವೇ ಪ ಶ್ರೀವರನಂಘ್ರಿಯ | ಸೇವೆಗೈವಲಿ ಬಹು | ಧಾವಿಸೀ |ಬಹು ಎಚ್ಚರದಿ ಸೇವಿಸೀ ||ನಿರುತ ಭಕ್ತಿಯ | ಭಾವದಲಿ ದುರಿ | ತಾವಳಿ ವಿಭಾವಸುನೀ ವೊಲಿದು ಭೃ | ತ್ಯಾವಳಿಯ ಪಾಲಿಪೆ | ಸಾರ್ವಕಾಲ ಮ-ತ್ತೋರ್ವರಿಲ್ಲವೊ | ದೇವರೊತ್ತಮ | ದೇವ ನೀನೇ ಅ.ಪ. ಸೂರ್ಯ ಮೋಚನ |ಆಶಿಸುತಲಿ ಹಾರಿ | ದೋಷವ ಕಳೆಯಲು | ಯತ್ನೀಸೆ ಆ ಸುಮಹದಾಕಾರ ಶೃಣಗೈದೀವಾಸವನು ನಿನ ಘಾತಿಸಲು ಕುಲಿಶದೀ ಅದಕಂಡು ತವ ಪಿತಶ್ವಾಸಗಳ ಬಲು ಪರಿಯ ರುದ್ಧಿಸಲು | ಮೂರ್ಲೋಕ ತಪಿಸೇಅಸುರರು ವಿಧಿವಿಧದಿ ಮೊರೆ ಇಡಲೂ | ಆಲೈಸ ನಾಲ್ಮೊಗಶ್ವಾಸ ಸತಿಯನು ಸೂಸಿ ಸೂಚಿಸಲೂ | ಅದಕೇಳಿ ಮತ್ತೆಲೇಸುಗೈಯ್ಯಲು ಮನವ ಮಾಡಲೂ ವಾಸವಾದ್ಯರಶ್ವಾಸ ಮಾಡುವ ತೆರನ ಮಾಡೆಯ್ದೊಕ್ಲೇಶನಾಶನ ಶ್ವಾಸಮಾನಿ ಮಹಾ ಕೃಪಾಳೊ 1 ವ್ರಾತ ಮಣಿ ರಘು | ಜಾತಗಿತ್ತೆಯೊ | ಮಾತರಿಶ್ವಾ 2 ಪುಂಡರೀಕಾಕ್ಷ ಉರ ಬಗೆದು ಕರುಳಕೊಂಡು ಕೊರಳಲಿ ಧರಿಸೀ | ನರ ಮೃಗನ ಲೀಲೆಕಂಡು ದ್ವಯೆ ಬಲ ತಪಿಸೀ | ಅರಕ್ಷೌಹಿಣಿ ಮುಂ-ಕೊಂಡು ನೀನೆ ಸಂಹರಿಸೀ | ಕೌರವನ ತೊಡೆಖಂಡಿಸುತವನ ಛೇದಿಸೀ |ಅಂಡಜಾಧಿಪವಹಗೆ ಅರ್ಪಿಸಿ | ನಿಂದೆ ಭೀಮಾ 3 ಅದ್ವೈತ ಸಿದ್ಧಿಲಿಹೇಯ ಬಹಳವ ನೀನೆ ತೋರಿಸೀ | ಬದರಿಯಲಿ ಬಾದರಾಯಣರಿಂದ ಉಪದೇಶೀಸಿ | ಮತ್ತಿಲ್ಲಿ ಬರುತಲಿಧೇಯ ಸಾಧಿಸೆ ಗ್ರಂಥ ಬಹು ರಚಿಸೀ | ಕುಭಾಷ್ಯಗಳ ಬಹುಹೇಯತ್ವವನೆ ಸಾಧಿಸೀ | ವಾದ ಕಥೆಯಲಿಮಾಯಿಗಳ ಬಲುಪರಿಯ ಸೋಲಿಸೀ |ಕಾರ್ಯ ಸರ್ವವ | ರಾಯ ಕೃಷ್ಣಗೆ ಅರ್ಪಿಸಿದೆ ಮಧ್ವಾ 4 ಪರಿ ವ್ಯಾಪ್ತನೆ | ಅಧ್ಯರ್ಥ ರೂಪಿಅಪ್ರಾಪ್ಯ ಅಶಕ್ತಿ ರಹಿತಾನೇ |ವ್ಯಾಪಿಸುತ ಜಗ | ವೀಪರೀಯಲಿ | ಮಾಳ್ಪೆ ಪ್ರಾಣಾ 5 ಮೋಕ್ಷಾಧೀಚ್ಛೆಯ ವರ್ಜ | ಅಚ್ಛಿನ್ನ ಭಕುತಾನೇದಕ್ಷಿಣಾಕ್ಷಿ ಗೋ | ವತ್ಸ ರೂಪಾನೇ ||ಅಕ್ಷಿಯೋಳಿಹ ತ್ರಿದಶಾ | ದ್ಯಕ್ಷರಿಂದಲಿ ಸಂ | ಸೇವ್ಯಾನೇ |ಕಂಠದಲಿ ನೀ ಹಂಸೋಪಾಸಕನೇ |ಶಬ್ದಗಳ ನುಡಿದು ನುಡಿಸುತಿರುವಾನೆ | ಕೂರ್ಮರೂಪಿ ಸಲಕ್ಷಣದಿ ಬ್ರಹ್ಮಾಂಡ ಧಾರಕನೆ | ಸಪುತ ಸ್ಕಂದಗತಇಚ್ಛೆಯಲಿ ಲೋಕಧಾರಕನೆ | ಬೃಹತಿ ಸಾಸಿರವಾಚ್ಯನೆಂದೆನಿಸುತ್ತ ಸ್ತುತ್ಯಾನೆ | ಪತ್ಯಬಿಂಬ ಮುಖ್ಯನೆಈಕ್ಷಿಸುವೆ ಸರ್ವತ್ರ ಹರಿಯನ್ನೆ | ಮುಂದಿನಜ ಅಪರೋಕ್ಷವನು ಪಾಲಿಸೆಂಬೇನೆ ||ಮೋಕ್ಷದನೆ ಕರುಣಾ ಕಟಾಕ್ಷದಿ | ಈಕ್ಷಿಪುದು ಪವನ 6 ಜೇಷ್ಠ ಶ್ರೇಷ್ಠನೆ ಸ | ಮಷ್ಟಿ ರೂಪನೆ ಪವನ |ವ್ಯಷ್ಟಿರೂಪದಿ ಜಗದಿ | ವರೀಷ್ಟನೇ ||ನಿಷ್ಠೇಲಿ ಭಜಿಪರಿ | ಗಿಷ್ಟಾರ್ಥವನೆ | ಸಲಿಸೂವೇ |ಅತಿರೋಹಿತ ವಿಜ್ಞಾನಿ ಎನಿಸಿರುವೆ ||ಸಕಲ ಗುಣಗಣ ಭೋಕ್ತøವೆನಿಸಿರುವೆ | ಸಕಲ ಜ್ಞಾನೋಪದೇಷ್ಟನೆಂದೆನಿಸಿ ಕರೆಸೂವೆ | ಶಿವ ಶೇಷ ಖಗಪರಿನಿಷ್ಟ ಗುರು ನೀನೆ ಎನಿಸಿರುವೆ ಸಜಾತಿ ಗುಣ ಅಯುತವರಿಷ್ಟನು ನೀನು ಆಗಿರುವೆ | ವಿಜಾತ್ಯನಂತ ಗುಣಗರಿಷ್ಟ ರೂಪಿ ಎನಿಸಿರುವೇ | ವೇದಾನುಕ್ತ ಗುಣವಿಶಿಷ್ಟ ರೂಪದಲಿಂದ ಮೆರೆಯುವೇ ||ಇಷ್ಟ ಗುರು ಗೋವಿಂದ ವಿಠ್ಠಲ | ಪ್ರೀತಿ ಪಾತ್ರನು ಆದ ಪ್ರಾಣ 7
--------------
ಗುರುಗೋವಿಂದವಿಠಲರು
