ಒಟ್ಟು 7 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನ ಮೊರೆಯ ಕೇ¼ಬಾರದೆ ಹೇ ಶ್ರೀನಿವಾಸ ಪ ಎನ್ನ ಮೊರೆಯ ಕೇಳದಿರೆ ಎನ್ನನಿವರು ಬದುÀಕಿಸರು ಇನ್ನು ಮಾಡಲೇನು ಎಂದು ನಿನ್ನ ಪದಕೆ ಸಾರಿದೆನು ಅ.ಪ ಇಬ್ಬರ್ರಮಣ ನಿನ್ನ ಪಾದ ಉಬ್ಬಿಮನದಿ ಭಜಿಪ ಎನಗೆ ಮಬ್ಬುಗವಿದು ತಾವು ಎನ್ನ ಮೊಬ್ಬಿನೊಳಗೆ ಕೆಡವಿದರೊ 1 ಅನ್ಯವಾರ್ತೆಬಿಟ್ಟು ನಾನು ನಿನ್ನ ಗುಣವ ಕೇಳ್ವೆನೆನಲು ನಿನ್ನವಾರ್ತೆಬಿಡಿಸಿ ತಾವು ಅನ್ಯವಾರ್ತೆ ಕೇಳಿಸೋರು 2 ನಿನ್ನ ನಾಮಸ್ತೋತ್ರಗಳು ಮನ್ನದಿಂದ ಪಠಿಪೆನೆನಲು ಎನ್ನ ಮಾತುಸಾಗಗೊಡದೆ ತಮ್ಮ ಮಾತು ಸಾಗಿಸುವರು 3 ನಿನ್ನ ಪಾದಕಮಲಗಂಧವನ್ನು ಗ್ರಹಿಪೆನೆನಲು ಎನಗೆ ಚೆನ್ನಗಂಧ ಬಿಡಿಸಿ ತಾವು ಘನ್ನದುರ್ಗಂಧ ಕೊಡುವರೋ 4 ನಿನ್ನಭಜಕರಂಗಸಂಗವನ್ನು ಮಾಳ್ಪೆನೆನಲು ಅದ ನನ್ನು ಬಿಡಿಸಿ ಪರರಾದವನ್ನು ತೇರ ಕೂಡಿಸೋರು 5 ನಿನ್ನ ಚಕ್ರ ಶಿಲಾಸ್ಪರ್ಶವನ್ನು ಮಾಳ್ಪೆನೆನಲು ಅದ ನನ್ನು ಬಿಡಿಸಿ ನೀಚÀಜನಾರನ್ನು ಸ್ಪರ್ಶಮಾಡಿಸೋರು 6 ನಿನ್ನ ಮನಿಗೆ ಬರುವ ಎನ್ನ ಚೆÉನ್ನವಾಗಿ ಕರೆದು ತಾವು ಅನ್ಯಮನಿಗೆ ವೈದು ಬಹಳ ಬನ್ನಬಡಿಸುವರಯ್ಯಾ 7 ಅನ್ಯಮನಿಗೆ ಪೋಗದಲೆ ಎನ್ನ ಮನೆಯ ಒಳಗೆ ನಾನು ಅನ್ನವಸನ ದಿಂದ ಇರಲು ಅನ್ಯಸದನಕೆಳದು ವೈವ 8 ಕಠಿಣ ಜನರು ಅªರು ಬಹÀಳ ಸಟೆಯುಅಲ್ಲವೆನ್ನ ಮಾತು ಥಟನೆ ಗುರುಜಗನ್ನಾಥವಿಠಲರೇಯ ಲಾಲಿಸೀಗ 9
--------------
ಗುರುಜಗನ್ನಾಥದಾಸರು
