ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈ ದೇಹ ಬಲು ಸಾಧನ ಭೂದೇವ ಜನ್ಮದಲಿ ಬಂದ ಕಾರಣ ನಮಗೆ ಪ ಶ್ವಸನ ಮತವೆ ಪೊಂದಿ | ನಸು ಚಿತ್ತದಲಿ ಯಿದ್ದು | ವಿಷಯಂಗಳೆಲ್ಲ ನಿರಾಕರಿಸಿ | ಋಷಿಮಾರ್ಗದಲಿ ನಡೆದು ವಿಹಿತಾರ್ಥದ ಸತ್ಯ | ನಿತ್ಯ ಸಜ್ಜನರ ಒಡಗೂಡು1 ಬಾಹುದ್ವಯದಲಿ ಶಂಖ ಚಕ್ರ ಧರಿಸಿ ಉ | ತ್ಸಾಹದಲಿ ದ್ವಾದಶ ಪುಂಡ್ರಗಳನಿಟ್ಟು | ಸ್ನೇಹಭಾವದಲಿ ಸತತ ಭಕುತಿಯ ಮಾಡು | ಇಹಲೋಕದಲಿ ಇಷ್ಟಾರ್ಥ ಬೇಡುತಲಿರು 2 ಅನಿಷಿದ್ದ ಕರ್ಮಗಳು ಆಚರಿಸಿ ಭೂತದಯ | ಅನುಗಾಲ ಇರಲಿ | ಬಂಧುಗಳ ಕೂಡಾ | ಮನಮೆಚ್ಚು ನಡೆದು ನೀ ಮಂದಮತಿಯನು ಕಳೆದು | ಘನಜ್ಞಾನದಲಿ ನಡೆದು ಗುಣವಂತನಾಗು 3 ಧರ್ಮೋಪದೇಶವನೆ ಮಾಡುತಲಿರು ನೀನು | ಪೇರ್ಮೆಯುಳ್ಳವನಾಗು ಪೃಥವಿಯೊಳಗೆ | ನಿರ್ಮತ್ಸರನಾಗು ವೈಷ್ಣವ ಜನರ ಕೂಡ | ದುರ್ಮತವ ಪೊಂದದಿರು ಅನಂತ ಜನ್ಮಕ್ಕೆ 4 ಕರ್ಣ ತುಲಸೀ ದಳ | ಬೆರಳಲ್ಲಿ ಪವಿತ್ರದುಂಗರವನಿಟ್ಟು | ಪರಮ ವಿರಕುತಿಯಲಿ ದೇಹವನು ದಂಡಿಸುವ | ಹಿರಿದಾಗಿ ಭಾಗವತನಾಗು ವ್ಯಾಕುಲವ ಬಿಡೋ 5 ವದನದಲಿ ಹರಿಸ್ಮರಣೆ ಮರೆಯದಿರು ಕಂಡಕಡೆ | ಉದರಕ್ಕೆ ಪೋಗಿ ಚಾಲ್ವಯದಿರು ಅಧಿಕರ ಆಪೇಕ್ಷಗಳ ಮಾಡದಿರು ಹರಿಯಿತ್ತ ದದು ಭುಂಜಿಸಿ | ಬಂದ ಕಾಲವನು ಹಿಂಗಳಿಯೊ 6 ತೀರ್ಥಯಾತ್ರೆಯ ಚರಿಸು ಕಥಾಶ್ರವಣವನು ಕೇಳು | ಅರ್ಥವನೆ ಬಯಸದಿರು ಬಾಕಿ ಬಸಿದು ವ್ಯರ್ಥ ನಿನ್ನಾಯುಷ್ಯ ಪೋಯಿತೆಂದೆನಿಸದೆ | ಪ್ರಾರ್ಥನೆಯ ಮಾಡು ಪ್ರತಿಕ್ಷಣಕೆ ಶ್ರೀ ಹರಿಚರಣ 7 ಪರಿಯಂತ | ಮಿತ ಆಹಾರ ಮಿತ ನಿದ್ರಿ ಮಿತ ಮಾತನು | ಸತತ ಮೀರದಲಿರು ಶೋಕಕ್ಕೊಳಗಾಗದಿರು | ಸತಿ ಸುತರು ಎಲ್ಲ ಶ್ರೀ ಹರಿಗೆ ಸೇವಕರೆನ್ನು 8 ಜಾಗರ ಗಾಯನ | ಮರಳೆ ಮರಳೆ ಮಂತ್ರ ಪಠನೆಯಿಂದ | ಧರೆಯೊಳಗೆ ಪುಣ್ಯವಂತನಾಗಿ ಸರ್ವದ | ಇರಬೇಕು ಇಹಪರಕೆ ಲೇಸು ಎನಿಸಿಕೊಂಡು9 ಸುಖ ದು:ಖ ಸೈರಿಸುತ ಅರಿಗಳಿಗೆ ಭಯಪಡದೆ | ನಖಶಿಖವಾಗಿ ಆನಂದ ವಿಡಿದೂ | ಮುಖದಲ್ಲಿ ಹರಿನಾಮ ಅಮೃತವೆ ಸುರಿಸುತ್ತ | ಸಖರೊಳಗೆ ಲೋಲಾಡು ಹರಿಗುಣವ ಕೊಂಡಾಡು10 ಸಕಲಾಧಿಷ್ಠಾನದಲಿ ಹರಿಯೆ ಲಕುಮಿ ತತ್ವ | ಕರ ಮುಗಿದು ತಿಳಿದು | ಮುಕುತಿ ಕರದೊಳಗಿಡು ವಿಜಯವಿಠ್ಠಲರೇಯನ | ವಿಕಸಿತ ಮನದಲ್ಲಿ ಭಜಿಸು ಬಲು ವಿಧದಿಂದ11
--------------
ವಿಜಯದಾಸ
ಏನು ವರ್ಣಿಸಿದ ಕವೀಶ್ವರ ನಾರಿಯಜ್ಞಾನಕೆ ಹಾನಿಯ ಮುಕ್ತಿಗೆ ಮೃತ್ಯುವಕಾನನ ರೂಪು ನರಕ ಕುಂಡವೆಂಬಳತಾನು ಕೆಡಲು ಸುಳ್ಳು ಸ್ತುತಿ ಮಾಡಿದ ಪ ಗುದ್ದಲಿ ಮೂಗನು ಸಂಪಿಗೆ ನನೆ ಎಂದಬುದ್ದಲಿ ಮುಖವನು ಪದ್ಮಮುಖವೆಂದಇದ್ದಲಿ ತನುವನು ಇಂದ್ರನೀಲವೆಂದಹದ್ದಿನ ಕೈಯನು ಹರಿ ಸುಂಡಲೆಂದ 1 ಬೆಳ್ಳುಳ್ಳಿ ಹಲ್ಲನು ದಾಳಿಂಬ ಬಿತ್ತವೆಂದಹುಲ್ಲೆಗಣ್ಣೆಂದನು ಸುಳಿಗಣ್ಣಮಲ್ಲಿಗೆ ಮೊಳೆಯೆಂದನು ಮುರುಕಿ ಮಾತುಗಳನ್ನುಜೊಲ್ಲು ಸುರಿವುದಕೆ ಅಮೃತವೆಂದನು 2 ಕುಂಭ ಕುಚವೆಂದನು ಮಾಂಸದ ಮುದ್ದೆಯಬಿಂಬಾಧರವೆಂದನು ಹಂದಿಯ ತುಟಿಯಕಂಬ ಬಾಳೆ ಎಂದನು ಕೊರಡು ತೊಡೆಯನುಬಿಂಬ ಕನ್ನಡಿ ಎಂದನು ಕುಣಿಗಲ್ಲವ 3 ಕಲಹಂಸ ನಡಿಗೆಯೆಂದ ಕೋಣನ ನಡಿಗೆಯಅಳಿಕುಂತಳವೆಂದ ಮುರುಟು ಕೂದಲನುಬಲು ಸಿಂಹನಡುವೆಂದ ಮೊಸಳೆ ನಡುವನ್ನುಹೊಳೆವ ಬೊಂಬೆಯೆಂದ ಕೊಳಕು ಮೈಯನ್ನು 4 ಹೊಲಸು ಮೂಳಿಗೆ ನಾನಾ ಹೋಲಿಕೆಗಳನಿಟ್ಟುತಿಳಿದಂತೆ ಕವಿತಾನು ವರ್ಣಿಸಿದ ಕೊಂಡಾಡಿಸುಲಭ ಚಿದಾನಂದ ಸುಪಥವ ಕಾಣದಲೆಕಳಕೊಂಡ ಕವಿತಾನು ಬಹು ಪುಣ್ಯ ಪಥವ 5
