ಒಟ್ಟು 10 ಕಡೆಗಳಲ್ಲಿ , 6 ದಾಸರು , 10 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇಶಾಧಿಪತಿ ನರಹರಿಯೆ ನಿನ್ನಯ ಪಾದದಾಸರ ದಾಸನೆಂದೆನಿಸಬೇಕೆನ್ನ ಪ ರಜತಮೋಗುಣ ಪ್ರವರ್ತಕ ಮೂಲಾಂತರದಿಂಯಜಮಾನತನದಹಂಕಾರವನು ಒಲ್ಲೆಭುಜ ಚಕ್ರ ಧರಿಸಿ ಸಾತ್ತ್ವಿಕರ ಪಾದಾಂಬುಜರಜ ಭಜಕರ ಭಜಕನೆಂದೆನಿಸೆನ್ನ1 ಸಿರಿಗಂಧ ಕುಂಕುಮ ಸಾದು ಜವ್ವಾಜಿ ಕ-ಸ್ತೂರಿ ತಿಲಕವನಿಡುವುದ ನಾನೊಲ್ಲೆಸಿರಿ ಊಧ್ರ್ವಪುಂಡ್ರ ದ್ವಾದಶನಾಮವಿಡುವವರಪರಿಚಾರಕರ ಪರಿಚಾರಕನೆನಿಸೆನ್ನ 2 ಸ್ವಾದು ಕಲ್ಪಿತವಾದ ಭಕ್ಷ್ಯ ಭೋಜ್ಯಗಳನುಆದರದ ಅಮೃತಾನ್ನ ಉಣುವುದನೊಲ್ಲೆಬೋಧೆಯನು ಹೇಳುವ ಕೇಳುವ ಹರಿದಾಸರಪಾದತೀರ್ಥ ಪ್ರಸಾದವನುಣಿಸೆನ್ನ3 ಕಾಲ ಕರ್ಮದೊಳುಪೇಕ್ಷೆಯ ಮಾಡಿ ಹರಿಭಕುತಿಶೀಲರಹಿತ ಬ್ರಾಹ್ಮಣನಾಗಲೊಲ್ಲೆಕೀಲನರಿತು ಹರಿಭಕುತಿಯನು ಮಾಳ್ಪ ಪರಚಾಂ-ಡಾಲನ ಮನೆ ಬಾಗಿಲ ಕಾಯಿಸೆನ್ನ 4 ಕ್ರೂರಶಾಸ್ತ್ರವನೋದಿ ಕುರಿ ಕೋಣವನೆ ಕಡಿದುಘೋರ ನರಕದಿ ಬೀಳುವುದನು ನಾನೊಲ್ಲೆವಾರಿಜಾಕ್ಷ ನಿನ್ನ ಚರಣ ಸೇವಕರ ಮನೆಯದ್ವಾರಪಾಲಕನೆಂದೆನಿಸೆನ್ನ 5 ಪಟ್ಟೆಪಟ್ಟಾವಳಿ ದಿವ್ಯ ದುಕೂಲ ಮಿಂ-ಚಿಟ್ಟ ವಸ್ತ್ರ ಉಡುವುದನೊಲ್ಲೆನೆಟ್ಟನೆ ಕಾವಿ ಕಾಷಾಯಾಂಬರಗಳನುಉಟ್ಟವರ ಬಂಟನೆಂದೆನಿಸೆನ್ನ 6 ಅರ್ಥ ವಿಷಯಂಗಳ ಫಲಾಪೇಕ್ಷೆಯಿಂ ಪುಣ್ಯತೀರ್ಥಯಾತ್ರೆಯ ಮಾಡಲೊಲ್ಲೆದೈತ್ಯ ಮರ್ದನ ಬಾಡದಾದಿಕೇಶವ ನಿನ್ನಕೀರ್ತನಗೈವರ ಸ್ತುತಿಕನೆನಿಸೆನ್ನ 7
--------------
ಕನಕದಾಸ
ನುಡಿಯಲ್ಲಿ ರಸತೋರೆ ಉಡಿಯೊಳಗೆ ವಿಷಮಿರೆ ನಡೆಯಲ್ಲಿ ವಕ್ರಮುರೆ ನೋಡಲರರೆ ಅನೃತೋಕ್ತಿಯಿಂತಿವಗೆ ಅಮೃತಾನ್ನದಂತಾಗೆ ಸೂನೃತದಿ ಚಿತ್ತಮಿಗೆ ಬಹುದು ಹೇಗೆ ನಗಧರಗೆ ಸತಿಯಾದೆ ಹಗರಣಕ್ಕೀಡಾದೆ ನಗೆಗೇಡಿಗೊಳಗಾದೆ ಜಗದ ಮುಂದೆ ಪರರ ಬಿನ್ನಣದ ನುಡಿ ಗೆÀರಕಮಾಗಿರೆ ಕಿವಿಯ ಪರಿಯದೇಂ ವರ್ಣಿಸುವೆ ನರಿಯೆನಾನು ಕೋಟಿಜನ್ಮದಿನೋಂತ ಪುಣ್ಯಫಲದಿ ಬೂಟಕವ ತೋರುವನ ಪಡೆದೆ ಮುದದಿ ನಾಟಕಪ್ರಿಯನಿಂದೆ ಸುಖೆಪ ಬಗೆಗೆ
--------------
ನಂಜನಗೂಡು ತಿರುಮಲಾಂಬಾ
