ಒಟ್ಟು 7 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಭಯವನಿತ್ತು ಕಾಯೊ ರಂಗಯ್ಯ ನಿನ್ನಡಿಗೆರಗುವೆನು ನಾನು ಪ ಭಾಷ್ಯಕಾರರಿಗೆರಗಿ ಶ್ರೀವೇದಾಂತ ಗುರುಗಳಿಗೆ ವಂದಿಸಿ ಪತಿಯ ಪಾದಾರವಿಂದಕೆ ನಮಸ್ಕರಿಸಿ ಲಕ್ಷ್ಮೀಪತಿ ನಿಮ್ಮ ಕರಗಳ ಸ್ತುತಿಸಿ ಬೇಡುವೆ ನಾನು 1 ಮತ್ಸ್ಯಾವತಾರನಾಗಿ ವಾರಿಧಿಯೊಳಗಿರ್ಪ ದೈತ್ಯನ ಕೊಂದು ಹೆಚ್ಚಿನ ವೇದವ ಅಜನಿಗೆ ತಂದಿತ್ತೆ ಭಕ್ತವತ್ಸಲ ನಿಮ್ಮ ಕರಕಮಲಗಳಿಂದ 2 ದೇವದೈತ್ಯರ ಮಧ್ಯದೀ ವಾರಿಧಿಯನ್ನು ವೇಗದಿಂದಲೆ ಮಥಿಸೇ ಆವಸುರರು ಅಪಹರಿಸಿದ ಅಮೃತವ ಸಾಧುಜನಗಿತ್ತ ಆ ವಿನೋದದ ಕರಗಳಿಂದ 3 ಕ್ರೋಢರೂಪವ ಧರಿಸಿ ಹಿರಣ್ಯಾಕ್ಷನ ಕೋರೆಯಿಂದಲೆ ಕೊಂದು ಧಾರುಣಿಯನು ತಂದು ಆದಿಮಾನವಗಿತ್ತ ವಾರಿಜಾಕ್ಷನೆ ನಿಮ್ಮ ಧೀರಹಸ್ತಗಳಿಂದ 4 ಕರುಳ ಬಗೆದ ವನಮಾಲೆಯ ಧರಿಸಿದೆ ಶ್ರೀಪರಮಪಾವನ ನಿಮ್ಮ ಕರುಣಹಸ್ತಗಳಿಂದ 5 ತಟ್ಟನೆ ಯಜ್ಞಶಾಲೆಗೆ ಬಂದು ದಾನವ ಪುಟ್ಟ ಕರಗಳಿಂದ ಅರ್ತಿಯಲಿ ಬೇಡಿದ 6 ಅಂದು ಕ್ಷತ್ರಿಯರ ಕುಲವ ಕೊಡಲಿ ಪಿಡಿದುದ್ದಂಡ ದಿಂದಲಿ ಕಡಿದು ತಂದೆಯ ನುಡಿ ಕೇಳಿ ತಾಯಿ ಶಿರವನರಿದೆ ಇಂದಿರಾಪತಿ ನಿಮ್ಮ ಆನಂದ ಕರದಿಂದ 7 ಶಶಿಮುಖಿ ಸೀತೆಗೋಸ್ಕರ ಧನುವನು ಮುರಿದ ಅಸಮಸಾಹಸ ನಿಮ್ಮ ಕುಶಲಹಸ್ತಗಳಿಂದ 8 ಘೋರ ಪ್ರಳಯಸುರನ ಸಂಹರಿಸಿದೆ ವಾರಿಜಾಕ್ಷನೆ ನಿಮ್ಮ ಧೀರಹಸ್ತಗಳಿಂದ 9 ಮಧುರೆಯೊಳಗೆ ಜನಿಸಿ ಗೋಕುಲಕೈತಂದು ಲೀಲೆಯ ತೋರಿ ಮುದದಿಂದ ಪಾಲಬೆಣ್ಣೆ ಕದ್ದು ಗೋಪಿಯರಲ್ಲಿ ಪಿ ಡಿದೆಳೆದೆ ಉಡುರಾಜನನು ಶ್ರೀಕರದೊಳು 10 ಪತಿವ್ರತೆಯ ವ್ರತವ ಭಂಗವ ಮಾಡಿ ಚಪಳಚಾರನಾಗಿ ಅತಿಶಯವಾದ ರಾಕ್ಷಸರ ಸಂಹರಿಸಿದೆ ಪೃಥವಿ ಪಾಲಿಪ ನಿಮ್ಮ ಚತುರಹಸ್ತಗಳಿಂದ 11 ಕಲ್ಯ್ಕಾವತಾರನಾಗಿ ಕುದುರೆ ಏರಿ ಸಂಹರಿಸುತಲೆ ಬಹು ಮಲಕರಗಳಿಂದ ದೇವ ಪರಮಪುರುಷ 12 ಕಂದ ಧ್ರುವ ತಾನಡವಿಯಲಿ ನಿಂದು ತಪ ಮಾಡಲು ಚಂದದಿ ಮಾಡಲು ಬಂದು ಸೇವೆಯನಿತ್ತು ಮತಿಗಾಗಿ [ಅಂದು] ಶಂಖವನೊತ್ತಿದ ಕರದೊಳು 13 ಕಾಲ ಪಿಡಿಯೆ ಗಜೇಂದ್ರ ನಿಮ್ಮ ಸ್ತುತಿಸೆ ಚಕ್ರ ಬಂದ ಕರುಣಹಸ್ತಗಳಿಂದ 14 ಅಂದು ಸುಧಾಮ ತಾನು ಶ್ರೀಹರಿಯ ಮಂದಿರಕೆ ಬರಲು ಚಂದದಿಂದಲೆ ಆತಿಥ್ಯ ಮಾಡಿ ಅವ ಕೊಂಡ ಕರಗಳಿಂದ 15 ದುರುಳ ದುಶ್ಯಾಸನ ಸಭೆಯೊಳು ದ್ರೌಪದಿಯ ಸೀರೆಯೆಳೆಯು ತಿರುವಾಗ ಹಾ ಕೃಷ್ಣ ದ್ವಾರಕಾವಾಸ ಯೆಂದು ಮೊರೆಯಿಡೆ ಕೇಳಿ ಅಕ್ಷಯವೆನುತ ನೆಚ್ಚವನೆಚ್ಚ ಕರದೊಳು 16 ಗ್ರಾಸವ ಬೇಡಲು ಪರಮಪುರುಷ ನೀನೇ ಗತಿಯೆಂದು ದ್ರೌಪದಿ ಮೊರೆಯಿಡೆ ಅಕ್ಷಯವ ಮಾಡಿದ ಕರದೊಳು * 17 ಮಂದಮತಿಯು ಜ್ಞಾನವೂ ನಿಮ್ಮ ಮಹಿಮೆ ಒಂದು ತಿಳಿಯದು ಇಂದಿರೆ ರಮಣ ಶ್ರೀರಂಗನ ದಯದಿಂದ ವಂದಿಸಿ ಬೇಡಿದೆ ಆನಂದಕರಗಹಳನ್ನು 18 ವೇದಶಾಸ್ತ್ರಗಳನ್ನು ಅರಿಯದ ಪಾಮರಸ್ತ್ರೀಜನ್ಮವು ಕಾಮ ಕ್ರೋಧವು ಲೋಭ ಮೋಹದಿಂದಲೆ ಬಿಡಿಸಿ ನಿಮ್ಮ ಪಾದದೊಳಿರಿಸೆನ್ನ ಶ್ರೀನಿವಾಸನೆ ಅಭಯವನಿತ್ತು ಕಾಯೊ 19
--------------
ಯದುಗಿರಿಯಮ್ಮ
ಇರಬಾರದೊ ಬಡವ ಜಗತ್ತಿನೊಳಗೆ | ಪರದೇಶಿ ಮಾನವಗೆ ದಿಕ್ಕು ಮತ್ತಾವನು ಪ ಪೊಡವಿಪತಿ ದೃಷ್ಟಿಗಳು ಒಳ್ಳೆವಲ್ಲಾವೆಂದು | ಬಿಡದೆ ಜನ ಪೇಳುವುದು ಸಿದ್ಧವಯ್ಯಾ | ಬಡವ ನಾನಯ್ಯ ನಾನಾ ಕಷ್ಟಬಟ್ಟೆರಡು | ಒಡವೆ ಸಂಪಾದಿಸಲು ಅಪಹರಿಸಿದ ನೋಡು 1 ದಿನ ಪ್ರತಿ ದಿನದಲ್ಲಿ ಕರಳು ಕಟ್ಟಿಕೊಂಡು | ಹಣದಾಸಿಯಿಂದ ನಾ ಘಳಿಸಿದ್ದೆನೊ | ಮನೆವುಗೆ ಬಂದು ಮಾಡಿಕೊಂಡೊಯ್ದಿಯಾ ಧರ್ಮವೇ | ವನಜನಾಭನೆ ನಿನ್ನ ದೊರೆತನಕೆ ಶರಣೆಂಬೆ2 ದೊರೆಗಳಾ ಲಕ್ಷಣವಿದೆ ಎಂದೆಂದಿಗೆ ತಮಗೆ | ಸರಿಬಂದ ಕಾರ್ಯಮಾಡುವರಲ್ಲದೇ | ನೆರೆಯವರದೇ ತಪ್ಪೇ ವಿಜಯ ವಿಠ್ಠಲರೇಯ | ಮರಳೆ ಮಾತಾಡಿದರೆ ಅಪರಾಧ ಹೊರಿಸುವರು 3
--------------
ವಿಜಯದಾಸ
ಬಾಲಲೀಲ ಲೋಲ ಕೃಷ್ಣನ|ನೆನೆವೆನಾ| ಬಾಲಲೀಲ ಲೋಲ ಕೃಷ್ಣ ಈ ಲೋಕಾಳಿ ಪಾಲಿಪಾ|ವಿ- ಶಾಲ ಬಾಲ ನೀಲಗಾತ್ರನಾ|ನೆನೆವೆನಾ ಪ ಪಡುಲ ಕರಿಯಕಣ್ಣಲಿಟ್ಟರು|ಒಡನೆ ಕೇಳಿ ಕರ್ತನೃಪನ| ಮಡದಿ ಜನಕನಹಿತ ಸರಿಕನಾ|ವೈರಿಯ ಒಡಲಲುದಿಸಿದಾತ್ಮಭವನ|ಸಡಗರದಿ ಕಿರಿಯ ತಮ್ಮನ ಪಡೆದ ಜನನಿಯಣ್ಣ ಕಂದನಾ||ನೆನೆವನಾ 1 ಮುದದಲಿಂದ ಮಸುಧೆಯನ್ನು|ಎದೆಯಲೊತ್ತಿ ನಡೆವನಿಂದ| ಒದಗಿ ತನ್ನ ಶರೀರ ತೊರೆದನಾ|ತಂದೆಯಾ ವಿದಿತ ಮುತೈಯ್ಯನ ಮಗನ|ಚದುರತಮ್ಮನರಸಿ ಪಡೆದ ಉರದಿ ಮಗಳ ಪ್ರಾಣದರಸನಾ||ನೆನೆವೆನಾ 2 ನೃಪನಬಿಂಕ ಶಿಷ್ಯರಿಂದ|ಅಪಹರಿಸಿದವನ ಮಗನ| ಚಪಲ ಬಾಣ ಬರಲು ಸ್ಥಳವನು|ತಪ್ಪಿಸಿ ವಿಷದ ಹರಿಸಿ ಕಾಯ್ದೆನೈವರ|ನಿಪುಣ ಮಹೀಪತಿನಂದನ| ಕೃಪೆಲಿ ಪೊರೆವ ಉತ್ತುಮೊತ್ಮನಾ||ನೆನೆವೆನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ವಾಯುದೇವರು - ಹನುಮಂತ ಎಂಥ ವೈರಾಗ್ಯ ಹನುಮಂತ ಎಂಥ ಸೌಭಾಗ್ಯ ಗುಣವಂತ ಪ ಸಂತತ ರಾಘವನಂಘ್ರಿ ಕಮಲದಲಿ ಅಂತರಂಗ ಭಕುತಿಯ ಬೇಡಿದೆಯೊ ಅ.