ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ(ಪಾ)ವನಾ ಗುರು ಪವಮಾನ ಪ ಪಾವನ ಗುರು ಪವಮಾನ ದೇವ ಅವಾವಕಾಲದಿ ಸಲಹುವ ಕರುಣಿ ಕೃಪಾ ವಲೋಕನದಿಂದ ಕಾವುದೆಮ್ಮನು ಗುರುಅ.ಪ ಪರಮ ಮಹಿಮ ಶ್ರೀ ಮುಕುಂದಾ ನಿಂದ ಕರುಣಾದಿಂದ ಜನಿಸಿಬಂದ ಬಂದು ಸರ್ವಜೀವರೊಳಾನಂದದಿಂದ ಕರಣದೊಳು ನಿಂತಚಂದಾ ||ಆಹ|| ನಿರುತದಿ ಹರಿಪ್ರೇರಣೆಯಿಂದ ಕಾರ್ಯವ ಪರಿಪರಿಮಾಡಿ ಶ್ರೀಹರಿಗರ್ಪಿಸುವ ದೇವ 1 ತರುಚ್ಛಾಯೆಯಂತೆ ಶ್ರೀ ಹರಿಗೆ ನೀನೆ ಪರಮ ಪ್ರತಿಬಿಂಬನಾಗೆ ಸರ್ವ ಚರಾಚರಾದಿಗಳೊಳಗೆ ಅದರ ದರಯೋಗ್ಯತೆಗನುವಾಗೇ ಆಹ ನಿರುತಕಾರ್ಯವ ಮಾಳ್ವೆ ಅಣುಮಹದ್ರೂಪನೆ ಪರಿಪರಿ ಪ್ರಾಣಾದಿಗಳ ಕಾರ್ಯ ನಿನ್ನಿಂದ2 ಚಕ್ರವರ್ತಿ ಆಜ್ಞೆಯಂತೇ ಪುರದ- ಧಿಕಾರಿನಿಯಮದಂತೇ ಅದಕ- ಧಿಕೃತರಿರುವರಂತೇ ಅಂತೆ ತ- ತ್ವ ಕಾರ್ಯವು ನಿನ್ನಿಚ್ಛೆಯಂತೇ ||ಆಹ|| ಮಿಕ್ಕಾದ ತತ್ವರಿಗೆ ತಕ್ಕ ಕಾರ್ಯವನಿತ್ತು ನಿ- ಯುಕ್ತರ ಮಾಡುವೆ ಹರಿಉಕ್ತಿಯ ಮೀರದೆ 3 ಇಭರಾಜವರದನ ಪ್ರೀಯ ನೀನೆ ಪ್ರಭುವಾಗಿರುವೆ ಸರ್ವಕಾಯದೊಳು ಶುಭಾಶುಭಂಗಳ ಕಾರ್ಯ ನಿತ್ಯ ನಿಬಿಡ ನಿನ್ನಿಂದಲೆ ಜೀಯಾ ||ಆಹ|| ಅಬುಜಾಂಡದೊಳಗೆಲ್ಲ ಪ್ರಬಲ ನಿನ್ನಯ ಶೌಂiÀರ್i ಅಬುಜಭವನ ಪದಪಡೆವ ಪ್ರಭುವೆ ನೀನು4 ಪ್ರಾಣಾದೇವ ನಿನ್ನಿಂದ ಪಂಚ- ಪ್ರಾಣಾದಿರೂಪಗಳಿಂದ ತನು ಸ್ಥಾನದಿಭೇದಗಳಿಂದ ಜಡ ಪ್ರಾಣಭೂತ ಪಂಚದಿಂದಾ ||ಆಹ|| ಕಾಣಿಸಿಕೊಳ್ಳದೆ ಜಾಣತನದಿ ಪುಣ್ಯ ಪಾಪ ಜೀವಗೆ ಉಣಿಸುತಲಿರುವೆಯೊ5 ಪಾಯೂಪಸ್ಥದಿ ಅಪಾನ ಮುಖ ನಾಸಿಕ ಶ್ರೋತ್ರ ಪ್ರಾಣಾ-ನಾಭಿ ಅಯನವಾಗಿರುವ ಸಮಾನಾ ಇನ್ನು ಪಯಣವು ನಾಡಿಯೊಳು ವ್ಯಾನ ||ಆಹ|| ಒಯ್ದುಕೊಡುವ ಫಲಕಾರ್ಯವೆಲ್ಲ ಉದಾನನಿಂದ ಕೂಡಿ ಜೀಯ ನೀ ನಡೆಸೂವೆ 6 ಸೃಷ್ಟಿಯೊಳು ನೀ ಪ್ರವಿಷ್ಟನಾಗಿ ಸೃಷ್ಟಿಕಾರ್ಯದೊಳು ಚೇಷ್ಟಾ ಮಾಡಿ ಸೃಷ್ಟೀಶನೊಲಿಸಿ ಪ್ರತಿಷ್ಠಾ ತತ್ವ ಶ್ರೇಷ್ಠರೆಲ್ಲರ ಮನೋಭೀಷ್ಠ ||ಆಹ|| ತುಷ್ಟಿಪಡಿಸಿ ಪರಮೇಷ್ಠಿಯಾಗುವೆ ಕಪಿ ಶ್ರೇಷ್ಠನೆ ಉರಗಾದ್ರಿವಾಸವಿಠಲನದೂತ 7
