ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಊ) ಲೋಕನೀತಿಯ ಕೃತಿಗಳು ಕೆಟ್ಟಗುಣಗಳು ನರನ ಅಟ್ಟಿಕೆಡಹುತಲಿಹುವು ಭ್ರಷ್ಟನೆನಿಸದೆ ಬಿಡವು ಇವನ ಪ ಸೃಷ್ಟಿಯೊಳಗಿವುಗಳಿಂದೆಷ್ಟುಜನ ಕೆಟ್ಟಿಹರೋ ಕಟ್ಟುತ್ತ ಮುಸಲದಿಂ ಕುಟ್ಟುತಿಹುವೂ ಅ.ಪ ಸರಿಧರೆಯ ಸ್ತ್ರೀಯರಂ ಕಾಯಿಸಲು ನರತಾನು ಹರಿಯಿಂದ ಹತನಾಗಿ ಹೋದಾ ವರವಿಪ್ರನಲಿ ಕ್ರೋಧಮಾಡಿದ ಬಕಾಸುರನ ತರಿದನಲ್ಲವೆ ಭೀಮ ತಾನು 1 ದಾಯವನು ಲೋಭದಿಂ ಕೌರವನು ಪಾಂಡವರಿ ಗೀಯದುದಕವನೇನು ಪಡೆದಾ ರಾಯದಶರಥ ತನ್ನ ಸತಿಸುತರ ಮೋಹವಿರೆ ಆಯುವಿಂ ಗತನಾಗಿ ಹೋದಾ 2 ಜಮದಗ್ನಿಯ ಹೋಮಧೇನುವಂ ಮದದಿಂದೆ ಕಾರ್ತಿವೀರ್ಯಾರ್ಜುನನು ಕೊಳಲು ಅಮಿತಬಲನಾಪರಶುಧಾರಿಯು ತಾನು ಸಮರದೊಳೆ ಸವರುತ್ತ ಅವನ ಕಳೆದ3 ಕೃಷ್ಣನನು ಮತ್ಸರದಿ ಶಿಶುಪಾಲ ಬಯ್ಯಲು ವಿಷ್ಣುಚಕ್ರವು ಕೊಂದಿತವನ ಬಾಣ ತಾನೀರ್ಷೆಯಿಂ ಭವಗವಂತನಿದಿರೇಳೆ ಪ್ರಾಣವುಳಿಯುತ ನಾಲ್ಕು ತೋಳ್ಗಳಾಯ್ತು 4 ವಾಸುದೇವನ ಮೇಲಸೂಯೆಯಿಂ ಪೌಂಡ್ರಕ ವಾಸುದೇವನೊಳು ಅಳಿದ ಕಂಡ್ಯಾ ದೂಷಣೆಯು ಡಂಬಗಳು ನಾಶನವ ಗೈಯುವುವು ಈಶ ಸುಜನರಿಗಾಗಿ ಭಾವಿಸುವ ಜಗದೀ5 ದರ್ಪದಿಂ ದಶಶಿರನು ಮರೆಯುತ್ತಲಿರಲಾಗಿ ಅಪಹಾರಗೈದ ಶ್ರೀರಾಮ ತಲೆಯಾ ರಿಪುಗಳಾ ಮಧು ಕೈಟಭರ ಮಮತೆಯನು ಉಪಮೆಯಲ್ಲಿದು ಮಾಯಿ ಮುರಿದ ನೋಡಾ 6 ನಿರ್ವಿಕಾರನ ನೆನೆದು ಗರ್ವವರ್ಜಿತರಾಗಿ ಸರ್ವವೂ ಹೆಜ್ಜಾಜಿ ಕೇಶವಾ ಯೆಂದು ಪರ್ವತೋದ್ಧರನಲ್ಲಿ ಕರ್ಮಾರ್ಪಣೆಯ ಮಾಡಿ ಒರ್ವನೇ ಜಗದೀಶನೆಂದು ನಮಿಸೀ 7
--------------
ಶಾಮಶರ್ಮರು
ಪಾಲಿಸೆನ್ನನು ಪಾಹಿ ಪಾರ್ವತೀಶ ಈಶ ಕಾಲಕರ್ಮವಿದೂರಪಾಪನಾಶ ಪ ಪರಮ ಪುರುಷ ಪರೇಶ ಪರಮಾತ್ಮ ಪರಿಪೂರ್ಣ ವರ ಪರಂಜ್ಯೋತಿ ರೂಪಾತ್ಮನೇ ಕರಿ ಚರ್ಮಧರ ಭಸ್ಮ ಭೂಷಣ ದಿಗಂಬರನೇ ಶರಣು ಜನಸುರಧೇನು ನಿಸ್ಸಂಗನೇ 1 ಉಮೆಯರಸ ಪಂಚವದನ ನಿರ್ಮಲನೆ ವಿಮಲತರ ಗಂಗಾಜೂಟಧರನೇ ಅಮಿತಬಲ ವೃಷಭವಾಹನನೆ ಶಾಶ್ವತನೆ ಕಮಲ ಪಿತ ಸುತ ಹರನೇ ಶಿವರೂಪನೇ 2 ವರವ್ಯಾಘ್ರ ಚರ್ಮಧರ ಇಂದುಶೇಖರ ಹರನೆ ಕರದಿ ಡಮರುಗಧರನೇ ಶೂಲ ಪಾಣಿ ಮೆರೆವ ನಾಗಾಭರಣ ಗಿರಿಜೆವರ ಯೋಗೀಶ ಮೂರ್ತಿ ಶ್ರೀ ಶಂಭು ಶಂಕರನೆ 3
--------------
ಕವಿ ಪರಮದೇವದಾಸರು
ಶ್ರೀರಾಮ ಜಯರಾಮ ಶ್ರೀರಾಮರಾಮ ಕಾರುಣ್ಯ ನಿಧಿರಾಮ ಕೌಸಲ್ಯ ರಾಮ ಪ ಜಾನಕೀ ಪತಿರಾಮ ಜಯರಘುರಾಮ ಜಾನ್ಹವೀ ಪಿತರಾಮ ಸರ್ವೇಶರಾಮ 1 ಭಯ ನಿವಾರಣರಾಮ ಪಾವನರಾಮ ನಯಗುಣ ಶ್ರೀರಾಮ ನರಹರೇ ರಾಮ 2 ತ್ರಿಜಗ ಮೋಹನ ರಾಮ ದಿವಿಜೇಶರಾಮ ಅಜಭವನುತರಾಮ ಆನಂದರಾಮ 3 ಭುವನ ಪಾಲಕರಾಮ ಭೂಪತೆ ರಾಮ ಸವನ ರಕ್ಷಕರಾಮ ಶತ್ರುಘ್ನ ರಾಮ 4 ಭವ ವಿಮೋಚನ ರಾಮ ಪದ್ಮಾಕ್ಷರಾಮ 5 ವೈದೇಹಿ ಪತಿರಾಮ ವೈಕುಂಠರಾಮ ವೇದಗೋಚರ ರಾಮ ವೆಂಕಟೇಶರಾಮ 6 ಮಂಗಳಾತ್ಮಕರಾಮ ಮಾಧವರಾಮ ಶೃಂಗಾರ ಶೇಖರರಾಮ ಶ್ರೀರಾಮ ರಾಮ7 ದಶರಥಸುತರಾಮ ದನುಜಾರಿರಾಮ ಕುಶಲವ ಪಿತರಾಮ ಕೋದಂಡರಾಮ 8 ಕರುಣಸಾಗರ ರಾಮ ಕಾಕುಸ್ಥರಾಮ ಶರಧಿಶಯನ ರಾಮ ಶಾಶ್ವತರಾಮ9 ಶ್ರೀಕರಾವ್ಹಯರಾಮ ಶ್ರೀಧರರಾಮ ಪಾಕಾರಿಸುತ ರಾಮ ಪರಮೇಶರಾವÀು 10 ಮಧುರ ಭಾಷಣರಾಮ ಮಧುವೈರಿರಾಮ ಮದನಾರಿನುತರಾಮ ಮೌನೀಶರಾಮ 11 ಸತಿ ಶಾಪ ಖಂಡನ ರಾಮ ಪಾತಕ ಹರ ರಾಮ ಪ್ರಖ್ಯಾತ ರಾಮ12 ರಾಮ ಗರ್ವವಿರಾಮ ರಾಮಾಭಿರಾಮ ಸೌಮಿತ್ರಿವರರಾಮ ಸೌಂದರ್ಯರಾಮ 13 ಸುಗ್ರೀವಸಖರಾಮ ಶುಭಕರ ರಾಮ ಅಗ್ರಜಾಧಿಪ ರಾಮ ಅಮಿತಬಲರಾಮ 14 ಅನ್ಯಮಾನಸರಾಮ ರಘುರಾಮ ಇನಕುಲೇಶ್ವರ ರಾಮ ವಿಭುದೇಂದ್ರರಾಮ 15 ಚಾರು ಚರಿತ ರಾಮ ಜಯಜಯ ರಾಮ ಮಾರುತಾತ್ಮಜ ವಂದ್ಯ ಮಾನಿತರಾಮ 16 ವಾಲಿ ಮರ್ದನರಾಮ ವರದಶ್ರೀರಾಮ ಫಾಲಾಕ್ಷ ಸಖರಾಮ ಭದ್ರಶ್ರೀರಾಮ 17 ಸೇತುಬಂಧನ ರಾಮ ಚಿನ್ಮಯರಾಮ ಸೀತಾಪತೆ ರಾಮ ಜಿತದೈತ್ಯ ರಾಮ 18 ನತವಿಭೀಷಣರಾಮ ನಗಧರ ರಾಮ ಚತುರಾಶ್ಯಪಿತ ರಾಮ ಚಂದ್ರಶ್ರೀರಾಮ 19 ಮಾರೀಚ ಮದಭಂಗ ಮಹಾದೇವರಾಮ ವೀರಾಗ್ರಣೀರಾಮ ವಿಶ್ವೇಶರಾಮ 20 ರಾಮರಾಮ ರಾಮರಾಮ ಶ್ರೀರಾಮ ಕಾಮಿತಾರ್ಥಪ್ರದ ಕಲ್ಯಾಣರಾಮ 21 ಅಗಣಿತ ಮಹಿಮ ವಿಲಾಸ ಶ್ರೀರಾಮ ನಿತ್ಯ ಶ್ರೀರಾಮ 22 ಕಂಬುಕಂಧರ ರಾಮ ಘನತರರಾಮ ಕುಂಭಕರ್ಣಾಂತರ ಗೋವಿಂದರಾಮ 23 ಸುಜನ ಹೃತ್ಕಮಲ ಭಾಸುರ ಸೂರ್ಯರಾಮ ನೃಪತಿ ಶ್ರೀರಾಮ 24 ಲೀಲಾ ಮನುಜ ವೇಷ ರಿಪು ಜೈತ್ರರಾಮ ಪ್ರಕಟ ಪರಾಕ್ರಮ ರಾಮರಾಮ ಶ್ರೀರಾಮ 25 ಅಕಲಂಕ ನಿರುಪಮಾನ ಸಹಾಯ ರಾಮ ಭಕ್ತವತ್ಸಲ ದೀನ ಬಂಧು ಶ್ರೀರಾಮ 26 ಮುಕ್ತಿದಾಯಕ ರಾಮ ಪೂಜಿತರಾಮ ದಶಕಂಠ ಮರ್ದನ ತಾರಕನಾಮ 27 ಶಶಿಬಿಂಬ ವದನ ದಾಶರಥಿ ಶ್ರೀರಾಮ ನಾರಾಯಣಾಚ್ಯುತಾನಂತ ಶ್ರೀರಾಮ 28 ವಾರಿಜೋದರ ಶ್ರೀನಿವಾಸ ಶ್ರೀರಾಮ ಹರಧನುರ್ಭಂಗ ದಯಾನಿಧೆ ರಾಮ 29 ಪುರುಷೋತ್ತಮ ಪುರಾಣ ಪುರುಷ ಶ್ರೀರಾಮ ಸರ್ವಲೋಕ ಶರಣ್ಯ ಸೌಭಾಗ್ಯರಾಮ 30 ಶರ್ವರೀಚರ ಹರಕ್ಷ್ಮಾಪತೇರಾಮ ಸರಶಿಜನಾಭ ದಾಶಾರ್ಹ ಶ್ರೀರಾಮ 31 ಶರಣಾಗತ ತ್ರಾಣ ಶರಣು ಶ್ರೀರಾಮ ಮೂರ್ತಿ ಶ್ರೀರಾಮ 32 ಬುಧ ಜನಾಧಾರ ಸರ್ವೋತ್ತಮರಾಮ ವರ ಹೆನ್ನೆಪುರನಿವಾಸ ಶ್ರೀರಾಮ 33 ನರಸಿಂಹ ಭಕ್ತ ಚಿಂತಾಮಣಿ ರಾಮ ಇಷ್ಟದಾಯಕ ಹೆನ್ನೆ ವಿಠಲರಾಮ 34 ಕಷ್ಟ ರಕ್ಷಿಸುಯನ್ನ ಶ್ರೀರಾಮರಾಮ ಕುಜನವನ ಕುಠಾರ ಕೋವಿದ ರಾಮ 35
--------------
ಹೆನ್ನೆರಂಗದಾಸರು