ಪ ಆವರಿಹರು ನಿನ್ಹೊರತು ರಾಘವರ ಭಾವವರಿತು ಪ್ರತಿ ಕ್ಷಣಗಳಲಿ ಸೇವೆ ಸಲಿಸಿ ದಯ ಪಡೆಯಲು ಭೋಗವ ದಾವದನುಭವಿಸೆ ದುರ್ಲಭವು ಜೀವೋತ್ತಮನದ ಬಯಸದೆ ಏಕೋ ಭಾವದಿ ಪದಸೇವೆಯ ಕೇಳಿದ ವೀರ 1 ಜ್ಞಾನಪರಾಕ್ರಮ ಧ್ಯೆರ್ಯವೀರ್ಯಕಧಿ ಷ್ಠಾನ ಪವನಸುತ ಜಗತ್ರಾಣ ನೀನಲ್ಲದೆ ಖಗಮೃಗ ಸುರನರರುಗ ಳೇನು ಚಲಿಸಬಲ್ಲರೊ ಹನುಮ ಪ್ರಾಣಭಾವಿ ಚತುರಾನನ ಭುವಿಯೊಳ ಗೇನು ರುಚಿಯೊ ಕಲ್ಯಾಣಚರಿತ ನಿನಗೆ 2 ಕಪಿ ರೂಪದಿ ದಶಕಂಧರನ ಮಹಾ ಅಪರಾಧಕ್ಕೆ ಶಿಕ್ಷೆಯನಿತ್ತೆ ನೃಪರೂಪದಿ ದುರ್ಯೋಧನನಸುವನು ಅಪಹರಿಸಿದೆಯೋ ಬಲ ಭೀಮ ವಿಪುಲ ಪ್ರಮತಿ ವರವೈಷ್ಣವ ತತ್ವಗ ಳುಪದೇಶಿಸಿದ ಪ್ರಸನ್ನ ಯತಿವರೇಣ್ಯ3
--------------
ವಿದ್ಯಾಪ್ರಸನ್ನತೀರ್ಥರು
ಶಂಕರ ದೇವನಾಲಂಕಾರ ಶಯನ ಶಂಖ ನೃಪನ ಪಾಲಾ ಶಂಖಾದಿ ಸೂದನ ಶಂಕೆಯಿಲ್ಲದೆ ತಾಯಿ ಸಂಕಲೆ ಕಡಿದ ಶಶಾಂಕಕೋಟಿ ಪ್ರಭಾವ ಸಂಕರುಷಣ ದೇವ ಶಂಖಾರಿಧರನೆ 1 ಕಂಬದಿ ಬಂದಚ್ಯುತನೆ ಗೊಲ್ಲರ ಸಲಹಿದ ಗೋವರ್ಧನಧರ ಪುಲ್ಲ ಲೋಚನನೆ2 ಅಖಿಳ ಅಸುರರ ಶಕುತಿಯ ಅಪಹರಿಸಿದ ಅದಿತಿ ರುಕ್ಮಿಣಿಯೊಡನೆ ವಿಹಾರ ಸಕಲ ಸುರರೊಡೆಯ ಸಾಮಗಾಯನಲೋಲ ಶಕುಜನಕನೆ3 ಶಾಮಲ ಶರೀರ ವರ್ಣ ವಿನುತ ರೋಮ ರೋಮ ಕೂಪದಿ ಆನಂದ ಭರಿತ ದಾಮೋದರ ವಿಶ್ವದಾನಿಗಳರಸನೇ ಸಾಮಜವರದ 4 ಸನ್ನುತ ಚರಣ ಅನಿರುದ್ಧ ದೇವನೆ ಅಸುರ ಸಂಹರಣಾ ಕನಕಗರ್ಭಾದಿ ಸುರಕಟಕ ಪಾಲಕನೆ ವನಜ ಜಾಂಡವ ಪೆತ್ತ ವೈಕುಂಠ ಪುರಾಧೀಶ 5 ಫಣಿ ಫಣ ಮರ್ದನ ಪ್ರಣವ ಪ್ರತಿಪಾದ್ಯ ಪ್ರ ಸನ್ನವದನಾ ರಣರಂಗ ಭೀಮಾ ಭಕುತ ಜನ ಮೋದನಾ ಅಣು ಸ್ಥೂಲದಲಿ ಗಮನ 6 ಶ್ವೇತವಾಹನನ ಸಮರದಿ ಕಾಯಿದಾ ಅಖಿಳ ಜೀವ ಭೇದಾ ದರ ಪರಮ ಸುಮೋದಾ ಭೀತಿರಹಿತ ಕಲ್ಪಭೂಜನೆನಿಪ ಜಗನ್ನಾಥವಿಠ್ಠಲನೆ 7
--------------
ಜಗನ್ನಾಥದಾಸರು
