ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

* ನೋಡಬಲ್ಲಿರೆ ದಿವ್ಯ ಉಡುಪಿ ಕ್ಷೇತ್ರ ಸತ್ಪಾತ್ರ ಪ. ಶ್ರೇಷ್ಠ ಸದ್ಗುರು ಚರಣ ಕಮಲಗಳಿಗಭಿನಮಿಸಿ ಅಷ್ಟು ದೇವತೆಗಳಿಗೆ ಅಭಿವಂದಿಸಿ ಮುಟ್ಟಿ ಹಿರಿಯರ ಚರಣ ಮಹದಾಜ್ಞೆ ಸ್ವೀಕರಿಸಿ ಪಟ್ಟ ಬ್ರಹ್ಮನ ಪದಕೆ ಸಿರಿಹರಿಗೆ ಎರಗಿ 1 ಎಷ್ಟು ಜನ್ಮದ ಫಲವೊ ಈ ಯಾತ್ರೆ ಕೈಕೊಳಲು ಶ್ರೇಷ್ಠ ಶ್ರೀ ಮಧ್ವಮುನಿ ಮತದಿ ಜನಿಸಿ ದಿಟ್ಟ ವೈಷ್ಣವರಾದ ಭಕ್ತಸಂಗವ ಕೂಡಿ ಬಿಟ್ಟು ಮನ ಕಲ್ಮಷಗಳೆಲ್ಲ ಮುಂದೋಡಿ2 ಭರತಖಂಡದಿ ಪುಟ್ಟಿ ವಾಯುಮತ ಪೊಂದಿದಕೆ ಹರುಷದಲಿ ಈ ಯಾತ್ರೆ ಗೈದಲ್ಲದೆ ಹರಿದು ಪೋಗದು ಜೀವದಜ್ಞಾನದಂಧತೆಯು ಪರಮ ಸುಜ್ಞಾನದಾತನ ನೋಡಬನ್ನಿ 3 ಮಧ್ವರಾಯರ ಕರುಣ ಮುದ್ದು ಕೃಷ್ಣನ ಕತೆಯು ಸದ್ವೈಷ್ಣವರ ಸಂಗ ಸನ್ಮೋದ ಲಾಭ ಹೃದ್ವನಜದಲಿಪ್ಪ ಹರಿಯ ಕಾಣಲು ಮಾರ್ಗ ಗೆದ್ದು ಭವದಬ್ಧಿ ದಾಟುವಿರಿ ನೀವಿನ್ನು 4 ಶ್ರೀ ಪತಿಯು ಬಾಲರೂಪದಿ ಇಲ್ಲಿ ನೆಲಸಿಹನು ಗೋಪಿಕಾಜನಪ್ರಿಯ ಗೋಪಿಬಾಲ ಗೋಪಾಲಕೃಷ್ಣವಿಠ್ಠಲನ ನೋಡುವ ಪುಣ್ಯ ಈ ಪರಮ ಪುರುಷನೇ ತಂದಿತ್ತನೆಂದೂ 5
--------------
ಅಂಬಾಬಾಯಿ
ಇಂದು ನಿನ್ನಯ ಪಾದಾ ವಂದಿಸುವೆ ನಾನು ಛಂದದಿಂದಾ ಪ. ಮಂದಾರೊದ್ಧರನ ಪಾದಾ ಸೇವಕರೆಂದೆನಿಸಿದಿ ದುರ್ಮಾಯವಾದಿಗಳನು ಜಯಸಿದಿ ಬ್ರಹ್ಮರಾಯನೆಂದೆನಿಸೀದಿ ಅ.ಪ. ಅಂಜನಿಸುತನೆಂದೆನಿಸಿದೆ ಸಂಜೀವನವ ತಂದಿ ಕಂಜಾಕ್ಷಿಮುಖಿಗೆ ಉಂಗುರವನ್ನಿತ್ತಿ ವನವ ಕಿತ್ತಿ ಸಂಜೀವರಾಯನೆ ದುರುಳ ರಾವಣನ ಸಂಹರಿಸಿದಿ ವಿಭೀಷಣನಿಗೆ ರಾಜ್ಯಭಾರದಲ್ಲಿ ನಿಲ್ಲಿಸಿದಿ ಅಯೋಧ್ಯನಗರಿಗೆ ತೆರಳಿದಿ 1 ಕುಂತಿಯಾ ಕಂದಾ ಕೌರವಾದಿಗಳ ಕೊಂದ ಯುದ್ಧದಲ್ಲಿ ಪ್ರಚಂಡಾ ಭಾರತಿಗೆ ಗಂಡಾ ಲಂಡದುಷ್ಯಾಸನನ ತುಂಡು ತುಂಡುಮಾಡಿ ಸೀಳಿದ ವಿರಾಟ ನಗರದಿ ಸಂಚರಿಸಿದಾ ಕೀಚಕಾದಿಗಳ ಸಂಹರಿಸಿದಾ ಪಾಂಚಾಲಿಗೆ ಸೌಗಂಧೀಕುಸುಮವನೆ ತಂದಾ ಆನಂದಾ 2 ಮಧ್ಯಗೇಹನಲ್ಲಿ ಉದ್ಭವಿಸಿದೆಯೋ ನೀ ಇಲ್ಲಿ ಅದ್ವೈತ ಮತವೆಲ್ಲಾ ಕಾಲಿಲೆ ವದ್ಯೋ ಗೆದ್ಯೋ ಮಧ್ವಮತವೆಲ್ಲ ಉದ್ಧಾರ ಮಾಡಿದಾ ಬದರಿಕಾಶ್ರಮಕೆ ಪುನರಪಿ ಪೋದಾ ವ್ಯಾಸಮುನಿ ಪಾದಕೆ ಅಭಿವಂದಿಸಿದಾ ಉಡುಪಿಯೊಳು ಕಾಳಿಮರ್ಧನಕೃಷ್ಣನು ನಿಲ್ಲಿಸಿದಾ 3