--------------
ಚಿದಾನಂದ ಅವಧೂತರು
ಕಲ್ಲಿನಿಂದ ಸರ್ವ ಫಲ ಬಾಹುದೊ | ಪ ಕೈವಲ್ಯ ತೋರುವುದೊ ಅ.ಪ ಕಲ್ಲು ಕಡೆಯುತ್ತಿರಲು ಅಮೃತವೆ ಪುಟ್ಟಿತು | ಕಲ್ಲು ಎತ್ತಲು ಮಳೆಯೊಳೆಲ್ಲವರು ಉಳಿದರು | ಕಲ್ಲು ಹರಿಪಾದವನು ಸೋಕೆ ಹೆಣ್ಣಾಯಿತು | ಕಲ್ಲು ಲಂಕೆಗೆ ಮಾರ್ಗ ಚೆನ್ನಾಗಿ ಶೋಭಿಸಿತು1 ಕಲ್ಲಿನೊಳಗೆ ದೇವನೊಡಮೂಡಿ ಕಾಣಿಸುವ | ಮೂರ್ತಿ ಮಂತಾಹುದು | ಕಲ್ಲು ದೇವರ ಗುಡಿಗೆ ಗರುಡ ಗಂಬವು ಆಯ್ತು | ಕಲ್ಲು ಕೋಟ್ಯಾನು ಕೋಟಿಗೆಲ್ಲ ಬೆಲೆಯಾಯ್ತು2 ಕಲ್ಲೆಂದುಪೇಕ್ಷಿಸದೆ ಕಾಲಕಾಲದಿ ನಿಮ್ಮ | ಕಲ್ಲು ಮನಸನು ಬಿಟ್ಟು ಪೂಜೆಮಾಡಿ | ಸಿರಿ ವಿಜಯವಿಠ್ಠಲ ಒಳ್ಳೆ | ಕಲ್ಲು ಪದವಿಯ ಕೊಟ್ಟು ಸತತ ಪಾಲಿಪನೊ 3
--------------
ವಿಜಯದಾಸ
ನಿನ್ನನೆ ನಂಬಿದೆ ನೀರಜನಯನ ನಿನ್ನ್ಹೊರತು ಎನಗನ್ಯ ಗತಿಯಿಲ್ಲ ಹರಿಯೆ ಪ ನಿನ್ನ ಪಾದವೆ ಎನಗೆ ಮಾತಾಪಿತೃಯೆಂಬೆ ನಿನ್ನ ಪಾದವೆ ಎನಗೆ ಬಂಧುಬಳಗವೆಂಬೆ ನಿನ್ನ ಪಾದವೆ ಎನಗೆ ಸಕಲಸಂಪದವೆಂಬೆ ನಿನ್ನ ಪಾದವೆ ಎನಗೆ ನಿಖಿಲಬಲವೆಂಬೆ 1 ನಿನ್ನ ಕರುಣವೆ ಎನಗೆ ಭವತರಿವ ಶಸ್ತ್ರೆಂಬೆ ನಿನ್ನ ಕರುಣವೆ ಎನಗೆ ಸ್ಥಿರಸುಖವುಯೆಂಬೆ ನಿನ್ನ ಕರುಣವೆ ಎನಗೆ ರಕ್ಷಿಸುವ ದೊರೆಯೆಂಬೆ ನಿನ್ನ ಕರುಣವೆ ಎನಗೆ ಪರಮ ತೃಪ್ತ್ಯೆಂಬೆ 2 ನಿನ್ನ ನಾಮವೆ ಎನಗೆ ಅಮೃತವೆಂಬೆ ನಿನ್ನ ನಾಮವೆ ಎನ್ನ ಭವರೋಗಕ್ಕ್ವೈದ್ಯೆಂಬೆ ನಿನ್ನನಾಮ ಸ್ಥಿರಕೊಟ್ಟು ಪ್ರೇಮದಿಂ ಸಲಹು ಶ್ರೀರಾಮ ನೀನೆ ಎನಗೆ ಪರದೈವಯೆಂಬೆ 3
