ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ಸಾರ್ಥಕವಾಯ್ತು ಹಿಂದೆ ಮಾಡಿದ ಪೂಜೆ ಪ ಬಂದು ಗುರುವರ್ಯರ ಬೃಂದಾವನವ ನೋಡಿ ಅ.ಪ ಮಂಗಳತರಂಗಿಣಿಯ ತಂಗಾಳಿ ಸೇವಿಸುತ ತುಂಗ ಫಣಿಶಾಯಿಯ ಅಪಾಂಗಪಾತ್ರರ ಕಂಡು1 ಜ್ಞಾನ ವೈರಾಗ್ಯ ಭಕ್ತಿಗಳ ಮೂರ್ತಿಗಳಂತೆ ನಾನಾಭರಣ ಸೇವೆ ಅರ್ಪಿಸಿದವರ ಕಂಡು 2 ಸ್ವಾಂತವನು ಗೆಲಿದು ಪ್ರಸನ್ನ ಮಾನಸರಾಗಿ ಶಾಂತಿಯನು ಪಡೆದ ಏಕಾಂತ ಭಕುತರ ನೋಡಿ 3
--------------
ವಿದ್ಯಾಪ್ರಸನ್ನತೀರ್ಥರು
ಎಲ್ಲ ಲೀಲೆ ಇದೆಲ್ಲ ಲೀಲೆಎಲ್ಲ ಲೀಲೆ ರಂಗಗೆಲ್ಲ ಲೀಲೆ ಪ. ಪುಟ್ಟಿಸುವುದು ಮನವಿಟ್ಟು ಕಾವುದುದುಷ್ಟರ ಶಿಕ್ಷೆ ಅಲ್ಲಿ ವಿಶಿಷ್ಟರ ರಕ್ಷೆ1 ನೀರೊಳುಲ್ಲಾಸ ಮತ್ತಾರಣ್ಯವಾಸಹಾರುವರಾಟ ತನ್ನ ನಾರಿಯ ಬೇಟ 2 ಗೊಲ್ಲರಾಕೃತಿ ಬತ್ತಲೆಯ ಸ್ಥಿತಿಬಲ್ಲಿದ ದೈವ ಕಲಿಯ ಗೆಲ್ಲುವ ಭಾಗ 3 ವರನಿಪ್ಪುದು ಕರೆದರೆ ಬಪ್ಪುದುಧರೆಯಜಮ ಪರಿಪರಿಯ ಕರ್ಮ4 ಹೆಂಗಳಕೂಟ ಅಪಾಂಗದ ನೋಟ ಹಾಸ್ಯದಂಗದಿಂದೂಟ ರಣರಂಗದಿಂದೋಟ 5 ಅಂಬಿನ ವೇಧ ನಿನ ತುಂಬಿದ ಕ್ರೋಧ ತ್ರಿ-ಯಂಬಕ ಪೂಜೆ ತ್ರಿವಿಡಂಬನವೋಜೆ6 ಕರ್ತುಮಾಕರ್ತು ಮತ್ತನ್ಯಥಾಕರ್ತು ಎಂಬಶಕ್ತಿದೇವಗೆ ಬಲುಯುಕ್ತಿ ಇವಗೆ7 ನಾವೆಕರ್ತವ್ಯಂ ಸುಪ್ರವೆ ವಕ್ತವ್ಯಂಏಸು ಮಹಿಮೆಗೆ ಕೃತಕೃತ್ಯ ನಮಗೆ 8 ಪ್ರಿಯಮೋದನ ದೈತ್ಯೇಯಭೇದನಹಯವದನ ನಿನ್ನರ್ಥಿ ಕಾಯಿದನ9
--------------
ವಾದಿರಾಜ
