ಒಟ್ಟು 9 ಕಡೆಗಳಲ್ಲಿ , 2 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈಶ ಕೇಶವ ಶ್ರೀಶ ಈಶ ಕೇಶವ ದೋಷನಾಶ ಜಗದೀಶ ಪೋಷನುತ ಪ ಕಮಲ ಸಂಭವನುತ ಅಮಿತಮಹಿಮ ಹರಿ ಸುಮಶರ ವರಪಿತ 1 ದನುಜಕುಲಾಂತಕ ಜನಕಜಾನಾಯಕ ಮನುಮುನಿಜನರತಿ ಕನಿಕರದಾಯಕ 2 ಲಕ್ಷ್ಮಿಯರಮಣ ಪಕ್ಷಿಯವಾಹನ ರಕ್ಷಿಸು ಶ್ರೀರಾಮ ಮೋಕ್ಷಪದವನಿತ್ತು 3
--------------
ರಾಮದಾಸರು
ದಯವು ಏತಕೆ ಬಾರದೌ ದೇವಿ ಭಯವಿಮೋಚನೆ ಭಕ್ತ ಸಂಜೀವಿ ಪ ಚರಣಕಮಲಕ್ಕೆ ಶಿರವ ಬಾಗಿದೆನೆ ಸೆರಗನೊಡ್ಡಿ ಪರಮಭಕ್ತಿಲಿ ಬೇಡಿಕೊಂಡೆನೆ ಕರುಣಭರಿತ ಮೊರೆಯ ಕೇಳ ದಿರು ವಿಜಯವಾಣಿ ಪರಮಕಲ್ಯಾಣಿ ಸರಿಯೆ ನಿನಗಿದು ಶರಣಜನರ ಕರುಣಾಕರಿ ಅಂಬ ಪರತರ ಬಿರುದು ಇದೆಯೇನೆ 1 ಮಾರಮರ್ದನರಸಿ ಗಂಭೀರೆ ಶಾರದಾಂಬೆಯೆ ಮೂರುಲೋಕಂಗಳಿಗೆ ಆ ಧಾರಿ ಪಾರಮಹಿಮೆಯೆ ತೋರು ಕರುಣವ ಬೇಗ ವರಗೌರಿ ಮರೆಯದಿರು ಶೌರಿ ಚಾರು ಚರಿತವ ಪಾಡಿ ಬೇಡುವೆ ಸಾರಮನದಿಷ್ಟ ಪೂರೈಸಿದ ರೌದ್ರಿ 2 ಸ್ವಾಮಿ ರಾಮನನಾಮಮಹಿಮರತಿ ನೀ ಮನವ ಸೋತಿ ಪ್ರೇಮದಿಂದಲಿ ತ್ರಿಜ ಗನ್ಮಾತೆ ವಿಮಲಚರಿತೆ ಪ್ರೇಮಮಂದಿರೆ ಭಕ್ತ ವರದಾತೆ ಅಮರಾದಿವಿನುತೆ ಹೈಮವತಿ ನಿನ್ನ ನಂಬಿ ಭಜಿಸುವೆ ಕ್ಷೇಮಪಾಲಿಸೆನ್ವ್ಯಾಧಿ ಕಳೆದು ನಾಮರೂಪರಹಿತೆ ವಿಮಲೆ ಅಮಿತಮಹಿಮಳೆ ಮಮತೆದೋರೆ 3
--------------
ರಾಮದಾಸರು
ನಮೋ ನಮೋ ಶಂಕರ ಉಮೆಪ್ರಿಯ ಶಶಿಧರ ಕಮಲನಾಭನ ಭಕ್ತಿಕೊಡು ಸುಖಸಾರ ಪ ಹಿಮಗಿರಿಜೇಶ ಸುಮಶರನಾಶ ಅಮಿತಮಹಿಮ ನಿಮ್ಮ ವಿಮಲ ಪಾದದಿಬೇಡ್ವೆ 1 ಕಾಲಮರ್ದನ ತ್ರಿಶೂಲಿಯೆ ಪುರತ್ರಯ ಕಾಲನೊಶವಗೈದ ಫಾಲನಯನ ಕಾಯೊ 2 ಭೂಮಿತ್ರಯಕೆ ತಾನೆ ಸ್ವಾಮಿಯೆನಿಪ ಶ್ರೀ ರಾಮ ನಾಮಾಮೃತ ಪ್ರೇಮದಿ ಕರುಣಿಸು 3
--------------
ರಾಮದಾಸರು
ಬರಿದೆ ಬಯಸಲು ಬರುವುದೇನೆಲೆ ಮರುಳು ಯೋಚನೆ ಬಿಡೆಲೆ ಮನಸೆ ಪ ಹರಿಯ ಬಳಿಯಲಿ ಪಡೆದಷ್ಟಲ್ಲದೆ ದೊರಕದೆಂದಿಗೆ ಬೇರೆ ತಾನು ಅ.ಪ ಶಾಂತಿತಾಳತಿಭ್ರಾಂತಿ ನೀಗಿ ಸಂತಜನ ಕೃಪಾಪಾತ್ರನಾಗಿ ಕರು ಣಾಂತರಂಗ ಸಿರಿಕಾಂತನಂಘ್ರಿಯ ಅಂತರಂಗದಿ ಭಜಿಸದೆ 1 ಶಮೆಯಗೂಡಿಹ್ಯ ಭ್ರಮೆಯನಳಿದು ಸುಮನದೋಳಿರ್ದು ಕ್ರಮದಿ ಅನುದಿನ ವಿಮಲ ಹರಿಕಥೆ ಶ್ರವಣದಿಂ ರಮಾರಮಣನಂಘ್ರಿಗೆ ನಮಿಸದೆ 2 ದಮೆಯ ಪಡೆದು ದಾಸನಾಗಿ ವಿಮಲನಾಮದ ಬಲವಗಳಿಸಿ ಅಮಿತಮಹಿಮ ಶ್ರೀರಾಮನಂಘ್ರಿ ಕಮಲವೊಲಿಸಿ ಭವತುಳಿಯದೆ 3
--------------
ರಾಮದಾಸರು
ಯತಿಗಳು ಟೀಕಾಚಾರ್ಯರು ಜಯರಾಯಾ ಜಯರಾಯಾ ಪ ದಯಕರ ಸಜ್ಜನಭಯಹರ ಗುರುವರ ಅ.ಪ ವಾಸವ ನೀ ವಸುಧೀಶನ ನಿಜ ಕೂಸೆನಿಸೀಪರಿ ದೇಶದಿ ಮೆರೆದೆ 1 ಸತಿಯಳ ತ್ಯಜಿಸಿ ಯತಿರೂಪ ಧರಿಸಿ ಪÀತಿತರ ಶಾಸ್ತ್ರವ ಹತಮಾಡಿದಿ ನೀ 2 ಸುಧಾದಿಗ್ರಂಥವ ಮುದದಲಿ ರಚಿಸಿ ಬುಧಜನಸ್ತೊಮಕೆ ಒದಗಿಸಿ ಕೊಟ್ಟಿ3 ಅಲವಬೋಧರ ಮತ ಬಲವತ್ತರಮಾಡಿ ಜಲಜನಾಭನ ಮನ ಒಲಿಸಿದ್ಯೊ ಜೀಯಾ 4 ಪ್ರಮಿತಜನಗಣನಮಿತ ಪದಾಂಬುಜ ಅಮಿತಮಹಿಮ ನಿನ್ನ ನಮಿಸುವೆ ದಿನದಿನ 5 ಯಾತಕೆ ಎನ್ನನು ಈ ತೆರನೋಡುವಿ ದಾತಗುರುಜಗನ್ನಾಥ ವಿಠಲ ಪ್ರೀಯ6
--------------
ಗುರುಜಗನ್ನಾಥದಾಸರು
ಸುನಾಮ ಕೇಶವ ಮಾಧವ ನಾಶನ ಭವನಿಧಿಬಂಧನ ಪ ಬೋಲೋ ರಾಧಾಕೃಷ್ಣ ಸುಲೀಲ ಪಾಲಯ ಕುಲಕೋಟಿ ಪಾವನ ಅ.ಪ ವೃಂದಾವನ ಮಾಲಾನಂದ ಲೀಲಾ ಇಂದಿರೆಪ್ರಿಯ ಮಣಿಮಾಲನ ಸಂದರಮಂದರ ಮಂದಿರ ದೇವಕಿ ಕಂದ ಮುಕ್ಕುಂದ ಗೋಪಾಲನ1 ನೀಲಶ್ಯಾಮ ಭವಮಾಲಹರಣ ದಯ ಆಲಯ ಭಜನಾನಂದನ ಕಾಲ ಕುಜನ ಕುಲಶೀಲ ಶಿಷ್ಟಪ್ರಿಯ ಲೋಲಗಾನ ಹರಿ ಗೋವಿಂದನ 2 ಅಮಿತಮಹಿಮ ಅಸುರಮರ್ದನ ಕಮಲನಾಭ ಕರಿಪಾಲನ ಕಾಮಿತದಾಯಕ ಸುಮಶರಪಿತ ಮಮ ಸ್ವಾಮಿ ಶ್ರೀರಾಮ ಮುಕ್ತಿ ಸೋಮನ 3
--------------
ರಾಮದಾಸರು
ನಿಗಮವಿನುತ ಜಗವ ಭರಿತಬಗೆದು ಸಲಹೈ ವೆಂಕಟೇಶ ಪಶ್ರೀನಿವಾಸ ದೀನಪೋಷಧ್ಯಾನದಾಯಕ ವೆಂಕಟೇಶಮಾನದಿಂಪೊರೆಜ್ಞಾನಪಾಲಿಸಿನೀನೆಗತ್ಯನಗೆ ವೆಂಕಟೇಶ 1ಕಮಲನಾಭ ಕಮಲವದನಕಮಲಜಪಿತ ವೆಂಕಟೇಶಕಮಲಪಾಣಿ ಕಮಲನೇತ್ರಅಮಿತಮಹಿಮ ವೆಂಕಟೇಶ 2ಹೇಸಿಭವನ ವಾಸನ್ಹಿಂಗಿಸುವಾಸುದೇವವೆಂಕಟೇಶತಂದೆ ನಿಮ್ಮ ಹೊಂದಿ ಭಜಿಪಾನಂದ ಕರುಣಿಸು ವೆಂಕಟೇಶ 3ಕುಂದುನಿಂದೆ ದಂದುಗಂಗಳಬಂಧ ತಪ್ಪಿಸು ವೆಂಕಟೇಶತಂದೆ ನಿಮ್ಮ ಹೊಂದಿ ಭಜಿಪಾನಂದ ಕರುಣಿಸು ವೆಂಕಟೇಶ 4ಸತ್ಯ ಸನ್ಮಾಗ್ರ್ಯಕ್ತನೆನಿಸೆನ್ನಮೃತ್ಯು ಸಂಹರ ವೆಂಕಟೇಶನಿತ್ಯನಿಮ್ಮಡಿಭಕ್ತನೆನಿಸೆನ್ನಕರ್ತುಶ್ರೀರಾಮ ವೆಂಕಟೇಶ5
--------------
ರಾಮದಾಸರು
ನಿನ್ನ ಸಮಾನ ದೇವರುಂಟೇನೋ ಎನ್ನಯ್ಯ ರಂಗ ಪನಿನ್ನ ಸಮಾನ ದೇವರುಂಟೇ ಇನ್ನೀ ಭುವನಭವಾಂಡದೊಳಗೆಬನ್ನಬಡಿಸದೆ ದಾಸಜನರ ನಿನ್ನ ಪ್ರಾಣಸಮಮಾಡಿ ಪೊರೆಯುವಿ ಅ.