ಒಟ್ಟು 5 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ ಮರೆದೆನೊ ರಂಗ ನಿನ್ನ ಮರೆದೆ ಅನ್ಯರನ್ನಕೆ ಸಿಲುಕಿ ಅನುಗಾಲ ಮರುಳಾಗಿ ಪ ಊಟಕ್ಕೆ ಬರುವಲ್ಲಿ ತನುವುಬ್ಬಿ ಎನ್ನ ಮನ ನಾಟುವುದು ಅವರ ಕಡೆ ಅನುರಾಗದಿ ನೀಟಾದ ಭೋಜನವ ಬಯಸುವೆನು ಯಮರಾಯ ಭಂಗ ಕೇಳಿ ಎಚ್ಚರಿಯದಲೆ1 ಮತ್ತೆ ಕರೆಯಲು ಬರಲು ಉತ್ಸವ ಪಿಡಿಯಲೊಶವೆ ಹೊತ್ತು ಹೊತ್ತಿಗೆ ಅವರ ಕೊಂಡಾಡುತ ಹೆತ್ತವರಿಗಿಂತಲೂ ಅಧಿಕ ನಮಸ್ಕರಿಸುವೆನು ಚಿತ್ತಜನಪಿತ ನಿನ್ನ ಸ್ತೋತ್ರ ಪಠಿಸದಲೆ2 ಎಡೆಯ ಮುಂದೆ ಕುಳಿತು ಎಲ್ಲ ಕಾಲಗಳಿಂದ ಬಿಡದೆ ಮಾಡಿದ ಪುಣ್ಯಪಾಪಗಳೆದು ಎಡಬಲದವರ ಪಙÉ್ತ ನೋಡಿಕೊಳ್ಳುತ ದುಃಖ ಪಡುವೆನೋ ಎನಗಿಷ್ಟು ಕಡಿಮೆ ಹಾಕಿದರೆಂದು3 ಅನ್ನವಿತ್ತವನ ಪಾಪಗಳು ನಿರಂತರದಿ ಅನ್ನದಾಶ್ರಯ ಮಾಡಿಕೊಂಡಿಪ್ಪವು ಚೆನ್ನಾಗಿ ತಿಳಿಯದಲೆ ಚಾತುರ್ಯದಿಂದಲಿ ಧನ್ಯನಾದೆನು ನಾನು ಪರರ ಪಾಪವ ಭುಜಿಸಿ 4 ಒಬ್ಬರೆಡೆ ನೋಡಿಕೊಳಲಧಿಕವಾಗಿದ್ದರೆ ಉಬ್ಬುವೆನು ಊರು ಕೇರಿ ಹಿಡಿಸದಂತೆ ಸುಬ್ಬನ ಸೂರೆಯಂತೆ ಪರರ ಅನ್ನವನುಂಡು ಮೊಬ್ಬಿನಲಿ ದಿನಗಳೆದೆ ದೀನ ಮನಸಿನಲಿ 5 ಒಡಲಿಗೆ ಬಿದ್ದರಸ ಮೂರು ಭಾಗಗಳಾಗಿ ಕಡೆಗೆ ಪೋಗುವುದೊಂದು ನಿಲುವುದೊಂದು ತಡೆಯದಲೆ ಸಂತಾನ ಪಡೆವುದೊಂದೀತೆರ ಕಡೆಗಾಣಲಿಲ್ಲ ಪರರಲಿ ಉಂಡ ಋಣಕೆ6 ಆವಾವ ಬಗೆರುಚಿ ಜಿಹ್ವಗೆ ತೋರುತಿದೆ ಆವಾವ ಬಗೆ ನರಕ ಬೇರೆಯುಂಟು ಮಣಿ ಸರ್ವೇಶ ವಿಜಯವಿಠ್ಠಲ ಸ್ವಾಮಿ ಈ ಜೀವ ಹಿತವಾಗುವಂತೆ ಮಾರ್ಗವ ತೋರು 7
