ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಧ್ಯಾಯ ಹತ್ತು ತಾಕ್ರ್ಷಸ್ಕಂಧ ಸಮಾರೂಢಃ ಶ್ರೀ ಬ್ರಹ್ಮಾದಿಭಿರಾವ್ನತಃ | ಧ್ವನಿ ಪರಿ ಪರಿ ಪ ಗರುಡನೇರಿದ ಶ್ರೀನಿವಾಸನು ರಾಜ ವರ ಹಂಸವನೇರಿದ ಬ್ರಹ್ಮನು ತ್ವರ ನಂದಿಯೇರಿದ ರುದ್ರನು ಅ ವರ ನಡುಮಧ್ಯೆ ನಡೆದ ಶ್ರೀಹರಿ ತಾನು 1 ದೇವಿಯೇರಿದಳಾಗ ರಥದಲಿ ಬಕುಲಾ ದೇವಿ ಯೇರಿದಳೊಂದು ರಥದಲಿ ಕೇವಲ ತಮ್ಮ ತಮ್ಮ ರಥದಲಿ ಉಳಿದ ದೇವಿಯರೇರಿ ಕೊಂಡರು ಅಲ್ಲಿ 2 ಉತ್ತಮ ಮಂಗಳವಾದ್ಯವು ನË ಬತ್ತು ನಗಾರಿಗಳಾದವು ಮತ್ತೆ ಉಳಿದ ಎಲ್ಲ ವಾದ್ಯಗಳು ಬಹು ವತ್ತಿ ಶಬ್ದಮಾಡಿ ನುಡಿದವು 3 ನಡೆದರು ಋಷಿಗಂಧರ್ವರು ಬಹು ಸಡಗರದಿಂದಲ್ಲೆ ಅಪ್ಸರರು ಬಡವ ಬಗ್ಗರು ಉಳಿದ ಮನುಜರು ಬಹು ಗಡಿಬಿಡಿಯಿಂದಲ್ಲೆ ನಡೆದರು 4 ಕುಂಟರು ಕುರುಡರು ಕಲ್ಲು ಕಂಟಕ ಕಾಲಿಲೆ ತುಳಿವವರೂ ಗಂಟು ತಲಿಯಲಿಟ್ಟುನಡಿಯುವರು ತಪ್ಪ ಗಂಟಾಗಿ ಒದರುತಲಿಹರು 5 ಕೆಲವರು ಗಂಡನ ಒದರುವರು ಮತ್ತ ಕೆಲವರು ಮಕ್ಕಳನೊದರುವರು ಕೆಲವರು ಎಡವುತಲಿರುವರು ಮತ್ತು ಕೆಲವರು ಭರದಿಂದ ಬೀಳುವರು 6 ಕೆಲವರೆಳೆದು ಎಬ್ಬಿಸುವರು ಮತ್ತು ಕೆಲವರು ನೋಡುತ ನಗುವವರು ಬಾಲರಳುವ ಧ್ವನಿ ಆಯಿತು ಜಗತ್ ಪಾಲನಸೈನ್ಯ ನಡೆಯಿತು ಮೇಲಾದನಂ ತಾಂದ್ರೀ ಇಳಿಯಿತು ಭೂಪಾಲಪುರದ್ಹಾದಿ ಹಿಡಿಯಿತು7 ವಚನ ಶೈಲವನು ಹಿಡಿದು ಭೂಪಾಲನಪುರತನಕ ಸಾಲ್ಹಿಡಿದು ನಡೆವಂಥ ಕಾಲದಲಿ ಮತ್ತಲ್ಲಿಡುವದಕ್ಕೆ ಎಳ್ಳು ಕಾಳಷ್ಟು ಸ್ಥಳವಿಲ್ಲ ಶ್ರೀಲಲಾಮನು ಮಧ್ಯಸಾಲಿನ ಮಧ್ಯಾಹ್ನ ಕಾಲ ದಲಿ ಶುಕಮುನಿಯ ಆಲಯಕೆ ಬಂದು ಕಾಲಿಗೆರಗಿದನು ಆಕಾಲಕೆ ಮುನಿ ಬಂದು ಹೇಳಿಕೊಂಡೀ ಪರಿಯು ಶೈಲ ಭೋಜನವು ಎನ್ನ ಮೇಲೆ ಕರುಣಿಯಿಂದಾ 1 ಹೀಗೆಂದು ನುಡಿದ ಶುಕಯೋಗಿಯ ವಚನವ ಕೇಳಿ ಬಾಗಿ ತಾ ನಮಿಸುತಲೆ ಆಗ ಶ್ರೀಹರಿ ನುಡಿದ ಯೋಗಿಗಳು ನಾ ಸಂಸಾರಿ ಆಗಿ ಇರವೆ ಇಲ್ಲೆ ಉಂಡರೆ ಮಿತಿಯ ಇಲ್ಲದಲೆ ಪುರದಲ್ಲೆ ಪೋಗುವುದು 2 ಮುನಿ ಮಂಡಲೇಶನು ಕೇಳಿಕೊಂಡು ಹೀಗೆಂದು ಬ್ರಹ್ಮಾಂಡ ಪತಿಯೆ ಒಬ್ಬ ಉಂಡರೆ ಜಗವೆಲ್ಲ ಉಂಡಂತೆ ಆಗುವುದು ಪುಂಡರೀಕಾಕ್ಷಾ ಭಾಳ ಕೇಳುತಲೆ ಮುಂದೆ ಬಾಲಕನ ಮುಖನೊಡಿ ಬಾಲೆ ನುಡಿದಳು ಬಕುಲ ಮಾಲಿಕೆಯು ತಾನು3 ಧ್ವನಿ:ವಸಂತಭೈರವಿ ಆದಿತಾಳ ತರವೆ ಹರಿಯೆ ಈ ಪರಿಯ ಮಾಡುವದುಪ ಸುಖಕರವಾಗಿಹ ಶುಕಮುನಿ ವಚನವು || ಲಕ್ಷಿಸದೆ ಶುಭಕಾರ್ಯಕೆ ಪೋಗುವದೂ 1 ಬಲ್ಲಿದ ಶಕುನವು ಇಲ್ಲೆನಿನಗೆ ತಿಳಿ| ಊಟಕೆ ಒಲ್ಲೆನೆಂಬುವದೂ 2 ಶ್ರೀಶ ಅನಂತಾದ್ರೀಶ ಮಹಾತ್ಮರ|| ಭಾಷೆಯ ಕೇವಲುದಾಸೀನ ಮಾಳ್ಪುದು 3 ವಚನ ಹೆತ್ತಾಯಿ ಪರಿಯಾಗಿ ಹೊತ್ತು ಹೊತ್ತಿಗೆ ತನಗೆ ಅತ್ಯಂತ ಹಿತ ಮಾಡುತಿರ್ದ ಬಕುಲಾವತಿ ಸತ್ಯವಚನ ಹರಿಯು ಮತ್ತು ಶುಕಮುನಿಗೆ ಉತ್ತರವ ಕೇಳಿ ಮುನಿ ಉತ್ತರಣೆಯು ಬೀಜ ಒತ್ತಿಕೈಯಲಿ ಮಾಡಿ ವೃತ್ತಾದ ಗುಳ್ಳ ಫಲದುತ್ತಮೋತ್ತಮಶಾಕ ತಿಂತ್ರಿಣಿಯ ರಸಸಹಿತ ಪಾತ್ರದಲಿ ಬಡಿಸಿ ಸತ್ಪಾತ್ರನಾಗಿರುವ ಸರ್ವೋತ್ತಮಗೆ ಅರ್ಪಿಸಿದ ಭಕ್ತಿಯಿಂದ 1 ತೃಪ್ತನಾದನು ನಿತ್ಯತೃಪ್ತ ಹರಿ ತಾ ಉಂಡು ಮತ್ತೆ ಮುನಿಗಳು ಎದ್ದರತ್ಯಂತ ಕೋಪದಲಿ ಚಿತ್ತಜನ ಪಿತ ಅವರ ಚಿತ್ತವೃತ್ತಿ ಸತ್ಯದಲಿ ಎಲ್ಲರಿಗೂ ತೃಪ್ತಿಯಾಗಲಿ ಎಂದು ತಿಳಿದು ಪೂತ್ಕಾರ ಮಾಡಿದನು ತತ್ಕಾಲದಲ್ಲಿ ಉತ್ತಮಳು ಶ್ರೀರಮಾ ಮತ್ತೆ ಬ್ರಹ್ಮಾದಿಗಳು ಸುತ್ತಸನ ಶುಕ ಸತ್ವ ಶೀಲರು ಉಳಿದ ಸುತ್ತೆಲ್ಲ ಜನರು ಸಂತೃಪ್ತರಾದರು ಹರಿಯ ಫೂತ್ಕಾರದಿಂದ 2 ನಿದ್ರೆಯನು ಮಾಡಿ ಅಲ್ಲಿದ್ದು ಆ ರಾತ್ರಿಯಲಿ ಎದ್ದು ಮರು ಕೂಡಿ ವಾದ್ಯ ವೈಭವ ದಿಂದ, ಸಿದ್ಧಾಗಿ ಬಂದರು ವಿಯದ್ರಾಜನ ಪುರಕೆ ಶುದ್ಧ ಸಂಜೆಯಲಿ ಮುದ್ದು ವೇಂಕಟ ಬಂದ ಸುದ್ದಿಯನು ಕೇಳುತ ವಿಯದ್ರಾಜ ತಾ ಬಹಳ ಉದ್ರೇಕದಿಂದಲೆ ಇದ್ದ ಜನರನು ವೈಭವದಿಂದ ಸಿದ್ಧನಾಗಿ3 ಧ್ವನಿ:ಕಾಂಬೋಧಿ ಆದಿತಾಳ ಆಕಾಲದಲಿ ಕಂಡನು ಹರಿಯಮುಖ ಆಕಾಲದಲಿ ಕಂಡನು ಎಲ್ಲರ ಕೂಡ ಆಕಾಶ ರಾಜನು ತಾನು1 ಹರುಷದಿಂದಲಿ ಉಬ್ಬಿದ ಹರಿಯ ಕಂಡು ಹರುಷದಿಂದಲಿ ಎದರುಗೊಂಡು ವರಪೂಜೆಯನು ಮಾಡಿದ 2 ಅಳಿಯಗಾಭರಣವನು ವಸ್ತ್ರವ ಕೊಟ್ಟು ಅಳಿಯಗಾಭರಣವನು ಉತ್ಸವದಿಂದೆ ಕಳಿಸಿ ಮನೆಗೆ ಪೋದನು3 ಶ್ರೀನಾಥದೇವ ತಾನು ಆ ಕಾಲಕ್ಕೆ ಶ್ರೀನಾಥದೇವ ತಾನು ಕರೆದುತೊಂಡ ಮಾನರಾಜಗೆ ನುಡಿದನು 4 ಹಸಿದು ಬಂದೆವು ನಾವೆಲ್ಲ ಉಣ್ಣದೆ ಬಹಳ ಹಸಿದು ಬಂದೆವು ನಾವೆಲ್ಲ ಬೇಗನೆ ಪಾಕ ಹಸನಾಗಿ ಮಾಡಿಸೆಲ್ಲ5 ಅಕ್ಕರದಲಿ ರಾಜನು ಆನುಡಿ ಕೇಳಿ ಅಕ್ಕರದಲಿ ಮಾಡಿಸಿದನು ರುಕ್ಕೋತದಡಿಗೆಯನು 6 ಮಂಡಿಗೆ ಗುಳ್ಳೋರಿಗೆ ಶಾವಿಗೆ ಮೊದಲು ತೊಂಡಮಾನÀನು ಚಂದಾಗಿ 7 ಹರಿಗೆ ಅರ್ಪಣೆ ಮಾಡಿದ ಎಲ್ಲರ ಕೂಡಿ ಹರಿಯು ಭೋಜನ ಮಾಡಿದ 8 ಆನಂದದಿಂದಿದ್ದನು ಆ ರಾತ್ರಿಯೊಳ್ ಆನಂದದಿಂದಿದ್ದನು ಮಾಡಿದ ನಿದ್ರೆ `ಅನಂತಾದ್ರೀಶ' ತಾನು 9 ವಚನ ಶ್ರೀನಿವಾಸ ಎದ್ದು ತಾನು ಮರುದಿನದಲಿ ಮಾನಿತ ವಶಿಷ್ಠ ಲಕ್ಷ್ಮೀಸಹಿತ ನೀನು ಬ್ರಹ್ಮನು ಮತ್ತೆ ಮಾನಿತಳು ಎನ್ನತಾಯಿ ತಾನು ಐವರು ಅನ್ನಹೀನರಗಿರುವುದು ಖೂನದಲಿ ಕನ್ನಿಕೆಯ ದಾನ ಪರ್ಯಂತ ಮಾನಿತನು ಆರಾಜಮಾನಿನಿಯು ಮತ್ತೆ ವಸು ದಾನರಾಜನು ಅನ್ನರಹಿತರೈವರು ಅವರು ಖೂನದಲಿ ಕನ್ನಿಕೆಯ ದಾನಪರ್ಯಂತ 1 ಪೇಳು ಅರಸನಿಗೆಂದು ಹರಿಯು ಹೇಳಿದಂತಾ ಭೂಮಿಪಾಲ ಮಾಡಿದನು ಮುನಿಹೇಳಿದಂತೆ ಮೇಲೆ ಮುನ್ನ ಸಾಯಾಹ್ನಕಾಲದಲಿ ಚತುರಂಗ ಸಾಲ ಸೈನ್ಯವು ನಡೆಸಿ ಕಾಳಿ, ಕರ್ಣಿಯ ತೂರ್ಯ, ತಾಳಮದ್ದಲೆ ಮೊದಲು ಭಾಳವಾದ್ಯ ಗಳಿಂದ ಮೇಲಾದ ಗುರುಮುಂದೆ ಮೇಲೆ ತನ್ನವರಿಂದ ಕಾಲನಡುತಿಯಲೆ ಹರಿಯ ಆಲಯಕೆ ಬಂದ 2 ಈ ವ್ಯಾಳ್ಯದಲಿ ಧರಣಿದೇವಿ ತಾ ಲಜ್ಜೆಯಲಿ ದೇವ ಗುರು ಬ್ರಹಸ್ಪತಿಯ ಕೇವಲಾಜ್ಞದಿ ದೇವದೇವ ಎನಿಸುವ ಅಳಿಯ ಶಾವಿಗೆಯ ಪರಮಾನ್ನ ವಿಯದ್ರಾಜ ಮುಂದಾ ವೇಳೆಯಲಿ ಐರಾವತದ ಮೇಲೆ ದೇವನ ಕುಳ್ಳಿರಿಸಿ ಬಂದನು ಮನೆಗೆ ತೀವ್ರದಿಂದ 3 ಆಕಾಲದಲಿ ತೋಂಡ ಸತಿ ನಿವಾಳಿಸುವತ ಚಲ್ಲಿದಳು ಶೈಲದೊಡೆಯನು ಗಜದ ಮೇಲಿಂದ ಇಳಿದು ಆಮೇಲೆ ತಾ ಬಂದಾ ಸುವಿಶಾಲ ಮಂಟಪಕೆ ಮೇಲಾದ ಗದ್ದಿಗೆಯ ಮೇಲೆ ವೇಂಕಟರಮಣನು ಕಾಲಿಟ್ಟು ಕುಳಿತನಾಮೇಲೆ ಬ್ರಹ್ಮಾದಿ ಗಳು ಗಾಲವ, ವಶಿಷ್ಠಮುನಿ ವಾಲ್ಮೀಕಿ ಭೃಗು ಜಟಾಜಾಲ ಸಂಪನ್ನ, ಶುಕ, ದಾಲ್ಭ್ಯ ಮೊದಲಾದವರು ಸಾಲ್ಹಿಡಿದು ಕುಳಿತರಾ ಕಾಲಕ್ಕೆ ಎಲ್ಲಾ ಒದಗಿ ಬೇಗನೆ ವಿಷ್ಣು ಪದರಾಜ4 ತೊಳೆದು ಆ ಉದಿಕ ಮಧುಸೂದನನ ಪೂಜೆ ಮಧುಪರ್ಕದಿಂದ ಬುಧಜನರು ಪೇಳಿದಾಜ್ಞೆಯಲಿ ಗೃಹ ದೇವತಾಸನದಲಿ ಹರಿಯ ಧ್ಯಾನದಲಿ ಇರುತಿರುವ ಮದನ ಮೋಹನ ಸನ್ನಿಧಿಗೆ ಸಮ್ಮುಖವಾಗಿ ಮುದದಿ ಇರಿಸಿದನಾಗ ಬದಿಲಿದ್ದ ಬೃಹಸ್ಪತಿಯ ಒದಗಿ ವಧು ವರಗಳಿಗೆ ವಿಹಿತದ ಅಂತಃಪÀಟವ ಮುದದಿ ಮಧ್ಯದಲ್ಲಿ ಪಿಡಿದು ಒದರಿದನು ಈ ಪರಿಯು ಮದವೆಯ ಕಾಲಕ್ಕೆ ಮಧುರÉೂೀಕ್ತಿಯಿಂದ5 ಧ್ವನಿ:ಸೌರಾಷ್ಟ್ರ ಅಟತಾಳ ಸಾವಧಾನ ಧೇ ವಾಧೀಶನ ಲಗ್ನ ದಿವ್ಯ ವೇಳೆಯಲ್ಲಿ ಸಾವಧಾನ ಪ ಪದ್ಮನಾಭನೆ ನೀನು ಸಿದ್ಧಾಗಿ ಇರು ಕಂಡ್ಯ ಸಾವಧಾನ ಪದ್ಮಾವತಿಯೆ ನೀನು ಪದ್ಮನಾಭನ ಸ್ಮರಿಸು ಸಾವಧಾನ 1 ಫಲಕಾಲದಲಿ ಚಂಚಲರಾಗದಲೆ ನೀವು ಸಾವಧಾನ ಕುಲದೇವಿ ಸ್ಮರಣಿ ನಿರ್ಮಲವಾಗಿ ಮಾಡಿರಿ ಸಾವಧಾನ 2 ಶ್ರೇಷ್ಠಾದ ಅತಿ ವಶಿಷ್ಠ ಮುನಿಗಳೆಲ್ಲ ಸಾವಧಾನ ಸ್ಪಷ್ಟಾಗಿ ಶ್ರೀ ಮಂಗಳಾಷ್ಟಕ ಪಠಿಸಿರಿ ಸಾವಧಾನ 3 ಮಂಗಳ ಮೂರುತಿ ಮನದಿಂ ಸ್ಮರಿಸಿರಿ ಸಾವಧಾನ
--------------
ಅನಂತಾದ್ರೀಶ - ಕಥನಕಾವ್ಯಗಳು
ಜೋ ಜೋ ರುಕ್ಷಿಣಿರಮಣ ಜೋ ಜೋ ಕಲ್ಯಾಣ ಜೋ ಜೋ ಗುಣಪರಿಪೂರ್ಣ ವೆಂಕಟರಮಣ ಪ. ರನ್ನ ಮಾಣಿಕದೊಜ್ರ ಚಿನ್ನ ಮಂಟಪದಿ ಘನ್ನ ನವರತ್ನದಿಂ ಮೆರೆವ ತೊಟ್ಟಿಲೊಳು ರನ್ನೆರಿಬ್ಬರ ಕೂಡಿ ನಲವಿಂದ ಕೃಷ್ಣ ಸನ್ನುತನಾಗಿ ಸುರರಿಂದ ಪವಡಿಸಿದ ಜೋ ಜೋ 1 ಕನಕಮಯ ಸರಪಳಿ ಥಳಥಳನೆ ಹೊಳೆಯೆ ಮಿನುಗುವಾಭರಣಗಳು ಝಗ ಝಗಿಸುತಿರಲು ಸನಕಾದಿ ಒಡೆಯನ ಫಣಿಪ ಹಿಂತೂಗೆ ಮುನಿವರನು ಮುಂದೆ ತಾ ಲಾಲಿ ಪಾಡಿದನು ಜೋ ಜೋ 2 ವೇದವನೆ ಕದ್ದವನ ಕೊಂದವನೆ ಜೋ ಜೋ ಸಾಧಿಸಿ ಸುಧೆ ಸುರರಿಗುಣಿಸಿದನೆ ಜೋ ಜೋ ಜಲಧಿ ಮೇದಿನಿ ತಂದೆ ಜೋ ಜೋ ಸಾಧಿಸಿ ಸುಧೆ ಸುರರಿಗುಣಿಸಿದನೆ ಜೋ ಜೋ 3 