ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರಕಮಲ ತಡೆಯುವುದೆ ಕಟುಖಾರವಾ ನಿತ್ಯ ಪೂಜಿಸುವ ಕೋಮಲದಾ ಪ. ಪರಿವಾರ ಜನವು ಭೋಜನಕೆ ಕುಳಿತಿರಲು ನರ ಹರಿಗೆ ಅರ್ಪಿತದ ಹುಳಿಯಲ್ಲಿ ಕರವಿಟ್ಟು ಪರಿಪಕ್ವ ಶಾಖದ ಹೋಳುಗಳ ಬಡಿಸಲು ಕರ ಕರೆಗೆ ಸಿಲುಕೇ 1 ಮಧ್ವದುಗ್ಧಾಭ್ಧಿಯಲಿ ಜನಿಸಿದ ಸುಧಾರಸವ ಶುದ್ಧ ದೃಷ್ಟಿಯಲ್ಲೀ ಸವಿಸವಿದು ಮಧುರಾ ಹೃದ್ವಜದಲಿ ತುಂಬಲನುವಾದ ಪುಸ್ತಕವ ಮುದ್ದಾಗಿ ಪಿಡಿಯಲನುಕೂಲವಾಗಿ ಇಂಥ 2 ಗಂಧ ಕುಸುಮಾಕ್ಷತೆಗಳಿಂದ ಶ್ರೀ ತುಳಸಿದಳ ದಿಂದ ವಿಠ್ಠಲ ಕೃಷ್ಣ ಲಕ್ಷ್ಮಿನರಹರಿಯಾ ವೃಂದ ಸಾಲಿಗ್ರಾಮ ಹನುಮ ಯತಿಕುಲಜರುಗ ಳಿಂದ ಸಹಿತದಿ ಪೂಜೆ ವಿಭವದಲಿ ಗೈದಾ 3 ಮಧುರಾನ್ನ ಸವಿದು ಮಧುಸೂದನನ ಗುಣಗಳನು ವಿಧವಿಧದಿ ಮಧ್ವಗ್ರಂಥದಿ ಕಂಡು ನಲಿದೂ ಹೃದಯ ನಿರ್ಮಲದಿ ಆಲಿಸುವ ಭಕ್ತರಿಗೆ ಮಧುರ ರಸಮನದ ಎಡೆಯಲ್ಲಿ ಬಿಡಿಸುವ ಇಂಥ 4 ಗೋಪಾಲಕೃಷ್ಣವಿಠ್ಠಲನ ಭಕ್ತರು ಬಂದು ಶ್ರೀಪಾದಕೆರಗೆ ಸಿರದಲ್ಲಿ ಅಕ್ಷತೆಯಾ ಅಪಾರ ಕರುಣದಿಂದಲಿ ಸೂಸಿ ನಲಿಯುತಲಿ ಅಪತ್ತು ಕಳೆವ ಶ್ರೀ ಪ್ರದ್ನುಮ್ನತೀರ್ಥಯತಿ 5
--------------
ಅಂಬಾಬಾಯಿ
ಪಾರಾಯಣ ಮಾಡಿರೋ ಭವ ಪಾರಾವಾರದೊಳುತ್ತಾರಕವಿದು ನೋಡಿರೋಪ ಶರೀರನೆಚ್ಚಿರಬೇಡಿರೋ ಸಾರುವ ಮೃತ್ಯುವ ದಾರಿಗೆ ಗೋಚರ ಧಾರಿಣಿಯಲಿ ಪೇಳಿರೋ1 ಸಾಹಸ ಪಡಬೆಡಿರೋ ದೇಹಗೇಹಂಗಳನೂಹಿಸಿ ಸಂಗಡ ಬಾಹವೆಂದಿರ ಬೇಡಿರೊ2 ದೇಹರಕ್ಷಣೆಗೆಂದು ಗೇಹವನಿರ್ಮಿಸಿ ನೇಹದಿ ನಾರಿಯೊಳು ಗೇಹಿನಿಯೆಂದತಿ ಮೋಹದಿ ಕೆಡುವನು ದೇಹಿಸಂಸಾರದೊಳು3 ಮಾರಿಯಲ್ಲವೆ ಕೇಳಿರೋ ನಾರಿಯಾರಿಗೆ ಮಕ್ಕಳಾರಿಗೆ ಜೀವಿತದಾರಿಯೆಲ್ಲಿಗೆ ಪೇಳಿರೋ4 ಬಾರಳು ಕಂಚುಕನ್ನಡಿಬಾರದೀ ಸಂಚಿತ ದ್ರವ್ಯದಿ ಕೊಂಚವು ಬಾರದು ವಿಸಂಚಿಗೆ ದೇಹವಿದು5 ಹಲವು ಸಾಹಸದಿಂದ ಘಳಿಸಿದರ್ಥಗಳೆಲ್ಲ ಬಳಸಿನ ಬಾಂಧವರು ಒಲಿದುಕೊಂಡಾಡುವರು6 ಅರ್ಥವಿದ್ದವನ ಸಮರ್ಥನೀತನ ಜನ್ಮಸಾರ್ಥಕವೆಂಬುವರು ಜನ್ಮವ್ಯರ್ಥವೆಂದುಸುರುವರು 7 ರೊಕ್ಕವಿದ್ದರೆ ಕೈಲಿ ಸಕ್ಕರೆ ಮಾತಿನೊಳಕ್ಕರೆ ಪಡಿಸುವರು ರೊಕ್ಕವಿಲ್ಲದವನ ಮಕ್ಕಳು ಮಡದಿಯರು ಲೆಕ್ಕಿಸದಿರುತಿಹರು 8 ಮರಣವ ಪೊಂದುವರು ಮರಳು ಜಗಳಕೆ ತರಳರು ಚಾಚುತೆ ಕೊರಳನು ಕೊಯ್ಯುವರೋ 9 ಬಂಧುಗಳನ್ನು ಕೊಲ್ವರು ಒಂದಿಗೆ ಜನಿಸಿದರೆಂದು ನೋಡರುನಿಜ ದಂದುಗಕ್ಕೊಳಗಹರು10 ನಂಟರು ನಮಗಿವರುಂಟೆಂದು ಮೋಹದ ಗಂಟುಕಟ್ಟಿರೆ ಮನದಿ ಕಂಟಕ ಯಮಬಂದು ಗಂಟಲಬಿಗಿವಾಗ ನಂಟರಿಲ್ಲವು ಜಗದಿ11 ಅಪತ್ತುಬಂದಾಗ ಪಾಪಿಯು ಮನದನು ತಾಪದಿ ನೆನೆಯುತಿರೆ ಕಾಪಾಡುವನಾಗ ಶ್ರೀಪತಿ ಪುಲಿಗಿರಿ ಭೂಪನು ನಮ್ಮದೊರೆ12 ನೊಂದ ಗಜೇಂದ್ರನ ಕಂದ ಪ್ರಹ್ಲಾದನ ಬಂದವಿಭೀಷಣನ ಚಂದಿರಮುಖಿ ನೃಪನಂದನ ಧ್ರುವರನು ಚಂದದಿ ಸಲಹಿದನ 13 ಅಜಮಿಳಗೊಲಿದನ ಕುಜನರ ತರಿದನ ಸುಜನರನಾಳಿದನ ಭಜಕರದಾತನ ತ್ರಿಜಗಕ್ಕೆ ನಾಥನ ವಿಜಯನ ರಥಸೂತನ14 ಅಂಗಜಜನಕನ ಮಂಗಳ ಮಹಿಮನ ಗಂಗೆಯ ಪಡೆದವನ ರಂಗನ ಸುಗುಣ ತರಂಗನ ಶಂಖರಥಾಂಗವ ಪಿಡಿದಿಹಿನ15 ಖ್ಯಾತ ಪಾದಾಂಬುಜನ ವಾತನ ಮಗನೊಳು ಪ್ರೀತಿಯ ಬೆಳಸಿದ ಸೇತು ವಿಧಾತನ16 ರಾಮನ ಜಗದಭಿ ರಾಮನ ದೈತ್ಯವಿರಾಮನ ಭಜಕಜನಾ ರಾಮನ ದಶರಥರಾಮನ ಸೀತಾರಾಮನ ಗುಣಧಾಮನ17 ಪಂಕಜನೇತ್ರನ ಪರಮ ಪವಿತ್ರನ ಶಂಕರನುತಿಪಾತ್ರನ ವೆಂಕಟರಮಣನ ಕಿಂಕರ ಶರಣನ ಸಂಕಟ ಹರನಾಮನ18 ವರದ ವಿಠಲ ದೇವನ ಪೊರೆಯುವದಾನರನ 19
--------------
ಸರಗೂರು ವೆಂಕಟವರದಾರ್ಯರು
ಸ್ಮರಿಸೊ ಮನವೆ ಸಿರಿಲೋಲ ಶ್ರೀ ಕೃಷ್ಣನ ಸ್ಮರಿಸಲೊದಗುವ ಸ್ವಾಮಿ ಶ್ರೀ ವಿಷ್ಣುವಿನ ಧ್ರುವ ಸ್ಮರಿಸಿ ಕರಿರಾಜ ಸೆರೆಯಿಂದ ಬಿಡಲಿಲ್ಲವೆ ದುರಿತವನು ಗೆದ್ದರುಷಬಡಲಿಲ್ಲವೆ 1 ಪರಿ ಹರಿ ಮಹಿಮೆ ತಿಳಿಯಲಿಲ್ಲವೆ2 ಸ್ಮರಿಸಿ ದ್ರೌಪದಿ ಅಪತ್ತುಗಳಿಲಿಲ್ಲವೆ ಮೊರೆಯಗೇಳಿ ಕೃಷ್ಣ ಸುಳಿಯಲಿಲ್ಲವೆ 3 ಸ್ಮರಿಸಿ ಪಾಂಡವ ಸತ್ವವು ನಡೆಲಿಲ್ಲವೆ ಅರಗಿನ ಮನೆಯೊಳು ಉಳಿಲಿಲ್ಲವೆ 4 ಸ್ಮರಿಸು ಮಹಿಪತಿ ಮನವ ನಿಜಗೊಲಿಲ್ಲವೆ ಗುರು ಚರಣ ಸ್ಮರಿಸಿ ನೆಲೆಗೊಳಲಿಲ್ಲವೆ5
--------------
ಕಾಖಂಡಕಿ ಶ್ರೀ ಮಹಿಪತಿರಾಯರು