ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಂಪಾಪುರಾಧಿಪ ಶ್ರೀ ವಿರೂಪಾಕ್ಷ ನೀ ಪಾಲಿಪುದೆಮ್ಮನು ಪ ಶ್ವೇತ ಭಾಪುರೆ ಸುರಕುಲ ದೀಪ ಸದಾಶಿವ ಪಾದ ಸಮೀಪದ ಸೇವಕ ಅ.ಪ. ಹರಿಪಾದೋದಕ ಶಿರದಲಿ ಧರಿಸಿದ ಹರಿಕಥಾಮೃತ ಮಳೆಗರೆವೆ ನೀ ಕರುಣಿ ಸಂಕರುಷಣನ ಚರಣಾಬ್ಜ ಧೂಳಿ ಶ- ರೀರ ಲೇಪನದಿಂದ ವರ ತೇಜಯುತನೆ ಮುರಹರಗೆರಗದ ನರನಿಗೆ ನರಕವು ಸ್ಥಿರವೆಂದು ಸುರವರ ಭೇರಿ ಭೋರಿಡುತಿರೆ ನಿರುತ ಅವನ ಪದ ಮೆರೆಯದೆ ಮನಗೊಂಡೆ ಶರಣು ಅಮರನುತ ಗುರು ಶಿರೋಮಣಿಯೆ1 ದೇಶಕ್ಕೆ ದಕ್ಷಿಣ ಕಾಳಿಯೆನಿಸುವ ವಿ- ಶೇಷ ಸ್ಥಳದೊಳು ವಾಸವಾಗಿ ಅ- ದೋಷನಾಶನ ಸಂತೋಷದಿ ಗಿರಿಜೆಗೆ ಶ್ರೀಶನ ಮಂತ್ರೋಪದೇಶವ ಮಾಡಿದೆ ದಾಶರಥಿಯ ನಿಜದಾಸರೆನಿಸುವರ ಪೋಷಿಪೆ ಶಿವ ಪರಮೇಶ ಕೃಪಾಳೊ 2 ಕಂದುಗೊರಳ ಜೀಯ ಸಿಂಧೂರ ಮೊಗನಯ್ಯ ಕಂದರ್ಪಹರ ಭಕ್ತಬಾಂಧವ ಕಾಯೊ ಇಂದಿರೆರಮಣ ಗೋವಿಂದನ ಪಾದಾರ- ವಿಂದ ಭೃಂಗನೆ ಭವದಿಂದ ಕಡೆಗೆ ಮಾಡೊ ನಂದಿವಾಹನ ಎನ್ನ ಹಿಂದಣ ಕಲುಷಿತ ವೃಂದಗಳೋಡಿಸುವ ಇಂದುಧರ ಅರ- ಸಿರಿ ವಿಜಯವಿಠ್ಠಲನಕುಂದದೆ ಭಜಿಪ ಆನಂದವ ಕರುಣಿಸು 3
--------------
ವಿಜಯದಾಸ