ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಹಿ ರಮಾ ಮನೊಹರ ಪಾಪಿ ಪ ಪಾಹಿ ಸದಾಗಮವೇದ್ಯ ಸಕಲ ಕ ಲ್ಯಾಣ ಗುಣಾರ್ಣವ ಲೀಲಾಮಾನುಷ ಅ.ಪ ಆನೆಯೊಂದು ಕರೆಯಲು ಆ ಕ್ಷಣದಲಿ ನೀನೇ ಬಂದುದೇಕೆ ದೇವ ನೀನೇ ಪಡೆದ ಮಕ್ಕಳ ದೈನ್ಯದ ನುಡಿ ನೀನಲ್ಲದೆ ಕೇಳುವರ್ಯಾರಿರುವರು1 ತುರುವಿನ ಕೆಚ್ಚಲ ಕರು ಗುದ್ದಿದರದು ಕರೆಯದೇ ಕ್ಷೀರವನು ದೇವ ಮರೆತು ಎನ್ನ ಅಪರಾಧಗಳೆಲ್ಲವ ಮರೆಯದಿರೆಲೊ ಎನ್ನಯ ಬಾಂಧವ್ಯವ 2 ಅತ್ತು ಕರೆದು ಔತಣ ನೀಡಿದ ಪರಿ ನಿತ್ಯ ಸೇವೆಯಾಯ್ತೋ ಕೃಷ್ಣ ನಿತ್ಯ ಪೂರ್ಣ ಕರುಣಾಮಯ ಕರುಣಿಸೊ ಚಿತ್ತ ಪ್ರಸನ್ನತೆ ಸಾರ್ಥಕ ಜೀವನ 3
--------------
ವಿದ್ಯಾಪ್ರಸನ್ನತೀರ್ಥರು
ವಾಸುದೇವ ನಿನ್ನ ದಾಸನಾಗಲು ಬಲು ಆಸೆಯ ಪೊಂದಿ ಸಂತೋಷದಲಿರುವೆನೊ ಪ ಈ ಸಂಸಾರದ ಮೋಸಕೆ ಸಿಲುಕೆ ನಾ ಶ್ರೀಶನ ಚರಣವ ಲೇಶ ಭಜಿಸಲಿಲ್ಲ ಪಾಶಕೆ ಸಿಲುಕದ ಸುಜನರುಗಳ ಸಹ ವಾಸವಿತ್ತು ಅವಕಾಶವ ನೀಡೊ ಅ.ಪ ಸಾರುತಲಿರುವ ಸಮೀರ ಸಮಯಗಳ ಸಾರವನರಿಯದೆ ದೂರಿದೆ ನಿನ್ನನು ಯಾರ ಕರುಣವೊ ತೋರಿತು ಮನದಲಿ ಘೋರತರದ ಅಪರಾಧಗಳೆಲ್ಲವು ಭೂರಿ ದಯದಿ ನಿನ್ನ ಚಾರು ಚರಣದಲಿ ಸೇರಿಸೊ ಮನವ 1 ಪರಿಪರಿ ವಿಧದ ಕುಶಾಸ್ತ್ರಗಳೋದಲು ಬರಿಗಾಳಿಯ ಗುದ್ದಿ ಮುರಿದವು ಕರಗಳು ಸಿರಿರಮಣನೆ ನಿನ್ನ ಪರಿಚಾರಕನೆಂಬೊ ಅರಿವಿನಿಂದಲೆ ಪರತರ ಸುಖವೆಂದು ಪರಿಪರಿಯರುಹುವ ಗುರು ಮಧ್ವರಾಯರ ವರಶಾಸ್ತ್ರಗಳಿಗೆ ಸರಿಯುಂಟೆ ಜಗದೆ 2 ಅನ್ಯಸೇವೆಗಳಲ್ಲಿ ಅನ್ಯಾಯದಿ ಕಾಲ ಮುನ್ನ ಕಳೆದುದನು ಮನ್ನಿಸೆಲೋ ಹರಿ ನಿನ್ನ ಸೇವೆಯ ಸುಖವನ್ನು ಅರಿತೆನೊ ಎನ್ನ ಮನಕೆ ಬಲವನ್ನು ಕರುಣಿಸುತ ಇನ್ನಾದರು ಚ್ಯುತಿಯನ್ನು ಪೊಂದಿಸದೆ ನಿನ್ನ ದಾಸನಲಿ ಪ್ರಸನ್ನನಾಗೆಲೊ 3
--------------
ವಿದ್ಯಾಪ್ರಸನ್ನತೀರ್ಥರು