ಒಟ್ಟು 8 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಇ) ಆತ್ಮನಿವೇದನೆಯ ಕೃತಿಗಳು ಇದನಾದರು ಕೊಡದಿದ್ದರೆ ನಿನ್ನ ಪದಸೇವೆಗೆ ಜನರೊದಗುವರೆ ಪ ದೊರೆತನವಾಗಬೇಕೆನಲಿಲ್ಲ ಬಲು ಸಿರಿತನವನು ವಾಂಛಿಸಲಿಲ್ಲ ಪರಿಭೋಗದ ಸ್ಪøಹೆ ಎನಗಿಲ್ಲ ನಿನ್ನ ಸ್ಮರಣೆಯೊಂದಿತ್ತರೆ ಸಾಕಲ್ಲ 1 ಅನ್ನವಸ್ತ್ರವ ಕೇಳುವದಿಲ್ಲ ಒಳ್ಳೆ ಚಿನ್ನ ಬಣ್ಣವ ಕೊಡು ಎನಲಿಲ್ಲ ಹೆಣ್ಣು ಮಣ್ಣಿನೊಳಗಾಸೆ ಎನಗಿಲ್ಲ ಪರಿ ಪೂರ್ಣ ನೀನೊಲಿದರೆ ಸಾಕಲ್ಲ 2 ಸುರರ ಭೋಗದಿ ಮನವೆನಗಿಲ್ಲ ಪುಲಿ ಗಿರಿದೊರೆ ಬಲ್ಲೆ ನೀನಿದನೆಲ್ಲ 3
--------------
ವೆಂಕಟವರದಾರ್ಯರು
ನಿನ್ನೊರತು ಇನ್ನಿಲ್ಲ ಹನುಮಾ ಜಯ ಭೀಮಾ ಗುರುಮಧ್ವರಾಯಾ ಪ ಅನ್ನವಸ್ತ್ರವ ಕೊಟ್ಟು ಅನ್ಯರಿಗೆ ಬೇಡಿಸದೆ ಅನುಗಾಲವೂ ಕಾಯೋ ಅನುಪಮ ಚಿಂತನ 1 ಬಂದ ಬಂದ ಕಂಟಕವನ್ನು ಬಂದು ಬಂದೂ ಬಯಲು ಮಾಡಿ ಎಂದೆಂದಿಗೂ ಕಾಯೋ ಸುಂದರ ಮೂರುತಿಯೇ 2 ಕದರೂರು ಹನುಮೇಶ ಹಸನ್ಮುಖವಿಠಲನ ಮುದದಿಂದಲಿ ಒಲಿಸಿದ ಚದುರ ಮೂರುತಿಯೆ 3
--------------
ಮಹಾನಿಥಿವಿಠಲ
ರಾಮದುರ್ಗದ ಪರಮ ಪೂಜ್ಯ ಆಚಾರ್ಯರನುನೇಮದಿಂದ ಸ್ಮರಿಸೊ ಮನುಜಾಕಾ'ುತಾರ್ಥವ ಕೊಟ್ಟು ಪ್ರೇಮದಿಂದ ಕ್ಕೆಪಿಡಿದುಸನ್ಮಾರ್ಗ ತೋಗಿಸುವರರು ಅವರು ಪಮಧ್ವಮತದೊಳು ಜನಿಸಿ ಸಚ್ಛಾಸ್ತ್ರಗಳನೋದಿ ಪ್ರಸಿದ್ಧಪಂಡಿತರಾಗಿ ಶುದ್ಧ ಆಚರಣೆ ಸದ್ದೈರಾಗ್ಯಸದ್ಭಕ್ತಿ ಸುಜ್ಞಾನ ಪೂರ್ಣರಾಗಿದುಡ್ಡಪ್ಪ ದೊಡ್ಡಪ್ಪ ಧಡ್ಡಪ್ಪರೆನ್ನದೆ ಸರ್ವಸಮದ್ಟೃ ಇಟ್ಟು'ದ್ಯಾರ್ಥಿಗಳಿಗೆಲ್ಲ ಅನ್ನವಸ್ತ್ರವ ಕೊಟ್ಟು ಗುರುಕುಲನಡಿಸಿದ ಋಗಳವರು 1ಸ್ನಾನಸಂಧ್ಯಾನ ಜಪಿತಪ ಅನುಷ್ಠಾನ ಅಗ್ನಿಹೋತ್ರವನಡಿಸುತ ಧ್ಯಾನಮೌನವು ಸದಾ ರಾಮನಾಮ ಸ್ಮರಣೆಪಾಠಪ್ರವಚಿನ ಪುರಾಣ ದಾನಧರ್ಮವು ದಿವ್ಯ ಸಂತಾನಸಂಪತ್ತು ರಾಜಮನ್ನಣೆ ಪಡೆದರು ಕ್ಷಣ ವ್ಯರ್ಥಕಳೆಯದೆ ವ್ಯರ್ಥಮಾತಾಡದೆ ದಿನಚರಿ ನಡಿಸಿದರು ಕಡೆತನರ 2ಘನವೈಯ್ಯಾಕರಣಿ ಗರ್ವವು ಎಳ್ಳೆಷ್ಟು ಇಲ್ಲಾ'ನಯ ಪೂರ್ಣಸ್ವಭಾವ ಹಣಹೆಣ್ಣು ಮಣ್ಣಿನಾಶೆಯುಪೂರ್ಣಬಿಟ್ಟವರು ಜನ'ತದಿ ಸತತ ನಿಂತರುಧನ ಮಾನ ಮರ್ಯಾದೆಗಳಿಗಾಗಿ ಎಂದೆಂದೂ ಧಡಪಡ-ಮಾಡಲಿಲ್ಲಾ ಗುಣನಿಧಿ ಭೂಪತಿ 'ಠ್ಠಲನ ಭಜನೆಯಾಕುಣಿಕುಣಿದು ಮಾಡುವ ಪರಮ ಭಾಗವತರು 3ಗಲಗಲಿ ನರಸಿಂಹಾಚಾರ್ಯರು
--------------
ಭೂಪತಿ ವಿಠಲರು
ಲವಕುಶರ ಹಾಡು ಹರಿಹರ ಬ್ರಹ್ಮ ತ್ರಿಮೂರ್ತಿಗಳ ಬಲಗೊಂಡು *ಗುರುಹಿರಿಯರ ಪಾದಕ್ಕೆರಗೀ | ಅಜನ ಪಟ್ಟದ ಶ್ರೀ ಸರಸ್ವತಿಯನೆ ಬಲಗೊಂಡು ತೊಡಗುವೆ ರಾಮರ ಕಥೆಯಾ 1 ಬಣ್ಣದ ಅಕ್ಷತೆ ಕಣ್ಣು ತುಂಬೆ ಪುಷ್ಪ ಸು ವರ್ಣ ದಕ್ಷಿಣೆ ತಾಂಬೂಲಾ | ಉಮ್ಮಿಯ ಪುತ್ರ ಗಣೇಶಗೆ ಅರ್ಪಿಸಿ ವರ್ಣಿಪೆ ಲವಕುಶರ ಕಥೆಯಾ 2 ಕುಲದ ಸ್ವಾಮಿ ಕದ್ರಿ ನರಸಿಂಹನ ಬಲಗೊಂಡು | ಗುರು ಮಧ್ವರಾಯರ ನೆನೆದು | ಮನದಲ್ಲಿ ವಿಷ್ಣು ದೇವತೆಗಳ ಬಲಗೊಂಡು ತೊಡಗುವೆ ರಾಮರ ಕಥೆಯಾ 3 ವೇದಪಾರಾಯಣ ಅಂತ್ಯದ ಪೀಠಕ ಮಾಧವ ಹರಿ ಸುಗೋತ್ರ | ವೇದ ಮೂರುತಿ ಕೊಂಡಪ್ಪನ ಪುತ್ರಿಕೆಗೆ (?) ಹೇಳಿದಳುಹರಿನಾಮ ಕಥೆಯಾ 4 ಯಗ್ನ ಸಂತತಿಯೂ ಪೀಠಕವೂ | ಅಜ್ಞಾನಿ ಮೂಢಜೀವರಿಗೆ 5 ಹರುವುಳ್ಳ ನಿರಯಾಗಿಗಳೂ | ಹರವುಳ್ಳ ಕೈ(?)