ಗುರುವರ್ಯರನು ಭಜಿಸೋ ರಾಘವೇಂದ್ರ ಗುರುವರ್ಯರನು ಭಜಿಸೋ ಪ ಧರೆತಲದಲಿ ಅವತರಿಸಿ ಸುಜನರನು ಪರಿಪÀರಿ ವಿಧದಲಿ ಪೊರೆಯುತಲಿರುವ ಸದ್ ಅ.ಪ ನಳಿನನಾಭ ಶ್ರೀರಾಮರ ರುಚಿರ ಪದಗಳ ಸಂತತದಿ ಭಜಿಸಿ ಖಳರ ದುರ್ಮತಗಳನಳಿಸಿ ದಶಪ್ರಮತಿ ಗಳ ದಿವ್ಯ ಶಾಸ್ತ್ರಾರ್ಥಗಳನು ಸುಲಭದಲಿ ಇಳೆಯೊಳು ಸುಜನಕೆ ತಿಳಿಯುವ ತೆರದಲಿ ಬೆಳಗುತಿರುವ ಪರಿಮಳ ಮುಖವರ ಗ್ರಂಥ ಗಳನು ರಚಿಸುತ ಉಳಿಸಿ ಸುಮತಿಯನು ಇಳೆಯೊಳು ವರಮಂತ್ರ ನಿಲಯದಿ ನೆಲೆಸಿದ 1 ಮಂಗಳಕರಳೆಂದು ಚರಿತೆಯುಳ್ಳ ತುಂಗಾತೀರದಿ ನೆಲೆಸಿ ಕಂಗೊಳಿಸುತ ಚರಣಂಗಳ ಭಜಿಪರ ಸಂಘಕ್ಕೆ ತಮ್ಮ ಅಪಾಂಗ ವೀಕ್ಷಣದಿಂದ ಮಂಗಳ ತತಿಗಳ ನೀಡಿ ಅವರ ಆಘ ಭಂಗವಗೈಯುತ ಅನುದಿನದಲಿ ದ್ವಿಜ ಪುಂಗವ ನಿಕರದಿ ಪೂಜೆಯಗೊಂಬ ಉ ತ್ತುಂಗ ಚರಿತರಥಾಂಗಧರ ಪ್ರಿಯ 2 ಮುನ್ನ ಪ್ರಹ್ಲಾದನೆನೆಸಿ ಶ್ರೀ ನರಹರಿಯನ್ನು ಸತತ ಭಜಿಸಿ ಇನ್ನೊಂದು ಜನುಮದಿ ಮಾನ್ಯ ಶ್ರೀ ವ್ಯಾಸಮುನಿ ಯೆನ್ನಿಸಿ ಖಲಮತವನ್ನು ಖಂಡಿಸುತಲಿ ಚಿನ್ನ ಶ್ರೀಕೃಷ್ಣನ ಉನ್ನತ ಮಹಿಮೆಗ ಳನ್ನು ಬೋಧಿಸುತ ತನ್ನ ಭಕುತಜನ ರನ್ನು ಹರುಷದಲಿ ಧನ್ಯರೆನಿಸಿದ ಪ್ರ ಸನ್ನ ಶ್ರೀರಾಮರ ಭಕುತ ಶಿರೋಮಣಿ 3
--------------
ವಿದ್ಯಾಪ್ರಸನ್ನತೀರ್ಥರು
ರುದ್ರದೇವರು ಹರಿ ಭಕುತಿಯ ಪೊಂದಿಸೆಲೋ ಕರುಣದಿ ಗಿರಿಜಾರಮಣ ಪ ದುರುಳ ಜನರು ಅ.ಪ ಗಂಗೆಯ ಶಿರದಲಿ ಧರಿಸಿ ಭುಜಂಗವ ಕೊರಳಲ್ಲಿ ಪೊಂದಿದ ಮಂಗಳ ವರಶೈಲಜೆಯ ಅಪಾಂಗರಸ ಅನಂಗವೈರಿ1 ಶ್ರೀಹರಿಯಾಜ್ಞೆಯನು ವಹಿಸಿ ಮೋಹಶಾಸ್ತ್ರಗಳನು ರಚಿಸಿ ಈ ಮಹಿಯೊಳು ದುರುಳರನ್ನು ಮೋಹಿಸಿದ ಮಹಾದೇವ 2 ಪನ್ನಗಭೂಷಣ ಶಂಕರ ಷಣ್ಮುಗಪಿತ ಚಂದ್ರಮೌಳಿ ಸನ್ನುತಿಸುವೆ ನಿನ್ನ ಮನವಿ ಎನ್ನಲಿ ದಯದಿಂ ಪ್ರಸನ್ನ 3
--------------
ವಿದ್ಯಾಪ್ರಸನ್ನತೀರ್ಥರು