ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸುಂದರ ಮೂರುತಿ ನಂದ ಕಂದ ಶ್ರೀ ಕೃಷ್ಣನ ಕಂಡೆ ಇಂದಿನ ದಿನದೊಳು ಧನ್ಯನಾಗಿ ಅಮೃತಾನ್ನವನುಂಡೆ ಪ ವಿವಿಧ ವಜ್ರವೈಡೂರ್ಯ ಗೋಮೇಧಿಕ ಖಚಿತ ಸುವರ್ಣ ಕಿರೀಟ ಸುವಿಲ ಸತ್ತಿಲದಿಂದೊಪ್ಪುವ ಮಣಿಕ್ವತ ಗೊಂಚಲೆಸೆವ ಲಲಾಟ ಕಪೋಲಗಳ್ಮಾಟ ಕಿರಣದ ನೋಡಾ 1 ಚತುರಸುಂದರ ಭುಜಕೀರ್ತಿ ಶಂಪಾಪರಿಯ ವೈಜಯಂತಿ ಘನತರ ಪೊಳೆವ ಸುವ್ರತ ಮೌಕ್ತಿಕದೇಕಾವಳಿ ಹಾರಪದಗಳ ಪಂಕ್ತೀ ಕನಕ ಕಂಕಣಕರದುಂಗುರ ಶೋಭಿತದರ ಚಕ್ರಗದಾ ಪದ್ಮವರ್ತಿ 2 ಮೇಖಲಾಲಂಕಾರಾ ಕಟ್ಟಿನ ಸಿಂಗಾರಾ ಪಾದದೊಡಪುಗಳು ಪೂರಾ ನರಸಿಂಹವಿಠಲನರಸಿ ಬಣ್ಣಿಪುದು ಶಿರಿ ಬಮ್ಮುಸುರರಿಗೆ ಘೋರಾ 3
--------------
ನರಸಿಂಹವಿಠಲರು
ಮೂಡ ಬಲ್ಲನೆ ಜ್ಞಾನ - ದೃಢ ಭಕುತಿಯ ?ಕಾಡ ಕಪಿ ಬಲ್ಲುದೇ ಮಾಣಿಕದ ಬೆಲೆಯ ? ಪ.ಕೋಣ ಬಲ್ಲುದೆ ವೇದಗಳನೋದಿ ಪಠಿಸಲೇಕೆಗೋಣಿ ಬಲ್ಲುದೆ ಎತ್ತಿನಾ ದುಃಖವಪ್ರಾಣ ತೊಲಗಿದ ಹೆಣವು ಕಿಚ್ಚಿಗಂಜಬಲ್ಲುದೆಕ್ಷೋಣಿಯೊಳು ಕುರುಡ ಬಲ್ಲನೆ ಹಗಲು - ಇರಳ ? 1ಬಧಿರ ಕೇಳುವನೆ ಸಂಗೀತವನು ಪಾಡಿದರೆ ?ಚದುರ ಮಾತುಗಳಾಡುವನೆ ಮೂಕನು ?ಕ್ಷುದೆಯಿಲ್ಲದವನು ಅಮೃತಾನ್ನವನು ಸವಿಯುವನೆ ?ಮಧುರ ವಚನವ ನುಡಿವನೇ ದುಷ್ಟ ಮನುಜ 2ಅಜ ಬರೆದ ಬರಹವನು ತೊಡೆಯಬಲ್ಲನೆ ಜಾಣ?ನಿಜಭಕುತಿ ಮುಕುತಿ ಸುಖವನ್ನು ಕೊಡುವಭುಜಗೇಂದ್ರಶಯನ ಶ್ರೀ ಪುರಂದರವಿಠಲನಭಜಿಸಲಕ್ಕರಿಯದವ ಕಡು ಪಾಪಿ ಮನುಜ 3
--------------
ಪುರಂದರದಾಸರು