--------------
ರಾಮದಾಸರು
ಹಾರವ ಕಟ್ಟಿ ಕೊಡುವೆ ಲಕ್ಷ್ಮೀ ವರ ಭಕುತಿಯ ಪ. ಮಾರಮಣನಿಗೆ ಹಾರ ಹಾಕಿ ತೋರಿಪೆ ಪಥವೆಂದು ಅ.ಪ. ರಾಮ ಅಮೃತವೆಂಬ ನೇಮದ ಗಂಗೆಯ ಕಾಮಿಸಿ ತಂದು ನಿರಾಮಯ ಕೃಷ್ಣಗೆಂದು ಪ್ರೇಮದ ನಾರನು ಕಾಮಿತ ಪುಷ್ಪ ಮಂದಾರ ಮಲ್ಲಿಗೆಯನು ಸ್ವಾಮಿಗೆ ಸಲಿಸೆಂದು 1 ಅಗಣಿತ ಮಹಿಮಗೆ ಸೊಗವಿನ ತುಳಸಿಯ ಚಿಗರಿನ ಹಾರವ ಜಗಿದಾನಂದದಿ ಸೊಗಸಿನ ರೋಜವ ಬಗೆಬಗೆ ಭೋಗಗ ಳೊಗೆದುಗೆಂಡಸಂಪಿಗೆ ಚಿಗಿಚಿಗಿದಾಡುತ 2 ಯುಕ್ತಿಯ ಮರುಗ ಶಕ್ತಿ ಸ್ವರೂಪಳೆ ಭಕ್ತ ವತ್ಸಲನಿಗೆ ಇತ್ತಪೆ ನಾನೀಗ ಸ್ತುತ್ಯ ಶ್ರೀ ಶ್ರೀನಿವಾಸ ದೇವಕ್ಕಳಿಂ ನೀನೆಂದು 3
--------------
ಸರಸ್ವತಿ ಬಾಯಿ
ಕರುಣಿಸಿ ಬಾರೆಲೆ ತಾಯೆ ಮಾಧವನಾವ್ಯಾಕೃತನಕರೆತಾರೆ ನೀರೆ ಬೇಕಾದವಳನಿನಿತುವಿರಹವಾರಿಧಿಯಲ್ಲಿ ನೂಕಿ ಓಡಿರುವನಲ್ಲೆ ಸಲೆ ಪ.ಬಿಸಜಕುಟ್ಮಳಕುಚವಸೋಂಕಿಮುದದಿ ಪಿಡಿದುಶಶಿಮೊಗದಿ ಮೋಹವನಿಡುವ ನುಡಿವಎಸೆವ ಕೊನೆವಲ್ಲಲಳುಕಿಸಿ ಎನ್ನಅಧರಪೀಯೂಷವನೊಲಿದೊಲಿದು ಸವಿದಕೋವಿದಪೊಸಮದಕರಿಯ ಸೊಂಡಿಲ ತೋಳಲಮರ್ದಪ್ಪಿಮಿಸುನಿಪುತ್ಥಳಿಯ ತೆರದಿ ಮೆರೆದಅಸಿಯ ಮಾಣಿಕಳೆ ಕೇಳಸುರಹರನಾಳಿದನೀಅಸುತೊರೆವೆ ತಾನಪಕಾರೆ ನೀರೆ1ಎಂಟೆರೆಡು ಕಳೆದೋರಿ ಸವಿದೋರಿ ಸುಖಬೀರಿ ಸಲೆಕಂಠಮಾಲೆಯ ಕೊಟ್ಟನೆ ನೆಟ್ಟನೆಎಂಟೆರಡವಸ್ಥೆಗಳ ಮೇಳಿಗೆಯ ಕ್ಷಣಲವಕೆವೆಂಠಣಿಸಿ ಅಮೃತವೆರೆದ ನೆರೆದಕಂಟಕಿಯು ದಾವಳೊ ಹರಿಯನೊಯ್ದಳಕದಿಂಗಂಟಿಕ್ಕಿದಳೊ ಬಿಡದೆ ಮಡದೆಉಂಟು