ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಅಂ) ಪಾರ್ವತೀದೇವಿ ಉಮಾ ಕಾತ್ಯಾಯನೀ ಗೌರಿ ದಾಕ್ಷಾಯಣಿ | ಹಿಮವಂತ ಗಿರಿಯ ಕುಮಾರಿ ಪ ನಿತ್ಯ | ಅಮರವಂದಿತೆ ಗಜಗಮನೆ ಭವಾನಿ ಅ. ಪ. ಪನ್ನಗಧರನ ರಾಣಿ ಪರಮಪಾವನಿ | ಪುಣ್ಯಫಲ ಪ್ರದಾಯಿನಿ || ಪನ್ನಗವೇಣಿ ಶರ್ವಾಣಿ ಕೋಕಿಲವಾಣಿ | ಉನ್ನತ ಗುಣಗಣ ಶ್ರೇಣಿ | ಎನ್ನ ಮನದ ಅಭಿಮಾನ ದೇವತೆಯೆ | ಸ್ವರ್ಣಗಿರಿ ಸಂಪನ್ನೆ ಭಾಗ್ಯ ನಿಧಿ || ನಿನ್ನ ಮಹಿಮೆಯನು ಬಿನ್ನಾಣದಲಿ ನಾ | ಬಣ್ಣಿಸಲಳವೆ ಪ್ರಸನ್ನ ವದನಳೆ 1 ಮುತ್ತಿನ ಪದಕ ಹಾರ ಮೋಹನ ಸರ | ಉತ್ತಮಾಂಗದಲಂಕಾರ || ಜೊತ್ಯಾಗಿ ಇಟ್ಟ ಪಂಜರದೋಲೆ ವಯ್ಯಾರ | ರತ್ನಕಂಕಣದುಂಗುರ || ತೆತ್ತೀಸ ಕೋಟಿ ದೇವತೆಗಳ್ ಪೊಗಳುತ | ಸತ್ತಿಗೆ ಚಾಮರವೆತ್ತಿ ಪಿಡಿಯುತಿರೆ || ಸುತ್ತಲು ಆಡುವ ನರ್ತನ ಸಂದಣಿ | ಎತ್ತ ನೋಡಿದರತ್ತ ಕಥ್ಥೈ ವಾದ್ಯ2 ಕಂಚುಕ ತಿಲಕ | ನಾಸಿಕ || ಕಳಿತ ಮಲ್ಲಿಗೆ ಗಂಧಿಕ ಮುಡಿದ ಸೂಸುಕ | ಸಲೆ ಭುಜ ಕೀರ್ತಿಪಾಠಿಕ || ಇಳೆಯೊಳು ಮಧುರಾ ಪೊಳಲೊಳು ವಾಸಳೆ | ಅಳಿಗಿರಿ ವಿಜಯವಿಠ್ಠಲ ಕೊಂಡಾಡುವ || ಸುಲಭ ಜನರಿಗೆಲ್ಲ ಒಲಿದು ಮತಿಯನೀವ | ಗಳಿಕರ ಶೋಭಿತೆ ಪರಮಮಂಗಳ ಹೇ 3
--------------
ವಿಜಯದಾಸ
ಆಂಜನೇಯನೆ ಅಮರವಂದಿತ ಕಂಜನಾಭನÀ ದೂತನೆ ಪ. ಮಂಜಿನೋಲಗದಂತೆ ಶರಧಿಯ ದಾಂಟಿದ ಮಹಾಧೀರನೆಅ.ಪ. ಆಂಜನೇಯನೆ ನಿನ್ನಗುಣಪರಾಕ್ರಮ ಪೊಗಳಲಳವೆ ಪ್ರಖ್ಯಾತನೆಸಂಜೀವನವ ತಂದು ಕಪಿಗಳ ನಂಜು ಕಳೆದ ಪ್ರಖ್ಯಾತನೆ 1 ಕಾಮನಿಗ್ರಹನೆನಿಸಿ ಸುರರಭಿಮಾನಿ ದೇವತೆಯೆನಿಸಿದೆರಾಮಪಾದಕ್ಕೆರಗಿ ನಡೆದು ನಿಸ್ಸೀಮ ನೀನೆಂದೆನಿಸಿದೆ 2 ಸಿಂಧು ಹಾರಿದೆ ಶೀಘ್ರದಿಂದಲಿ ಬಂದು ಸೀತೆಗೆ ನಮಿಸಿದೆತಂದು ಮುದ್ರೆಯನಿತ್ತು ಮಾತೆಯ ಮನವ ಸಂತೊಷಪಡಿಸಿದೆ 3 ಜನಕತನುಜೆಯ ಮನವ ಹರುಷಿಸಿ ವನವ ಕಿತ್ತೀಡಾಡಿದೆದನುಜರನ್ನು ಸದೆದು ಲಂಕೆಯ ಅನಲಗಾಹುತಿ ಮಾಡಿದೆ 4 ಶ್ರೀರಾಮಕಾರ್ಯವ ವಹಿಸಿ ಅಕ್ಷಕುಮಾರನನು ಸಂಹರಿಸಿದೆಘೋರ ರಕ್ಕಸರೆಂಬುವರನು ಮಾರಿವಶವನು ಗೈಸಿದೆ 5 ಭರದಿ ಬಂದು ಶ್ರೀರಾಮಪಾದಕ್ಕೆರಗಿ ಬಿನ್ನಹ ಮಾಡಿದೆಉರಗಗಿರಿ ಹಯವದನನ ಪರಮಭಕ್ತನೆಂದೆನಿಸಿದೆ6