ಮುನಿವಳ್ಳೇರು ಜಾಣರು ತಿಳಿವೂದು ಅರ್ಥಸಂದೇಶ 6 ನಾಡನ ಕಥೆಯಲ್ಲ ಬೇಡುಂಬ ಪದನಲ್ಲ ನಾಡೊಳಗೆ ಹರಿನಾಮ ಕೇಳಿದ ಜನರಿಗೆ | ವಿಲ್ಲವಾಗುವುದು 7 ಪ್ರಚಂಡರು ರಾಮಲಕ್ಷ್ಮಣರು | ಇತ್ತಬೇಟೆಯನಾಡುವ ಕ್ರಮಗಳ ಚಂದವಿನ್ನೆಂತು ವರ್ಣಿಸಲೆ 8 ತಾಂಬೂಲ ಶ್ರೀಮೊಗದಿಂದೆ | ಇಂದುವದನೆಯ ಬಿಗಿದಪ್ಪಿ ಮುದ್ದಾಡಿದ ಇಂದುವದನೆ ಗರ್ಭವೆಂದ 9 ನಳಿನನಾಭನು ತನ್ನ ಲಲನೇಯ ಮುಖನೋಡಿ ಲಲನೆ ನಿನ್ನ ಪ್ರೇಮವೇನೆ | ಮುನಿಯು ಆಮುನಿಗಳು ಕೂಡಿದ ನಂತ್ರ ವನಭೋಜನ ತನಗೆಂದ್ಲೂ 10 ಹಲವು ಕಾಲವು ಸೀತೆ ಅಸುರರ ವಡನಾಡಿ ನೆನದಳು ಋಷಿಗಳಾಶ್ರಮವಾ | ಹಸನವಲ್ಲವು ಸೀತೆ ಇನ್ನು ನೀನುಳಿವದು ಋಷಿಗಳಾಶ್ರಮಕೆ ಹೋಗೆಂದಾ 11 ಅಯೋಧ್ಯಾಪುರದ ವಾನರರೆಲ್ಲಾ ಬಿಟ್ಟು ಕೈಹಿಡಿದ ಪುರುಷನ ಬಿಟ್ಟು | ನೆನದಾಳು ಋಷಿಗಳಾಶ್ರಮವ 12 ಅಂದು ಶ್ರೀರಾಮರು ಬೇಟೆಗ್ಹೋದೇವೆಂದು ಇಂದು ಡಂಗುರವ ಸಾರಿದರೂ | ಒಂದು ಗಳಿಗೆ ಮುಹೂರ್ತತಡೆಯಲಾಗದು ಎಂದು ಮಂದಿ ಮಕ್ಕಳ ಕರಸಿದರೂ 13 ಬಂದರು ಮಂತ್ರಿ ಮಾನ್ಯರು ಪ್ರಹಸ್ತರು ಬಂದರು ಪ್ರಧಾನೇರು | ಬಂದರು ರವಿಗುರಿನವಿಗುರಿಕಾರರು (?) ಬಂದರು ವಾಲಗದೋರೊಪ್ಪಿದರು 14 ಆಟಪಾಟದೋರು ನೋಟಕ್ಕೆ ದಾರಾರು ಸೂತ್ರದವರು