ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನ್ಯರಿಲ್ಲ ಗತಿ ಅಚ್ಯುತನಾನಂತ ಶ್ರೀಪತಿ ಅಜಪಿತ ಮಹಾಮತಿ ಪ. ಸತ್ಯಜ್ಞಾನಾನಂತುಗುಣಸಿಂಧು ಭಾಗವತಜನಬಂಧು ರಕ್ಷಿಸಿಂದು ಪ್ರತ್ಯಗಾತ್ಮ ಸುಹೃತ್ತಮ ಜರಾ- ಮೃತ್ಯುರಹಿತನೆ ಚಿತ್ತಸಾಕ್ಷಿಯೆ 1 ವಾಸುದೇವ ದಿನೇಶಕೋಟಿಪ್ರಭ ಪೂಜಿತವಿಬುಧ ಮೌನಿಸಭ ಪದ್ಮನಾಭ ದಾಸಜನಹೃದಯಾಶ್ರಯಸ್ಥಿತ ದೋಷಗಂಧವಿದೂರ ಶ್ರೀವರ 2 ಸಕಲ ಜಗದಾಧಾರಮೂರುತಿಯೆ ವಿಜಯರಥ ಸಾರಥಿಯೆ ಹರಿಯೆ ದೊರೆಯೆ ಶಕಟಮರ್ದನ ಶಾಙ್ರ್ಗಧರ ಶ್ರೀ ಲಕುಮಿನಾರಾಯಣ ನಮೋಸ್ತುತೇ 3
--------------
ತುಪಾಕಿ ವೆಂಕಟರಮಣಾಚಾರ್ಯ
ಎಂದಿಗೆ ಪಾಲಿಪೆ ಎನ್ನ ಗೋ- ಪ ವಿಂದ ಮುಕುಂದ ಆ- ನಂದ ಮೂರುತಿಅ.ಪ ಚರಣಸೇವೆಯ ಕೊಡಿಸಿ ಪರಮಭಕ್ತರೊಳಿರಿಸಿ ದುರಿತರಾಸಿಗಳ ಪರಿಹರಿಸಿ 1 ತಾರದೆ ಸಂತೋಷದಿ ಮಾರಜನಕ ನಿನ್ನ ಧೇನಿಸುವಂತ 2 ಗುರುರಾಮವಿಠ್ಠಲ ನಿನ್ನ ಹೊರತು ಅನ್ಯರಿಲ್ಲ ಸಿರಿನಲ್ಲ 3
--------------
ಗುರುರಾಮವಿಠಲ
ನಾನೆಲ್ಲಿ ಜ್ಞಾನಿಯು ನಾನೆಲ್ಲಿ ಸುಜನನು ಹೀನ ವಿಷಯಗಳುಂಬ ಶ್ವಾನನಂತಿರುವೆ ಪ ಗಾತ್ರ ಬಳಲಿಸಿ ಮದನಸೂತ್ರ ಬೊಂಬೆಯು ಎನಿಸಿ ನೇತ್ರದಿಂದಪಾತ್ರದವರನು ನೋಡಿ ಸ್ತೋತ್ರಮಾಡುತ ಹಿಗ್ಗಿರಾತ್ರೆ ಹಗಲು ಕೆಟ್ಟ ವಾರ್ತೆಯಲ್ಲಿರುವೆ 1 ಧನದಾಸೆ ಘನವಾಗಿ ಅಣು ಮಹತ್ಕಾರ್ಯದೊಳುತಣಿಸಿ ದಣಿಯಲು ತೃಣವು ದೊರೆಯದಿರಲುಮನೆ ಮನೆಗೆ ಬಾಯ್ದೆರೆದು ಶುನಕನಂತೆ ದಿನಗಳೆವೆಮನುಜ ಪಶುವಿಗೆ ಇನ್ನು ಮುನಿಯೆಂಬಿರೆಂತೋ2 ನಾಲಗೆಯ ರುಚಿಯಿಂದ ಸಾಲದಾಯಿತು ಬಯಕೆಕಾಲ ಕಾಲಕೆ ನೆನಸಿ ಹಾಳಾದರೂಶೀಲಗಳ ಕಳಕೊಂಡು ಚಾಲುವರಿಯುತ ಪರರಆಲಯದ ಉಚ್ಚಿಷ್ಠ ಮೇಲಾದ ಸವಿಯ3 ಸ್ನಾನಧ್ಯಾನವನರಿಯೆ ಸಾನುರಾಗದಿ ಭಕ್ತಿಕೂನ(ಗುರುತು)ವಿಲ್ಲದೆ ಡಂಭ ಮೌನಿಯೆನಿಸಿನಾನಾ ವಿಷಯ ಮನದಿ ನಾ ನೆನೆಸುವೆ ನಿತ್ಯಏನಾದರೂ ಕಷ್ಟ ಕಾಣದಂತಿರುತಿಪ್ಪೆ 4 ಪತಿತರೊಳು ಎನ್ನಂಥ ಪತಿತರೊಬ್ಬರ ಕಾಣೆಗತಿಯು ನೀನಲ್ಲದೆ ಅನ್ಯರಿಲ್ಲಪತಿತ ಪಾವನನೆಂಬೊ ಬಿರುದುಂಟುಮಾಡುವಕ್ಷಿತಿಪತಿ ಶ್ರೀಕೃಷ್ಣರಾಯ ನೀನಹುದೋ5
--------------
ವ್ಯಾಸರಾಯರು
ಭಗವಂತನ ಸಂಕೀರ್ತನೆ ಏನಿದು ರೂಪ ಶ್ರೀ ನರಹರೆ ಪ ಏನಿದು ರೂಪವೋ ಮನಸಿಜನಯ್ಯನೇ ನೆನಿಸಿದವರ ಹೃದ್ವನಜದೊಳ್ ಮೆರೆವುದೂ ಅ.ಪ ಮಾರನ ಪಿತನೆಂದು ಕರೆಸಿ ಕೊಂಬುವನಿಗೆ ಮೋರೆಯೊಳ್ ಮೂರು ಕಣ್ಣುಗಳ ಧರಿಸಿರುವುದು 1 ಪರಮ ಶಾಂತನೆಂದು ಮೆರೆಯುವೀ ಶ್ರುತಿಯೊಳು ಕ್ರೂರ ರೂಪದಿಂದ ನರರಿಗೆ ತೋರ್ಪುದು 2 ವರ ವೈಜಯಂತಿಯ ಕೊರಳೊಳ್ ಧರಿಸುವಗೆ ಕರುಳ ಹಾರವ ಧರಿಸಿ ವರ ಶಬ್ದ ಮಾಳ್ವೊದು 3 ನಾನೇ ದೇವರು ಮತ್ತು ಅನ್ಯರಿಲ್ಲೆಂಬುವ ಕನಕ ಕಶ್ಯಪ ಮುಖ್ಯ ದನುಜರ ಸೀಳ್ವುದು 4 ತರಳ ಕರದಾಕ್ಷಣದಿ ವರ ವೈಕುಂಠವ ಬಿಟ್ಟು ನರಹರಿ ಎನಿಸಿ ನೀ ಭರದಿ ಬಂದಿರುವುದು 5
--------------
ಪ್ರದ್ಯುಮ್ನತೀರ್ಥರು
ಶ್ರೀಹರಿ ಸಂಕೀರ್ತನ ಅನ್ಯರಿಲ್ಲ ಗತಿ ಅಚ್ಯುತನಾನಂತ ಶ್ರೀಪತಿ ಅಜಪಿತ ಮಹಾಮತಿ ಪ. ಸತ್ಯಜ್ಞಾನಾನಂತುಗುಣಸಿಂಧು ಭಾಗವತಜನಬಂಧು ರಕ್ಷಿಸಿಂದು ಪ್ರತ್ಯಗಾತ್ಮ ಸುಹೃತ್ತಮ ಜರಾ- ಮೃತ್ಯುರಹಿತನೆ ಚಿತ್ತಸಾಕ್ಷಿಯೆ 1 ವಾಸುದೇವ ದಿನೇಶಕೋಟಿಪ್ರಭ ಪೂಜಿತವಿಬುಧ ಮೌನಿಸಭ ಪದ್ಮನಾಭ ದಾಸಜನಹೃದಯಾಶ್ರಯಸ್ಥಿತ ದೋಷಗಂಧವಿದೂರ ಶ್ರೀವರ 2 ಸಕಲ ಜಗದಾಧಾರಮೂರುತಿಯೆ ವಿಜಯರಥ ಸಾರಥಿಯೆ ಹರಿಯೆ ದೊರೆಯೆ ಶಕಟಮರ್ದನ ಶಾಙ್ರ್ಗಧರ ಶ್ರೀ ಲಕುಮಿನಾರಾಯಣ ನಮೋಸ್ತುತೇ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