--------------
ಕಳಸದ ಸುಂದರಮ್ಮ
ಸಮೀರಜ ಹನುಮ ಎನ್ನ ಪ್ರಾಣಾಪದಕಾ ಪ ಶಿರಿಚರಣದಲಿ ಮಸ್ತಕವನಿಟ್ಟ ಹೊಂತಕಾರಿ ಸುರಪನಂದನನ ಕೊಲ್ಲಿಸಿದ ನಿರುತ ಉದಾರಿ ಪರಮ ನಿನ್ನಂಘ್ರಿಯವಾರಿ ಸತತ ಶಿರದಲಿ ಧರಿಸುವೆನು ರಿಪುನಿಕರ ಮಾರೀ1 ಉಂಗುರುವ ಕೊಂಡು ಸರ್ರನೆ ಸಾಗರ ಹಾರಿ ತುಂಗ ಮಹಿಮಳಿಗೆ ವಂದಿಸಿ ಗುರುತನೆ ತೋರಿ ಸಂಗಡಲೆ ಯಿತ್ತು ನಂದನ ಕಿತ್ತೆ ಬಲು ಮೀರಿ ಸಂಗರಕೆ ಬಂದ ವಿಕಾರಿಗಳ ನೋಡಿ ಭಂಗಬಡಿಸಿದೆ ಅವರ ಬಲವೆಲ್ಲ ತೂರಿ 2 ನಭಚರರು ಕೊಂಡಾಡೆ ಪುರವೆಲ್ಲ ದಹಿಸಿದೆ ಅಭಿವಂದಿಸಿ ಕುರುಹವರಿಯನ ಮುಂದುವರಿಸಿದೆ ಅಬುಧಿಯನು ವೇಗ ಬಂಧಿಸಿದೆ ಪರ್ವತವ ರಭಸ ಮಿಗೆ ತಂದು ಕಪಿಬಲವನೆಬ್ಬಿಸದೆ 3 ದಾತನಿಗೆ ರಥವಾಗಿ ಚಲ್ಲಿರಿದು ಬೊಬ್ಬಿರಿದೆ ಭೂತಳಕೆ ನೆಗ್ಗೊತ್ತಿ ಎದುರಾದವರ ತರಿದೆ ನೀ ತಡೆಯದೆ ಪೋಗಿ ಮೈರಾವಣನ ಮುರಿದೆ ಕೋತಿಗಳೊಳಗೆ ನೀ ಮೆರೆದೆ ವೇದ ವಿಖ್ಯಾತನೆ ರಾಮ ಸಹಭೋಜದಲಿ ನೆರೆದೆ 4 ಬಲವನು ಬೆಳಿಸಿ ವಾರಿಧಿಯ ಆಚೆಗೆ ಬಲವ ಆಲಸÀಗೈಸದಲೆ ದಾಟಿಸಿದೆ ಬಲು ಛಲವಾ ವಾಲಯದಲಿ ಮಾಡಿ ವೈರಿದಳವನು ಗೆಲುವಾ ಕಾಳಗದೊಳು ನಿನ್ನ ಬಲವ ಕೊಂಡಾಡಿದವರು ಮೂಲೋಕದೊಳಗೆ ಸವಿಯದು ಬಲು ಚೆಲುವಾ 5 ಶತಮೌಳಿಯನು ಕೊಲಿಸಿ ಸತ್ಕೀರ್ತಿಯನು ಪಡೆದೆ ಪ್ರತಿಕಕ್ಷಿ ನಿನಗಿಲ್ಲವೆಂದು ಸತ್ಯವ ನುಡಿದೆ ಸತತದಲಿ ಕಾಪಾಡು ಎನುತ ಪಾದವ ಪಿಡಿದೆ ಮತಿಯಲಿಡು ಎಂದು ಬೇಡಿದೆ ಅಭಯವ ಚತುರ ಫಲದಾಯಕನೆ ದಯಮಾಡು ಬಿಡದೆ 6 ಕಿಂಪುರುಷ ಖಂಡದಲಿ ನಿಜಮೂರುತಿಯ ಧ್ಯಾನ ಇಂಪಾಗಿ ಮಾಡುವ ಅಂಜನೆಯನಂದನಾ ಲಂಪಟವೆ ಸಾಕು ನಿನ್ನಯ ಸುರದ್ರುಮ ಚರಣ ಸಂಪಿನಲಿ ಪೊಂದಿಸನುದಿನ ಎನ್ನ ಗುರುಸಂಪತ್ತು ವಿಜಯವಿಠ್ಠಲನಲ್ಲಿ ಪ್ರಾಣಾ7
--------------
ವಿಜಯದಾಸ