ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತವರು ಮನೆಯು ನನ್ನ ಸುವಿದ್ಯಪುರಲ್ಯದೆ ಸಾವಿರಕೊಬ್ಬಗೆ ದೋರುತದೆ ಧ್ರುವ ಸಾವಿರಕೊಬ್ಬನೆ ತಾ ಸುದೇವನೆ ಬಲ್ಲ ಭಾವಿಸದಲ್ಲದೆ ತಿಳಿಯುವದಲ್ಲ ಅವಿದ್ಯಪುರ ದಾಟ, ಮಂದಾಕ್ಕಾಗಲು ಎಲ್ಲ ಆವಾಗ ತಿಳಿವುದು ಹೇಳಿದ ಸೊಲ್ಲ 1 ಸಾವಿರ ತೆನೆಯಲೊಪ್ಪುತದೆ ಒಳಕೋಟ ಠವಿಠವಿಸುತದೆ ನೋಡಿ ಮನಮುಟ್ಟಿ ಅವ್ವ ಅಪ್ಪನೇ ನಮ್ಮ ಇಹಸ್ಥಾನವು ಘಟ್ಟಿ ದೇವಾಧಿ ದೇವನೊಬ್ಬನೆ ಜಗಜಟ್ಟಿ 2 ಬಲು ಅಭೇದ್ಯಸ್ಥಳ ತಿಳಿಯದಿನ್ನೊಬ್ಬರಿಗೆ ನೆಲೆವಂತರಿಗೆ ತಾನು ತಿಳಿವದು ಬ್ಯಾಗೆ ತುಂಬಿ ಥಳಗುಟ್ಟಿ ಹೊಳವ್ಹಾಂಗೆ ಬಲಗೊಂಡು ಕೇಳಿ ಶ್ರೀಸದ್ಗುರುವಿಗೆ 3 ಅಣ್ಣನೆಂಬಾತ್ಹಾನೆ ಅನಂದದಲ್ಹಾನೆ ನೆನೆಪಿಗೊಮ್ಮೆ ಬಂದು ಸುಳವುತ್ಹಾನೆ ಕಣ್ಣೆಲಿ ಕಟ್ಯಾನೆ ತಮ್ಮನೆಂಬತ್ಹಾನೆ ಕ್ಷಣಕೊಮ್ಮೆ ಹೊಳೆವುವಾನೆ4 ಅಕ್ಕನೆಂಬಾಕಿ ತಾ ಸಖರಿ ಅಗ್ಹಾಳೆ ಅಖರದಲೆವ್ವ ಈ ಮಾತು ಕೇಳೆ ಪ್ರಖ್ಯಾತದಲಿ ಪ್ರೀತಿಮಾಡುವ ತಂಗ್ಹ್ಯಾಳೆ ಸುಖ ಸುರುತ್ಹಾಳೆ ಇರುಳು ಹಗಲು 5 ಅತ್ತಿಗೆ ನಾದುನಿ ಭಾವ ಮೈದುನರೆಲ್ಲ ಅಂತ್ಯಕವಾಗ್ಹ್ಯಾರೆ ಮನಿಯೊಳಗೆಲ್ಲ ಸುತ್ತೇಳುವ ಬಳಗ ಉತ್ತುಮರೆನಗೆಲ್ಲ ಹಿತದೋರುತಾರವ್ವ ಸರ್ವಾಪ್ತರೆಲ್ಲ 6 ಸರ್ವಾಪ್ತವೆಂಬುದು ಸರ್ವೇಶನೆ ತಾನು ಸರ್ವದಾ ಎನ್ನೊಳು ತಾ ಕಾಮಧೇನು ಪರ್ವಕಾಲದ ಬಹಳ ಏನೆಂದ್ದೇಳಲಿ ನಾನು ಸರ್ವಾರ್ಥ ಕೊಡುತ್ಹಾನೆ ಸರ್ವಾತ್ಮ ತಾನು 7 ಅವ್ವ ನಮ್ಮಪ್ಪಗೆ ಸರಿ ಇಲ್ಲ ಜಗದೊಳು ಆವ ಕಾಲಕೆ ತಾ ಇವರ ಮೇಲು ಇವರೆಂಬುದು ಒಂದೆ ಮಾತಿನ ಸ್ವಕೀಲು ಸವಿಸುಖಬಲ್ಲರು ಅನುಭವಿಗಳು 8 ತೌರಮನೆಂಬುದು ಪ್ರತ್ಯೇಕಾ ತಾನಿಲ್ಲ ಭಾವಾರ್ಥದ ಮಾತು ಕೇಳಿರೆಲ್ಲ ಅವಗುಣನೆ ಬಿಟ್ಟು ಕೇಳಿ ಸವಿಯ ಸೊಲ್ಲ ಪೂರ್ವಿಕರಿಗಿದೆ ಸಾರವೆಲ್ಲ 9 ಸುದ್ದಿ ಹೇಳಿ ಕಳುಹುಲಿಕ್ಕೆ ಈ ಸಾಧನ ಇದುವೆ ಅಯಿತು ತವರ ಮನಿ ಬುದ್ಧಿವಂತನೆಬಲ್ಲ ಲಕ್ಷಕೊಬ್ಬ ಜ್ಞಾನಿ ಸಿದ್ಧಿದರಿಡುವದು ಸದ್ಗುರು ಪ್ರಾರ್ಥನಿ 10 ಬಳಗದೊಳು ಕೂಡಿ ಒಳಿಥಾಗ್ಯಾಯಿತು ಎನಗೆ ಒಳ ಹೊರಗೆ ಸುಖ ಎದುರಿಟ್ಟತೀಗ ಕುಲಕೋಟಿ ಬಳಗ ಸದ್ಗುರು ಪಾದವ್ಯನಗೆ ಸಲಹುತಾನೆ ಸ್ವಾಮಿ ಮಹಿಪತಿಗೆ 11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೀರೆ ನೋಡಿವನಾರೆ ಘೋರರೂಪವು ಮೀರೆ ಸಾರೆ ಬಂದಹನರರೆ ನಿಲ್ಲಲಾರೆ ಮುಪ್ಪಾದಮುಳ್ಳವನೆ ಕಪ್ಪುಬಣ್ಣದ ವರನೆ ಅಪ್ಪನೇಕಿವಗೆನ್ನನೊಪ್ಪಿಸಿದನೆ ದಾನವನು ತಾಂ ಬೇಡಿ ದಾನಿನಿಯಂ ತುಳಿದಾಡಿ ನ್ಯೂನತೆಯ ಪೊಂದಿಸಿದ ಜ್ಞಾನಿಯಿವನೆ ಗಾತ್ರದೋಳಿವನಂತೆ ಗಾತ್ರಮುಳ್ಳವರಿಲ್ಲ ಸರ್ವತ್ರ ಬಳಸಿ ನಿಂತಿರ್ಪನಿವನೆ ತೃಣದಿ ಶುಕ್ರನ ಕಣ್ಣನಿರಿದ ವರನೆ ಅಣುರೇಣು ತೃಣಾಕಾಷ್ಠ ಪೂರ್ಣನಿವನೆ ಪ್ರಣವ ಪ್ರತಿಪಾದ್ಯನೆನಿಸುವವನೆ ಫಣಿತಲ್ಪಿ ಶೇಷಾದ್ರಿವಾಸ ತಾನೆ
--------------
ನಂಜನಗೂಡು ತಿರುಮಲಾಂಬಾ