ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುರಾಯ ಪಾಲಿಸುವುದು ನೀ ಎನ್ನ ಪ ಅನ್ಯರೊಬ್ಬರನಾ ನಾ ಕಾಣೆ ಮನ್ನಿಸಿ ಸಲಹುವರನಾ ನಿನ್ನವನೊ ನಾನು ಅನುದಿನದಲಿ ನಿನ್ನ ನೆನೆದು ನೆನೆದು ಇಂದಿನವರೆಗೆ ನಾ ದಿನಗಳೆದೆನೋ ಅ.ಪ. ಇಷ್ಟುದಿನ ಪಟ್ಟ ಕಷ್ಟವು ಸಾಕೋ ಇಷ್ಟಕೆ ನೀ ದಯಾದೃಷ್ಟಿ ಇಟ್ಟು ಜ್ಞಾನವ ಕೊಡಬೇಕೊ ಕಪಟ ಬುದ್ಧಿಯನಷ್ಟು ಕಳೆದಿಷ್ಟವ ಪೂರೈಸಬೇಕೊ ಬಿಟ್ಟವನಲೊ ್ಲನಾ ಕೊಟ್ಟವರು ಪರಿಕರ ಬಿಟ್ಟವರು ಸರಿ ನಾ ಕಟ್ಟಿಕೊಳ್ವೆ ತವ ಚರಣವ ಕೊರಳಿಗೆ 1 ಅಷ್ಟದಿಕ್ಕುಗಳಿಗೆ ಪರಿಹರಿಸಿಹುದೊ ಇಷ್ಟೆಲ್ಲ ಕೇಳಿ ನಾ ಇಟ್ಟೆ ಮನವನು ತವ ಪಾದದಿ ತಿಳಿದು ಸಂತುಷ್ಟನೆ ಎನ್ನ ಬಿಟ್ಟರೆ ಮುಂದಿನ ಬಟ್ಟೆಯ ಕಾಣದೇ ಕೆಟ್ಟು ನಾ ಮೂರಾಬಟ್ಟೆಯಾಗುವೆನೋ 2 ತವ ಪಾದದಿ ತುಳಿದು ಮೆಟ್ಟಿ ಎನ್ನ ಶಿರ ಥಟ್ಟನೆ ಭೂಮಿಯಲಿ ಕೆಡಹುವುದು ಹುಟ್ಟಿದರೆ ದಯವು ಅಟ್ಟಿ ಅಜ್ಞಾನವ ಕಟ್ಟಿ ಸುಜ್ಞಾನವ ಘಟ್ಟಿ ಭಕುತಿಯನು ಕೊಟ್ಟು ನೀ ಪಾಲಿಸೊ 3
--------------
ಹನುಮೇಶವಿಠಲ
ನಿನ್ನನೆ ನಂಬಿದೆ ಅನ್ಯರೊಬ್ಬರ ಕಾಣೆ | ಮಧ್ವರಾಯಾ ಪ ನಿಮ್ಮ ಸಿದ್ಧಾಂತದಿ ಮನವ ನಿಲ್ಲಿಸಯ್ಯ | ಮಧ್ವರಾಯಾ ಅಪ ಪತಿತ ಸಂಕರ ಪುಟ್ಟಿ ಮತವೆಲ್ಲ ಕೆಡಿಸಲು || ಮಧ್ವರಾಯಾ || ಗತಿಯ ಕಲ್ಪಿಸಿ ಸಜ್ಜನರ ತತಿಗಳ ಕಾಯಿ || ಮಧ್ವರಾಯಾ 1 ತಂದೆ ತಾಯಿ ಬಂಧು ಬಳಗವೆಲ್ಲವು ನೀನೆ | ಮಧ್ವರಾಯಾ | ಎಂದೆಂದಿಗು ನಿಮ್ಮ ಪೋದಿರುವಂತೆ ಮಾಡೈ | ಮಧ್ವರಾಯಾ 2 ಬಾಲಕೃಷ್ಣನ ಸೇವೆ ಮೇಲಾಗಿ ಮಾಡುವ | ಮಧ್ವರಾಯಾ | ಮೂಲ ಮೂವತ್ತೇಳು ಮೇಲು ಗ್ರಂಥಗಳಿತ್ತೆ | ಮಧ್ವರಾಯಾ 3 ಶ್ರೀನಿಧಿ ಕೃಷ್ಣನೆ ಜಗಕೆಲ್ಲ ದೊರೆಯೆಂಬ | ಮಧ್ವರಾಯಾ | ಹೆಸರು ಪೊತ್ತೆ | ಮಧ್ವರಾಯಾ 4 ಅಜಪದಕೆ ಬಂದು ಅಖಿಲರ ಪಾಲಿಪ | ಮಧ್ವರಾಯಾ |ವಿಜಯಸಾರಥಿ ಕೃಷ್ಣ ವಿಜಯವಿಠ್ಠಲಪ್ರಿಯ | ಮಧ್ವರಾಯಾ 5
--------------
ವಿಜಯದಾಸ
ನಿನ್ನವಳೆನಿಸೊ ಎನ್ನ ಘನ್ನ ಗೋಪಾಲ ನಿನ್ನವಳೆನಿಸೊ ಎನ್ನ ಪ. ಅನ್ಯರೊಬ್ಬರ ಕಾಣೆ ಮನ್ನಿಸುವರ ಜಗದಿ ನಿನ್ನ ಹೊರತು ಇಲ್ಲ ಪನ್ನಗಾದ್ರಿವಾಸ ಅ.ಪ. ಜನನ ಮರಣ ಕಷ್ಟ ಘನಭವ ಜಲಧಿಯೊಳ್ ಮುಣಗಿ ಮುಣಗಿ ದಡವನು ಕಾಣದಿರುವೆನೊ 1 ದುಷ್ಟ ವಿಷಯಗಳ ಅಟ್ಟಿ ದೂರದಿ ನಿನ್ನ ಶ್ರೇಷ್ಠ ನಾಮಾಮೃತ ಕೊಟ್ಟು ಪುಷ್ಟಿಯನಿತ್ತು 2 ಭಕ್ತಿ ಜ್ಞಾನವು ನಿನ್ನ ಭಕ್ತ ಸಂಗವು ವಿ- ರಕ್ತಿ ಪಥವ ತೋರಿ ಮುಕ್ತಿಯ ಪಾಲಿಸಿ 3 ನಿತ್ಯ 4 ಸಾರ ಉದ್ಘೋಷಿಸುವಂತೆ ಬುದ್ಧಿಪ್ರೇರಕನಾಗಿ ಶುದ್ಧ ಜ್ಞಾನವನಿತ್ತು 5 ನಿನ್ನ ಪದುಮ ಪಾದವನು ನಂಬಿದ ಎನ್ನ ನಿನ್ನ ದಾಸಳೆನಿಸಿ ಘನ್ನ ಮಾರ್ಗವ ತೋರಿ6 ಅಂತರಂಗದ ಧ್ಯಾನ ನಿಂತು ನೀ ನಡಿಸುತ ಅಂತರಂಗದಿ ನಿನ್ನ ಶಾಂತರೂಪವ ತೋರಿ 7 ತಂದೆ ಮುದ್ದುಮೋಹನ ಗುರುಹೃದಯ ಮಂದಿರ ನಿವಾಸ ಎಂದೆಂದಿಗಗಲದೆ 8 ಗೋಪಾಲಕೃಷ್ಣವಿಠ್ಠಲದೇವ ಸರ್ವೇಶಆಪನ್ನಿವಾರಕ ಆಪದ್ಭಾಂದವನಾಗಿ9
--------------
ಅಂಬಾಬಾಯಿ