--------------
ಉರಗಾದ್ರಿವಾಸವಿಠಲದಾಸರು
ಸಿರಿ ತಂಬೂರಿ ಪ ನರಹರಿ ನಾಮಸ್ಮರಣೆಯಗೈಯುವ ನರರಿಗೆ ಸಹಕಾರಿ ಅ.ಪ ತಾಪತ್ರಯವನು ಲೋಪಗೈವ ಸುಖರೂಪಿನ ತಂಬೂರಿ ಶ್ರೀಪತಿ ಭಕ್ತಿನಿರೂಪಣದಿಂದಖಿಲಾಪತ್ಪರಿಹಾರಿ 1 ವಾಸುದೇವ ನಿಜದಾಸರು ಪಿಡಿಯುವ ಭಾಸುರ ತಂಬೂರಿ ವಾಸುಕಿಶಯನ ವಿಲಾಸದ ಕೀರ್ತಿ ವಿಕಾಸದ ಜಯಭೇರಿ 2 ಅಂಬುಜಭವನ ಕುಟುಂಬಿನೆಯ ಕರಾಲಂಬನ ತಂಬೂರಿ ತುಂಬುರು ನಾರದರಂಬುರುಹಾಕ್ಷನ ಹಂಬಲಿಗನು ಸಾರಿ3 ಗಂಧರ್ವರ ಕರಪೊಂದಿ ಮೆರೆವ ಬಲು ಸುಂದರ ತಂಬೂರಿ ಸುಂದರಿಯರು ನಲವಿಂದಲಿ ನುಡಿಸುವಾನಂದ ಸುಗುಣಧಾರಿ 4 ಶ್ರುತಿಯುತಮಾಗಲು ಮತಿಯುತರಿಗೆ ಸಮ್ಮತವಹ ತಂಬೂರಿ ಕೃತಿ ಶತವದು ಸಾರಿ5 ಸುಕೃತ ಪರಿಪಾಕದ ತಂಬೂರಿ ಈಕಲಿದೋಷ ನಿರಾಕರಣೆಗೆ ಬಹು ಭೀಕರ ಮುಖದಾರಿ 6 ಧರೆಯೊಳು ಪುಲಿಗಿರಿ ವರದ ವಿಠಲನ ಬಿರಿದಿನ ತಂಬೂರಿ ದುರಿತವೆಂಬ ಮದಕರಿಯನು ಸೀಳುವ ಹರ್ಯಕಾರಿ 7
--------------
ವೆಂಕಟವರದಾರ್ಯರು
ಹರಿ ಕೃಪೆಯಿಂದಲಿ ದೊರೆದಿತು ಯನಗೀ ಶಿರಿಕರ ತಂಬೂರಿಪ ನರಹರಿ ನಾಮ ಸ್ಮರಣೆಯಗೈಯುವಾ ನರಂಗೆ ಸಹಕಾರಿ ಅ.ಪ. ತಾಪತ್ರಯವನು ಲೊಪಗೈವ ಸುಖ ರೂಪಿನ ತಂಬೂರಿ ಶ್ರೀಪತಿ ಭಕ್ತಿನಿರೂಪಣದಿಂದಖಿಲಾಪತ್ಪರಿಹಾರಿ 1 ವಾಸುದೇವ ನಿಜದಾಸರು ಪಿಡಿಯುವ ಭಾಸುರ ತಂಬೂರಿ ವಾಸುಕಿ ಶಯನ ವಿಲಾಸದ ಕೀರ್ತಿವಿಕಾಸದ ಜಯಭೇರಿ 2 ಅಂಬುಜಭವನ ಕುಟುಂಬಿನಿಯ ಕರಾಲಂಬನ ತಂಬೂರಿ ತುಂಬುರನಾರದ ರಂಬುರುಹಾಕ್ಷನ ಹಂಬಲಿಗನುಸಾರಿ 3 ಗಂಧರ್ವರ ಕರಪೊಂದಿ ಮೆರೆವ ಬಲು ಸುಂದರ ತಂಬೂರಿ ಸುಂದರಿಯರ ನಲವಿಂದಲಿನುಡಿಸುವಾನಂದ ಸುಗುಣಧಾರಿ 4 ಶ್ರುತಿಯುತ ಮಾಗಲು ಮತಿಯುತರಿಗೆ ಸಮ್ಮತವಹತಂಬೂರಿ ಶ್ರುತಿಹೀನತೆಯಿಂದ ತಿಶಯಮಾಗದು ಕೃತಿಶತವನುಸಾರಿ 5 ಸುಕೃತ ಪರಿಪಾಕದ ತಂಬೂರಿ ಈ ಕಲಿದೋಷ ನಿರಾಕರಣೆಗೆ ಬಹು ಭೀಕರ ಮುಖಧಾರಿ 6 ಧರೆಯೊಳು ಪುಲಿಗಿರಿ ವರದ ವಿಠಲನ ಬಿರಿದಿನ ತಂಬೂರಿ ದುರಿತವೆಂಬ ಮದಕರಿಯನು ಸೀಳುವ ಹರ್ಯಕಾರಿ 7
--------------
ಸರಗೂರು ವೆಂಕಟವರದಾರ್ಯರು