ಒಟ್ಟು 4 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದನವ ಕಾಯ್ವೊನೆ ದೈನ್ಯ ಬಡುವವನೆ ವನಜಭವಾಂಡಕೆ ಒಡೆಯನಾಗೆಂದರೆಒಲ್ಲದೆ ವನವನ ತಿರುಗಿದನಮ್ಮ ನೋಡಮ್ಮಯ್ಯ ಪ. ದನಗಾಹಿ ಎಂದರೆ ಎನಗೇನು ಸಂಶಯವಿಲ್ಲಜನರೆಲ್ಲ ಬಲ್ಲರು ಈ ಮಾತು ಜನರೆಲ್ಲ ಬಲ್ಲರು ಈ ಮಾತು ಭಾವಯ್ಯನೆನಪಿಸಿ ಕೊಟ್ಟೆಲ್ಲೊ ಮರೆತಿದ್ದೆ 1 ಗೋಪಾಲ ಶಬ್ದಾರ್ಥ ನೀ ಕೇಳಿಶ್ರೀ ಕೃಷ್ಣ ಕೋಪವಿನ್ಯಾಕೊ ಎನಮ್ಯಾಲೆ ಕೋಪ ವಿನ್ಯಾಕೊ ಎನ ಮ್ಯಾಲೆ ಭಾವಯ್ಯನೀ ಪೇಳಿಕೊಂಡ್ಯೊ ನಿಷ್ಕಪಟಿ 2 ಕುದುರೆಯ ಮಾರಿಯ ಹೂವು ಗಣ್ಣಿನ ವರನಿಗೆ ಮದಗಜಗಮನೆ ಮನಸೋತುಮದಗಜಗಮನೆ ಮನಸೋತು ಮ್ಯಾಲಿನ್ನುಬದಲು ಮಾತಾಡಿ ಫಲವೇನೊ3 ನಾರುವ ಮೈಯವ ನೀರೊಳು ಅಡಗಿದ ಹಂದಿ ಮೈಯವನೆ ಮಹಾಕೋಪಿಹಂದಿ ಮೈಯವನೆ ಮಹಾಕೋಪಿ ತಿರುತಿಂಬೊಹಾರುವನ ಗೊಡವೆ ನಮಗ್ಯಾಕೊ 4 ಕೊಡಲಿಯ ಪಿಡಕೊಂಡ ಪಡೆದಮಾತೆಯಕೊಂದೆ ಒಡಲಿಗಿಕ್ಕದಲೆ ಮಡದಿಯಒಡಲಿಗಿಕ್ಕದಲೆ ಮಡದಿಯ ಕೊಂಡೊಯ್ದುಅಡವಿಗಟ್ಟಿದ ಮಹಾ ಮಹಿಮನೆ5 ಜಾರ ಚೋರನೆಂದು ಜಗದೊಳು ಹೆಸರಾದಿಅಪಾರವಾದ ವನಿತೆಯರುಅಪಾರವಾದ ವನಿತೆಯರ ಒಗೆತನಕೆನೀರು ತಂದಿದ್ದ ಮಹಾಮಹಿಮನೆ 6 ಭಂಡ ಗಾರನಂತೆ ದೇಹ ಕಂಡಜನಕೆಲ್ಲತೋರಿ ಪುಂಡಗಾರನಂತೆ ಹಯವೇರಿಪುಂಡಗಾರನಂತೆ ಹಯವೇರಿ ಹಾರಿಸುವ ಲೆಂಡ ರಾಮೇಶನ ಅರಿವೆನೊ7
--------------
ಗಲಗಲಿಅವ್ವನವರು
ಮತ್ತೆದೊರಕುವುದೇ ಮುಕುತಿ ಪ ಅರಿಯದವನೇ ಕುಮತಿ ಅ.ಪ ಸಾಸಿರನಾಮನು ಸಾಸಿರ ನೇತ್ರನು ಸಾಸಿರ ಗಾತ್ರನು ಸುಂದರನು ದಾಸರ ಪೊರೆಯಲು ನಿಂದವನು 1 ಆದರೂ ಕಾಣದ ಮಹಿಮನವ ಆದರಿಸಿ ಅಪಾರವ ತೋರುವ ಮಹದೇವ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮಾಯಾ ಜಯಕೃತಿಗೆ ಮಂಗಳಂ ಶಾಂತಿ ಸ್ವರೂಪಳಿಗೆ ಮಂಗಳಂ ಭಕ್ತರ ಕಂಗಳಿಂದಲಿ ನೋಡಿ ರಂಗನ ಪಾದವ ತೋರ್ವಳಿಗೆ ಪ. ಮಂಗಳಂ ಜಯ ಮಂಗಳಂ ಅ.ಪ. ಅಲ್ಲಿ ವೈಕುಂಠದೊಳಗೆ ಇರಲು ಬಲ್ಲಿದ ಭೃಗು ಋಷಿ ತಾ ಬರಲು ವಲ್ಲಭನ ವಕ್ಷಸ್ಥಳ ಒದೆಯಲು ಹರಿ ಸೊಲ್ಲು ಕೇಳದೆ ಓಡಿ ಬಂದಳಿಗೆ 1 ಕೊಲ್ಲಾಪುರದಲಿ ನಿಂದಳಿಗೆ ಎಲ್ಲರಭೀಷ್ಟವ ಸಲಿಪಳಿಗೆ ಖುಲ್ಲರ ಮರ್ಧಿಪ ಹರಿಯ ವಕ್ಷಸ್ಥಳ ದಲ್ಲಿ ಸದಾ ನೆಲಸಿರ್ಪಳಿಗೆ 2 ಶ್ರೀ ಜಯದೇವಿಗೆ ಶ್ರೀ ಲಕ್ಷ್ಮಿಗೆ ಶ್ರೀ ರುಕ್ಮಿಣೀ ಸತ್ಯಭಾಮಳಿಗೆ ಶ್ರೀ ಪದ್ಮಾವತಿ ನಾಮಕ ನಾನಾರೂಪ ಗುಣಾನ್ವಿತೆಗೆ 3 ಮುಕ್ತಾಮುಕ್ತರಿಗೊಡೆಯಳಿಗೆ ಮುಕ್ತಿಯ ಭಕ್ತರಿಗೀವಳಿಗೆ ಮುಕ್ತಳೆನಿಸಿ ಮುಕ್ತಾಶ್ರಯನಿಗೆ ಆ- ಸಕ್ತಿಯಿಂದ ಸೇವೆ ಮಾಳ್ಪಳಿಗೆ 4 ಗೋಪಾಲಕೃಷ್ಣವಿಠ್ಠಲನ ಆಪಾದ ಮೌಳಿಯ ಗುಣಗಳನು ತಾ ಪರಿಪರಿಯಿಂದ ವರ್ಣಿಸುತ್ತಿದ್ದರು ಅಪಾರವಾಗಿಯೆ ಕಾಂಬಳಿಗೆ 5
--------------
ಅಂಬಾಬಾಯಿ