ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀಲೋಲನೆ ಪರಿಪಾಲಿಪುದೆಮ್ಮನು ಕಾಲವಿಳಂಬಿಸದೇ ಪ. ಪೇಳಲೆಮಗೀ ನಾಲಿಗೆ ಸಾಲದು ಅ.ಪ ಅನಿಮಿಷರೂಪದಿಂದಾಗಮವನು ನೀನಜನಿಗೆ ತಂದಿತ್ತೆ ಪೂರ್ವದಿ ಘನ ಕಚ್ಛಪರೂಪದೊಳಾಗಿರಿಯನು ಬೆನ್ನೊಳಗಾಂತೇ ಅನಿಮಿಷರೊಡೆಯನ ಮನವನು ತಣಿಸಿದ ಫನಮಹಿಮನೆ ಶ್ರೀ ವನಜಜ ಜನಕನೆ ಶ್ರೀಲೋಲನೆ 1 ದುರುಳನ ಕರದಲಿ ಧರಣಿಯು ಸಿಲುಕುತ ಕರೆಕರೆಗೊಳ್ಳುತಿರೆ ವರಸೂಕರನಾಗುತ ದುರುಳನ ಛೇದಿಸಿ ಧರಣಿಯ ಕೈಪಿಡಿದೆ ಮತ್ತೆ ತರಳನ ಪೊರೆಯಲು ನರಕೇಸರಿ ರೂಪದಿ ಹಿರಣ್ಯಕನುದರದ ಕರುಳನು ಕಿತ್ತೆಸೆದೆÉೀ ಶ್ರೀಲೋಲನೆ 2 ಕಪಟತನದಲಿ ವಟುವಂದದಿ ಬಂದು ನೆಲವದಾನವ ಬೇಡಿ ಕಪಟವನರಿಯದೆ ದಾನವ ಕೊಟ್ಟನ ಪಾತಾಳಕೆ ಗುರಿ ಮಾಡಿ ಅಪರಿಮಿತಾನಂದದಿ ಮೆಚ್ಚಿ ಬಲೀಂದ್ರನ ಮನೆಬಾಗಿಲ ಕಾಯುವ ಗೊಲ್ಲ ನೀನೆನಿಸಿದೆ 3 ವರಮುನಿ ಜಮದಗ್ನಿಯ ರೇಣುಕಾಸುತ ಭಾರ್ಗವ ನೀನಾಗಿ ವರಪರಶುದರನೆಂದೆನ್ನಿಸಿ ಭೂಭುಜರನು ತರಿದಟ್ಟಿ ಧರಣೀಸುರರಿಗೆ ಸುರತರುವೆನಿಸಿದ 4 ಹರವಿರಂಚಿಯರ ವರಗಳ ಗರ್ವದೆ ದಶಶಿರದೈತ್ಯನು ಮೆರೆದು ಪರಿಪರಿ ವಿಧದಿಂ ಸುರಭೂಸುರರನು ಕರೆಕರೆಗೊಳಿಸುತಿರೆ ಧರಣಿಪ ದಶರಥ ತನುಭ ವರೆನ್ನಿಸಿ ನಿಶಿಚರ ಕುಲವನೇ ಸವರಿದ ರಾಘವ 5 ಅಷ್ಟಮದಂಗಳ ದಟ್ಟಣೆಯಿಂದತಿ ಅಟ್ಟಹಾಸದಿ ಮೆರೆದಾ ದುಷ್ಟ ಕಂಸನ ಮರ್ಧಿಸಿ ಧರಣಿಯ ಶಿಷ್ಟರ ಪಾಲಿಸಲು ವೃಷ್ಟಿವಂಶದಿ ಬಂದು ಕೃಷ್ಣನೆನಿಸಿ ತನ್ನ ಇಷ್ಟರಾದ ಪಾಂಡುಪುತ್ರರ ಸಲಹಿದ6 ಸಿದ್ದಿ ಸಂಕಲ್ಪದಿ ಬಲಭದ್ರನೆನ್ನಿಸಿ ಭವಬದ್ಧ ಜೀವಿಗಳಂ ಶುದ್ಧ ಮಾರ್ಗದಿ ಸಂಸ್ಕರಿಸಿ ಜಗವನು ಉದ್ಧರಿಸಲ್ಕಂಡು ಬುದ್ಧನೆಂದೊಳಿಸಿ ಮೆರೆದ ಸಂಕರ್ಷಣ ಭದ್ರಮಂಗಳ ಭವ್ಯಸ್ವರೂಪನೆ7 ಕಲಿಮಲದೋಷವ ತೊಳೆಯಲು ಪುನರಪಿ ಕಳೆಯೆ ನೀನೈತರುವೆ ಫಲತೆರದಲಿ ಭಕ್ತರ ಸಲಹಲು ಫಲರೂಪಗಳ ಕೈಕೊಳುವೆ ಹಲುಬುವ ಕಂದನ ಸಲಹೈ ಸಿರಿದೊರೆ 8
--------------
ನಂಜನಗೂಡು ತಿರುಮಲಾಂಬಾ
ಸರಸಿಜಾಲಯವೆನಿಪ ಸೊಗಸಿನ ವರರತ್ನ ಮಂಟಪದೊಳು ಸಿರಿದೇವಿಯೊಡನೆÉ ನೀಂ ಶಯನಿಸು 1 ಚಪಲಾಕ್ಷಿ ಶ್ರೀದೇವಿಯುಪಚಾರದಿಂ ನಲಿದು ಅಪರಿಮಿತಾನಂದದಿಂ ಶಯನಿಸು 2 ಸಂಭ್ರಮದಿ ಕೇಳುತ್ತ ಅಂಬುಜೋದ್ಬವ ತಾತ ಅಂಬುಜಾನನೆಯೊಡವೆರಸಿ ನಲಿಯುತ 3 ಗರುಡ ಪವನಜರೆಂಬುವ ನಿನ್ನಂಘ್ರಿಸರಸಿಜವ ಸೇವಿಸುವ ಪರಮಭಕ್ತರು ಬಂದು ಕರಮುಗಿದು ನಿಂದಿರಲು ಕುಡುತೆ ಮುದವಂ4 ವರಶೇಷಗಿರಿನಿಲಯನೆÀ ಜಯಜಯತು ವರದನಾರಾಯಣನೆ ಕರವಿಡಿದು ಪೊರೆಯೆನ್ನ ದೊರೆ ಮರೆಯೆ ನಾನಿನ್ನ ಪರಮಮಂಗಳೆಯೊಡನೆ ನೀಂ ಪರುಕಿಸೆನ್ನ 5
--------------
ನಂಜನಗೂಡು ತಿರುಮಲಾಂಬಾ