ಈಗಲೊ ಇನ್ನಾವಾಗಲೊ ಈ ತನುವು ಪೋಗದಿರದು ಪ. ಭೋಗದಾಸೆಯ ಬಿಡಿಸಯ್ಯ ನಾಗಶಯನ ನಳಿನನಯನ ಅ.ಪ. ಎಂಬತ್ತು ನಾಲ್ಕು ಲಕ್ಷ ಯೋನಿಗಳಲಿ ಬಂದು ಅಂಬುಜಾಕ್ಷನೊಂದೆನಯ್ಯ ಅಂದಂದು ಮಾಡಿದ ಅಘದಿಕುಂಭೀಪಾಕ ಮೊದಲಾದ ಕುತ್ಸ್ಸಿತ ನರಕದಿ ಬಿದ್ದುಉಂಬ ದುಃಖವ ಬಿಡಿಸಯ್ಯ ಉದಧಿಶಯನ ಪುಣ್ಯಕಥನ 1 ಓದನ ಮಾತ್ರಕ್ಕೆ ಸಭೆಯೊಳುವಾದಿಸುವೆ ವೇದಶಾಸ್ತ್ರ ಉಪನ್ಯಾಸಂಗಳನು ಮಾಡುವೆಕ್ರೋಧರಹಿತನಾಗಿ ಅವರು ಕೊಡಲು ಕೊಂಡಾಡುವೆಆದರಿಸದಿದ್ದರವರ ಬೈದು ಬರುವೆ ಖಿನ್ನನಾಗಿ2 ದೇಶದೇಶಂಗಳಿಗೆ ಧನದ ಆಸೆಗಾಗಿ ಪೋಗಿ ಪೋಗಿಬ್ಯಾಸರದೆ ಕಂಡವರ ಕಾಡಿ ಬೇಡಿ ಬಳಲಿದೆಕಾಸಿನ ಲಾಭವು ಕಾಣೆ ಘಾಸಿಯಾದೆನಯ್ಯ ಶ್ರೀನಿ-ವಾಸ ನಿನ್ನ ಪೂಜಿಸದೆ ಮೋಸಹೋದೆನಯ್ಯ ನಾನು3 ಸ್ನಾನಮೌನಂಗಳನು ಮಾಡುವೆ ಸಕಲ ಜನರ ಮುಂದೆಮಾನವರಿಲ್ಲದಾಗಲೆ ಮೌನವಿಲ್ಲ ಮಂತ್ರವಿಲ್ಲಜ್ಞಾನವ ಪೇಳುವೆ ಮೋಸಕಟ್ಟ[ಲೆ]ಯ ಮಾಡಿಕೊಂಡುಧ್ಯಾನಿಸದೆ ಹೊಟ್ಟೆಯನ್ನು ಹೊರೆವೆ ನಿನ್ನ ಮರೆವೆ4 ಕರ್ಣ ಕೇಳದು ಅನ್ಯವಾರ್ತೆ[ಗೆ] ಹೊತ್ತುಸಾಲದುಇನ್ನು ಹೇಸಿಕೆ ಮನಕೆ ಬಾರದು ಮುಂದಿನ ಗತಿಗೆ ದಾರಿ ತೋರದು 5 ಕಂಬುಕಂಧರ ನಿನ್ನ ನೆನೆಯದೆ 6 ವೃದ್ಧನಾದೆನು ಪಲ್ಗಳೆಲ್ಲ ಬಿದ್ದವು ಕಣ್ಣುಕಾಣಬಾರದುಎದ್ದು ನಿಲ್ಲಲಾರೆನಯ್ಯ ಉದ್ಧರಿಸೊ ಹಯವದನತಿದ್ದಿ ಮನವ ನಿನ್ನ ಪಾದಪದ್ಮವ ನೆನೆವಂತೆ ಮಾಡೊಪೊದ್ದಿದವರ ಪೊರೆವ ಕರುಣಾಸಿಂಧು ಎನಗೆ ನೀನೆ ಬಂಧು 7
--------------
ವಾದಿರಾಜ
ಧನ್ಯನಾಗೆಲೊ ಮುನ್ನ ಹರಿಯ ಕಾ ರುಣ್ಯವನೆ ಪಡೆದು ಮಾನವನೆ ಪ ಬನ್ನ ಬಿಡಿಸುವ ಪನ್ನಗಾರಿ ಧ್ವಜನನ್ನು ಧ್ಯಾನಿಸುತ ಅ.ಪ ಕಣ್ಣಿನಿಂದಲಿ ನೋಡು ಹರಿಯಲಾವಣ್ಯ ಮೂರ್ತಿಯನು ಕರ್ಣದಿಂದಲಿ ಕೇಳು ಹರಿಯ ಪಾವನ್ನ ಕೀರ್ತಿಯನು ಅನ್ಯವಾರ್ತೆಗಳಾಡದೆ ವದನದಿ ಘನ್ನ ಹರಿಯಗಣಗಳನ್ನೇ ಬಣ್ಣಿಸುತ 1 ಹಸ್ತವೆರಡು ಹರಿಮಂದಿರ ಮಾರ್ಜನಕೃತ್ಯ ಮಾಡುತಿರಲಿ ಮತ್ತೆ ಪಾದಗಳು ಚಿತ್ತಜನಯ್ಯನ ಕ್ಷೇತ್ರ ತಿರುಗುತಿರಲಿ ಭೃತ್ಯನಾಗಿ ಬಲು 2 ಇಂತು ಪಡಿಯೊ ಶಿರಿಕಾಂತನಲ್ಲಿ ಏಕಾಂತ ಭಕ್ತಿಯನು ಭ್ರಾಂತಿಯ ಬಿಡು ನೀನು ಪೇಳುವ ಮಹಂತರ ಸೇವಿಸಿ 3 ಸಾರ್ಥವಿದೆ ತಿಳಿ ಪಾರ್ಥಸಖನು ಸರ್ವತ್ರ ಇಹನೆಂದು ಗಾತ್ರದೊಳು ಪ್ರತ್ಯಗಾತ್ಮನಲ್ಲಿ ಸದ್ಭಕ್ತಿಮಾಡು ತಿಳಿದು ಮತ್ರ್ಯ ಜನ್ಮಕಿದು ಸಾರ್ಥಕವೊ ಸುಖತೀರ್ಥರ ಕರುಣಾ ಪಾತ್ರನಾಗಿ ಬಲು 4 ಈ ತೆರದಿ ಸಂಪ್ರಾರ್ಥಿಪರಿಗಿಷ್ಟಾರ್ಥಗಳ ಕೊಡುವಾ ಭೂತಲದಿ ಪ್ರಖ್ಯಾತ ಕಾರ್ಪರ ಕ್ಷೇತ್ರದಲಿ ಮೆರೆವ ಪಾತಕ ಹರ ಶಿರಿನಾರಶಿಂಹನ ಕೃಪಾತಿಶಯದಿ ನಿ ರ್ಭೀತನಾಗಿ ಬಲು 5
--------------
ಕಾರ್ಪರ ನರಹರಿದಾಸರು
ನೀನೆ ಗತಿ ಮುಕುತೆನೆಗೆ ಅನಂತ ಜನುಮಗಳಲಿ ಪ ಆನೇನರಿಯೆ ಗರುಡಗಮನ ಸಿರಿಕೃಷ್ಣ ರಾಯಾ ಅ.ಪ ಅನ್ಯವಾರ್ತೆ ಅನ್ಯಸಂಗ ಅನ್ಯಜನರಾರಾಧನೆಅನ್ಯಸತಿ ಅನ್ಯಕರ್ಮ ಮೊದಲು ಸಕಲತನ್ನು ಮನ್ನ(=ತನುಮನ) ವಾಕ್ಯಗಳಿಂದ ಜರಿದೆ ನಿನ್ನವರೊಳುಎನ್ನ ಕೂಡಿಸೊ ನಿನ್ನ ಚರಣ ಭಕುತಿಯಲಿ ಶ್ರೀಶ 1 ಅಂದು ವೇದೋದ್ಭವಳ ಮೊರೆಯನು ಕೇಳಿ ಕಾಯ್ದಂತೆಮಂದ ಗಜೇಂದ್ರನಿಗೊಲಿದು ರಕ್ಷಿಸಿದ ಪರಿಯಂತೆತಂದೆತಾಯಿ ಬಂಧುಬಳಗ ಎಂದೆಂದು ನೀನೇ ದಯಾ-ಸಿಂಧು ನಿನ್ನ ದಾಸರ ದಾಸನೆಂದೆನಿಸೆನ್ನ2 ಪಾದ ಜಂಘೆ ಜಾನೂರುಕಟಿಘನ್ನ ಬಾಹು ಉದರವಕ್ಷ ಭುಜ ಕುಂತಳದಿಚನ್ನ ಕಿರೀಟ ಸರ್ವಾಲಂಕಾರದಿಂ ಶೋಭಿಸುವನಿನ್ನ ಮೂರ್ತಿಯನ್ನೆ ತೋರೊ ಭಕ್ತವತ್ಸಲ ಸಿರಿಕೃಷ್ಣ3
--------------
ವ್ಯಾಸರಾಯರು
ಮೊರೆಯ ಹೊಕ್ಕೆನು ನಿನ್ನಾ | ಚರಣ ಕಮಲಕ ಸಿರಿಪತಿ ಭವರೋಗ ವೈದ್ಯ ನೆಂಬದು ಕೇಳಿ ಪ ಅನ್ಯವಾರ್ತೆಯ ಕೇಳಿ ಕಿವಿಬಧಿರಾಗದೆ ನಿನ್ನ ಕಥಾಶ್ರವಣದ ರಸದೀ ಇನ್ನು ಕೇಳುವ ಪರಿಮಾಡೋ ಅವಿದ್ಯದಾ ಕಣ್ಣಿನ ಪರಿಗೆ ಜ್ಞಾನಾಂಜನವಿಡೋದೇವಾ 1 ವಿಷಯನಂಜಲಿ ತಾಪವೆಡಗೋಂಡದೇಹಕೆ ಅಸಮಸತ್ಸಂಗ ಕಷಾಯಕೊಟ್ಟು ಹುಸಿ ನುಡಿ ಪರನಿಂದೆಯಾಡಿದ ರೋಗದಿ ಹಸಗೆಟ್ಟ ನಾಲಿಗೆ ನಾಮಾಮೃತವ ನೀಡೋ 2 ನಾಸಿಕ ಕೊರಡಾಯಿತಿಭೋಗ ದ್ರವ್ಯದಿ ವಾಸನೆ ಕೊಡು ತುಳಸಿಯಾರ್ಪಿತವಾ ಧ್ಯಾಸತೈಲದಿ ಮನಸಿನ ಕರ್ಮವಾತವಾ ದೋಷಬಿಡಿಸಿ ಕಾಯೋ ಗುರು ಮಹಿಪತಿ ಸ್ವಾಮಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ರಾಗಿ ತಂದಿರಾ - ಭಿಕ್ಷಕೆ -ರಾಗಿ ತಂದಿರಾ ಪ.ಯೋಗ್ಯರಾಗಿ ಭೋಗ್ಯರಾಗಿ |ಭಾಗ್ಯವಂತರಾಗಿ ನೀವು ಅಪಅನ್ನದಾನವ ಮಾಡುವರಾಗಿ |ಅನ್ನಛತ್ರವನಿಟ್ಟವ ರಾಗಿ ||ಅನ್ಯವಾರ್ತೆಗಳ ಬಿಟ್ಟವರಾಗಿ |ಅನುದಿನಭಜನೆಯ ಮಾಡುವರಾಗಿ..........1ಮಾತಾಪಿತರನು ಸೇವಿಪರಾಗಿ |ಪಾತಕಕಾರ್ಯವ ಬಿಟ್ಟವರಾಗಿ |ಖ್ಯಾತಿಯಲ್ಲಿ ಮಿಗಿಲಾದವರಾಗಿ |ನೀತಿಮಾರ್ಗದಲಿ ಖ್ಯಾತರಾಗಿ 2ಗುರು ಕಾರುಣ್ಯವ ಪಡೆದವರಾಗಿಗುರುವಿನ ಮರ್ಮವ ತಿಳಿದವರಾಗಿ ||ಗುರುವಿನ ಪಾದವ ಸ್ಮರಿಸುವರಾಗಿ |ಪರಮಪುಣ್ಯವನು ಮಾಡುವರಾಗಿ3ವೇದ ಪುರಾಣವ ತಿಳಿದವರಾಗಿ |ಮೇದಿನಿಯಾಳುವಂಥವರಾಗಿ ||ಸಾಧು ಧರ್ಮವಾಚರಿಸುವರಾಗಿ |ಓದಿ ಗ್ರಂಥಗಳ ಪಂಡಿತರಾಗಿ 4ಆರರ ಮಾರ್ಗವ ಅರಿತವರಾಗಿ |ಮೂರರ ಮಾರ್ಗವ ತಿಳಿದವರಾಗಿ ||ಭೂರಿತತ್ವವನು ಬೆರೆತವರಾಗಿ |ಕ್ರೂರರ ಸಂಗವ ಬಿಟ್ಟವರಾಗಿ 5ಕಾಮಕ್ರೋಧಗಳನಳಿದವರಾಗಿ |ನೇಮನಿಷ್ಠೆಗಳ ಮಾಡುವರಾಗಿ ||ಆ ಮಹಾಪದದಲಿ ಸುಖಿಸುವರಾಗಿ |ಪ್ರೇಮದಿ ಕುಣಿಕುಣಿದಾಡುವರಾಗಿ 6ಸಿರಿರಮಣನ ಸದಾ ಸ್ಮರಿಸುವರಾಗಿ |ಕುರುಹಿಗೆ ಬಾಗುವಂತವರಾಗಿ ||ಕರೆಕರೆಸಂಸಾರ ನೀಗುವರಾಗಿ |ಪುರಂದರವಿಠಲನ ಸೇವಿಪರಾಗಿ 7
--------------
ಪುರಂದರದಾಸರು