ಬಲಿಯನೊಂಚಿಸಿದಂಥ ತರಳನೆ ಜೋ ಜೋ ಕುಲವನೆ ಸವರಿದ ಬಲಶಾಲಿ ಜೋ ಜೋ ಲಲನೆ ಸೀತೆಯ ತಂದ ಶ್ರೀರಾಮ ಜೋ ಜೋ ಮೆಲಲು ಪಾಲು ಬೆಣೆÉ್ಣ ಕದ್ದವನೆ ಕೃಷ್ಣ ಜೋ ಜೋ4 ತ್ರಿಪುರ ಸತಿಯರ ವ್ರತವಳಿದೆ ಜೋ ಜೋ ಚಪಲತನದಿಂ ಹಯವನೇರಿದನೆ ಜೋ ಜೋ ಅಪರಿವಿತದವತಾರದಿಂ ಬಳಲಿ ಬಂದು ನಿಪುಣರೆಲ್ಲರು ಸ್ತುತಿಸೆ ಪವಡಿಸಿದೆ ಕೃಷ್ಣ ಜೋ ಜೋ 5 ಅರಸು ಜಯದೇವಿ ಸಂಕರ್ಷಣನೆ ಜೋ ಜೋ ಸಿರಿದೇವಿಪ್ರಿಯ ಶ್ರೀ ನರಹರಿಯೆ ಜೋ ಜೋ ವರರುಕ್ಮಿಣಿ ಸತ್ಯವರ ಕೃಷ್ಣ ಜೋ ಜೋ ಅರಸಿ ಪದ್ಮಾವತಿ ಸಹಿತ ವೆಂಕಟನೆ ಜೋ ಜೋ6 ನಾರದಾದಿಗಳೆಲ್ಲ ನರ್ತನದಿ ಪಾಡೆ ಊರ್ವಶಿ ಅಪ್ಸರರು ನೃತ್ಯವನು ಮಾಡೆ ತೋರೆ ಗಂಧರ್ವರು ಗಾನಗಳ ರಚನೆ ಸಾರಿಸಾರಿಗೆ ಭಕ್ತರೆಲ್ಲ ನುತಿಗೈಯೆ 7 ಭಕ್ತನಾದ ವಾಯು ಸಹಿತ ಪವಡಿಸಿದೆ ಜೊತ್ತಾದ ತೊಟ್ಲುಗಳು ಭೃತ್ಯರು ತೂಗೆ ಮತ್ತೆ ನಿವಿ್ಮೂರ್ವರಿಗೆ ನಿದ್ರೆ ಇನ್ನುಂಟೆ ಭಕ್ತರನು ಸಲಹಲು ಲೀಲೆ ಕೈಕೊಂಡೆ ಜೋ ಜೋ 8 ಶ್ರೀಪಾದಪದ್ಮಯುಗಳಕೆ ಎರಗಿ ನಮಿಪೆ ಗೋಪಾಲಕೃಷ್ಣವಿಠ್ಠಲನೆ ನೀ ಸಲಹೊ ಶ್ರೀ ಪದ್ಮಭವ ಭವರಿಂ ಸೇವೆ ಕೊಳುತ ಈ ಪಯೋಜ ಭವಾಂಡದೊಳು ಲೀಲೆ ತೋರ್ಪೆ ಜೋ ಜೋ9
--------------
ಅಂಬಾಬಾಯಿ
ವಾದಿರಾಜರು ಸಾಗಿಬಾರಯ್ಯ ಗುರುವೆ ವಾದಿರಾಜೇಂದ್ರಾರ್ಯ ಬಾಗುವೆ ನಾ ನಿನಗೆ ಶಿರವಾ ಪ. ಭಾಗವತರ ದುರಿತಾಘಂಗಳನೆ ಕಳೆದು ಬಂದಾ ದುರ್ವಾದಿಗಳನೆ ಮರೆದು ಸುರರೆಲ್ಲ ಇವರೆ ಮೇಲ್ ಪೂ ಮಳೆಯಗರೆದು ತುಂಬುರರು ನರದರು ಗಾನಗಳಿಂದ ಮೆರೆದು ಘಲುಘಲು ಘಲುರೆಂದು, ಅಪ್ಸರರು ನಾಟ್ಯಗಳ ಕುಣಿದು ಅ.