--------------
ವಿಜಯದಾಸ
ಬಾರೆ ಸಖಿ ವಾರಿಜ ಮುಖಿ ಬಾರೆ ಬಾರೆ ಸಖಿ ಬಾರೆ ಕೋಪಿಸೋರೆ ಹೀಗೆ ಯಾರುಪದೇಶವುಮುರಾರಿಯ ಮುಖ್ಯ ಬಲರಾಮನ ಸಖಿಯೆಬಾರೆ ಬಾರೆ ವಾರಿಜ ಮುಖಿಯೆ ಪ. ಪುಟ್ಟ ಸುಭದ್ರಾ ನಿನಗೆ ಸಿಟ್ಯಾಕ ಒದಗಿತಇಟ್ಟ ಮುದ್ರಿಗಳು ತಡವಾಗಿಇಟ್ಟ ಮುದ್ರಿಗಳು ತಡವಾಗಿ ಮುಯ್ಯವಇಷ್ಟು ಹೊತ್ತನಾಗೆ ತರಬಹುದೆ 1 ಕೇಳೆ ಸುಭದ್ರಾ ಮುಯ್ಯಾ ಕಾಳ ರಾತ್ರಿಲೆ ತಂದುಭಾಳ ಕೋಪಿಸುವ ಬಗಿ ಹೇಳಭಾಳ ಕೋಪಿಸುವ ಬಗಿ ಹೇಳ ಮುತ್ತಿನ ತೋಳುತಾಯಿತವ ಕೊಡುವೆನ 2 ಧಿಟ್ಟ ಸುಭದ್ರಾ ಮುಯ್ಯಾ ಇಷ್ಟೊತ್ತ್ತಿನಾಗ ತಂದು ಸಿಟ್ಟು ಮಾಡಿದ ಬಗಿ ಹೇಳಸಿಟ್ಟು ಮಾಡಿದ ಬಗಿ ಹೇಳ ಮುತ್ತಿನ ಕಟ್ಟಾಣಿ ಕೊಡುವೆ ನಿನಗಿನ್ನು3 ಲೋಕನಾಯಕಿ ಕೃಷ್ಣ್ಣಿ ಕೋಪವ್ಯಾ ಕೊದಗಿತಹಾಕಿದ ಮುದ್ರಿ ತಡವಾಗಿ ಹಾಕಿದ ಮುದ್ರಿ ತಡವಾಗಿ ಮುಯ್ಯವ ಈ ಕಾಲದೊಳಗೆ ತರಬಹುದೆ4 ಕೆಂಡದಂಥವಳ ಗುಣ ಕಂಡೇವ ಸಭೆಯೊಳು ಚಂಡಿತನವನೆ ಬಿಡು ಕೃಷ್ಣಿಚಂಡಿತನವನೆ ಬಿಡು ಕೃಷ್ಣಿ ಮುತ್ತಿನ ದಂಡೆ ಕೊಡುವೆ ಬಿಡುಕೋಪ5 ಬೆಂಕಿಯಂಥವಳ ಗುಣ ಶಕ್ಯವೆ ವರ್ಣಿಸಲು ಶಂಕರಾದ್ಯರಿಗೆ ವಶವಲ್ಲಶಂಕರಾದ್ಯರಿಗೆ ವಶವಲ್ಲ ಮುತ್ತಿನ ವಂಕಿಯ ಕೊಡುವೆ ನಿನಗಿನ್ನು 6 ಸತಿಯು ಸುಭದ್ರೆ ನೀನು ಯತಿಯ ಬೆನ್ಹತ್ತಿದಾಗ ಅತಿಭೀತಿ ಎಲ್ಲಿ ಅಡಗಿತ್ತಅತಿಭೀತಿ ಎಲ್ಲಿ ಅಡಗಿತ್ತ ನಾವುನಿನ್ನ ಪತಿವ್ರತ ತನವ ಅರಿವೆನೆ7 ಮಿತ್ರೆಯರು ನಾವೆಲ್ಲ ತುಪ್ಪಅನ್ನವನುಂಡುಪುತ್ರರ ಸಹಿತ ಸುಖನಿದ್ರೆಪುತ್ರರ ಸಹಿತ ಸುಖನಿದ್ರೆ ಗೈವಾಗ ಮತ್ತ ನೀ ಮುಯ್ಯ ತರಬಹುದೆ8 ಲೋಲ ರಾಮೇಶನು ಹಾಲು ಅನ್ನವನುಂಡುಬಾಲರ ಸಹಿತ ಸುಖನಿದ್ರೆಬಾಲರ ಸಹಿತ ಸುಖನಿದ್ರೆ ಗೈವಾಗಮ್ಯಾಲೆ ಮುಯ್ಯ ತರಬಹುದೆ9
--------------
ಗಲಗಲಿಅವ್ವನವರು
ವಾಯುದೇವರು ನಿನ್ನ ನಂಬಿ ಬಂದೆ ಪಂಚಮುಖಿ ಪ್ರಾಣ ಅನ್ಯ ಹಂಬಲ ಬಿಡಿಸಿ ಬಿಂಬ ಮೂರುತಿ ತೋರೋ ಪ ಹಿಂದೆ ತ್ರೇತಾಯುಗದಿ ರಾಮನಾಜ್ಞೆಯ ಹೊಂದಿ ಸಿಂಧು ದಾಟಿ ಸೀತೆಗೆರಗಿ ನಿಂದು ಸುಂದರ ರಾಮ ಮುದ್ರಿಕೆಯಿತ್ತು ಲೀಲೆಯಲಿ ಕೊಂದ ರಕ್ಕಸ ಪುರವನನಲಗೆ ಇತ್ತೆ 1 ಬಂಡಿ ಅನ್ನವನುಂಡು ಭಂಡ ಬಕನಾ ಕೊಂದು ಹಿಂಡು ನೃಪರಾ ಜರಿದು ಕೊಂಡು ದ್ರೌಪದಿಯಾ ಮಂದಮತಿಗಳನಳಿದು ತಂದಿ ಸೌಂಗಂಧಿಕವ ಪುಂಡ ಕೀಚಕರಳಿದ ಪಾಂಡವಪ್ರಿಯದೂತ 2 ಮೋದತೀರ್ಥರೆನಿಸಿ ವಾದಿಗಳ ನಿಗ್ರಹಿಸಿ ಬೋಧಿಸಿ ಸುಜನರಿಗೆ ಮಾಧವನ ಗುಣವ ಸಾಧು ವಂದಿತ ಬಾದರಾಯಣರು ಇರುತಿರುವ ಬದರಿಯಲ್ಲಿರುವಿ ಶ್ರೀ ನರಹರಿಯ ತೋರೋ 3
--------------
ಪ್ರದ್ಯುಮ್ನತೀರ್ಥರು
ವಿಷಯಾಸೆ ಬಿಡಲೊಲ್ಲದೋ ದೇವ ಪ. ವಸುದೇವಸುತ ನಿನ್ನ ವಶವಾಗೋತನಕ ಅ.ಪ. ಉದಯದಲಿ ಎದ್ದು ಹರಿಪದಗಳನು ಸ್ಮರಿಸದಲೆಕುದಿದು ಪರರನ್ನೆ ಬೈದು ಸುಯಿದುಮುದದಿಂದ ಮಜ್ಜನವ ಮಾಡದಲೆ ಕಂಡಕಡೆಒದಗಿ ಪರಸದನಕಾಗಿ ಪೋಗಿಮದಗರ್ವದಿಂದ ಗುರುಹಿರಿಯರಿಗೆ ವಂದಿಸದೆಕದನವನೆ ತೆಗೆದು ಬಂದು ನಿಂದುಇದೆ ಸಾಧನವೆಂದು ಉದರ ನೆವದಿ ತಿರುಗಿಸುದತಿಯರ ಸುಖಬಡಿಸಿ ಮದನವೆಗ್ಗಳನಾದೆ 1 ಓದುವೆನು ವಿದ್ಯೆಗಳ ಓದನದ ಬಯಕೆಯಲಿಸಾಧುಶಾಸ್ತ್ರಗಳ ಮರೆದು ತೊರೆದುಕಾದುವೆನು ತರ್ಕವ್ಯಾಕರಣ ಬಲದಿಂದಬೀದಿಬೀದಿಯಲಿ ಚರಿಸಿ ಅರಸಿಮಾಧವನ ಪೂಜಿಸದೆ ಪರರ ಅನ್ನವನುಂಡು ಶೋಧಿಸದೆ ಪುಣ್ಯಪಾಪ ಲೇಪಕ್ರೋಧದಿಂದಲಿ ಇನಿತು ಪರಿಪರಿಯ ಬವಣೆÀಯಿಂದಬೋಧನೆಗೆ ಒಳಗಾಗಿ ಕುಧರ್ಮವನು ಪಡೆದೆ2 ಪರರ ಸೌಭಾಗ್ಯ ವಿದ್ಯಾ ಮಕ್ಕಳ ಕಂಡುಮರುಗಿ ಮನದೊಳಗೆ ಕೊರಗಿ ಸೊರಗಿತರತರಕೆ ಪರರಾಂಗನೆಯರ ಚೆಲುವಿಕೆ ಕಂಡು[ತೆರೆದ] ಕಣ್ಣಿಂದ ನೋಡಿ ಬಾಡಿಎರಗಿ ಮನ ಅವರಲ್ಲಿ ಏಕಾಂತದಲಿ ಕಂಡುಕರದಿ ಸನ್ನೆಯನು ಮಾಡಿ ಕೂಡಿಹೊರಗೆ ಗುಣವಂತನೆಂದೆನಿಸಿ ಧರೆಯೊಳಗೆ ಪಾಮರ ಬುದ್ಧಿಯಿಂದ ಸಂಚರಿಸಿ ನಿನ್ನನು ಮರೆದೆ3 ದೇಶದೇಶಕೆ ಧನದಾಸೆಗಾಗಿ ನಡೆದುಬ್ಯಾಸರದೆ ಮನೆ ಮನೆಗೆ ಪೋಗಿ ಕೂಗಿಭೂಸುರೋತ್ತಮರು ನಾವೆಂದು ಪರರಮುಂದೆಹೇಸದಲೆ ಪೇಳಿಕೊಂಡು ಭಂಡುಮೋಸಗೊಳಿಸಿ ಪರರ ಆಶ್ರಯವನೆ ಮಾಡಿಭೇಷಜವ ತೋರಿ ಕಳೆದೆ ಪೊಳೆದೆಈಸುಪರಿ ಧನವ ತಂದು ಕೂಳನೆ ಹಾಕಿಆಸತಿಸುತರೆನಗೆ ಗತಿಯೆಂದು [ಗುಣಿಸಿದೆ] 4 ಕಾಯದಾಸೆಗಾಗಿ ನೋಯಬಯಸದಲೆ ಉ-ಪಾಯವ ಚಿಂತಿಸುತ್ತಲಿತ್ತಹೇಯವಿಲ್ಲದೆ ಸ್ನಾನ ಸಂಧ್ಯಾವಂದನೆ ತೊರೆದುತೋಯಿಸದೆ ದೇಹವನ್ನು ಇನ್ನುಮಾಯಮೋಸಗಳಿಂದ ಬಾಯಿಗೆ ಬೇಕಾದ್ದುಆಯಾಸಪಟ್ಟು ತಂದು ತಿಂದುಶ್ರೀಯರಸ ಹಯವದನರಾಯನೆ ನಾ ನಿನ್ನಮಾಯವನು ತಿಳಿಯದನ್ಯಾಯದಿಂದಲಿ ಕೆಟ್ಟೆ 5
--------------
ವಾದಿರಾಜ