ಪಸೋಮಕಾಸುರ ದೈತ್ಯನ್ನ ವಧಿಸಿ ವೇದವನು ತಂದುನೇಮದಿಂ ಮತ್ತೀ ಸೃಷ್ಟಿ ನಿಲ್ಲಿಸಿ ಸಾಗರವ ಮಥಿಸಿಪ್ರೇಮದಮೃತ ಸುರರಿಗುಣಬಡಿಸಿ ನಿಸ್ಸೀಮನೆನಿಸಿಸೋಮಶೇಖರನಮಿತ ಕಷ್ಟವ ಪ್ರೇಮ ದೃಷ್ಟಿಯಿಂ ದೂರ ಮಾಡಿಭೂಮಿತ್ರಯಕೆ ಕ್ಷೇಮ ನೀಡಿದಿ ಕಾಮಿತ ಭಕ್ತರ್ವರಪ್ರದಾತ 1ಎರಡೆ ಅಡಿಗಿಡಿಭುವನವನು ತುಳಿದಿ ಅಮಿತಮಹಿಮಪರಮಉಗ್ರರೂಪ ಧರಿಸಿದಿ ಭಕುತಗಾಗಿಅರಮನೆಯ ಸ್ತಂಭೊಡೆದು (ಮೂ) ಡಿದಿ ಪರಮದಯಾನಿಧಿಚರಣದಾಸರ ಪೊರೆಯುಲೋಸುಗ ನರನ ರೂಪದಿನಿರುತ ವಿಪಿನಕೆ ತೆರಳಿ ದಕ್ಷಿಣಶರಧಿ ಹೂಳಿಸಿದುರಳರ್ಹಾವಳಿ ದೂರ ಮಾಡಿದಿ 2ದ್ವಾರಕೆಂಬ ಪುರವ ನಿರ್ಮಿಸಿ ಅದಕೊಡೆಯನೆನಿಸಿಸಾರಭಕುತರ ಇಷ್ಟಪೂರೈಸಿ ಮಹಲೀಲೆ ನಡೆಸಿಪರಮಕಂಟಕರನ್ನು ನಾಶಿಸಿ ಧರೆಭಾರಮಿಳಿಸಿಪರಮಸುರಗಣಕ್ಹರುಷವಿತ್ತು ಧಾರುಣಿಯನು ಪರಿಶುದ್ಧಮಾಡಿಕರುಣದಾಳುವಿ ಭುವನತ್ರಯವನು ಶರಣಜನಪ್ರಿಯವರದ ಶ್ರೀರಾಮ 3
--------------
ರಾಮದಾಸರು
ಭಜಿಸುವೆ ಗಜಮುಖ ಸುಜನರಪಾಲನಿಜಮತಿ ಕರುಣಿಸು ನೀ ಪತ್ರಿಜಗದಿ ವಂದಿತ ನಿಜಪದದಾತನಿಜಮತಿದಾಯಕ ದ್ವಿಜಸುರ ಸೇವಿತ ಅ.ಪವಿಘ್ನಮೂರುತಿ ಎನ್ವಿಘ್ನಗಳನು ಕಡಿದಜ್ಞಾನ ದೂರಮಾಡೋಸುಜ್ಞಾನ ಪಾಲಿಸಿ ಶೀಘ್ರದಿ ಎನ್ನನುಪ್ರಾಜÕರೊಳಾಡಿಸು ಪ್ರೌಢಗಣಪತೆ 1ಇಂದುಎನ್ನ ಮಂದಮತಿತನ ಛಿಂದಿಸೋಸುಂದರಮೂರುತಿಯೆವಂದಿಸಿ ಬೇಡುವೆ ಕುಂದದ ವರಕೊಡುಚಂದ್ರ ಚೂಡಸುತಭಾನುಕೋಟಿತೇಜ2ವಿಮಲಗುಣಗಣ ಹಿಮಗಿರಿಜೆಯ ಕಂದಸುಮನಸರೊಂದಿತನೆಅಮಿತಮಹಿಮ ಶ್ರೀರಾಮ ಕರುಣಾಪಾತ್ರವಿಮಲಮತಿಯ ದಯಪಾಲಿಸಭವ 3
--------------
ರಾಮದಾಸರು