ಮಾಡಿದನಲಾಮಂದಮುಗ್ಥೆಗೆ ಅಸಿಕಕಂಟಕಬಲೆಯ ಕಾಣೆ ಜಾಣೆ 2ಸರಸವಾತಿನ ಜಾಣ್ಮೆಯೆಂತುಸುರುವೆನಬಲೆಹರಣಳಿಯದೆಂದು ಪೇಳೆ ಕೇಳೆನಿರುತವನ ಕಿರುವೆರಳ ಸೌಂದರ್ಯಮಂ ನೆನೆಯುತಿರುವೆ ಪುಸಿಯಲ್ಲ ಕಾಣೆ ಪ್ರಾಣೆಕರುಣಿ ಬಲುನೊಂದರೆಂದದು ತನಗೆಕುಂದುಮರೆಯದಿನಿತೆಲ್ಲ ಒರೆಯೆ ಚತುರೆಯೆಭರದಲೊಮ್ಮದೊಮ್ಮೆ ಬಂದು ಪ್ರಸನ್ನವೆಂಕಟಗಿರಿಯರಸನೆಂದನಕ್ಕ ರಸಿಕ 3
--------------
ಪ್ರಸನ್ನವೆಂಕಟದಾಸರು
ಮಂಡೆಬಾಗಿಕರವಮುಗಿವೆ ಕಾಯೊ ಹರಿಹರಿ |ಪುಂಡರೀಕನಯನ ಮರೆಯಬೇಡವೊ ಹರಿಹರಿ ಪಕರಿವರದನೆ ಸರ್ವಾಂತರ್ಯಾಮಿ ಹರಿಹರಿ |ಕರುಣಾಸಾಂದ್ರ ತರುಣಿ ಮಾನಕಾಯ್ದ ಹರಿಹರಿ ||ಶರಧಿಸುತೆಯ ರಮಣ ದೀನಬಂಧು ಹರಿಹರಿ |ಅರಿಯೆ ನಿನ್ನನುಳಿದು ಕಾಯ್ವರನ್ನು ಹರಿಹರಿ 1ಮೀನನಾಗಿ ವೇದಗಳನು ತಂದೆಹರಿಹರಿ|ಆ ನಗವನು ಪೊತ್ತು ಅಮೃತವೆರೆದೆಹರಿಹರಿ||ನೀನೇ ವರಾಹನಾಗಿಯವನಿಯ ತಂದೆಹರಿಹರಿ|ದಾನವನುದರವ ಬಗೆದು ಅಂದುಹರಿಹರಿ 2ಚಿಕ್ಕ ರೂಪದಿಂದ ಬಲಿಯ ತುಳಿದೆಹರಿಹರಿ|ಸೊಕ್ಕಿದರಸುಗಳನು ಸವರಿಬಿಟ್ಟೆಹರಿಹರಿ||ರಕ್ಕಸರನು ಕೊಂದು ಸತಿಯ ತಂದೆಹರಿಹರಿ|ಅಕ್ಕರದಲಿ ಪಾರಿಜಾತ ತಂದೆಹರಿಹರಿ3ಅಂಬರವನು ತೊರೆದೆ ಬೌದ್ಧನಾಗಿ ಹರಿಹರಿ |ಕುಂಭಿಣಿಯೊಳು ಕುದುರೆಯೇರಿ ಮೆರೆದೆಹರಿಹರಿ||ಶಂಬರಾಂ ಜನಕ ಧರ್ಮತನಯಹರಿಹರಿ|ಅಂಬುಜಾಸನಾದಿ ದಿವಿಜವಂದ್ಯಹರಿಹರಿ4ಶೌರಿರಘುಜ ಮುನಿಜ ಪ್ರಾಣೇಶ ವಿಠಲಹರಿಹರಿ|ಸಾರಿದ ಶರಣರಿಗೆ ಕಲ್ಪತರುವೆಹರಿಹರಿ||ಘೋರದುರಿತವನಕೆ ಧನಂಜಯನೆ ಹರಿಹರಿ |ಭಾರನಿನ್ನದೆವೆ ಹೇಳಲ್ಯಾಕೆಹರಿಹರಿ 5
--------------
ಪ್ರಾಣೇಶದಾಸರು