ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಕ್ರೂರ ವರದ ವಿಠಲ | ಕಾಪಾಡೊ ಇವಳಾ ಪ ಶ್ರೀಕೃಷ್ಣ ನಿನದಾಸ್ಯ ಚೊಕ್ಕ ಪಾಲಿಸುತಾ ಅ.ಪ. ವಿನಯಾದಿ ಗುಣ ಭರಿತೆ ಜನನಿ ಜನಕರಪ್ರೀತೆಮನೊ ಮೈಲಿ ಕಳೆಯುತಲಿ ಮನೊಮಾನಿ ಒಡೆಯಾ ಗುಣ ಉಳ್ಳವಳ ಮಾಡಿ | ಜಾಣ್ಮೆಯಲಿ ಸಂಸಾರಅನುಸರಿಸುವಂತೆಸಗೊ | ಅನಿಲಾಂತರಾತ್ಮಾ 1 ಭಕುತರಾ ಸುರಧೇನು | ಭಕುತಿ ಜ್ಞಾನವನಿತ್ತುಮುಕುತಿ ಪಂಥದಿ ಹಾದಿ | ಯುಕುತಳೆನಿಸೋಕಕುಲಾತಿಯನೆ ಕಳೆದೂ | ಶಕುತಿ ಇದ್ದುದ ತಿಳಿಸಿಸುಕರ ಸತ್ಸಾಧನವ | ಪ್ರಕಟವನೆ ಮಾಡೋ 2 ಪತಿಸುತರು ಹಿರಿಯರಾ | ಸತ್ಸೇವೆ ಕೈಕೊಂಡುಅತುಳ ಹರಿ ಆವರಲ್ಲಿ | ಸ್ಥಿತನೆಂದು ತಿಳಿದೂಹಿತದಿಂದ ಸೇವಿಸಲು | ಗತಿಯ ಆಹುದೆಂದೆಂಬಮತಿಯನೇ | ಕರುಣಿಸುತ | ಕೃತ ಕೃತ್ಯಳೆನಿಸೋ 3 ಕಷ್ಠ ನಿಷ್ಠುರಗಳಲಿ | ಇಷ್ಟಸಂತುಷ್ಠಿಯಲಿದೃಷ್ಟಿ ಸಮತೆಯ ಕೊಟ್ಟು | ಕಾಪಾಡೊ ಹರಿಯೇಸೃಷ್ಠಿ ಕರ್ತನು ಹರಿಯು | ಶ್ರೇಷ್ಠ ದೇವತೆಯೆಂಬ ಸ್ಪಷ್ಟಮತಿ ಕರುಣಿಸುತ | ಪ್ರೇಕ್ಷ ನೀನಾಗೋ 4 ಗಾಮಲ್ಗಣಿ ವರದ | ನೀವೊಲಿಯದಿನ್ನಿಲ್ಲಭಾವದಲಿ ಮೈದೋರಿ | ಭವದ ಸುತ್ತರಿಸೋಈ ವಿಧದ ಭಿನ್ನಪವ | ನೀ ವೊಲಿದು ಸಲಿಸೋದುದೇವ ಪ್ರಾರ್ಥಿಪೆ ಗುರೂ | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಕಾಯ ಕರವ ಪಿಡಿಯೊ ಗೋಪಾಲ ಪ ಜಾಳು ಜೀವನದ ಗೋಳಿಗೆ ಸಿಲುಕಿದೆ ಕೇಳುವರುಂಟೆ ದಯಾಳು ನೀನಲ್ಲದೆ ಅ.