ಒಟ್ಟು 4 ಕಡೆಗಳಲ್ಲಿ , 1 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದಿಗೀಪದ ಕರುಣಮಾಡುವೆಯೋ ನಿಮ್ಮ ಧ್ಯಾನಾ ನಂದ ಅಮೃತಪಾರ ನವಿನುಡಿಯ ಪ ಎಂದಿಗೀಪದ ಕರುಣಮಾಡಿ ಕರವ ಪಿಡಿದು ಮಂದಮತಿಯ ತರಿದು ಪೊರೆಯುವೆ ಸಿಂಧುಶಯನ ತಂದೆ ಶ್ರೀಹರಿ ಅ.ಪ ವಿಷಮಸಂಸಾರ ಮೋಹವನು ಬಿಡಿಸಿ ನಿಮ್ಮ ಭಜನ ಅಸಮ ಸುಖದೆನ್ನ ಮನವ ನಿಲ್ಲಿಸಿ ವ್ಯಸನ ಏಳರ ಕಾಟ ತಪ್ಪಿಸಿ ಬಿಡದೆ ಎನ್ನ ರಸನೆಮೇಲ್ನಿಮ್ಮ ನಾಮ ಸ್ಥಾಪಿಸಿ ವಸುಧೆ ಜನರ ಸುದ್ದಿ ಮರೆಸಿ ನಶಿಪ ಲೌಕಿಕದಾಸೆ ಕೆಡಿಸಿ ಕುಶಲಮತಿಯಿತ್ತು ಪಾಲಿಸುವ ಮಹ ಅಸಮಶುಭದಿನ ಕುಸುಮನಾಭ 1 ಹತ್ತು ಇಂದ್ರಿಯ ಮೂರು ಬಾಧೆ ತೊಲಗಿಸಿಬಿಡದೆ ಎನ್ನ ನೇತ್ರದೊಳು ತವಮೂರ್ತಿ ನಿಲ್ಲಿಸಿ ಸುತ್ತಿ ಕೊಲುವ ಮಾಯ ಮುಸುಕು ಹಾರಿಸಿ ನಿತ್ಯದೆನ್ನ ಚಿತ್ತದೊಳು ನಿಜಜ್ಞಾನ ಸ್ಥಿರಪಡಿಸಿ ಸತ್ಯ ಸನ್ಮಾನ್ಯಕ್ತನೆನಿಸಿ ನಿತ್ಯ ನಿರ್ಮಲ ನಿಮ್ಮ ಭಕ್ತರ ಉತ್ತಮ ಸಂದರುಶನವಿತ್ತು ತವ ಭೃತ್ಯನೆನಿಸೆನ್ನ ಸಲಹುವಂಥ 2 ಕ್ಲೇಶ ಪಂಚಕದುರುಲು ಪರಿಹರಿಸಿ ಅನುಮೇಷ ನಿಮ್ಮ ದಾಸಜನರಾವಾಸದೆನ್ನಿರಿಸಿ ಮೋಸಮರವೆಯ ಜಾಲ ಛೇದಿಸಿ ನಿಶಿದಿವದಿ ನಿಮ್ಮ ಧ್ಯಾನದೊಳೆನ್ನ ಮನವಐಕ್ಯೆನಿಸಿ ಮೋಸ ಪಾಶಗಳೆಲ್ಲನಾಶಿಸಿ ದೋಷರಾಶಿಯಿಂ ಮುಕ್ತನೆನಿಸಿ ಶ್ರೀಶ ಶ್ರೀರಾಮ ನಿಮ್ಮ ಚರಣ ದಾಸನೆನಿಸಿ ಪೋಷಿಸುವಂಥ 3
--------------
ರಾಮದಾಸರು
ದಾಸರ ಶಿಶು ನಾನು ಶ್ರೀಹರಿ ದಾಸರು ಶಿಶು ನಾನು ಪ ಹೇಸಿ ಪ್ರಪಂಚದ ವಾಸನಳಿದು ಜಗ ದೀಶನ ಶ್ರೀಪಾದದಾಸಾನುದಾಸರ ಅ.ಪ ಮರವೆ ಮಾಯ ತರಿದು ಲೋಕ ದರಿವಿನೊಳಗೆ ಬೆರೆದು ಪರಿಪರಿಯಿಂದಲಿ ನರಹರಿ ಚರಣವ ಸ್ಮರಣೆಯೊಳಿಟ್ಟು ಬಲು ಹಿರಿಹಿರಿ ಹಿಗ್ಗುವ 1 ಮೋಸಕ್ಲೇಶವನಳಿದು ಭವದ ಆಶಾಪಾಶತುಳಿದು ಸೋಸಿಲಿಂದ ಅನುಮೇಷ ಬಿಡದೆ ಹರಿ ಸಾಸಿರ ನಾಮಮಂ ಬೇಸರದ್ಹೊಗಳುವ 2 ಸತ್ಯ ಸನ್ಮಾರ್ಗಬಿಡದೆ ಮನವಂ ಎತ್ತ ಕದಲಗೊಡದೆ ನಿತ್ಯ ನಿರ್ಮಲಾತ್ಮ ಕರ್ತು ಶ್ರೀರಾಮನ ಅರ್ತು ಭಜಿಸುವಂಥ 3