ಪ. ಹೊದ್ದ ಕಾವೆ ಶಾಟಯಲೊಪ್ಪುವಾ ಶ್ರೀ ಮುದ್ರಿ ಗಂಧಾಕ್ಷತೆಯಿಂದಾ ಗಳದಲ್ಲಿ ಶ್ರೀ ತುಳಸಿ ಪುಷ್ಪಮಾಲೆಗಳಿಂದಾ ಝಗಝಗನೆ ಮುಖಕಮಲಳ್ಹೋಳವೋದು ಯೆಂದಾ ಋಜುಗಣದವರಹುದೆಂದು ಪೇಳುವಾನರನಿಂದಾ ಮಾಡುವವರಿಗೆ ಕ್ರಿಮಿಕೀಟಗಳು ದುರುವುವುದೇಹದಿಂದಾ ಬಂದ ಜನರಿಗ್ಹರುಷ ಬಡಿಸುವದರಿಂದಾ ಮುದದಿಂದಾ 1 ಏನುಪೇಳಲಿ ಗುರುವೆ ನಿನ್ನ ಮಹಿಮೆಯು ನೋಡಲಾಶ್ಚರ್ಯವೋ ಭೂತರಾಜರಿಂದ ಪೂಜೆಗೊಂಬುವ ಛಂದವೋ ಧಿಂ ಧಿಮಿ ಧಿಮಿಕೆಂದು ಕುಣಿದಾಡುವಾನಂದವೊ ಯಡಬಲದಿ ದ್ವಾರ ಪಾಲಕರಿರುವಾನಂದವೋ ಮುಕ್ತಿಯನೆ ಕೊಡುವಾ 2 ನಿನ್ನಂಥಾ ಕರುಣಿ ಗುರು ಇನ್ನಿಲ್ಲ ಧರೆಯೊಳು ಮನ್ನೀಸಿ ಸಲಹಯ್ಯ ಮಹರಾಯ ಘನ್ನ ಸಂಸಾರದೊಳು ಬನ್ನಪಟ್ಟು ಬಹಳ ನೊಂದೇನೀ ಕೈಪಿಡಿದು ಎಂದು ನಿಂದೀನೀ ಉದ್ಧಾರ ಮಾಡಬೇಕೆಂದು ಬಂದೀನಿ ಮಂದ ಭಾಗ್ಯ ಜೀವನ ಕುಂದುಗಳೆಣಿಸಿದಾಗೊದೊ ಇಂದು ಅಡಿಗಡಿಗೆ ನಮೋ ಬೇಡುವೆನೋ ಬಂಧೊ 3 ರುಕ್ಮಿಣಿ ಕಳುಹಿದಾ ವಾಲೆಯು ತಾನು ಶ್ರಿ ಕೃಷ್ಣಗರ್ಪಿಸಿದನು ದ್ವಿಜನು ಸಾಮಾನ್ಯವಲ್ಲವೋ ಈತ ಗುರುರಾಜನೆಂದೆನಿಸೀದಾ ದುರ್ವಾದಿಗಳು ಜಯಸೀದಾ ಪವಮಾನರಾಯನೆಂದೆನಿಸಿದಾ ಸುರರಿಗಮೃತವನುಣಿಸೀದಾ ವೃಂದಾವನ ಚಾರ್ಯರಿಂದ ಸೇವೆ ಸ್ವೀಕರಿಸೀದಾ ಸುಖವಸುರಿಸೀದಾ 4 ಸ್ವಾದೀಯಪುರದಲ್ಲಿ ಇರುವರೋ ಗುರುರಾಜರು ಅಮೃತ ಪಾನ ಬಂದ ಸೇವಕರಿಗಭೀಷ್ಟವ ಕರೆದು ತಾ ಕೊಡುವ ದ್ರಷ್ಟ ಜನರಾ ಫಲ್ಗಳ ಮುರಿವಾ ಸರ್ವೇಶನಲ್ಲದೆಂಬೋರ ಅಳಿವಾ ಮಧ್ವಮತವನ್ನುದ್ದಾರ ಮಾಡುವ ಕಾಳೀಮರ್ಧನಕೃಷ್ಣನೊಲಿವಾ 5
--------------
ಕಳಸದ ಸುಂದರಮ್ಮ