--------------
ವಾದಿರಾಜ
ನಿಗಮ ಸನ್ನುತ ಪ ವೀತ ಶೋಕ ಭಯ ವಿದೂರ ಮದನ ಜನಕ ಅ.ಪ. ಆದಿಮಧ್ಯಾಂತರಹಿತ - ವೇದ ಪೀಠನ ಜನಕನೀತ ಅಚ್ಯುತ ಅಪ್ರಮೇಯ ಅಮರವಂದಿತ 1 ನಿತ್ಯತೃಪ್ತ ನಿಖಿಲವ್ಯಾಪ್ತ ಸತ್ಯಸಂಕಲ್ಪ ಸ್ವರತ ಹಸ್ತಿವರದನಾದಪರ ವಸ್ತುವೆನಿಸಿದ ಖ್ಯಾತ 2 ಸೃಷ್ಟಿಸ್ಥಿತಿಲಯಾದಿಕರ್ತ, ದುಷ್ಟದಮನ ಗೈಯುತಲೀತ ಕೃಷ್ಣರೂಪದಿಂದಲೆಸೆವ ಶ್ರೇಷ್ಠದೈವ ಶ್ರೀ ಕರಿಗಿರೀಶ 3
--------------
ವರಾವಾಣಿರಾಮರಾಯದಾಸರು
ಯೇಕೋದೇವ ಶ್ರೀ ವೆಂಕಟನಾಯಕ ಯಾದವ ಕುಲ ತಿಲಕ ಸುಜನ ಮಂದಾರ ಅನೇಕದಿವ್ಯರೂಪ ಪ. ವನರುಹದಳಲೋಚನ ಮುನಿಸುತ ವೈಕುಂಠ ನಿವಾಸ ಕನಕಕೌಸ್ತುಭಮಣಿ ಭೂಷಾ ಕಂಬುಗದಾಬ್ಜದಳ ದಿನಕರ ಕೋಟಿ ಪ್ರಕಾಶ ದಯಾಂಬುಧಿ ದೀನಜನೋದ್ದಾರ ಬಿಡಿಸೊ ನೀ ಎನ್ನ 1 ರಮಣಿಯ ಪಂಕಜದಳನೇತ್ರಿಯ ವಿಮಲ ಕುಚಾಗ್ರದಿ ಸತಿಯನು ಹಿಂಸಿಸಿ ಅಮರವಂದಿತ ಶ್ರಿತಜನ ರಕ್ಷಕ ಸಮರವಿಕ್ರಮ ಸಕಲಾಗಮಸುತ್ತ್ಯಾ ಸಾಮಗಾನ ಲೋಲ 2 ಸನ್ನುತ ಶಾಶ್ವತ ಗುಣಭಾಸ ಪರಮ ಪುರುಷಹರಿವಾಕ್ಕುಠಾರ ಪುರಾಣ ಪುರುಷದೇವ ದುರಿತಭಂಜನ ದಶರಥ ಸುಕುಮಾರ ಧಾರುಣಿಧರರಾಮ ಕರಿದೇಹ ವಿಮೋಚನ ಹೆಳವನಕಟ್ಟೆ ವೆಂಕಟರಮಣ 3
--------------
ಹೆಳವನಕಟ್ಟೆ ಗಿರಿಯಮ್ಮ
ಶರಣು ಶರಣು ಶ್ರೀ ರಾಮಚಂದ್ರನೆ ಶರಣು ಸುರಮುನಿ ವಂದ್ಯನೆ ಪ. ಶರಣು ಶ್ರೀ ರಘುಕುಲಾಬ್ಧಿಚಂದ್ರನೆ ಶರಣು ಸದ್ಗುಣ ಸಾಂದ್ರನೆ ಅ.ಪ ಕಮಲನಾಭನೆ ಕಮಲನೇತ್ರನೆ ಅಮರವಂದಿತ ವಿಮಲಚರಿತನೆ ಕುಮುದಸಖಸಮಾನ್ಯನೆ 1 ಅಂಬುಜಾಸನ ಶಂಭುವಂದಿತ ಶಂಬರಾರಿಯ ಜನಕನೆ ಕಂಬುಕಂದರ ನಂಬಿ ಭಜಿಸುವೆ ಬೆಂಬಿಡದಲೆ ಪಾಲಿಸೈ 2 ಪಕ್ಷಿವಾಹನ ರಕ್ಕಸಾಂತಕ ಲಕ್ಷ್ಮೀರಮಣ ಶುಭಲಕ್ಷಣ ಲಕ್ಷ್ಮಣಾಗ್ರಜ ಸತ್ಯವಿಕ್ರಮ ರಕ್ಷಿಸೈ ಪುರುಷೋತ್ತಮ 3 ಪರಮಪಾವನ ಶೇಷಗಿರಿಯೊಳು ನಿರುತ ನೆಲೆಸಿಹ ಶ್ರೀಶಗೆ ಶರಣ ಜನರ ಸಚ್ಚರಿತೆಯೋದುವ ವರವ ಪಾಲಿಸು ದೇವನೇ 4
--------------
ನಂಜನಗೂಡು ತಿರುಮಲಾಂಬಾ