ವ್ಯಗ್ರಬುದ್ಧಿಯು ನಿನಗೆ ಶ್ರೀಹರಿಯೆ ಸುಗ್ರಾಸನವು ನನಗೆ ಅಗ್ರದೈವರು ನೀನೇ ಗತಿಯೊ ಉಗ್ರತಪದಲಿ ಭಜಿಸುವಾತ್ಮಗೆ ಉಗ್ರರೂಪವ ತೋರಿ ವಿಧವಿಧಾ- ನುಗ್ರಹಿಪೆ ಅಮೃತಾನ್ನ ಭೋಜನ ಪ ಜನಿಸಲಮೃತ WಟÀವು ಸಿಂಧುವಿನೊಳು ವನಜನಾಭನೆ ವಂಚಿಸಿ ದನುಜ ಕಣಕದು ಇಲ್ಲದಾಗಿ ಅನುಮಿಷರಿಗತ್ಯಂತಮಿಕ್ಕೆ ಘನಹರುಷ ತೋರಿದೆಯು ಸುರರಿಗೆ ನಿನಗೆ ಮೆಲ್ಲಲು ಇರಿಸಲಿಲ್ಲಾ 1 ಧೀರ ದೂರ್ವಾಸ ಮುನಿ ಶಿಷ್ಯರ್ವೆರಸಿ ಹೋರಿದಾಹಾರಕ್ಕಾಗಿ ನೀರಜಾಕ್ಷಿಯು ಘೋರ ಬಂತೆಂದಾ ರಾತ್ರಿಯಲಿ ನೆನೆಯೆ ನಿನ್ನನು ಆ ರಭಸದೊಳು ಬಹುನಿಮಿಷÀದಿ ಸೂರಿ ಮಾಡ್ದೆಯೋ ಇಷ್ಟು ಭೋಜನಾ 2 ಸಖ ಸುದಾಮನು ಕಾಣಲು ಶ್ರೀಹರಿಯೆ ಭಕುತಿ ನೋಡಿ ಮೆಚ್ಚಿದಿ ಮುಕುತಿದಾಯಕ ಪರಮ ಪುರುಷನೆ ಭಕುತಿ ಭೋಜನವಿತ್ತೆನಗೆ ಸದಾ ಪ್ರಕಟ ನರಸಿಂಹವಿಠಲನೆ ಬಲು ನಿಕಟಮನ ಕೊಡು ನಿನ್ನ ಭಜಿಸುವಾ 3
--------------
ನರಸಿಂಹವಿಠಲರು
ಶ್ರೀ ಗುರುಮಹಾರಾಯಾ ದಮ್ಮಯ್ಯ ನಿನ್ನ ಪಾದಕೆ ಬಿದ್ದೆನು ತೋರಿಸೋ ಶ್ರೀ ಗುರುನಾಥಾ ಪ ತೋರುವ ತೋರಿಕೆಗಳೆಲ್ಲವ ಹಿಂಗಿಸೋ ಷಡ್ವೈರಿಗಳಾಗಿಹ ಚೋರರ ಬಾಧೆಯ ಬಲವನು ಭಂಗಿಸೋ ತತ್ವಾಮೃತ ಸಾರ ನಿತ್ಯಸುಖದೊಳನ್ನ ನಿಲ್ಲಿಸೋ 1 ಅಮೃತಾನ್ನವ ಮುಂದಿಡೋ ಜೋಡಾಗದ ಊಟವನ್ನುಣ್ಣಿಸೋ ನವನೂತನವಾಗಿಹ ಆಡದಿರುವ ಆಟವಾಡಿಸೋ ನಿನ್ನರ್ಚನೆ ಪೂಜೆಯ ಮಾಡುವಾನಂದವುದಯ ಮಾಡಿಸೋ 2 ಚರಣತೀರ್ಥ ಪ್ರಸಾದವನು ಕೃಪೆಮಾಡೋ ಸಜ್ಜನರಾ ಸ್ಮರಣೆಯ ಕರ್ಣಾಭರಣವ ನೀಡೋ ನಾನಾಮೃತದ ಚರಣ ರಜಪ್ರಕಾಶದೊಳಿಡೋ ವಿಮಲಾನಂದ ವಿಧಿ ನೋಡೋ 3
--------------
ಭಟಕಳ ಅಪ್ಪಯ್ಯ
ಸುಂದರ ಮೂರುತಿ ನಂದ ಕಂದ ಶ್ರೀ ಕೃಷ್ಣನ ಕಂಡೆ ಇಂದಿನ ದಿನದೊಳು ಧನ್ಯನಾಗಿ ಅಮೃತಾನ್ನವನುಂಡೆ ಪ ವಿವಿಧ ವಜ್ರವೈಡೂರ್ಯ ಗೋಮೇಧಿಕ ಖಚಿತ ಸುವರ್ಣ ಕಿರೀಟ ಸುವಿಲ ಸತ್ತಿಲದಿಂದೊಪ್ಪುವ ಮಣಿಕ್ವತ ಗೊಂಚಲೆಸೆವ ಲಲಾಟ ಕಪೋಲಗಳ್ಮಾಟ ಕಿರಣದ ನೋಡಾ 1 ಚತುರಸುಂದರ ಭುಜಕೀರ್ತಿ ಶಂಪಾಪರಿಯ ವೈಜಯಂತಿ ಘನತರ ಪೊಳೆವ ಸುವ್ರತ ಮೌಕ್ತಿಕದೇಕಾವಳಿ ಹಾರಪದಗಳ ಪಂಕ್ತೀ ಕನಕ ಕಂಕಣಕರದುಂಗುರ ಶೋಭಿತದರ ಚಕ್ರಗದಾ ಪದ್ಮವರ್ತಿ 2 ಮೇಖಲಾಲಂಕಾರಾ ಕಟ್ಟಿನ ಸಿಂಗಾರಾ ಪಾದದೊಡಪುಗಳು ಪೂರಾ ನರಸಿಂಹವಿಠಲನರಸಿ ಬಣ್ಣಿಪುದು ಶಿರಿ ಬಮ್ಮುಸುರರಿಗೆ ಘೋರಾ 3