ಶ್ರೀ ತಾಂದೋಣಿ ವೆಂಕಟರಮಣ ಇಂದು ವೆಂಕಟನ ಕಂಡು ಅನ್ಯರೊಬ್ಬರು ಇವಗೆ ಸರಿಪರರು ಇಲ್ಲ ಪ ಅಮರರಿಗು ಮನುಜರಿಗು ಸರ್ವ ಪ್ರಾಣಿಗಳಿಗು ಸ್ವಾಮಿ ರಕ್ಷಕ ಸರ್ವ ಪ್ರೇರಕನು ದೇವ ಅಮರಾವತಿ ಸರಿತತೀರ ಗಿರಿಯಲಿ ನಿಂತ ಪ್ರೇಮದಿಂದಲಿ ಭಜಿಸೆ ಅಭಯ ವರವೀವ 1 ಎನ್ನ ಕುಲದೇವನು ತಿರುಪತಿ ವೆಂಕಟನು ತಾನೇವೆ ಭಕ್ತರಿಗೆ ಒಲಿಯೆ ಬಂದಿಹನು ಅನಂತ ಗುಣಪರಿಪೂರ್ಣ ತನ್ನ ಸೇವಿಸುವರ ಅನುಗಾಲ ರಕ್ಷಿಸುವ ಅನಿಮಿತ್ತಬಂಧು 2 ಮಧ್ವಮುನಿ ಹೃತ್ಸದನ ದೇವದೇವೋತ್ತಮನು ಮಧ್ವಮುನಿ ಗುರುಸ್ವಾಮಿ ವಿಧಿತಾತ ಶ್ರೀಶ ಶುದ್ಧಕಾರುಣ್ಯನಿಧಿ ಪ್ರಸನ್ನ ಶ್ರೀನಿವಾಸ ಉದ್ಧರಿಪ ಸಂಸ್ಮರಿಸೆ ಇಹಪರದಿ ಎಂದೂ 3
--------------
ಪ್ರಸನ್ನ ಶ್ರೀನಿವಾಸದಾಸರು
ನಾ ಮಾಡಿದಕರ್ಮಬಲವಂತವಾದರೆ |ನೀ ಮಾಡುವುದೇನೊ ದೇವಾ ಪಸಾಮಾನ್ಯವಲ್ಲವಿದು ಬ್ರಹ್ಮಬರೆದ ಬರೆಹ |ನೇಮದಿಂದಲಿ ಎನ್ನ ಹಣೆಯಲ್ಲಿ ಬರೆದುದಕೆ ಅ.ಪಅತಿಥಿಗಳಿಗೆ ಅನ್ನ ಕೊಟ್ಟವನಲ್ಲ -ಪರ -|ಸತಿಯರ ಸಂಗವ ಗಳಿಗೆ ಬಿಟ್ಟವನಲ್ಲ ||ಮತಿಹೀನನಾಗಿ ಮರುಳಾಗಿದ್ದೆನೋ ದೇವ |ಗತಿಯಾವುದೈ ಎನಗೆ ಗರುಡವಾಹನ ಕೃಷ್ಣ1ಅನ್ನಪಾನಂಗಳಿಗೆ ಅಗ್ರಗಣ್ಯನು ಆಗಿ |ಸ್ನಾನ ಸಂಧ್ಯಾದಿ ಕರ್ಮಂಗಳನೀಗಿ||ದಾನವಾಂತಕ ನಿನ್ನ ಧ್ಯಾನವ ಮಾಡದೆ |ಶ್ವಾನನಂತೆ ಮನೆಮನೆ ತಿರುಗುತಲಿದ್ದೆ 2ಇನ್ನಾದರು ನಿನ್ನ ದಾಸ ಸಂಗವನಿತ್ತು |ಮನ್ನಿಸಿ ದಯಮಾಡೊ ಮನ್ಮಥಜನಕ ||ಅನ್ಯರೊಬ್ಬರ ಕಾಣೆ ಆದರಿಸುವರಿಲ್ಲ |ಪನ್ನಂಗಶಯನ ಶ್ರೀಪುರಂದರವಿಠಲ 3
--------------
ಪುರಂದರದಾಸರು