ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಪ್ಪವಡಿಸಯ್ಯ ತ್ರಿವಿಕ್ರಮ ನಿನ್ನ ಪುರದೊಳಗೆ ಇಪ್ಪ ಮುಕುತರಿಗೆ ಸಲ್ಲದು ನಿದ್ರೆ ನಿನಗಿಲ್ಲ ಕಲ್ಪಾಂತದಲಿ ನಿತ್ಯವಾದ ವೇದವ ನೆನೆವ ಸುಪ್ರಭಾವನಿಗೇಕೆ ಹೀನಮನುಜರ ಸಾಮ್ಯ ಪ. ಹರಿನಾಲ್ಕು ಮನ್ವಂತ್ರಗಳನು ಹಗಲನು ಮಾಳ್ಪ ವಿಧಿ ನಿನ್ನ ಕುವರನೆ ನಿದ್ರೆಗೊಪ್ಪದೆ ಬಂದ ಇದು ಸರ್ವಸೊಪನ ಅನಿಮಿಷರೆಂಬ ಬಿರುದಿನವ ರಿದಕೆ ಕೋಪಿಸಿ ಬಂದರು ವಿಧಿ ತನ್ನ ಹಗಲ ನಡೆಸುತ ನಿನಗೆ ಈ ತೆರನ ಮದನಪಿತ ತಾಳದೆ ಇಳೆಗೆ ನಡೆತಂದ ಸದುಬುಧರು ತಮ್ಮ ವಿಷಯವ ನೆನೆವ ಜಂತುಗಳು ಇದು ತಾಳೆವೆನುತ ಬಾಗಿಲೊಳು ಬಂದೈದಾರೆ 1 ನಿದ್ರೆಗೈವರ ಹೃದಯದಲ್ಲಿ ಭೂಭೂಯೆಂಬ ಎದ್ದು ಬಹ ಶ್ವಾಸದಭಿಮಾನಿ ಮುಖ್ಯಪ್ರಾಣ ಕ್ಷುದ್ರಗತಿ ತನ್ನಾಳ್ದಗಿದು ಪುಸಿಯೆನುತ ಬಂದ ಮಧ್ವಸದ್ಭಾಷ್ಯಕಾರ ಹೊದ್ದಿ ಕರಗಳ ಮುಗಿದು ಜೀವರಿಗು ನಿನಗು ಪ್ರ- ಬುದ್ಧಜನೆನುತ ಬಂದ ವೇದಾಂತದೇವಿಯರು ನಿರ್ದೋಷ ನೀನೆತ್ತ ನಿದ್ರೆಯೆತ್ತೆನುತ ಪಾದ- ಪದ್ಮಗಳ ಪಿಡಿದು ಪಾಡುವ ಸಾಮಗಳ ಸವಿದು 2 ಅಪ್ರಾಕೃತನೆ ನಿನಗೆ ಈ ಪ್ರಕೃತಿಗುಣಗಳಿಂ- ದಿಪ್ಪ ಯುಕ್ತಿಗಳ ಸುಪ್ತಿಗಳು ಸಲ್ಲವು ದೇವ ಅಪ್ರಬುದ್ಧರ ಮುಂದೆ ಆಡುವಾಟಗಳು ಈ ಸುಪ್ರಬುದ್ಧರ ಸಭೆಯಲಿ ಸರ್ಪತÀಲ್ಪನೆ ತೋರಿದಯ್ಯ ಸಾಕೈನಟನೆ ಸುಪ್ರಭಾತವು ಬಂತು ಹಯವದನ ದಿನದಿನದಿ ತಪ್ಪದೆ ಮಾಡುವಘ್ರ್ಯದಿ ಸತ್ಕರ್ಮಗಳ ಒಪ್ಪುಗೊಳು ಅಪ್ರತಿಮಮಹಿಮ ತ್ರಿವಿಕ್ರಮರಾಯ 3
