ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಲಿಸೊ ಶ್ರೀನಿವಾಸ ಜಗದೀಶ ಪ ಮೇಲುಗಿರೀಶ ಹೃತ್ಕುಮುದನಿವಾಸ ಸತೀಶ ನೀನೆ ಅವಿನಾಶನೆ ಅನಿಶ ಅ.ಪ ಅನಿಮಿತ್ತ ಬಂಧು ನೀ ನಿನ್ಹೊರತು ಅನ್ಯರುಂಟೇ ಅನಪೇಕ್ಷನು ನೀ ದೀನರಕ್ಷನೆ ನಾನೇನರ್ಪಿಸಬಲ್ಲೆ ನೀ ಬಲ್ಲೆ ಅನುದಿನ ಮನೋವಾಚಕಾಯದಿ ನಾನೆಸಗುವುದು ಬಲ್ಲೆ ಅಲ್ಲಲ್ಲೇ ಘನಮಹಿಮನೆ ಎನ್ನ ಮನದಲ್ಲಿ ಅನುದಿನ ನಿನ್ನ ನೆನೆಯುವುದನೆ ಇತ್ತು ಕೊನೆಗಾಣಿಸು ಇನ್ನು 1 ಸತ್ಯಸಂಕಲ್ಪ ನೀ ನಿತ್ಯನೂತನಪ್ರಭುವೇ ಅತ್ಯಧಿಕದಿ ಭಕ್ತೋತ್ತಮರು ನಿತ್ಯ ಸೇವಿಸುತಿಹರೋ ಅವರ ಭೃತ್ಯನೆನಿಪ ಸಂ- ಪತ್ತನಿತ್ತು ಆಪತ್ತು ಹರಿಸಿ ಭಕ್ತಿಯ ನೀಡಯ್ಯ ಕರ್ಮ ಬೆನ್ಹತ್ತಿ ಹತ್ತಿ ಆಸೆ ಪೊತ್ತು ಕೊನೆಗೆ ನಾ ಉನ್ಮತ್ತನಾದೆ 2 ಪ್ರಣವಸ್ತಗೆ ದೇವಾ ನೀ ಪ್ರಣತ ಕಾಮದ ಕಾವಾ ಪ್ರಣತ ಜನರ ಮುಖ್ಯಪ್ರಾಣಾಂತರ್ಗತ ಫಣಿರಾಜಶಯ್ಯ ಹೇ ಜೀಯ್ಯ ಗುಣಮಣಿ ಶ್ರೀ ವೇಂಕಟೇಶ ಕ- ರುಣಾಕರ ಇನ್ನು ನಿನಗೆಣೆಯ ದೊರೆಯೆ ಮಣಿದು ಬೇಡುವೆ ನಿನ್ನ ದಣಿಸಲಾಗದು ಇನ್ನೂ ಧಣಿಯು ನೀ ಉರಗಾದ್ರಿವಾಸ ವಿಠಲ 3
--------------
ಉರಗಾದ್ರಿವಾಸವಿಠಲದಾಸರು
ಶರಣು ನಿತ್ಯಾನಂದ ಸದ್ಗುಣ ಸಾಂದ್ರ, ನಿನ್ನ |ಚರಣಕಮಲಂಗಳಿಗೆ ಶ್ರೀ ವರದೇಂದ್ರ ಪನಿನ್ನ ನಂಬಿದ ದಾಸರನವನಿಯೊಳು ಇಂಥ |ಬನ್ನಪಡಿಸುವುದುಚಿತವೆ ದಯಾಳು ||ಅನ್ಯರುಂಟೇ ನೀವಲ್ಲದುದ್ಧರಿಸಲು ಪ್ರ |ಪನ್ನ ಪೋಷಕ ಯನ್ನಬಿನ್ನಪಕೇಳು 1ನರರ ಪಾಡಿಸದಿರೊ ಯತಿರಾಯಾಹರಿ|ಸ್ಮರಣೆ ಮಾಡಲು ಮನಕೊಡುಜೀಯ||ಕರಕರೆ ಭಾವದೊಳಗೊಂದುಪಾಯ ಕಾಣೆ |ಹರಿಸಿ ಕ್ಲೇಶವಮೋದತೋರಿಸಯ್ಯ 2ಧರೆಗೆ ಪ್ರಸಿದ್ಧ ಪುಣ್ಯಾಲಯವಾಸ ಕಾಯೊ |ನೆರೆನಂಬಿದವರನ್ನ ರವಿಭಾಸ ||ಹರಿದಾಸರ ಕಾಡುವರನ್ನಾ ಭಾಸ ಮಾಡೊ |ಗುರುಪ್ರಾಣೇಶ ವಿಠಲನ್ನ ನಿಜದಾಸ 3
--------------
ಪ್ರಾಣೇಶದಾಸರು