--------------
ರಾಮದಾಸರು
ಮಡಿಮಡಿಯೆಂದು ಹಾರ್ಯಾಡಿ ಸುಳ್ಳೆ ಮಡಿಯಬೇಡಿರೋ ಭವದುರಳ್ಯಾಡಿ ಪ ಜಡಮತಿ ಕಡಿದು ಬಿಡಲಾಸೆ ತೊಡೆದು ನಡಿರೋ ಸನ್ಮಾರ್ಗದದು ನಿಜಮಡಿ ಅ.ಪ ಬದ್ಧಗುಣದೊಳಿರೆ ಅದು ಶುದ್ಧಮಡಿ ಕದ್ದು ತಿನ್ನುವ ಕ್ಷುದ್ರಬುದ್ಧಿ ನೀಗಿ ಪರಿ ಶುದ್ಧರಾಗಲದು ನಿರ್ಧಾರ ಮಾಡಿ1 ಕ್ಲೇಶಕಳೆವುದದು ಲೇಸುಮಾಡಿ ದು ರ್ವಾಸನಳಿಯೆ ಅದು ಮೀಸಲು ಮಡಿ ಮೋಸಮರವೆ ನೀಗಿ ಈಶನ ನಾಮವ ಧ್ಯಾಸದಿರಲು ಅನುಮೇಷ ಮಡಿ 2 ಬಿಟ್ಟದ್ದು ಉಟ್ಟರದು ಯಾವ ಮಡಿ ಉಟ್ಟು ಮುಟ್ಟೆಂಬುದಿದಾವಮಡಿ ಕೆಟ್ಟ ಪದ್ಧತಿಗಳ ಬಿಟ್ಟು ಸದಾಚಾರ ನಿಷ್ಠಪರರಾಗಲದು ಶಿಷ್ಟಮಡಿ 3 ಅರಿವುಗೂಡುವುದೆ ಸ್ಥಿರಮಡಿ ಬಹ ಜರ ಮರಣಳಿವುದೆ ಪರಮಮಡಿ ದುರಿತ ಗೆಲಿದು ಹರಿಶರಣರೊಳಾಡ್ವುದು ತಿರುಗಿ ಮುಟ್ಟಿಲ್ಲದ ಪರಮಮಡಿ 4 ಮಡಿಯಾದಮೇಲೆ ಮೈಲಿಗೆಲ್ಲಿ ಖೋಡಿ ಜ್ಞಾನ ವಿಡಿದುನೋಡು ನಿಜ ಹುಡುಕ್ಯಾಡಿ ಮಡಿಮುಟ್ಟಿಲ್ಲದ ನಮ್ಮೊಡೆಯ ಶ್ರೀರಾಮ ನಡಿ ದೃಢದಿ ನಂಬಲಿದೇ ಮೂಲಮಡಿ 5
--------------
ರಾಮದಾಸರು
ಆನಂದಂ ಮಹದಾನಂದಂಹರಿಯ ಭಜನ ಬ್ರಹ್ಮಾನಂದಂ ಪಸತ್ಯ ನುಡಿಯುವುದೆ ಆನಂದಂ ತನ್ನಗುರ್ತ ತಿಳಿಯುವುದೆ ಆನಂದಂನಿತ್ಯನಿರ್ಮಲನ ಸತ್ಯ ಗುಣಂಗಳನುಭಕ್ತಿಯಿಂ ಭಜಿಸೆ ನಿತ್ಯಾನಂದಂಸತ್ಯ ಸತ್ಯ ಸರ್ವೋತ್ತಮ ಹರಿಯೆಂದುಅರ್ತಿಯಿಂ ಭಜಿಸೆ ಅತ್ಯಾನಂದಂ 1ಆಶ ನೀಗುವುದೆ ಆನಂದಂಭವಪಾಶಗೆಲಿಯುವುದೆ ಆನಂದಂಶ್ರೀಶ ಕೇಶವನ ಸಾಸಿರ ನಾಮದಧ್ಯಾಸದಿರುವುದೆ ಲೇಸಾನಂದಂದೋಷದೂರ ಭವಪಾಶಹರನ ಅನುಮೇಷ ಪÀಠಿಸೆ ಸ್ಥಿರದಾನಂದಂ 2ಹಮ್ಮನಳಿವುದೇ ಆನಂದಂ ತಾಸುಮ್ಮನಿರುವುದೆ ಆನಂದಂಕರ್ಮರಹಿತನಾಗಿ ಬ್ರಹ್ಮಪಿತನಪಾದಒಮ್ಮನದೊಳಗಸಮಾನಂದಂಧರ್ಮವಿಡಿದು ಪರಬ್ರಹ್ಮ ಶ್ರೀರಾಮನಮರ್ಮ ತಿಳಿಯೆ ನಿರ್ಮಲಾನಂದಂ 3
--------------
ರಾಮದಾಸರು