--------------
ನರಸಿಂಹವಿಠಲರು
139-4ಶ್ರೀ ರಮಣಿ ಕರಕಮಲ ಪೂಜಿತ ಪದಾಂಬೋಜಸರಸಿಜಾಸನ ಶಿವಾದ್ಯಮರ ಜನವಿನುತಉರುಗುಣಾರ್ಣವ ಜಗಜ್ಜನ್ಮಾದಿಕರ್ತ ನರ-ಹರಿಗೆ ಪ್ರಿಯ ಜಗನ್ನಾಥದಾಸಾರ್ಯ ಶರಣು ಪ.ಗುರುಗಳು ಏಕಾಂತದಲ್ಲಿ ಇತ್ತ ಉಪದೇಶಮರೆಯದೇ ಅನುಸರಿಸಿ ಭೀಮರತಿಯನ್ನುಸೇರಿ ವಿಹಿತದಿ ಸಂಕಲ್ಪಾದಿಗಳ ಮಾಡಿನೀರಲ್ಲಿ ಇಳಿದರು ಶ್ರೀನಿವಾಸಾಚಾರ್ಯ 1ಸರ್ವ ಜಗತ್ಪಾಲ ಶ್ರೀ ಪಾಂಡುರಂಗವಿಠ್ಠಲನುಪ್ರವಾಹ ಸುಳಿಯಿಂದ ಬಡುಗಾತ್ರ ಭಕ್ತನ್ನಕಾಯ್ವುದಕೆ ಗಂಡಾ ಶಿಲಾ ನಿರ್ಮಿಸಿದ ಅಲ್ಲಿದೇವಗುರುಸ್ಮರಣೆಯಿಂ ಇಳಿದರಾಚಾರ್ಯ2ನರಸಿಂಹ ವಿಠ್ಠಲದಾಸರು ತಂದೆಯಗುರುಗಳು ಗೋಪಾಲ ವಿಠ್ಠಲ ದಾಸರಪರಮಗುರುಗಳುವಿಜಯವಿಠ್ಠಲ ದಾಸರಪುರಂದರದಾಸರಾಜರ ಸ್ಮರಿಸಿದರು3ತೀರ್ಥಾಭಿಮಾನಿಗಳ ಭಾರತೀಪತಿಯಪದುಮೆ ಪದ್ಮೇಶ ಫಂಡರಿ ನಾಥ ಹರಿಯಮೋದಚಿನ್ಮಯ ಜಗನ್ನಾಥನ ಸ್ಮರಿಸುತ್ತಉದಕಪ್ರವಾಹದೊಳು ತನುವ ಅದ್ದಿದರು4ಸೀನಪ್ಪ ಶ್ರೀನಿವಾಸ ಶ್ರೀನಿವಾಸಪ್ಪ ಈಶ್ರೀನಿವಾಸಾಚಾರ್ಯ ಒಂದು ಸಲ ಮುಳುಗೇಳೆತನುಗತ ಒಳ ಹೊರಗಿನಕಲುಷಕಳೆದವುಪುನಃ ಮುಳಗೇಳಲು ಸುಪವಿತ್ರರಾದರು 5ಪುನಃ ಮುಳುಗಿ ಎದ್ದು ಅ ಘ್ರ್ಯವ ಅರ್ಪಿಸಲುಇನನ ಮಂಡಲದಿ ವರವಾಯು ಅಧಿಷ್ಠಾನದಲಿಶ್ರೀ ನಾರಾಯಣ ಸರ್ವಜನ ಹಿತಕರನಆನಂದ ಚಿನ್ಮಾತ್ರ ವಪುಷನ್ನ ಸ್ಮರಿಸಿದರು 6ಋಕ್ಸಾಮ ವೇದಗಳಿಂದ ವಾಣೀವಾಯುಸುಖಪೂರ್ಣ ನಾರಾಯಣನ ಸ್ತುತಿಸುವರುಆಕಳಂಕ ಉನ್ನಾಮಸಾಮನಾಮ ಹೀಂಕಾರಶ್ರೀಕೃತಿಪತಿ ಪ್ರದ್ಯುಮ್ನಾದಿ ಸ್ವರೂಪ 7ಸಪ್ತಕಾಲದಿ ಸಪ್ತಸಾಮ ಪ್ರತಿಪಾದ್ಯನುಸಪ್ತಸ್ವರೂಪನು ಆದಿತ್ಯಾಂತಸ್ತಪ್ರದ್ಯುಮ್ನವಾಸುದೇವವರಾಹನಾರಾಯಣಅನಿರುದ್ಧ ನರಸಿಂಹ ಸಂಕರುಷಣ 8ಪರಮಗುರುವಿಜಯದಾಸಾರ್ಯರ ಪ್ರೇರಣೆಯಿಂದಗುರುಗಳು ಗೋಪಾಲದಾಸಾರ್ಯರುಅರುಪಿದಅನುಸಂಧಾನಕ್ರಮದಿಂದಲೇಗುರುತಮ ಸಮೀರನಲಿ ಹರಿಯ ಸ್ಮರಿಸಿದರು 9ಸೂರ್ಯನೊಳಿಪ್ಪಸಮೀರಅಧಿಷ್ಠಾನಸ್ಥಸೂರಿಜನ ಪ್ರಾಪ್ಯ ಋಕ್ ಸಾಮಾದಿಸ್ತುತ್ಯಸೂರ್ಯತೇಜಃ ಪುಂಜ ಸ್ಫೂರ್ತಿದ ಜಗತ್ಕರ್ತ ಶ್ರೀಶ್ರೀನಾರಾಯಣಗಘ್ರ್ಯ ಅರ್ಪಿಸಲು ಒಲಿದ 10ಝಗಝಗಿಪ ತೇಜಸ್ಸು ಶಿರೋಪಕಂಡರುಮೂಗಿನಿಂದೊಂದಡಿ ಶಿರದ ಮೇಲೆಜಗನ್ನಾಥವಿಠ್ಠಲ ಎಂದು ಪ್ರಜ್ವಲಿಸಿತುಹೇಗೆ ವರ್ಣಿಸುವೆ ಆ ಅದ್ಭುತ ದೃಶ್ಯ 11ಸರ್ವ ಜಗದ್ರಕ್ಷಕ ವಿಠ್ಠಲನು ತತ್ಕಾಲಪ್ರವಾಹವ ತಡೆಯಲು ನಿರ್ಮಿಸಿದ ಶಿಲೆಯುಪ್ರಜ್ವಲಿಪ ಈ ದಿವ್ಯ ಹರಿನಾಮ ಅಂಕಿತಕ್ಕೆಐವತ್ತು ಅಂಗುಲ ಹಿಂದೆ ನಿಂತಿತ್ತು 12ಕ್ಷಣಮಾತ್ರದೊಳಗೆ ಈತಟಿತ್ಕೋಟಿನಿಭಜ್ಯೋತಿಫಣೆಮುಂದೆ ನಿಂತಿತು ಆಗ ಆಚಾರ್ಯಚೆನ್ನಾಗಿ ನೋಡಿದರುಹರಿಇಚ್ಛಾಶಕ್ತಿಯಿಂಶ್ರೀನಿವಾಸವಿಜಯಗೋಪಾಲ ವಿಠ್ಠಲನ13ಶ್ರೀ ಶ್ರೀನಿವಾಸನೇವಿಜಯವಿಠ್ಠಲನಾಗಿಶ್ರೀ ಶ್ರೀನಿವಾಸ ಗೋಪಾಲ ವಿಠ್ಠಲನಾಗಿಶ್ರೀ ಶ್ರೀನಿವಾಸ ಶ್ರೀ ಜಗನ್ನಾಥ ವಿಠ್ಠಲನಾಗಿಶಿರಿ ಜಗನ್ನಾಥ ದಾಸಾರ್ಯರು ನೋಡಿದರು 14ಶ್ರೀ ಶ್ರೀನಿವಾಸನೆ ಪ್ರಸನ್ನನು ಆಗಿತೋರಿಹನು ಜಗನ್ನಾಥ ವಿಠಲನೆನಿಸಿತಿರುಪತಿ ಶ್ರೀನಿಧಿಯೇ ಪಂಡರಿ ವಿಠ್ಠಲನುಸೂತ್ರನೋಡಿ ನಸ್ಥಾನ ತೋಪಿ15ಶ್ರೀ ರುಕ್ಮಿಣೀಪತಿ ಪರಂಜ್ಯೋತಿ ಪರಂಬ್ರಹ್ಮಉರುಅಖಿಳಸಚ್ಛಕ್ತ ಜಗನ್ನಾಥ ವಿಠ್ಠಲಶಿರಿ ಜಗನ್ನಾಥದಾಸರ ಹೃದಯ ¥ದ್ಮದೊಳುಸೇರಿದನು ಜ್ವಲಿಸುತಿಹ ಸರ್ವೋತ್ತಮ ಅಲ್ಲಿ 16ಎಂಟುಅಕ್ಷರಮೂಲಮಂತ್ರದಿ ನಾರಾಯಣನವಿಠ್ಠಲ ಹಯಗ್ರೀವ ವೆಂಕಟೇಶಾದಿಷಡಕ್ಷರಿ ವಿಷ್ಣು ರಾಮ ಕೃಷ್ಣಾದಿಗಳಕ್ರೋಡನರಸಿಂಹಾದಿಗಳನು ಜಪಿಸಿದರು17ಗುರುಪರಮಗುರುಪೇಳ್ದ ರೀತಿಯಲಿ ಜಪಚರಿಸಿಶ್ರೀ ರುಕ್ಮಿಣಿ ವಿಠ್ಠಲ ಮಂದಿರಕೆ ಪೋಗಿಪುರಂದರಾರ್ಯರ ನಮಿಸಿಗುರುಪರಮಗುರುಗಳಸ್ಮರಿಸಿ ಒಳಪೊಕ್ಕರು ವಿಠ್ಠಲನ್ನ ನೋಡೆ 18ಶ್ರೀ ಮಧ್ವರಮಣ ನಿನ್ನ ಅದ್ವಿತೀಯ ಮಹಿಮೆಈ ಮಹೋತ್ತಮಕೃತಿಪುರಂದರದಾಸರದುಅಮಲ ಭಕ್ತಿಯಲ್ಲಿದನ್ನ ಅರ್ಥ ಅರಿತು ಪಠಿಸಿಶ್ರೀಮಂದಿರದೊಳು ಪ್ರವೇಶ ಮಾಡಿದರು 19ತ್ರಿಜಗದೀಶನಪಾದಪದ್ಮಗಳ ನೋಡುತ್ತನಿಜಭಕ್ತಿ ಭಾವದಲಿ ಸಾಷ್ಟಾಂಗ ನಮಿಸಿಅಜಭವೇಂದ್ರಾದಿ ಸುರವಂದ್ಯನ್ನ ಕೇಶಾದಿರಾಜೀವಪಾದಾಂತ ದರುಶನ ಮಾಡಿದರು20ಜ್ವಲಿಸುವ ಕಿರೀಟ ಸುಳಿಗುರುಗಳು ಫಣಿಯ ತಿಲಕಬಿಲ್ಲುವೋಲ್ ಸುಂದರ ಭ್ರೂ ಮುಖಕಮಲಜಲಜೇಕ್ಷಣ ಮುಗುಳುನಗೆಯು ತಟಿದಂದಿಪೊಳೆವ ಕುಂಡಲಕರ್ಣ ಕಂಬುಗ್ರೀವ 21ವನಮಾಲೆ ಎಳೆ ತುಳಸಿದಳ ಹಾರ ಕೊರಳಲ್ಲಿಘನಬಾಹು ವಿಸ್ತಾರವಕ್ಷ ಶ್ರೀವತ್ಸಸ್ವರ್ಣಮಣಿ ಗ್ರೈವೇಯಕೌಸ್ತುಭರತ್ನವುಕಣ್ಣಾರ ಕಾಣಲಾನಂದ ಸೌಂದರ್ಯ 22ಮೂರುಗೆರೆ ಉದರದಲಿವನರುಹನಾಭಿಯುಕರಗಳು ಕಟಿಯಲ್ಲಿ ಶಂಖಾರವಿಂದಪುರುಟಮಣಿ ಗಣಸೂತ್ರ ಪೀತಾಂಬರ ಉಡಿಸ್ಫುರದ್ರತ್ನ ನೂಪುರ ಸಮಪಾದದ್ವಯವು 23ತಟಿತ್ಕೋಟಿನಿಭ ತನ್ ಕಾಂತಿಯಲಿ ಜ್ವಲಿಸುವಸಾಟಿಯಿಲ್ಲದ ಸುಂದರಾಂಗ ಶ್ರೀರಮಣವಿಠ್ಠಲ ಕೃಪಾನಿಧಿ ಶರಣಜನ ಪಾಲನ್ನಹಾಡಿ ಸ್ತುತಿಸಿದರು ಜಗನ್ನಾಥ ದಾಸಾರ್ಯ 24ಫಣಿಪಶಾಯಿಯ ಅನಂತ ಪದ್ಮನಾಭನು ತನ್ನಆನಂದಲೀಲೆಯಲಿ ಜಗವ ಪಡೆಯುವನುಆನಂದಲೀಲೆಯಲಿ ಅವತಾರ ರೂಪಗಳತಾನೇ ಪ್ರಕಟಿಸಿ ಸಜ್ಜನರ ಪಾಲಿಸುವ 25ದೇಶಗುಣಕಾಲ ಅಪರಿಚ್ಛಿನ್ನನು ಅನಂತನುಶ್ರೀಶಸರ್ವೇಶ ಚಿನ್ಮಯನುಅನಘಐಶ್ವರ್ಯ ಪೂರ್ಣಜಗದೇಕ ಪಾಲಕನುಅಸಮ ಸರ್ವೋತ್ತಮನು ಸುಖಮಯನು ಸುಖದ 26ಮೀನಕೂರ್ಮಸ್ತ್ರೀ ಅಜಿತ ಧನ್ವಂತರಿಕ್ರೋಢಶ್ರೀನಾರಸಿಂಹ ವಟುಭೃಗು ರಾಮರಾಮಕೃಷ್ಣ ಜಿನಸುತ ಕಲ್ಕಿ ಠಲಕ ವೆಂಕಟರಮಣಆನಂದಚಿತ್ತನು ಅನಂತ ಅವತಾರ 27ದಾಸೋಹಂ ತವ ದಾಸೋಹಂ ಎಂದುದಾಸವರ್ಯರು ಬಿನ್ನೈಸಿ ಸ್ತುತಿಸಿದರುನಸುನಗುತ ವಾತ್ಸಲ್ಯದಿಂದ ವಿಠ್ಠಲನುವಿಶೇಷಾಪರೋಕ್ಷ ಅನುಗ್ರಹಿಸಿದನುದಯದಿ 28ಸೌದಾಮಿನಿಗಮಿತ ವಿದ್ಯುತ್ ಕಾಂತಿಯಿಂದದಿಕ್ಕು ವಿದಿಕ್ಕುಗಳ ರಂಜಿಸುವರೂಪದಿಂದ ಪಾಲ್ಗಡಲಲಿ ಆವಿರ್ಭವಿಸಿದ ಶ್ರೀಇಂದಿರೆಯೆ ರುಕ್ಮಿಣಿ ಸೌಂದರ್ಯಪೂರ್ಣೆ 29ಮಾಯಾಜಯಾಕೃತಿಶಾಂತಿ ಸೀತಾಲಕ್ಷ್ಮಿತೋಯ ಜಾಲಯ ಚಿತ್ಪ್ರಕೃತಿ ಭೂದುರ್ಗಾತೋಜಯಾಕ್ಷಿವೇದವತಿದಕ್ಷಿಣಾ ಶ್ರೀಜಯಂತಿ ಸತ್ಯಾರುಕ್ಮಿಣಿ ಸುಂಧುಕನ್ಯಾ 30ಸರ್ವ ಜಗಜ್ಜನನಿಯು ಸರ್ವ ವಿಧದಲಿ ಹರಿಯಸೇವಿಸುತಿಹಳು ಸದಾ ನಿತ್ಯಾವಿಯೋಗಿನಿದೇವದೇವೋತ್ತಮ ರಾಜರಾಜೇಶ್ವರನು ವಿಠ್ಠಲನುದೇವಿ ಶ್ರೀ ರಾಜರಾಜೇಶ್ವರಿಯು ರುಕ್ಮಿಣಿಯು 31ಜ್ವಲಿಸುವ ಮುತ್ತು ನವರತ್ನದಿ ಕಿರೀಟಒಳ್ಳೆ ಪರಿಮಳ ಹೂವು ಮುಡಿದಂತ ತುರುವುಫಾಲದಲಿ ಶ್ರೇಷ್ಠತಮ ಕಸ್ತೂರಿ ತಿಲಕವುಪೊಳೆವ ಪೂರ್ಣೇಂದು ನಿಭ ಮೂಗುಬೊಟ್ಟು 32ಅಂಬುಜಾಕ್ಷಿ ದಿವ್ಯ ಮುತ್ತಿನ ತೋಡುಗಳುಗಂಭೀರ ಸೌಭಾಗ್ಯದ ಕೃಪಾನೋಟಕಂಬುಕಂಠದಿ ಮಂಗಳಸೂತ್ರಕರಯುಗದಿಅಂಬುಜವರಕೊಡುವಅಭಯಹಸ್ತಗಳು33ಕಂಧರದಲಿ ಪರಿಮಳಕಮಲಮಾಲಾಪೀತಾಂಬರ ದಿವ್ಯ ಕುಪ್ಪಸ ಮೇಲ್ಪಟ್ಟೆವಸ್ತ್ರವು ಸ್ವರ್ಣಸರ್ವಾಭರಣ ಭೂಷಣವುಪಾದಉಂಗುರ ಪೆಂಡೆ ಕಂಡು ನಮಿಸಿದರು34ಜಗನ್ನಾಥ ವಿಠ್ಠಲನೂ ಜಗನ್ಮಾತೆ ರುಕ್ಮಿಣಿಯೂಜಗನ್ನಾಥದಾಸರಿಗೆ ಔತಣ ಮಾಡಿದ್ದುಜಗತ್ತಲ್ಲಿ ಭಕ್ತಜನರೆಲ್ಲ ಪೇಳ್ತಿಹರುಜಗದೀಶ ಪಂಢರೀ ವಿಠ್ಠಲನ ಮಹಿಮೆ 35ಕೇಶವ ನಾರಾಯಣಮಾಧವಗೋವಿಂದಶ್ರೀಶ ವಿಷ್ಣು ಮಧುಸೂದನ ತ್ರಿವಿಕ್ರಮಈಶ ವಾಮನ ಶ್ರೀಧರ ಹೃಷಿಕೇಶರಮೆಯರಸಪದ್ಮನಾಭದಾಮೋದರ36ಸಂಕರುಷಣ ವಾಸುದೆವ ಪ್ರದ್ಯುಮ್ನ ನಮೋಅಕಳಂಕ ಅನಿರುದ್ಧ ಪುರುಷೋತ್ತಮನಿಷ್ಕಳಅಧೋಕ್ಷಜನರಸಿಂಹಅಚ್ಯುತಶ್ರೀಕರ ಜನಾರ್ದನ ಉಪೇಂದ್ರ ಹರಿಕೃಷ್ಣ 37ರಮಾಪತಿ ರಮಾಯುತನು ಶ್ರೀಹರಿಯ ರೂಪಗಳಬ್ರಹ್ಮವಾಯು ವಾಣೀಭಾರತಿ ಉಮೇಶಉಮಾ ತತ್ವದೇವದಿಕ್ಪಾಲಕರು ಗಂಗಾಕರ್ಮಮಾನಿ ಪುಷ್ಕರಾದಿಗಳೊಳ್ ತಿಳಿದರು 38ಭೋಜನ ಪದಾರ್ಥದಲು ತದ್ಗತ ಶಬ್ದಂಗಳಲುಭೋಜ್ಯಗಳ ಬಡುಸುವರಲ್ಲೂ ಕ್ಷೇತ್ರದಲ್ಲೂಭೋಜಭಿಮಾನಿಗತ ಖಂಡಾಖಂಡಗನುಭಜನೀಯ ಸ್ಥೂಲಭುಕ್ ಅವ್ಯಯನ ಕಂಡರು 39ಕರುಣಾಬ್ಧಿ ಶ್ರೀ ಹರಿಯ ಔದಾರ್ಯ ಏನೆಂಬೆಶ್ರೀ ಶ್ರೀನಿವಾಸನು ಅಂದು ತಿರುಪತಿಯಲ್ಲಿಶಿರಿ ವಿಜಯಾರ್ಯರ ರೂಪದಿ ಪ್ರೇರಿಸಿಧಾರೆಯೆರಿಸಿದ ಆಯಸ್ ಗುರುಗಳ ಕೈಯಿಂದ 40ಶ್ರೀ ಶ್ರೀನಿವಾಸನ ಮಹಾದ್ವಾರಕೆದುರಾಗಿಹಾರೆ ಕಲ್ಲುಮಂಟಪ ಆಗ್ನೇಯ ದಿಕ್ಕುಎರಡನೆಯದೋ ಮೂರನೆಯದೋ ಅಂಕಣದ ಖೋಲಿಹರಿದಾಸರು ಇದ್ದ ಮುಖಾಮಿ ಬಿಡಾರ 41ಎಳೆಕೆಂಪು ರೋಜ ಊದಾವರ್ಣದಿ ಅಂಚುಬಿಳಿರೇಷ್ಮೆ ವಸ್ತ್ರವ ಮೇಲ್ ಹೊದ್ದುಕೊಂಡುಮಲಗಿ ಚಲಿಸದೆ ನಿತ್ರಾಣನಾಗಿದ್ದವಗೆಒಲಿದು ಆಯುರ್ದಾನ ಮಾಡಿಸಿದ ಕರುಣಿ 42ಗುರುಗಳು ಗೋಪಾಲದಾಸರ ರೂಪದಿಂದ ಬಂದುಶಿರಿವರನು ತಾನೇನೆ ಅನ್ನಪ್ರಸಾದಕರದಲ್ಲಿ ಇತ್ತನು ಅವನೇವೆಇಂದುಶಿರಿಸಹ ಅಮೃತಾನ್ನ ಔತಣವನ್ನಿತ್ತ 43ಶಿರಿಯ ವಾತ್ಸಲ್ಯ ದಯೆ ಏನೆಂದು ಪೇಳಲಿಚಾರುದೇಷ್ಣಾಹ್ವಯ ತನ್ನಸುತ ಈಗವರಗೋಪಾಲದಾಸರುಅವರಶಿಷ್ಯರಿವರೆಂದು ಪ್ರೀತಿಯಲಿ ಔತಣ ಮಾಡಿಹಳು 44ಈ ರೀತಿ ಹರಿಶಿರಿ ಇತ್ತ ಔತಣ ಮತ್ತುಹರಿಯ ಕೈಯಿಂದ ಹರಿಗರ್ಪಿತ ಮಾಲಾದಿಹರಿಪ್ರಸಾದವ ಕೊಂಡು ಫಂಡರಿಪುರದಿಂದಹೊರಡಲಾದರು ಜಗನ್ನಾಥದಾಸಾರ್ಯ 45ನರಸಿಂಹಾದಾಸಾರ್ಯರಾದ ತನ್ನ ತಂದೆಗೆಗುರುಗಳುಪುರಂದರದಾಸಾರ್ಯರೆಂದುಪರಮಗುರುವಿಜಯದಾಸಾರ್ಯರ ಗುರುಯೆಂದುಚರಣವಂದಿಸಿ ಹೊರಡೆ ಅಪ್ಪಣೆ ಕೊಂಡರು46ಪರಮಗುರು ವಿಜಯದಾಸಾರ್ಯರ ಸ್ಥಳಕೆಸ್ಮರಣೆ ಪೂರ್ವಕ ಮನಸಾ ಪೋಗಿ ಸನ್ನಮಿಸಿಗುರುಗಳಚರಣಆಕಾಂಕ್ಷಿಗಳು ತ್ವರಿತದಿಹೊರಟರು ಶ್ರೀ ಜಗನ್ನಾಥನ್ನ ಸ್ಮರಿಸುತ್ತ 47ವಾರಿಜಾಸನ ಪಿತನು ಪೂರ್ಣ ಪ್ರಜÕರ ಹೃತ್‍ಸ್ಥಶಿರಿ ಪ್ರಸನ್ನ ಶ್ರೀನಿವಾಸನಿಗೆ ಪ್ರಿಯತರರುಪುರಂದರವಿಜಯಗೋಪಾಲದಾಸಾರ್ಯರಚರಣರತ ಜಗನ್ನಾಥ ದಾಸಾರ್ಯ ಶರಣು 48- ಇತಿ ಪಂಚಮ ಕೀರ್ತನೆ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು
ತನಗಲ್ಲದಾ ವಸ್ತು ಎಲ್ಲಿದ್ದರೇನುಮನಕೆ ಬಾರದ ಹೆಣ್ಣು ಮತ್ತೆ ಬಂದರೆ ಏನು ? ಪ.ಆದರಣೆಯಿಲ್ಲದೂಟ ಅಮೃತಾನ್ನವಾದರೇನುವಾದಿಸುವಸತಿ - ಸುತರಿದ್ದು ಫಲವೇನು ?ಕ್ರೋಧ ಬಳೆಸುವ ಸಹೋದರರು ಇದ್ದರೇನುಮಾದಿಗರ ಮನೆಯೊಳೆ ಮದುವೆಯಾದರೇನು ? 1ನಾಲಿಗಿಲ್ಲದ ಪÀದವು ಸಂಚಿತುಂಬ ಇದ್ದರೇನುದೇವಾಂಕಿತವಿಲ್ಲದ ಕವಿತ್ವವೇನು ?ಹೇಮವಿಲ್ಲದ ಹೆಣ್ಣು ಹೆಚ್ಚು ಬಾಳಿದರೇನುಹಾವಿನ ಘಣಿಯೊಳಗೆ ಹಣವಿದ್ದರೇನು ? 2ಸನ್ಮಾನವಿಲ್ಲದೆ ದೊರೆ ಸಾವಿರಾರು ಕೊಟ್ಟರೆ ಏನುತನ್ನ ತಾನರಿಯದ ಜ್ಞಾನವೇನು ?ಎನ್ನುತ ಪುರಂದರವಿಠಲನ ನೆನೆಯದವಸಂನ್ಯಾಸಿಯಾದರೇನು ಪಂಡಿತನಾದರೇನು ? 3
--------------
ಪುರಂದರದಾಸರು