ಸುವ್ವಿಯವರು | ಪಾಟಕ್ಕೆ ದಾರಾರು ಪೊಗಳುವ ಭಂಟರು ರಘು ನಾಥನೋಲಗದಲೊಪ್ಪಿದರೂ 15 ಹೊನ್ನು ಹಲಗೆಯವರು ಬೆನ್ನಬತ್ತಲೆಯವರು ಚಿನ್ನಬಿನ್ನಾಣನಾಯಕರೂ | ಚೆನ್ನಿಗರಾಮರ ಪೊಗಳುವ ಭಂಟರು ಬಿನ್ನಾಣದಿಂದೊಪ್ಪುತಿಹರೂ 16 ಪಟ್ಟಾವಳಿ ಹೊಸಧೋತರವು ಇಟ್ಟರು ಆಭರಣವನ್ನೂ | ಮಕರಕುಂಡಲ ಕಿರೀಟವೂ ಇಟ್ಟರು ನೊಸಲ ಕಸ್ತುರಿಯಾ 17 ಹಾರಮಾಣಿಕನಿಟ್ಟು ಕಾಲುಪೆಂಡೆಯನಿಟ್ಟು ನ್ಯಾವಳದ ಉಡುದಾರನಿಟ್ಟು ಸೂರ್ಯನ ಕುಲದ ಕುಮಾರರು ನಾಲ್ವರು ಏರಿದರು ಹೊನ್ನ ರಥವಾ 18 ವಾಯುವೇಗ ಮನೋವೇಗವೆಂಬೋ ರಥ ಏರಿದರೆ ರಾಮಲಕ್ಷ್ಮಣರೂ | ಸೂರ್ಯ ತಾನೆ ರಥವ ನಡೆಸೆ ಕೂಡ ಬೇಟೆಗೆ ತೆರಳಿದರು 19 ಅತ್ತಿ ಆಲದ ಮರ ಸುತ್ತ ಹೆದ್ದುಮ್ಮರಿ ಉತ್ತತ್ತಿ ಬೆಳಲು ದಾಳಿಂಬ ಉತ್ತಮ ಅಶ್ವತ್ಥ ಇಪ್ಪಿಯ ವನಗಳು ವಿಸ್ತರವನವೊಪ್ಪುತಿಹವೂ 20 ನಾರಂಗ ಬೆರಸಿದ ಕಿತ್ತಳಿ ಹರಿಸಿಣದ ತೋಪು ಎಲಿತ್ವಾಟ ಅರಸುಮಕ್ಕಳು ರಾಮಲಕ್ಷ್ಮಣರೆಲ್ಲರು ಬೆರಸಿ ಬೇಟೆಯ ನಾಡುತಿಹರೂ 21 ಯಾರಾಡಿಗಿಡಗಳು ಕ್ಯಾದೀಗಿವನಗಳು ನಾಗಸಂಪಿಗೆಯ ತೋಪುಗಳು | ಜೋಡೀಲಿ ಭರತ ಶತ್ರುಘ್ನರೆಲ್ಲರು ಕಾಲಾಳು ಬೇಟೆನಾಡಿದರೂ 22 ಉದ್ದಂಡ ಕೇಕಾಪಕ್ಷಿ ಚಂದಾದ ಬಕನ ಪಕ್ಷಿಗಳೂ | ಅಂದಾದ ಆಲಿವಾಣ ಆಲಹಕ್ಕಿಯು ರಾಮ ಚಂದ್ರನು ಬೇಟೆಯಾಡಿದನು 23 ಬೇಟೆನಾಡಿ ಬಂದು ನಿಂತಾರು ನೆರಳಲ್ಲಿ ಒಂದುಗಳಿಗೆ ಶ್ರಮವ ಕಳೆದು ನಂದನವನದಲ್ಲಿ ತನಿಹಣ್ಣು ಮೆಲುವೋರು ಗಂಗೆಯ ಉದಕ ಕುಡಿಯುವೋರು 