ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆತ್ಮನಿವೇದನೆ ಅಚಿಂತ್ಯಾದ್ಭುತ ಮಹಿಮ ಈ ಸಚರಾಚರದೊಳು ಪ್ರಚುರನಾಗಿಹೆ ದೇವಾ ಮುಚುಕುಂದವರದಾ ಪ ಅಚಲಭಕುತಿಯು ನಿನ್ನ ಚರಣದಿ ಕಿಂಚಿತಾದರೂ ಪ್ರಚುರಮಾಡಿಸು ಅತಿಚಂಚಲನು ಬಲು ವಂಚಕನು ನಾ ಅನು- ಚಿತೋಚಿತ ಕರ್ಮವರಿಯೆನೋ ಅ.ಪ ವಿಪಿನವಾಸದಿ ಎನಗೆ ವಿಪರೀತವನು ತೋರಿ ಅಪರಾಧವೆಣಿಸದೆ ಪಾಲಿಸಿದೇ ಕೃಪಣವತ್ಸಲ ನೀನೇ ಕೃಪೆಮಾಡಿ ಸ್ವಪನದಿ ಅಪರಿಮಿತದ ವಿಶ್ವರೂಪವ ನೀ ತೋರ್ದೆ ಅಪರಾಧಿ ನಾನಹುದೋ ಸ್ವಾಮಿ ಅಪವರ್ಗಪ್ರದನು ನೀನು ಸಫಲಗೊಳಿಸಿದೆ ಎನ್ನ ಮನದನು- ತಾಪವನು ಪರಿಹರಿಸಿ ಕಾಯ್ದೆ ನಿನ್ನಡಿದಾವರೆಯ ನಂಬಿದೆನೋ ಶ್ರೀ ಪರಮಹಂಸರಿಂದ ನುಡಿಸಿದ ರಹಸ್ಯಗಳು ಅದುಏನೋ ಶ್ರೀ ಪುರುಷೋತ್ತಮನೆ ನೀನೆನ್ನಭಯಹಸ್ತದಿ ಕರೆದ ಪರಿಯೇನೋ ಅದನೊಂದನರಿಯೆನೊ ಈಪರಿಯ ಕರಚರಣದಲಿ ಚರಿಸಿದ ಅನುಪಮ ಕ್ರಿಯೆಯ ನೋಡಿ ಮನದೊಳು ಸುಪುತಕಾಲದಿ ತೈಜಸನೆ ನೀನೆನ್ನ ಪುಳುಕಾಂಕಿತನ ಮಾಡಿದೇ 1 ಅಮಿತ ಕಾರ್ಯವನೆಸಗೀ ಬಲು ಯಾತನೆಗೊಂಡು ಇಳೆಯೊಳು ಬಾಳೀ ದು- ರ್ಬಲನಾಗಿದ್ದರು ಎನ್ನ ಛಲವು ತೊಲಗಲಿಲ್ಲ ಜಲಜನಾಭನೆ ನೀನೆ ಕರುಣಿಸಿ ಸಲಹದಿರ್ದೊಡೆ ಪ್ರ- ಬಲರೆನ್ನನು ಕವಿದು ಮನಚಂಚಲವ ಪುಟ್ಟಿಸೀ ವಲೀಮುಖನಂತಾಡಿಸುವರೋ ಕಲಿಮಲವನ್ನೆ ಪರಿಹರಿಸುವುದೋ ಮನದಿ ಎಡೆಯು ದುರ್ಲಭವೋ ಒಲುಮೆಯಿಂದಲಿ ಸಾಧಿಸಲು ಎಲ್ಲೆಡೆಯ ಸರ್ವತಂತ್ರ ಸ್ವಾತಂತ್ರ್ಯ ನಿನ್ನದೋ ಭೋ ಜಗತ್ಪತೇ ಕಾಲನಾಮಕ ನೀನೆ ಆಪತ್ಕಾಲಬಾಂಧವವೆಂದು ನಂಬಿದೆ ಜಾಲಮಾಡದೆ ಎನ್ನ ಜೀವಿತದಲ್ಪಕಾಲದಿ ಕರುಣೆ ತೋರೈ2 ತುಷ್ಟನೆಂತಾಗುವೆಯೊ ಭ್ರಷ್ಟಪಾತಕಿ ನಾನು ಕಷ್ಟವಲ್ಲವೋ ನಿನಗೆ ಶ್ರೇಷ್ಟಮೂರುತಿಯೆ ಇಷ್ಟಮೂರುತಿಯೆಂದು ಇಷ್ಟು ನುಡಿದೆನೊ ಸಾಷ್ಟಾಂಗ ನಿನ್ನೊಳು ಇರಲೋ ಇಷ್ಟೇ ಎನ್ನದೊ ದೇವಾ ಕಷ್ಟಕಷ್ಟವೊ ಬೆಟ್ಟದೊಡೆಯ ಕೊಟ್ಟುದಷ್ಟು ನಿನ್ನದಯ್ಯಾ ಇಷ್ಟೆಬೇಡುವೆ ಎನಗೆ ಎ- ಳ್ಳಷ್ಟು ಭಕುತಿಯ ಕೊಡದಿರುವೆಯಾ ಸೃಷ್ಟಿಸ್ಥಿತಿಲಯನಿಯಮನಾದ್ಯಷ್ಟ ಕತೃತ್ವವು ನಿನ್ನದೊ ಅಷ್ಟಾಂಗಯೋಗದಿ ತುಷ್ಟಪಡಿಸೆ ತನುಮನೋಧಿಷ್ಟಾನವು ನಿನ್ನದೊ ಶ್ರೇಷ್ಠಮೂರುತಿ ಸುಲಭದಲಿ ನೀ ದೃಷ್ಟಿಗೋಚರವಾಗುವುದು ಇನ್ನೆಂತೋ ಹಾ ಕಷ್ಟಕಷ್ಟವೋ ಸೃಷ್ಟಿಯೊಳು ನಾನೆಷ್ಟರವ ನಿನ್ನಿಷ್ಟಬಂದಂತಾಗಲಿ ಭವ- ಶ್ರೀ ವೇಂಕಟೇಶ ಉರಗಾದ್ರಿವಾಸವಿಠಲ 3
