ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಷ್ಟೇ ದಯ ಮಾಡಬಾರದೇ ಸೃಷ್ಟಿಕರ್ತಾ ಜಗದ್ರಕ್ಷಾ ವಿಶ್ವನಾಥಾ ಇಷ್ಟೇ ದಯ ಮಾಡಬಾರದೇ ಪ ದುಷ್ಟ ವಿಷಯದೊಳಗೆ ಬೆರೆತೆ ಸೃಷ್ಟೀಶ ನಿನ್ನನೆ ಮರೆತೆ ಭ್ರಷ್ಟ ಮನವನಳಿದು ನಿನ್ನಿಷ್ಟ ಭಕ್ತರೊಳಗೆ ದುಡಿಸುನಿ 1 ನಿನ್ನದೆಂಬಿ ಮರುಳು ಹಿಡಿದು ಅನ್ನಿಗರನು ಕಾಡಿ ತರಿದು ಕುನ್ನಿಮನುಜನಂತೆ ಬಾಳ್ದೆ ಘನ್ನನೆ ರಕ್ಷಿಸು ನಾ ಬೇಡ್ವೆ 2 ಕಾಲ ಕಳೆದೆ ಪರರ ಬೇಡಿ ಹೊಟ್ಟೆ ಪೊರೆದೆ ನರಸಿಂಹವಿಠ್ಠಲನರಿಯದೆ ಕರುಣಾನಿಧಿ ಬೇಡದೆ ಪೋದೆ 3
--------------
ನರಸಿಂಹವಿಠಲರು
ವೆಂಕಟೇಶಾಯ ನಮೊ ವಿಜಯವಿಠ್ಠಲನೆ ನಮೊ | ಪಶುಪತಿ ಗುರು ನಮಿತ ಪಾದಾ | ಪಂಕಜವ ಪೊಗುಳವೆನು ಪರಿಪಾಲಿಸೆನ್ನ | ಕಿಂಕರನ ಕಿಂಕರರಿಗೆ ಕಿಂಕರನೆಂದೆನಿಸೊ ಪ ಕಾರ್ಯವಾಕಾರ್ಯವನು ತಿಳಿಯಲೊಲ್ಲದ ಕಾಮಾ | ತೂರ್ಯದಲಿ ಪಾಪಗಳೆ ರಚಿಸಿ | ಬೆಂಬಿಡದದೆ ಬಲು | ಧೈರ್ಯವಂತನು ನೀನಾಗಿ | ಧೈರ್ಯವಾಗಿದ್ದಾಗ ಜಡಜೀವ ಜಂತುಗಳು | ವೀರ್ಯದಲಿ ಪೊಕ್ಕು ದುಃಖಾತಿಶಯದಲಿ | ದುರ್ಯೋನಿ ಮುಖದಿಂದ ಜನನ ಜನಿತನಾದೆ | ಮರ್ಯಾದೆಗಳು ಇಲ್ಲದೆ ಹರಿಯೇ 1 ಕ್ಷಿತಿಯೊಳಗೆ ಬಂದು ಕಾಮ ಕ್ರೋಧ ಸಂಮೋಹ ಶ್ರುತಿ ವಿಭ್ರಮ ಬುಧ್ಧಿನಾಶ ರಾಗದ್ವೇಷ | ಪಥದಲಿ ವಿಷಯೇಂದ್ರಿಗಳು ಆತ್ಮವಶವಾಗಿ ಹಿತದ ಪ್ರಸಾದದಿಂದ | ಗತಿ ಅದರಿಂದ ಈ ಸಂಖ್ಯೆಯಿಂದಲಿ | ಹತವಾಗಿ ಪೋಗಿ ಮರಳೆ ದೇಹವನು | ತೆತ್ತು ಗತಿ ಪುಣ್ಯವಂತನೈದೆ 2 ಇಂದಿಗಾ ಇವನ ಮನೆ ತಂದೆ ತಾಯಿಯ ದಿವಸ | ಇಂದಿಗಾ ಇವನ ಮನೆ ಹತ್ತ ಹತ್ತನೆ ದಿವಸ | ಹವ್ಯ ಕವ್ಯ ಜಾವಳ | ಇಂದಿಗಾ ಮದುವೆ ಮುಂಜಿ | ಇಂದು ನಿಮ್ಮನೆ ಪ್ರಸ್ತವೆಂದು ಕೇಳುತಾ ಪೋಗಿ | ಬಂದವರನನ್ನುಸರಿಸೆ ಬಾಗಿಲಾ ಮುಂದೆ ಕುಳಿತು | ನೊಂದೆ | ಬಂದೆನೊ ಕೊನೆಯಲಿ 3 ಆರಾದರೂ ಬಂದು ಕಾಸು ಕೊಡದಿದ್ದರೆ | ದೂರುವೆನೊ ನೂರಾರು ಕೇರಿ ಕೇರಿಯ ತಿರಗಿ | ಸಾರೆ ಅವರಲ್ಲಿದ್ದ ಅವಗುಣಂಗಳ ಎತ್ತೆ | ಬೀರುವೆನು ಬೀದಿಯೊಳಗೆ | ವಾರಣದಿಂದಲಿ ಕರೆದು ಆವನಾದರು ಬಂದು | ಶಾರೆ ಭತ್ತವ ಕೊಡಲು ಕೊಂಡಾಡುವೆ ಕುಲ ಉ | ಪೋರ ಬುದ್ಧಿಗಳ ಬಿಡದೆ4 ಪರವಣಿ ಪುಣ್ಯಕಾಲಾ ದಿವಸ ಬಂದರೆ ತಿಳಿದು | ಪರಮಾರ್ಥವೆಂದರಿದು ಉತ್ತಮರ ಬಾ ಎಂದು | ಕರೆದು ತುತ್ತನ್ನ ಮೇಲೊಂದು ದಕ್ಷಿಣೆ ಕಾಸು | ಹರುಷದಿಂದಲಿ ಕೊಡದಲೆ ಪರರ ಹಳಿಯುತ್ತ ಏನೇನು | ಇಟ್ಟುಕೊಂಡು ಮನಿಗೆ ಬಂದು | ಪರರರಿಯದಂತೆ ಮಂಚದ ಕೆಳಗೆ ಹೂಳಿ ಈ | ಪರಿಯಿಂದ ದಿನ ಹಾಕಿದೆ5 ತೊತ್ತು ಓರ್ವೆಯಲ್ಲಿ ಈ ಹೊತ್ತು ಪೋಗಾಡಿಸಿದೆ | ಉತ್ತಮರ ಬಳಿಯಲಿ ಕುಳಿತು ಸತ್ಕಥೆಗೆ ಕಿವಿ ಇತ್ತು ಕೇಳದಲೆ ಕೆಲಸಾರೆ ಬೇಸರಿಕೆಯಲಿ | ಅತ್ತಲಿತ್ತಲು ವ್ಯರ್ಥ ಸುತ್ತಿ ಸುಮ್ಮನೆ ಸುದ್ದಿ ಬರಿಗಂಟುಸಟೆ | ಮಾತು ಎತ್ತುವನೊ ಅನ್ನಿಗರನ ನ | ಎಣಿಕೆ ಮಾಡದಲೆ | ಉನ್ಮತ್ತದಲಿ ಕೆಟ್ಟೆನಯ್ಯಾ6 ಪರಿಯಂತ | ವೇದೆನೆ ಬಟ್ಟೆನೊ ದುಷ್ಟ ಹಾದಿಯಲಿ ಸಿಗಬಿದ್ದು | ಈ ದುರಾಚಾರಗಳ ಗಣನೆ ಮಾಡದೆ ಇನ್ನು | ಕಾದುಕೊ ಕಮಲನಾಭಾ | ಹೋದಪರಾಧಗಳ ನೋಡದಲೆ ದಯದಿಂದ | ಆದರಿಸಿ ನಿನ್ನ ದಾಸರ ಸಂಗತಿಯನಿತ್ತು | ಪಾದವನು ಕಾಣಿಸಯ್ಯಾ7
--------------
ವಿಜಯದಾಸ