24 ನಳಿನನಾಭನು ತಾನು ಬಳಲಿ ಬೇಟೆಯನಾಡಿ ನೆರಳಲ್ಲಿ ತುರಗ ಮೇಯಿಸಿದ ಕಿರಿಯಲಕ್ಷ್ಮಣ ದೇವ ತೊಡೆಯನ್ನೆ ಕೊಡು ಎಂದು ಮಲಗೀದ ಒಂದು ನಿಮಿಷವನೂ 25 ಮುಂದಿನ ಆಗೆಂತ್ರವ(?) ಕಂಡನು ಕನಸಿನಲಿ ರಾಮ ಕಂಗೆಟ್ಟು ಮೈಮುರಿದೆದ್ದಾ | ಕಂದ ಲಕ್ಷ್ಮಣ ಕೇಳೊ ಇಂದೆನ್ನ ಸೊಪ್ನದಲಿ ಬಂದಿಹಳೊಬ್ಬ ತಾಟಕಿಯೂ 26 ಇಂದುವದನೆಮುಡಿ ಪಿಡಿದಳೆವೊ ದುಕಂಡೆ ತುಂಡರಾವಣ ಕುಯೋದು ಕಂಡೆ | ಇಂದು ನೀ ಸೀತೆಯ ಕರೆದೊಯಿದು ಕಾನನದಿ ದಿಂಜಾರಿಳಿಸೋದು ಕಂಡೆ 27 ಮುನ್ನ ಅರಿಯದೆ ನಾವು ಬಂದೆವೋ ಲಕ್ಷ್ಮಣ ಇನ್ನು ಸೀತೆಗೆ ಜಯವಿಲ್ಲಾ | ಅಂದು ಶ್ರೀರಾಮರಾ ಬೇಟೆ ಮೂಲಕದಿಂದೆ ಬಂದಾಳು ಮಾಯದ ಗರತಿ | 28 ಬಂದು ಅಯೋಧ್ಯಾಪುರದ ಬೀದಿಯವಳಗೆ ಚಂದದಿ ಕುಣಿದಾಡುತಿಹಳು | ಅಂದು ಶ್ರೀ ರಾಮರ ಅರಮನೆ ಬಾಗಿಲಿಗೆ ಚಂದುಳ್ಳ ದ್ವಾರಪಾಲಕರೂ 29 ಬಂದು ಅಸುರೆ ನಿನ್ನ ಬಿಡವಲ್ಲೆನೆಂದರೆ ಬಂದಡರಿದಳರಮನೆಗೆ ಕಂಡು ಜಾನಕಿ ತಾನು ಕರಸಿದಳಾಗಲೆ ಬಂದಳು ಮಾಯದ ಗರತಿ 30 ಬಂದು ಪಾದಕ್ಕೆರಗಿ ಕೈಮುಗಿದು ನಿಂತಳು ತಂದಳು ನಾಗ ಸಂಪಿಗೆಯಾ | ಅಂಗನೆ ಜಾನಕಿ ನೀಮುಡಿಯೆಂದು ಕೊಟ್ಟರೆ ಸಂದೇಹ ಬಟ್ಟಳಾ ಸೀತೆ 31 ಈನಾಡ ಗರತಿ ನೀನಲ್ಲ | ದಾರು ಬಂಧುಗಳುಂಟು ದಾರ ಬಳಿಗೆ ನೀ ಬಂದೀ 32 ಈರೇಳು ಲೋಕವ ಸುತ್ತಿ ತಿರುಗಿ ಬಂದೆ ನಾಗಲೋಕಕ್ಕೆ ಬಾಹೆನೆಂದು ನಾಗಲೋಕದಿಂದ ದೇವಲೋಕಕ್ಕೆ ಬಂದೆ ದೇವಿಗೆ ಕಾಣಿಕೆ ತಂದೇ 33 ಹೊನ್ನು ಹಣವನೀವೆ ಅನ್ನವಸ್ತ್ರವನೀವೆ ಇನ್ನು ನೀವಲಿದದ್ದು ಈವೆ | ಇನ್ನು ನೀವಲಿದದ್ದು ಚೆನ್ನಾಗಿ ಕೊಡುವೆನು ಬಿನ್ನವಿಸೆ ಗರತಿ ನೀ ಅಂದ್ಲೂ 34 ಹೊನ್ನು ಹಣವನೊಲ್ಲೆ ಅನ್ನವಸ್ತ್ರವನೊಲ್ಲೆ ನಿನ್ನ ಭಾಗ್ಯವು ನಾನೊಲ್ಲೆ | ಮುನ್ನಿನ ಅಸುರರೂಪ ಇನ್ನು ನೀಬರೆದರೆ ಹರಣ ಹೊರುವೆನು 35 ಮುನ್ನವನು ಕಂಡು ಕೇಳರಿಯ | ಪನ್ನಂಗಧರ ರಾಮ ಬಂದರೆ ಬೈದಾರು ಗಮನ ಮಾಡಂದ್ಲೂ36 ಅಂದರೆ ಸೀತೆ ತನ್ನಂಗಕ್ಕೆ ಬರಲೆಂದು ತಂದು ತೊಡೆದಳು ಭಸುಮವನು | ಅಂದೆನ್ನ ವನಕೆ ಪ್ರದಕ್ಷಿಣೆ ಬರುವಾಗ ಉಂಗುಷ್ಟವನು ಕಂಡುಬಲ್ಲೆ 37 ಉಂಗುಷ್ಟದಂದಕ್ಕೆ ಮುಂದೆ ಪಾದವ ಬರಿ ಹಿಂದೆ ಹಿಂಬುಡ ಮೊಣಕಾಲು | ಹೊಂದಿಸಿ ಬರೆ ಎಂದಳವಳು 38 ಚಂದಾದ ಕಾಗದ ಲೆಕ್ಕಣಿಕೆ ಪಿಡಿದು ತಂದು ಕೊಟ್ಟಳು ಸೀತೆ ಕೈಗೆ | ಒಂದು ಕಾಯಕೆ ಹತ್ತು ಸಿರಗಳ ಬರೆದಳು ಮುಂದೆರಡು ಪಾದವ ಬರೆದಳು 39 ಒಂದರ ಹಿಂದೊಂದು ವರ್ಣಿಸಿ ಬರೆದಳು ತಂದು ನಿಲಿಸಿದಳು ರಾವಣನಾ | ಚಂದವಾಯಿತು ದೇವಿ ವರವಕೊಡೆನುತಲಿ ಎಂದೆಂದಿಗೂ ಅಳಿಯದ್ಹಾಗೇ 40 ಅಳಿದು ಉಳಿಯದಿರು ಉಳಿದು ನೀ ಕೆಡದಿರು ಧರಿಯವಳಗೆ ಅಡಗದಿರು | ಕಿರಿಯ ಲಕ್ಷ್ಮಣದೇವ ಹೊಡೆದರೆ ಮಡಿ ಎಂದು ವರವ ಕೊಟ್ಟಳು ಸೀತೆ ಪಠಕೆ 41 ಮರೆ
--------------
ಹೆಳವನಕಟ್ಟೆ ಗಿರಿಯಮ್ಮ
ಹರಿಸಂಕೀರ್ತನೆ ಸೇವೆಗೆ ಜನರೊದಗುವರೆ ಪ ದೊರೆತನವಾಗಬೇಕೆನಲಿಲ್ಲ-ಬಲು ಸಿರಿತನವನು ವಾಂಛಿಸಲಿಲ್ಲ ಯೊಂದಿತ್ತರೆ ಸಾಕಲ್ಲ 1 ಅನ್ನವಸ್ತ್ರವಕೇಳುವುದಿಲ್ಲ ಒಳ್ಳೆ-ಚಿನ್ನ ಬಣ್ಣವ ಕೊಡುಎನಲಿಲ್ಲ ನೀನೊಲಿದರೆ ಸಾಕಲ್ಲ 2 ವರದ ವಿಠಲ ಬಲ್ಲೆ ನೀನಿದನೆಲ್ಲ 3