ಶೌರಿ ನಿನ್ನಯ ಭಕ್ತ ನಾನೆನ್ನಿಸೊ ಪ ಇಂದುವರನಂದದಲಿ ಬಂದೆ ನೀ ಕನಸಿನಲಿ ಇಂದಿರಾಪತಿಯೆಂದೆ | ಹುಸಿನಗೆಯಲಿ ಒಂದು ಶಿವಚರಿತೆ ಪೇಳೆಂದು ಗುರುರೂಪದಲಿ ಅಂದಿತ್ತ ದರ್ಶನವೆ ಸಾಕು ಎನಗೆ 1 ವಾರಿನಿಧಿಯೊಳು ಮುಳುಗಿ ದಾರಿಕಾಣದ ಮುನಿಗೆ ತೋರಿದಾ ಶಿಶುರೂಪ ಸಾಕು ಎನಗೆ ಘೋರ ಕಾನನದಲ್ಲಿ ಜಾನಿಸಿದ ಬಾಲನಿಗೆ ಸಿರಿ ಮೊಗವೆ ಸಾಕು ಎನಗೆ 2 ಅರಸಿಯಾಲಿಂಗನವ ಅರೆಘಳಿಗೆ ಬಿಡದವಗೆ ಕರುಣದಿಂ ನೀತೋರ್ದ ಚರಣ ಸಾಕೆನಗೆ ಪರರ ದಂಡಿಸಿ ಧನವ ಅಪಹರಿಸಿದಾತಂಗೆ ಗುರುವೆನಿಸಿದಾ ರೂಪ ಸಾಕು ಎನಗೆ 3 ಘೋರ ರೂಪವ ಗಳಿಸಿ ನಾರಣಾಯೆಂದವಗೆ ತೋರಿದಾ ಕಾರುಣ್ಯವಿರಲಿ ಎನ್ನೊಳಗೆ [ಹದಿ ನಾ]ರು ಸಾಸಿರ ಜನರ ಗುಂಪಿಂದಲೈತಂದು ತೋರಿದಾ ದ್ವಿಜರೂಪ ಸಾಕು ಎನಗೆ4 ರಂಗನಾಥನು ನೀನೆ ಗಂಗಾಧರನು ನೀನೇ ಮಾಂಗಿರಿಯ ಶೃಂಗಾರ ನಿಲಯ ನೀನೇ ಅಂಗಜನ ಪಿತನೀನೆ | ಅಂಗಜಾರಿಯು ನೀನೆ ಮಂಗಳಾಂಗನೆ ಭವದ ಹಂಗ ಬಿಡಿಸೋ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಜಯಮಂಗಳಂನಿತ್ಯ ಶುಭಮಂಗಳಂ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಜಯತುಂಗಲಕ್ಷ್ಮೀಪತಿ ನರಸಿಂಹಗೆಪ.ಕಂದರ್ಪನಯ್ಯಗೆ ಕೋಟಿ ಲಾವಣ್ಯಗೆಮಂದರೋದ್ಧಾರ ಮಧುಸೂದನನಿಗೆ ||ಕಂದ ಪ್ರಹ್ಲಾದನನು ಕಾಯ್ದ ದೇವನಿಗೆ ಶ್ರೀ -ಇಂದಿರಾ ರಮಣ ಸರ್ವೋತ್ತಮನಿಗೆ 1ಕರಿರಾಜ ವರದನಿಗೆ ಕರುಣಾ ಸಮುದ್ರನಿಗೆಸರಸಿಜೋದ್ಭವ - ಭವವಂದ್ಯ ಹರಿಗೆ ||ಗಿರಿಯರಸು ಕಾವೇರಿಪುರದ ರಂಗಯ್ಯಗೆಗಿರಿರಾಜಪತಿವಂದ್ಯ ಸುರರ ನಿಧಿಗೆ 2ಅಂಬರೀಷನ ಶಾಪ ಅಪಹರಿಸಿದವನಿಗೆತುಂಬುರ ನಾರದ ಮುನಿವಂದ್ಯಗೆ ||ಕಂಬುಕಂಧರಪುರಂದರ ವಿಠಲರಾಯಗೆಅಂಬುಜನಾಭಗೆ ಅಜನಪಿತಗೆ 3
--------------
ಪುರಂದರದಾಸರು