ಒಟ್ಟು 6 ಕಡೆಗಳಲ್ಲಿ , 3 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಗುರುಮಹಾರಾಯಾ ದಮ್ಮಯ್ಯ ನಿನ್ನ ಪಾದಕೆ ಬಿದ್ದೆನು ತೋರಿಸೋ ಶ್ರೀ ಗುರುನಾಥಾ ಪ ತೋರುವ ತೋರಿಕೆಗಳೆಲ್ಲವ ಹಿಂಗಿಸೋ ಷಡ್ವೈರಿಗಳಾಗಿಹ ಚೋರರ ಬಾಧೆಯ ಬಲವನು ಭಂಗಿಸೋ ತತ್ವಾಮೃತ ಸಾರ ನಿತ್ಯಸುಖದೊಳನ್ನ ನಿಲ್ಲಿಸೋ 1 ಅಮೃತಾನ್ನವ ಮುಂದಿಡೋ ಜೋಡಾಗದ ಊಟವನ್ನುಣ್ಣಿಸೋ ನವನೂತನವಾಗಿಹ ಆಡದಿರುವ ಆಟವಾಡಿಸೋ ನಿನ್ನರ್ಚನೆ ಪೂಜೆಯ ಮಾಡುವಾನಂದವುದಯ ಮಾಡಿಸೋ 2 ಚರಣತೀರ್ಥ ಪ್ರಸಾದವನು ಕೃಪೆಮಾಡೋ ಸಜ್ಜನರಾ ಸ್ಮರಣೆಯ ಕರ್ಣಾಭರಣವ ನೀಡೋ ನಾನಾಮೃತದ ಚರಣ ರಜಪ್ರಕಾಶದೊಳಿಡೋ ವಿಮಲಾನಂದ ವಿಧಿ ನೋಡೋ 3
--------------
ಭಟಕಳ ಅಪ್ಪಯ್ಯ
ಸುಂದರ ಮೂರುತಿ ನಂದ ಕಂದ ಶ್ರೀ ಕೃಷ್ಣನ ಕಂಡೆ ಇಂದಿನ ದಿನದೊಳು ಧನ್ಯನಾಗಿ ಅಮೃತಾನ್ನವನುಂಡೆ ಪ ವಿವಿಧ ವಜ್ರವೈಡೂರ್ಯ ಗೋಮೇಧಿಕ ಖಚಿತ ಸುವರ್ಣ ಕಿರೀಟ ಸುವಿಲ ಸತ್ತಿಲದಿಂದೊಪ್ಪುವ ಮಣಿಕ್ವತ ಗೊಂಚಲೆಸೆವ ಲಲಾಟ ಕಪೋಲಗಳ್ಮಾಟ ಕಿರಣದ ನೋಡಾ 1 ಚತುರಸುಂದರ ಭುಜಕೀರ್ತಿ ಶಂಪಾಪರಿಯ ವೈಜಯಂತಿ ಘನತರ ಪೊಳೆವ ಸುವ್ರತ ಮೌಕ್ತಿಕದೇಕಾವಳಿ ಹಾರಪದಗಳ ಪಂಕ್ತೀ ಕನಕ ಕಂಕಣಕರದುಂಗುರ ಶೋಭಿತದರ ಚಕ್ರಗದಾ ಪದ್ಮವರ್ತಿ 2 ಮೇಖಲಾಲಂಕಾರಾ ಕಟ್ಟಿನ ಸಿಂಗಾರಾ ಪಾದದೊಡಪುಗಳು ಪೂರಾ ನರಸಿಂಹವಿಠಲನರಸಿ ಬಣ್ಣಿಪುದು ಶಿರಿ ಬಮ್ಮುಸುರರಿಗೆ ಘೋರಾ 3
--------------
ನರಸಿಂಹವಿಠಲರು
ತನಗಲ್ಲದಾ ವಸ್ತು ಎಲ್ಲಿದ್ದರೇನುಮನಕೆ ಬಾರದ ಹೆಣ್ಣು ಮತ್ತೆ ಬಂದರೆ ಏನು ? ಪ.ಆದರಣೆಯಿಲ್ಲದೂಟ ಅಮೃತಾನ್ನವಾದರೇನುವಾದಿಸುವಸತಿ - ಸುತರಿದ್ದು ಫಲವೇನು ?ಕ್ರೋಧ ಬಳೆಸುವ ಸಹೋದರರು ಇದ್ದರೇನುಮಾದಿಗರ ಮನೆಯೊಳೆ ಮದುವೆಯಾದರೇನು ? 1ನಾಲಿಗಿಲ್ಲದ ಪÀದವು ಸಂಚಿತುಂಬ ಇದ್ದರೇನುದೇವಾಂಕಿತವಿಲ್ಲದ ಕವಿತ್ವವೇನು ?ಹೇಮವಿಲ್ಲದ ಹೆಣ್ಣು ಹೆಚ್ಚು ಬಾಳಿದರೇನುಹಾವಿನ ಘಣಿಯೊಳಗೆ ಹಣವಿದ್ದರೇನು ? 2ಸನ್ಮಾನವಿಲ್ಲದೆ ದೊರೆ ಸಾವಿರಾರು ಕೊಟ್ಟರೆ ಏನುತನ್ನ ತಾನರಿಯದ ಜ್ಞಾನವೇನು ?ಎನ್ನುತ ಪುರಂದರವಿಠಲನ ನೆನೆಯದವಸಂನ್ಯಾಸಿಯಾದರೇನು ಪಂಡಿತನಾದರೇನು ? 3
--------------