--------------
ಸರಗೂರು ವೆಂಕಟವರದಾರ್ಯರು
ಕೃಷ್ಣ ಇನ್ಯಾತರ ಶ್ರೇಷ್ಠನೆಸ್ತನ ಕೊಟ್ಟ ನಾರಿಯ ಕೊಂದು ಬಿಟ್ಟಾನೆ ಪ.ಅರ್ಜುನ ಯಾತರ ಭಂಟನೆನಿರ್ಲಜ್ಯದಿ ಧನುಷ್ಯ ಕೆಳಗಿಟ್ಟಾನೆÉ ಅ.ಪ.ಏನೇನೂ ಧೈರ್ಯವಿಲ್ಲವೊ ಕೃಷ್ಣಗೆಬಲು ಮೀನಿನಂತ ಚಂಚಲವೊ 1ಇಷ್ಟು ಎದೆಗಾರನಲ್ಲವೊ ಪಾರ್ಥಯುದ್ಧ ಬಿಟ್ಟರೆ ನಗುವರಲ್ಲವೊ 2ಸೊಲ್ಲುಸಾಲವ ಕೊಡುವೊನಲ್ಲವೊದೊಡ್ಡ ಕಲ್ಲು ಹೊರಿಸಲು ನಾಚಿಕೆ ಇಲ್ಲವೊ 3ಹೆಣ್ಣು ಬಾಳ್ವೆ ಬಲು ಹೊಲ್ಲೊಹರಡು ಸಣ್ಣವಲ್ಲವೊ ನಿನಗಲ್ಲವೊ 4ತಲೆದೂಗೊ ಲಕ್ಷಣ ಹೊಲ್ಲವೊಅತಿ ಮಲೆತು ನಡೆವ ಬುದ್ದಿ ಅಲ್ಲವೊ 5ವೇಷಗಾರಿಕೆ ಬಲು ಹೊಲ್ಲವೊವಿಶೇಷ ಪರಾಕ್ರಮ ಅಲ್ಲವೊಅರ್ಜುನ6ಬಿರಿಗಣ್ಣು ಲಕ್ಷಣ ಹೊಲ್ಲವೊದೊಡ್ಡ ಉರಿಮಾರಿಪುರುಷನಲ್ಲವೊ7ಮರುಳುತನ ಬಲು ಹೊಲ್ಲವೊಮಕ್ಕಳ ಕೊರಳು ಕೊಯ್ದರೆ ನಾಚಿಕೆ ಇಲ್ಲವೊ ಅರ್ಜುನ 8ತಿರುಕತನ ಬಲು ಹೊಲ್ಲವೊಅತಿ ಹರಕ ನೀ ಪುರುಷನಲ್ಲವೊ ಕೃಷ್ಣ 9ಚೋರತನದಿಂದ ಬಲು ಕೆಟ್ಯೊನಿನ್ನ ಧೀರತನವ ತೋರಿಸಿ ಬಿಟ್ಯೊ 10ಕೊಡಲಿಗಡುಕತನ ಹೊಲ್ಲವೊಛಲ ಹಿಡಿದರೆ ಬಿಡುವನಲ್ಲವೊ ಕೃಷ್ಣ 11ಅಹಲ್ಯದೇವಿಯ ಕೆಡಿಸಿದನೆಂದುಬಹು ಭೋಳೆ ಬುದ್ದಿಹೇಳಲೊನಿಂದುಅರ್ಜುನ12ನಾರಿಯ ಒಬ್ಬಗೆ ಒಪ್ಪಿಸಿಕೊಟ್ಯೊನೀ ಊರು ಕೇರಿ ಹಂಬಲ ಬಿಟ್ಯೊ ಕೃಷ್ಣ 13ವೈರಾಗ್ಯವ ತೋರಿಕೊಂಡೆಲ್ಲೊನಾಗನಾರಿಯ ಕೂಡಿಕೊಂಡೆಲ್ಲೊ ಪಾರ್ಥ 14ಪೋರತನವು ಬಲು ಅಲ್ಲವೊ ಕೃಷ್ಣನಿನ್ನ ಜಾರತನವ ಬಿಡಲ್ಲಿವೊ 15ದಾರಿದ್ರ್ಯತನ ಬಲು ಹೊಲ್ಲವೊದೊಡ್ಡ ವೀರನೆಂಬೊ ಗರವು ಅಲ್ಲವೊ ಅರ್ಜುನ 16ಅನ್ನವಸ್ತ್ರವು ನಿನಗಿಲ್ಲವೊಬಹು ಮಾನ್ಯನೆಂಬೊ ಗರವು ಅಲ್ಲವೊ ಕೃಷ್ಣ 17ರಾಜ ಲಕ್ಷಣ ನಿನಗಿಲ್ಲವೊರೂಪಮಾಜುಕೊಂಡ ಬುದ್ಧಿ ಅಲ್ಲವೊ ಅರ್ಜುನ18ದ್ವಂದ್ವ ಯುದ್ಧವÀ ಮಾಡಿದವನಲ್ಲವೊಕುದುರೆ ಚಂದಾಗಿ ಏರಿ ಓಡಲು ಬಲ್ಯೊ ಕೃಷ್ಣ 19ಕರೆದರೆ ಯುದ್ಧಕ್ಕೆ ಹ್ಯಾಗೆಂದುನೀನುತಿರುಗಿದಿ ತೀರ್ಥಯಾತ್ರೆಗಳೆಂದು ಅರ್ಜುನ 20ಕೃಷ್ಣ ಅರ್ಜುನರ ಈ ಸಂವಾದಸಂತುಷ್ಟ ರಾಮೇಶ ಕೊಡುವಮೋದ21
--------------
ಗಲಗಲಿಅವ್ವನವರು
ತಾಪಡೆದು ಬಂದುದಕುಪಾಯವೇನು |ಕೋಪದಲಿ ಶ್ರೀಪತಿಯ ಶಾಪಿಸಿದರೇನು ಪ.ಅನ್ನವಸ್ತ್ರವಿಲ್ಲವೆಂದು ಅತಿ ಕ್ಲೇಶಪಟ್ಟರೇನು |ಧಾನ್ಯಧನಗಳ ಬೇಡಿ ಧರೆಗಿಳಿದರೇನು |ಎಣ್ಣಿಯನು ಪೂಸಿ ಹುಡಿಯೊಳಗೆ ಹೊರಳಿದರೇನು |ತನ್ನ ತಲೆ ಅಡಿಮಾಡಿ ತಪವ ಮಾಡಿದರೇನು 1ಸರಿಯ ಸುಜನರ ಕಂಡು ಕರುಬಿ ಕೊರಗಿದರೇನು |ಬರಿಮಾತುಗಳನಾಡಿ ಭ್ರಷ್ಟನಾದರೆ ಏನು ||ಇರುಳು ಹಗಲೂ ಹೋಗಿ ಆರ ಮೊರೆಯಿಟ್ಟರೇನು |ಅರಿಯದ - ಮನುಜರಿಗೆ ಆಲ್ಪರಿದರೇನು 2ಹೋಗದೂರಿನ ದಾರಿಕೇಳಿ ಮಾಡುವದೇನು |ಮೂಗನ - ಕೂಡ ಏಕಾಂತವೇನು ||ಯೋಗೀಶ ಪುರಂದರವಿಠಲನ ನೆನೆಯದವ |ತ್ಯಾಗಿಯಾದರೆ ಏನು ಭೋಗಿಯಾದರೆ ಏನು 3
--------------
ಪುರಂದರದಾಸರು