ಪ ತನುಬಲ ಧನಬಲ ಜನಬಲವೆಲ್ಲವು ಅನುಸರಿಸುವುವೇ ಕೊನೆತನಕ ಧನವು ತಪ್ಪಿದರೆ ಜನರು ತ್ಯಜಿಸುವರು ಜನಕ ನೀನಲ್ಲದೆ ಪೊರೆವರ ಕಾಣೆನೊ 1 ಸಟೆಯನಾಡುವುದು ದಿಟವ ತೊರೆಯುವುದು ಕಟುತರ ವಚನಕೆ ನಗುತಿಹುದು ಕಪಟ ಜೀವನವು ತುಟಿಯ ಮೀರಿದ ದಂತಗಳಂತಿರುವುದು 2 ನಿಮಿಷದ ಸೌಖ್ಯಕೆ ವರುಷದ ಕ್ಲೇಶವು ಪುರುಷ ಜೀವನವಿದು ಧರೆಯೊಳಗೆ ಪುರುಷೋತ್ತಮನೆ ಪ್ರಸನ್ನ ಹೃದಯನಾಗಿ ಕಲುಷರಹಿತವಾದ ಹರುಷವÀ ನೀಡೆಲೋ 3
--------------
ವಿದ್ಯಾಪ್ರಸನ್ನತೀರ್ಥರು
ನೋಡುವ ಬನ್ನಿ ಸ್ವಾಮಿಯ ಅಂತರ್ಯಾಮಿಯ ಭಕ್ತಿಯ ದೃಢಯುಕ್ತಿಯ 1 ದೇವದೇವನ ಪೂರ್ಣ ನೋಡುವ ಸೇವೆಮಾಡುವ ಸರ್ವದಾ ಕೊಂಡಾಡುವ ನವವಿಧ ಭಕ್ತಿಯ ಮಾಡುವ ಭಾವವಿಡುವ 2 ತನು ಮನಧನ ಅರ್ಪಿಸಿ ಬಿಡುವ ಮನಗೂಡುವ ಪ್ರಾಣಾಯಾಮ ಮಾಡುವ ಅನುದಿನ ಸಾಧಿಸಿ ನೋಡುವ ಘನಗೂಡುವ 3 ಇಡಾಪಿಂಗಳ ಮಧ್ಯ ನೋಡುವ ನಡೆವಿಡುವ ನಡುಹಾದಿಗೂಡುವ ಒಡನೆ ಸ್ವಸುಖ ಪಡೆವ ಗೂಢ ನೋಡುವ 4 ಸವಿಸುಖಸಾರ ಸುರುತದೆ ದ್ರವಿಸುತದೆ ಠವಠವಿಸುತದೆ ರವಿಕೋಟಿಪ್ರಭೆ ಭಾಸುತದೆ ಆವಾಗಲ್ಯದೆ 5 ಏನೆಂದನಬೇಕನುಭವ ಖೂನದೋರುವ ಘನ ಮಳೆಗರೆವ ಸ್ವಾನುಭವದಲಿ ಸೇವಿಸುವ ಅನುಸರಿಸುವ 6 ಜಾಗಿಸುತ್ತದೆ ವಸ್ತುಮಯ ಬಗೆಬಗೆಯ ಯೋಗ ಇದೆ ನಿಶ್ಚಯ ಸುಗಮಸಾಧನ ಮಹಿಪತಿಯ ಸುಜ್ಞಾನೋದಯ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ವನರುಹ ನಯನಾ | ವನಜೇಕ್ಷಣ ಪ್ರಿಯವನರುಹ ನಯನಾ | ಪ ತನುಮನ ಧನಗಳಾ | ನಿನಗರ್ಪಿಸುವಂಥಜನರ ಮನೋರಥ | ಅನುನಯದಿಂದಲೀವೆ 1 ಮನಸಿಜ ಜನಕನೇ | ಫಣಿಶೈಲ ಸದನನೇಅನಲಾಕ್ಷನ ಪ್ರಿಯ | ಗುಣ ಪರಿಪೂರ್ಣ 2 ಮನೆ ಮಗ ಮಡಧ್ಯಬಿ | ಮಾನವು ಪೋಗಲಿಲ್ಲಘನ ವಿಷಯಕೆ ಮನ | ಅನುಸರಿಸುವುದಯ್ಯ 3 ಕನಸು ಮನಸಿನೊಳು | ನಿನಪದ ಧ್ಯಾನವಅನುನಯದಿಂದಲಿತ್ತು | ಜನುಮ ಸಾರ್ಥಕ ಮಾಡೊ 4 ವ್ರಜ ಕರ ಪಿಡಿದು 5
--------------
ಗುರುಗೋವಿಂದವಿಠಲರು