ಮತಿತಪ್ಪಿ ನಡೆದೆಯಲ್ಲ ಶ್ರೀಲಕುಮೀ ಪತಿಯನು ನೆನೆಯಲಿಲ್ಲ ಹಿತವಾದ ಪಥವು ಸಂತತ ತೋರದೆ ನೀನು ಖತಿಗೊಂಡು ವೆಂಕಟಪತಿಯನು ನೆನೆಯದೆ ಪ ಕೃತ ತ್ರೇತ ದ್ವಾಪರ ಕಲಿಯುಗ ಚತುರ್ವಿಧ ಜೊತೆಯಾಗಿ ಪೋಗಲು ಸಾವಿರ ಬಾರಿಯು ಚತುರಾಸ್ಯ ಬ್ರಹ್ಮಗೆ ಹಗಲೊಂದು ಸಲುವುದು ಗತಿಯ ಕಾಣೆನು ಶ್ರುತಿಯ ಅಯುತ ಕಾಲದೊಳು 1 ಹಿಂದಣ ಭವದೊಳಗೆ ಬಂದ ಭವದೊಳಗೆ ಸಂ - ಬಂಧವಾಗಿಹ ಸತಿಯರೆಷ್ಟು ಮಂದಿಯೋ ಕಾಣೆ ಕಂದರನು ಪಡೆದುದಕೆ ಲೆಕ್ಕ ಸಂಖ್ಯೆಗಳಿಲ್ಲ ತಿಂದ ಅನ್ನವು ಮೇರುವಿಗಿಂತ ಇಮ್ಮಡಿಯು 2 ಕಾಯ ಬಿಡಿಸಿಕೊಂಬುದು ಜೀವ ಅಡಿಗಡಿಗೆ ಹುಟ್ಟುತ್ತ ಸಾವಾಗಯೆನ್ನುವನು ಕಾಲ ಮನದಿ ಬೇಸರಗೊಳಲು ಜಡತೆಕಿಕ್ಕದೆ ಮುಂದೆ ಕಡೆ ಹಾಯು ಮನವೆ 3 ಬಲೆಯ ಕಾಣದೆ ಪಕ್ಷಿ ಮೇವಿನಾಸೆಗೆ ಪೋಗಿ ತಲೆ ಸಿಕ್ಕಿ ಪ್ರಾಣವನು ಕಳಕೊಂಬ ತೆರನಂತೆ ಕುಲವೃಕ್ಷದೊಳಗಿರ್ದ ಫಲದ ಮಮತೆಗಳಿಂದ ಜಲಜನಾಭನ ಬಿಟ್ಟು ಹೊಲಬುದಪ್ಪಿತಲ 4 ಸ್ನಾನಕ್ಕೆ ಚಳಿ ಹುಟ್ಟಿ ಧ್ಯಾನಕ್ಕೆ ಮರವೆಯು ಮೌನಕ್ಕೆ ಕೋಪದ ಬೀಜವಂಕುರಿಸಿತು ದಾನಕ್ಕೆ ಲೋಭವು ಮಾನಕ್ಕೆ ಪಿಸುಣರು ಏನ ಮಾಡಿದರಿವರು ಬಿಡರಲ್ಲೊ ಮನವೆ 5 ಸಂಗಡದಿ ಬರುತಿಪ್ಪ ಶುಭಗಳನು ಕಡೆಗಿಟ್ಟು ಅಂಗಸುಖವ ತಾಳ್ದು ಗೊಂಗುಡಿಯ ಹೊದ್ದು ಕಂಗಳಿಗೆ ಚೆಲುವಾದ ಅಂಗನಾಮೋಹದಿ ಶ್ರೀ- ರಂಗನ ನಾಮದ ಅಂಗಿಯ ಸಡಲಿಸಿದೆ 6 ಹರಿಧ್ಯಾನ ಹರಿಪೂಜೆ ಹರಿನಾಮ ಕೀರ್ತನೆಯು ಹರಿಭಕ್ತಿ ನರ್ತನೆಯು ಹರಿಯ ಸೇವೆಗಳು ಎರವುದೋರದೆ ನೀನು ವರಾಹತಿಮ್ಮಪ್ಪನನು ಸ್ಥಿರವಾಗಿ ನಿಲುವಂತೆ ಕರಕೊಳ್ಳೊ ಮನವೆ 7
--------------
ವರಹತಿಮ್ಮಪ್ಪ