ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಿಂತೆಯನು ಪರಿಹರಿಸು ಚಂದ್ರವದನೇ ಪ ಚಂದ್ರಶೇಖರನಾಣೆ ಬಹುವಿಧದಿ ನೊಂದು ಭ್ರಾಂತನಾದೆತಾಯಿ ಅ.ಪ. ಹೆಣ್ಣಿಗೋಸುಗ ಪೋಗಿ ಹೆಣ್ಣಿನಾಶೆಯ ಮಾಡಿ ಮಣ್ಣುಪಾಲಾದೆನೇಬಣ್ಣಕ್ಕೆ ಮರುಳಾಗಿ ಬಾಣಕ್ಕೆ ಗುರಿಯಾಗಿಕಣ್ಣುಕಾಣದೆ ಕೂಪದೊಳು ಬಿದ್ದೆಅನ್ನಪೂರ್ಣೆಯೆ ನಿನ್ನ ಚರಣವನು ನಂಬಿದ ಶರಣನ ಪಾಲಿಸು ತಾಯಿ 1 ಮನನಿಲ್ಲದೆ ಮತ್ತೆ ಮನಬಂದತ್ಯೆರ ತಿರುಗಿ ಮನ್ಮಥನ ಬಯಸಿದೆ ಮಾನಹಾನಿಯಾಗಿ ಹೀನನಾದೆನು ನಾನು ಮನ್ಮಥನ ತಾಯೆಪ್ರಾಣ ಪೋಗೋದು ಲೇಸು ಪ್ರಾಣಿಗಳ ಮಧ್ಯದಿಮನೋಮಾನಿನೀ2 ಮತ್ಸ್ಯ ಮೂರುತಿ ತಂದೆವರದಗೋಪಾಲವಿಠ್ಠಲನ ಅಚ್ಚಸುಖ ಶರಧಿಯೊಳಿಪ್ಪ ಮೀನಾಕ್ಷಿಯೇ 3
--------------
ತಂದೆವರದಗೋಪಾಲವಿಠಲರು
ಮಾಯಕಾರಳೆ ಕಾಯೊ ಕರುಣದಿ ಬಾಯಿ ಬಿಡುವೆನೆ ರುದ್ರಾಣಿ ಪ ನೋಯಲಾರದೆ ದೇವಿ ಮರೆಹೊಕ್ಕೆ ನೋವು ಕಳೆಯಮ್ಮ ಭವಾನಿ ಅ.ಪ ಭಕ್ತಜನರಿಗೆ ಆಪ್ತಮಾತೃ ನೀ ನಿತ್ಯೆ ನಿರ್ಮಲರೂಪಿಣೀ ಭೃತ್ಯನೊಳು ದಯವಿತ್ತು ಪೊರೆ ಆದಿ ಶಕ್ತಿ ದೈತ್ಯಸಂಹಾರಿಣಿ 1 ಶುಂಭ ನಿಶುಂಭರೆಂಬ ಖಳರ ಜಂಬ ಮುರಿದೌ ಚಂಡಿಕೆ ಅಂಬೆನಿನ್ನನು ನಂಬಿ ಭಜಿಪೆ ಇಂಬುಗೊಟ್ಟು ಸಲಹಂಬಿಕೆ 2 ಸುರರ ಮೊರೆಕೇಳಿ ದುರುಳÀರ್ಹಾವಳಿ ದೂರಮಾಡಿ ಶೌರಿಯೆ ನೀ(ರಟ)ಸಿದವರಿಗೆ ವರವ ಕರುಣಿಸಿ ಕರುಣ ದೋರಿದೌದರಿಯೆ 3 ಅನ್ನಪೂರ್ಣೆಯೆ ನಿನ್ನ ಪಾದ ವನ್ನು ಭಜಿಸುವೆ ಕಲ್ಯಾಣಿ ಭಿನ್ನವಿಲ್ಲದೆ ನಿನ್ನ ಸುತಗೆ ಸುಖ ವನ್ನು ಕೊಡೆ ನಾರಾಯಣೆ 4 ರಾಮದಾಸರ ಪ್ರೇಮ ಜನನಿಯೆ ನೇಮದಿಂ ನಿನ್ನ ಪಾಡುವೆ ಹೈಮಾವತಿ ಎನ್ನ ಕಾಮಿತಾರ್ಥವ ಪ್ರೇಮದಿಂ ನೀಡು ಕರುಣಿಯೆ 5
--------------
ರಾಮದಾಸರು