ಪುರಂದರದಾಸರು
ನಿನ್ನ ನಾಮವೆ ಎನಗೆ ಅಮೃತಾನ್ನವು |ಕೇಶವನೆಂಬ ನಾಮ ಕರಿದ ಹೂರಣಗಡಬು |ನಾರಾಯಣನ ನಾಮ ನೊರೆಹಾಲು ಸಕ್ಕರೆ |ಯದುಪತಿಯೆಂಬ ನಾಮ ಎಣ್ಣೂರಿಗೆಯ ರಾಶಿ |ದೇವಕಿಸುತನ ನಾಮ ವಧ್ಯನ್ನದಾ ಮುದ್ದೆ |ಗರುಡವಾಹನನ ನಾಮ ಘೃತಪಯೋದಧಿತಕ್ರ |ಈ ಪರಿಯ ನಾಮಾವಳಿಯನು ಸವಿದುಂಡು |
--------------
ಪುರಂದರದಾಸರು
ಮೂಡ ಬಲ್ಲನೆ ಜ್ಞಾನ - ದೃಢ ಭಕುತಿಯ ?ಕಾಡ ಕಪಿ ಬಲ್ಲುದೇ ಮಾಣಿಕದ ಬೆಲೆಯ ? ಪ.ಕೋಣ ಬಲ್ಲುದೆ ವೇದಗಳನೋದಿ ಪಠಿಸಲೇಕೆಗೋಣಿ ಬಲ್ಲುದೆ ಎತ್ತಿನಾ ದುಃಖವಪ್ರಾಣ ತೊಲಗಿದ ಹೆಣವು ಕಿಚ್ಚಿಗಂಜಬಲ್ಲುದೆಕ್ಷೋಣಿಯೊಳು ಕುರುಡ ಬಲ್ಲನೆ ಹಗಲು - ಇರಳ ? 1ಬಧಿರ ಕೇಳುವನೆ ಸಂಗೀತವನು ಪಾಡಿದರೆ ?ಚದುರ ಮಾತುಗಳಾಡುವನೆ ಮೂಕನು ?ಕ್ಷುದೆಯಿಲ್ಲದವನು ಅಮೃತಾನ್ನವನು ಸವಿಯುವನೆ ?ಮಧುರ ವಚನವ ನುಡಿವನೇ ದುಷ್ಟ ಮನುಜ 2ಅಜ ಬರೆದ ಬರಹವನು ತೊಡೆಯಬಲ್ಲನೆ ಜಾಣ?ನಿಜಭಕುತಿ ಮುಕುತಿ ಸುಖವನ್ನು ಕೊಡುವಭುಜಗೇಂದ್ರಶಯನ ಶ್ರೀ ಪುರಂದರವಿಠಲನಭಜಿಸಲಕ್ಕರಿಯದವ ಕಡು ಪಾಪಿ ಮನುಜ 3
--------------
ಪುರಂದರದಾಸರು
ಹರಿಯ ನೆನೆಯದ - ನರಜನ್ಮವೇಕೆ ? ಶ್ರೀಹರಿಯ ಕೊಂಡಾಡದ ನಾಲಿಗೆಯಿನ್ನೇಕೆ ಪ.ಸತ್ಯ - ಶೌಚವಿಲ್ಲದ ಆಚಾರವೇಕೆ ?ಚಿತ್ತ ಶುದ್ಧಿಯಿಲ್ಲದ ಜ್ಞಾನವೇಕೆ ?ಭಕ್ತಿ - ಭಾನವಿಲ್ಲದ ದೇವಪೂಜೆ ಏಕೆ ?ಉತ್ತಮರಿಲ್ಲದ ಸಭೆಯು ಇನ್ನೇಕೆ ? 1ಕ್ರೋಧವ ಬಿಡದಿಹ ಸಂನ್ಯಾಸವೇಕೆ ?ಆದರವಿಲ್ಲದ ಅಮೃತಾನ್ನವೇಕೆ ?||ವೇದ - ಶಾಸ್ತ್ರವಿಲ್ಲದ ವಿಪ್ರತನವೇಕೆಕಾದಲಂಜುವನಿಗೆ ಕ್ಷಾತ್ರ ತಾನೇಕೆ ? 2ಸಾಲದಟ್ಟುಳಿಯೆಂಬ ಸಂಸಾರವೇಕೆ ?ಬಾಲಕರಿಲ್ಲದ ಭಾಗ್ಯವಿನ್ನೇಕೆ ?ವೇಳೆಗೆ ಒದಗದ ನೆಂಟರಿನ್ನೇಕೆ ? ಅನುಕೂಲವಿಲ್ಲದ - ಸತಿಯ ಸಂಗವೇಕೆ 3ಮಾತೆ - ಪಿತರ ತೊರೆದ ಮಕ್ಕಳಿನ್ನೇಕೆ ?ಮಾತು ಕೇಳದ ಮಗನಗೊಡವೆ ಇನ್ನೇಕೆ ||ನೀತಿ ತಪ್ಪಿದ ದೊರೆಯ ಸೇವೆ ಇನ್ನೇಕೆ ? ಅನಾಥನಾಗಿರುವಗೆ ಕೋಪವಿನ್ನೇಕೆ ? 4ಅಳಿದುಳಿದಿಹ ಮಕ್ಕಳುಗಳಿನ್ನೇಕೆ ?ತಿಳಿದು ಬುಧ್ಧಿಯ ಹೇಳಿದ ಗುರುತನವೇಕೆ ?ನಳಿನನಾಭ ಶ್ರೀ ಪುರಂದರವಿಠಲನಚೆಲುವ ಮೂರುತಿಯ ಕಾಣದ ಕಂಗಳೇಕೆ 5
--------------
ಪುರಂದರದಾಸರು