ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಯವು ಏತಕೆ ಬಾರದೌ ದೇವಿ ಭಯವಿಮೋಚನೆ ಭಕ್ತ ಸಂಜೀವಿ ಪ ಚರಣಕಮಲಕ್ಕೆ ಶಿರವ ಬಾಗಿದೆನೆ ಸೆರಗನೊಡ್ಡಿ ಪರಮಭಕ್ತಿಲಿ ಬೇಡಿಕೊಂಡೆನೆ ಕರುಣಭರಿತ ಮೊರೆಯ ಕೇಳ ದಿರು ವಿಜಯವಾಣಿ ಪರಮಕಲ್ಯಾಣಿ ಸರಿಯೆ ನಿನಗಿದು ಶರಣಜನರ ಕರುಣಾಕರಿ ಅಂಬ ಪರತರ ಬಿರುದು ಇದೆಯೇನೆ 1 ಮಾರಮರ್ದನರಸಿ ಗಂಭೀರೆ ಶಾರದಾಂಬೆಯೆ ಮೂರುಲೋಕಂಗಳಿಗೆ ಆ ಧಾರಿ ಪಾರಮಹಿಮೆಯೆ ತೋರು ಕರುಣವ ಬೇಗ ವರಗೌರಿ ಮರೆಯದಿರು ಶೌರಿ ಚಾರು ಚರಿತವ ಪಾಡಿ ಬೇಡುವೆ ಸಾರಮನದಿಷ್ಟ ಪೂರೈಸಿದ ರೌದ್ರಿ 2 ಸ್ವಾಮಿ ರಾಮನನಾಮಮಹಿಮರತಿ ನೀ ಮನವ ಸೋತಿ ಪ್ರೇಮದಿಂದಲಿ ತ್ರಿಜ ಗನ್ಮಾತೆ ವಿಮಲಚರಿತೆ ಪ್ರೇಮಮಂದಿರೆ ಭಕ್ತ ವರದಾತೆ ಅಮರಾದಿವಿನುತೆ ಹೈಮವತಿ ನಿನ್ನ ನಂಬಿ ಭಜಿಸುವೆ ಕ್ಷೇಮಪಾಲಿಸೆನ್ವ್ಯಾಧಿ ಕಳೆದು ನಾಮರೂಪರಹಿತೆ ವಿಮಲೆ ಅಮಿತಮಹಿಮಳೆ ಮಮತೆದೋರೆ 3
--------------
ರಾಮದಾಸರು
ದೋಷನಾಶ ಜಗದೀಶ ಈಶ ಕೈ ಲಾಸವಾಸ ಸದಾನಂದ ಹರ ಜೈಜೈ ಪರಮಾನಂದ ಪ ದಂಡಧರನೆ ಹರ ರುಂಡಮಾಲ ರುದ್ರ ಕೆಂಡನಯನ ಸದಾನಂದ ಹರ ಜೈ ಜೈ ಪರಮಾನಂದ1 ಗೌರಿನಾಥ ಪ್ರಭು ಮಾರಮರ್ದನ ಮೃಡ ವಾರಿಧಿಧರ ಸದಾನಂದ ಹರ ಜೈ ಜೈ ಪರಮಾನಂದ 2 ಅಗಜಾವಲ್ಲಭ ನಿಗಮವಂದ್ಯ ಭಕ್ತ ರಘನಾಶನ ಸದಾನಂದ ಹರ ಜೈ ಜೈ ಪರಮಾನಂದ 3 ಗಜಚರ್ಮಾಂಬರ ಸುಜನರ ಪರಿಪಾಲ ತ್ರಿಜಗಪೂಜ್ಯ ಸದಾನಂದ ಹರ ಜೈ ಜೈ ಪರಮಾನಂದ 4 ತ್ರಿಪುರಸಂಹರ ನುತ ಸುಫಲದಾಯಕ ಮಹ ಕೃಪಾಕರ ಶಿವ ಸದಾನಂದ ಹರ ಜೈ ಜೈ ಪರಮಾನಂದ 5 ನೀಲಕಂಠ ಭವಮಾಲನಿವಾರ ತ್ರಿ ಶೂಲಧಾರಿ ಸದಾನಂದ ಹರ ಜೈ ಜೈ ಪರಮಾನಂದ 6 ಚಂದ್ರಚೂಡ ಶರಣೇಂದ್ರ ಮೃಕಂಡುಮುನಿ ಕಂದಗೊಲಿದ ಸದಾನಂದ ಹರ ಜೈ ಜೈ ಪರಮಾನಂದ 7 ಫಾಲನಯನ ಸುಖದಾಲಯ ನುತಜನ ಮೇಲುಮಂದಿರ ಸದಾನಂದ ಹರ ಜೈ ಜೈ ಪರಮಾನಂದ 8 ಭವ ಭೂತಿಖ್ಯಾತ ಜಗ ದಾತ ಸದಾನಂದ ಹರ ಜೈಜೈ ಪರಮಾನಂದ 9 ನಾದತೀತ ಅಮರಾದಿವಿನುತ ಮಹ ದಾದಿದೇವ ಸದಾನಂದ ಹರ ಜೈ ಜೈ ಪರಮಾನಂದ 10 ನತಜನ ಸುಖದಾಶ್ರಿತ ಹಿತಮತಿ ದೇ ನುತಿಪೆ ಸತತ ಸದಾನಂದ ಹರ ಜೈಜೈ ಪರಮಾನಂದ 11 ಭಾಗವತರ ಪ್ರಿಯ ಭಗವತ್ಶಿಖಾಮಣಿ ನಾಗಭೂಷ ಸದಾನಂದ ಹರ ಜೈ ಜೈ ಪರಮಾನಂದ 12 ಖೊಟ್ಟಿಲೋಹ ಸುಟ್ಟು ಕಿಟ್ಟತೆಗೆವಂತೆನ್ನ ಭ್ರಷ್ಟತ್ವಕಳಿ ಸದಾನಂದ ಹರ ಜೈ ಜೈ ಪರಮಾನಂದ 13 ಹರಣಪೋದರು ಹರಿಚರಣಸ್ಮರಣೆಬಿಡ ದ್ವರವ ಪಾಲಿಸು ಸದಾನಂದ ಹರ ಜೈ ಜೈ ಪರಮಾನಂದ 14 ಲಿಂಗಪುರೇಶ ಶಿವಲಿಂಗರೂಪ ಭವ ಭಂಗಸಂಗ ಸದಾನಂದ ಹರ ಜೈ ಜೈ ಪರಮಾನಂದ 15 ಮಂದರಧರನಡಿ ಚಂದದೊಲಿಸಿ ಎನಗಾ ನಂದಕೊಡು ಸದಾನಂದ ಹರ ಜೈ ಜೈ ಪರಮಾನಂದ 16 ಮಂಗಳಮೂರುತಿ ತುಂಗವಿಕ್ರಮ ಶ್ರೀ ರಂಗ ರಾಮ ಭಕ್ತಾನಂದ ಹರ ಜೈ ಜೈ ಪರಮಾನಂದ 17
--------------
ರಾಮದಾಸರು
ಗಣೇಶ ಸ್ತುತಿ1ಗಜಮುಖ ಸಲಹೆನ್ನ ದಯದಿ ಪಗಜಮುಖ ಸಲಹೆನ್ನತ್ರಿಜಗದಿ ಪೂಜ್ಯನೆ ನಿಜಮತಿ ಪಾಲಿಸಿ ಅ.ಪವಿಘ್ನನಾಯಕ ಎನ್ನ ಅಜ್ಞಾನ ಖಂಡ್ರಿಸಿವಿಘ್ನವ ತಾರದೆ ಸುಜ್ಞಾನ ಕರುಣಿಸು 1ಅಮರಾದಿವಿನುತಹಿಮಸುತೆಸಂಜಾತವಿಮಲಸುಚರಿತನೆ ಸುಮನಸಪ್ರೀತ 2ವರದ ಶ್ರೀರಾಮನ ಚರಣಸ್ಮರಣೆಯೆನ್ನಹೃದಯದಿ ಸ್ಥಿರಗೈ ಕರಿಮುಖ ಸ್ಮರಿಸುವೆ 3
--------------
ಶ್ರೀರಾಮದಾಸರ ಕಥನಾತ್ಮಕ ಕೃತಿಗಳು