ನಿನ್ನ ನಾಮವೆ ಎನಗೆ ಅಮೃತಾನ್ನವು |ಕೇಶವನೆಂಬ ನಾಮ ಕರಿದ ಹೂರಣಗಡಬು |ನಾರಾಯಣನ ನಾಮ ನೊರೆಹಾಲು ಸಕ್ಕರೆ |ಯದುಪತಿಯೆಂಬ ನಾಮ ಎಣ್ಣೂರಿಗೆಯ ರಾಶಿ |ದೇವಕಿಸುತನ ನಾಮ ವಧ್ಯನ್ನದಾ ಮುದ್ದೆ |ಗರುಡವಾಹನನ ನಾಮ ಘೃತಪಯೋದಧಿತಕ್ರ |ಈ ಪರಿಯ ನಾಮಾವಳಿಯನು ಸವಿದುಂಡು |
--------------
ಪುರಂದರದಾಸರು
ಮೂಡ ಬಲ್ಲನೆ ಜ್ಞಾನ - ದೃಢ ಭಕುತಿಯ ?ಕಾಡ ಕಪಿ ಬಲ್ಲುದೇ ಮಾಣಿಕದ ಬೆಲೆಯ ? ಪ.ಕೋಣ ಬಲ್ಲುದೆ ವೇದಗಳನೋದಿ ಪಠಿಸಲೇಕೆಗೋಣಿ ಬಲ್ಲುದೆ ಎತ್ತಿನಾ ದುಃಖವಪ್ರಾಣ ತೊಲಗಿದ ಹೆಣವು ಕಿಚ್ಚಿಗಂಜಬಲ್ಲುದೆಕ್ಷೋಣಿಯೊಳು ಕುರುಡ ಬಲ್ಲನೆ ಹಗಲು - ಇರಳ ? 1ಬಧಿರ ಕೇಳುವನೆ ಸಂಗೀತವನು ಪಾಡಿದರೆ ?ಚದುರ ಮಾತುಗಳಾಡುವನೆ ಮೂಕನು ?ಕ್ಷುದೆಯಿಲ್ಲದವನು ಅಮೃತಾನ್ನವನು ಸವಿಯುವನೆ ?ಮಧುರ ವಚನವ ನುಡಿವನೇ ದುಷ್ಟ ಮನುಜ 2ಅಜ ಬರೆದ ಬರಹವನು ತೊಡೆಯಬಲ್ಲನೆ ಜಾಣ?ನಿಜಭಕುತಿ ಮುಕುತಿ ಸುಖವನ್ನು ಕೊಡುವಭುಜಗೇಂದ್ರಶಯನ ಶ್ರೀ ಪುರಂದರವಿಠಲನಭಜಿಸಲಕ್ಕರಿಯದವ ಕಡು ಪಾಪಿ ಮನುಜ 3
--------------
ಪುರಂದರದಾಸರು
ಹರಿಯ ನೆನೆಯದ - ನರಜನ್ಮವೇಕೆ ? ಶ್ರೀಹರಿಯ ಕೊಂಡಾಡದ ನಾಲಿಗೆಯಿನ್ನೇಕೆ ಪ.ಸತ್ಯ - ಶೌಚವಿಲ್ಲದ ಆಚಾರವೇಕೆ ?ಚಿತ್ತ ಶುದ್ಧಿಯಿಲ್ಲದ ಜ್ಞಾನವೇಕೆ ?ಭಕ್ತಿ - ಭಾನವಿಲ್ಲದ ದೇವಪೂಜೆ ಏಕೆ ?ಉತ್ತಮರಿಲ್ಲದ ಸಭೆಯು ಇನ್ನೇಕೆ ? 1ಕ್ರೋಧವ ಬಿಡದಿಹ ಸಂನ್ಯಾಸವೇಕೆ ?ಆದರವಿಲ್ಲದ ಅಮೃತಾನ್ನವೇಕೆ ?||ವೇದ - ಶಾಸ್ತ್ರವಿಲ್ಲದ ವಿಪ್ರತನವೇಕೆಕಾದಲಂಜುವನಿಗೆ ಕ್ಷಾತ್ರ ತಾನೇಕೆ ? 2ಸಾಲದಟ್ಟುಳಿಯೆಂಬ ಸಂಸಾರವೇಕೆ ?ಬಾಲಕರಿಲ್ಲದ ಭಾಗ್ಯವಿನ್ನೇಕೆ ?ವೇಳೆಗೆ ಒದಗದ ನೆಂಟರಿನ್ನೇಕೆ ? ಅನುಕೂಲವಿಲ್ಲದ - ಸತಿಯ ಸಂಗವೇಕೆ 3ಮಾತೆ - ಪಿತರ ತೊರೆದ ಮಕ್ಕಳಿನ್ನೇಕೆ ?ಮಾತು ಕೇಳದ ಮಗನಗೊಡವೆ ಇನ್ನೇಕೆ ||ನೀತಿ ತಪ್ಪಿದ ದೊರೆಯ ಸೇವೆ ಇನ್ನೇಕೆ ? ಅನಾಥನಾಗಿರುವಗೆ ಕೋಪವಿನ್ನೇಕೆ ? 4ಅಳಿದುಳಿದಿಹ ಮಕ್ಕಳುಗಳಿನ್ನೇಕೆ ?ತಿಳಿದು ಬುಧ್ಧಿಯ ಹೇಳಿದ ಗುರುತನವೇಕೆ ?ನಳಿನನಾಭ ಶ್ರೀ ಪುರಂದರವಿಠಲನಚೆಲುವ ಮೂರುತಿಯ ಕಾಣದ ಕಂಗಳೇಕೆ 5
--------------
ಪುರಂದರದಾಸರು