--------------
ಉರಗಾದ್ರಿವಾಸವಿಠಲದಾಸರು
ಕೃಪಣ ಶಿಷ್ಯನಿಗೇಅಪವರ್ಗಪ್ರದ ಹರಿಯೆ | ಅಪವಾದ ಕಳೆಯೋ ಅ.ಪ. ದಾಸನಾದವನು ನಿ | ರ್ದೋಷಿ ಎನುವುದು ನಿಜದಾಸನೆನೆ ಹನುಮಂಗೆ | ಲೇಸು ಸಲ್ಲುವುದೋ |ದಾಸರನುಯಾಯಿ ನರ | ದೂಷಣೆಗೆ ಒಳಗಾಗಿಕ್ಲೇಶ ಪಡುವುದು ಉಚಿತೆ | ಶ್ರೀಶ ಸರ್ವೇಶಾ 1 ಫಲವು ತುಸು ಕೆಟ್ಟಿರಲು | ಆ ಉಪಭಾಗವ ಬಿಸುಟುಮೆಲುವುದಿಲ್ಲವೆ ಫಲವ | ಹಲವು ಜನರೂಕಲಿಮಲಘ್ನನೆ ಹರಿಯೆ | ಕಲುಮಷವನೆ ಕಳೆಯುತ್ತಕಲುಷ ದೂರನ ಗೈಯ್ಯೋ | ಬಲು ದಯಾ ಪೂರ್ಣಾ 2 ಶಿರಿಮಾಧವಾ ಭಿನ್ನ | ಗುರು ಗೋವಿಂದ ವಿಠಲಕರುಣಾಪಯೋನಿಧಿಯೆ | ಸರ್ವಾಂತರಾತ್ಮತರಳಗೊದಗಿಹ ವಿಪದ | ಪರಿಹರವ ಗೈಯ್ಯುತ್ತಕರುಣಿಸೆನೆ ಮನಶಾಂತಿ | ಹರಿಯೆ ಭಿನ್ನವಿಪೇ 3
--------------
ಗುರುಗೋವಿಂದವಿಠಲರು
ಜಾನಕೀವರತೇ ಜಯ ಮಂಗಳಂ ಪ ಮಾನವಾಧಿಪತೇ ಮಂಗಳಂ ಅ.ಪ ರಾವಣಾನುಜಮಿತ್ರ ರಮಣೀಯ ಸುಚರಿತ್ರ ದೇವಾಧಿದೇವ | ತೇ ಮಂಗಳಂ 1 ಅಪವರ್ಗಪ್ರದ ತೇ ಮಂಗಳಂ 2 ಖರದೂಷಣನಿಹಂತ ಕರಧೃತಶರಚಾಪÀ ಗುರುರಾಮವಿಠಲತೇ ಮಂಗಳಂ 3
--------------
ಗುರುರಾಮವಿಠಲ
ವರಗುರು ತಂದೆ ಮುದ್ದು ಮೋಹನದಾಸರೆಗಿತ್ತರು ಲೇಸ ಪರಮ ಸಂಭ್ರಮದೊಳಿವರ ಸಹವಾಸ ಕರುಣಿಸಿದನು ಶ್ರೀಶ ಪ ರಾಗ ದ್ವೇಷಾದಿಗಳಿವರೊಳಗಿಲ್ಲ ಪಾಮರರಿವರಲ್ಲ ಶ್ರೀ ಗುರುಗಳೆನಗಿವರೆಂದು ಸ್ತುತಿಪನಲ್ಲ ಲಾಲಿಪುದೆನಸೊಲ್ಲ 1 ಶುಭ ಚರಿತೆಯನು ಜ್ಞಾನಿಗಳೆಂಬುದನು ಖುಲ್ಲ ಜನ ನಿಂದಿಸಿದರಾಗುವದೇನೊ ಅರಿಯೆನಯ್ಯ ನಾನು 2 ಪಾದ ಸರಸಿರುಹಕೆ ಭ್ರಮರರೆನಿಸುವ ಗುಣಯುತರ ಕುಜನಗಳೇನು ಬಲ್ಲರಯ್ಯ ಇವರ ಮಹಿಮಂಗಳ ವಿವರ 3 ಕರಿಗಿರಿಯೆಂಬ ವರಕ್ಷೇತ್ರದಲ್ಲಿ ವರುಷಂಪ್ರತಿಯಲ್ಲಿ ಹರಿದಾಸೋತ್ತಮ ಧರಣಿಸುರರನಲ್ಲಿ ಬಲು ಸೇವಿಪರಲ್ಲಿ 4 ಇಷ್ಟದೈವ ಅಪವರ್ಗಪ್ರದನೆಂಬ ಶ್ರೀ ನರಹರಿಯೆಂಬ ದಿಟ್ಟ ಶ್ರೀ ರಂಗೇಶವಿಠಲನ ಬಿಂಬಾಕೃತಿಯ ಸದಾ ಕಾಂಬ 5
--------------
ರಂಗೇಶವಿಠಲದಾಸರು