--------------
ವಾದಿರಾಜ
ಪರಮ ಕರುಣಾಕರನೆ ಕರಪಿಡಿದು ಸಲಹೆನ್ನ ವರ ತಂದೆ ಮುದ್ದುಮೋಹನರೊಡೆಯನೆ ಪ. ಸಿರಿಯರಸ ಶ್ರೀ ಶ್ರೀನಿವಾಸ ಶ್ರೀ ಕೃಷ್ಣಹರೆ ಪರಮದಯಾಳು ದೇವ | ದೇವಅ.ಪ. ನಿರುತ ನೀ ಸ್ವಪ್ನದಲ್ಲಿ ಪರಿಪರಿಯ ರೂಪದಲಿ ತ್ವರಿತದಲಿ ತೋರಿ ಕಾಯ್ದೆ ಪರಮಪಾವನಮೂರ್ತಿ ಗುರು ಅಂತರ್ಯಾಮಿಯೆ ಕರಕರೆಯ ಬಿಡಿಸಿ ಸಲಹೊ | ದೇವ 1 ವಿಶ್ವತೈಜಸ ಪ್ರಾಜ್ಞ ತುರಿಯ ರೂಪಗಳಿಂದ ನೀ ಸ್ವಪ್ನಗಳನೆ ತೋರ್ವೆ ವಿಶ್ವೇಶ ಎನ್ನೊಳಗೆ ಸಾಕ್ಷಿಯಾಗಿರುತ್ತಿರ್ದು ವಿಶ್ವಮಯ ಚೇಷ್ಟೆ ಮಾಳ್ಪೆ | ದೇವ 2 ಈ ಶರೀರದೊಳಗೆ ಶ್ರೀ ತೈಜಸನೆ ನೀನು ವಾಸವಾಗಿರುತಲಿರ್ದು ನಾಶರಹಿತನೆ ಮೋಹಪಾಶದಲಿ ಸಿಲುಕಿಸಿ ಮೋಸಪಡಿಸುವರೆ ಎನ್ನ | ದೇವ 3 ಬಿಡಿಸೊ ದುರ್ವಿಷಯಗಳ ತಡವಾಕೊ ಹರಿ ಇನ್ನು ಒಡಲಿಗೊಡೆಯನೆ ಶ್ರೀಹರಿ ಕೊಡು ನಿನ್ನ ಪದಸೇವೆ ನುಡಿಸು ನಿನ್ನಯ ನಾಮ ಪಡಿಸು ಸುಖ ಅನವರತದಿ | ದೇವ 4 ಸ್ವಪ್ನ ವ್ಯಾಪಾರದಲಿ ಅಪ್ರತಿಮಮಹಿಮೆಗಳ ಕ್ಷಿಪ್ರದಿಂದಲಿ ತೋರಿದೆ ಸಪ್ತಫಣಿಮಂಡಿತನೆ ಒಪ್ಪದಿಂದಲಿ ಎನ್ನ ತಪ್ಪನೆಣಿಸದಲೆ ಕಾಯೋ | ದೇವ 5 ನೀತ ಗುರುಗಳ ದ್ವಾರ ಪ್ರೀತನಾದ ಹರಿಯೆ ಪಾತಕವÀ ಕಳದೆ ಸ್ವಾಮಿ ವಾತಜನಕನೆÀ ನಿನ್ನ ಖ್ಯಾತಿ ಪೊಗಳಲು ಅಳವೆ ಪ್ರೀತನಾಗಿದ್ದು ಸಲಹೊ | ದೇವ 6 ಶ್ರೀಪತಿಯೆ ಪರಮಪಾವನಮೂರ್ತಿ ವಿಖ್ಯಾತ ನೀ ಪ್ರೀತಿಲೀಲೆ ತೋರ್ದೆ ಕಾಪಾಡಿದೆಯೊ ಎನ್ನ ಶ್ರೀ ಗುರುಗಳೊಳಗಿರ್ದು ಗೋಪಾಲಕೃಷ್ಣವಿಠ್ಠಲ ದೇವ 7
--------------
ಅಂಬಾಬಾಯಿ