ಒಟ್ಟು 8 ಕಡೆಗಳಲ್ಲಿ , 7 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯ ಬಲು ಹೇಯವೊ | ಸಾಕು ಸಾಕು ಸಂಸಾರ ನೆಚ್ಚದಿರು ಎಚ್ಚರಿಕೆ ಪ ಊಧ್ರ್ವಾಧೋ ಭಾಗದಿಂದ ಕೂಡಿದಾ ರಕ್ತಶುಕ್ಲ | ಅರ್ಧರ್ಧ ಪ್ರವೇಸಿಯಾಗಿ | ವರ್ಧನಾಗಿ ಮಾಂಸ ಪಿಂಡಿಕೆಯಲಿ ಬೆಳೆದು | ಅರ್ಧವದೊಳಗೆ ಬಳುಲುವುದೇನೊ ಮಹಾ ಕಠೀಣಾ 1 ಸನ್ನಿರೋಧವಾದ ಪ್ರಾದೇಶದಲಿ ನೀನು | ಬನ್ನ ಬಡುವದು ಜನಕೆ ಅರಿಯನಲ್ಲಾ | ಮುನ್ನೆ ಇಂದ್ರನಿಗಾಗಿ ವರವಿತ್ತ ಸಂಪತ್ತು | ಇನ್ನು ನಿನ್ನ ಸುತ್ತ ಬಂದದೆ ತಿಳಿದುಕೋ 2 ವಾತ ಶೈತ್ಯಜ್ವರ ಕೆಮ್ಮು | ಸಪುತ ಧಾತುಗಳಿಂದ ಬರುವ ರೋಗ | ಕ್ಲೇಶ ಮೋಹಗಳೊಡನೆ | ಮಾಯಾ 3 ಕಾಮ ಮದ ಗರ್ವದಲಿ ಪುಂಜನಾಗಿ ದುರಳ ನಿ | ಜ ಮಗಳ ಕೂಡ ಬೆರದಾಡಿ ಬೆರೆದು | ರೋಮರೋಮ ವಿಷಯ ಪೂರ್ತಿಯಾಗಿ ಚರಿಸಿ | ಪಾಮರನಾಗಿ ಬಳಲದಿರು ಬಹು ಜೋಕೆ 4 ಸತಿ ಸುತರು ಮಿಕ್ಕಾದ ಬಂಧುಗಳು ನೆರೆನೆರೆದು | ಪ್ರತಿದಿವಸದಲಿ ಅಟ್ಟುವುದು ನೋಡು| ಮತಿ ಚಂಚಲವಾಗಿ ಸತ್ಕರ್ಮ ವೃತ್ತಿಗೆ | ಪ್ರತಿಕೂಲವಾಗುವದು ಪ್ರೀತಿಯಾಗದು ಮುಂದೆ 5 ಎಂತು ನೋಡಲು ವಿಷಯ ಅನುಭವಿಸಿದರು ಅದರ | ಅಂತು ಕಂಡವರಾರು ವಲ್ಲೆನೆಂದು | ಭ್ರಾಂತಿಯಿಂದಲಿ ತಿರುಗಿ ಬಯಲಾಗೋದಲ್ಲದೆ | ಚಿಂತೆ ಇಷ್ಟಷ್ಟು ಏನೆಂದು ಪೇಳಲಿ 6 ಯಲೋ ಮನವೆ ಸಾರಿ ಪೇಳಿದೆನು ಚನ್ನಾಗಿ ನೀ | ನೆಲೆ ಮಾಡಿಕೋ ಜ್ಞಾನ ಭಕುತಿ ವಿತ್ತಾ | ಸುಲಭ ದೇವರ ದೇವ ವಿಜಯವಿಠ್ಠಲರೇಯ | ಕೆಲಕಾಲ ನೆನೆದು ಸುಖಿಯಾಗು ಸುಜನರಾ ಕೇಳು 7
--------------
ವಿಜಯದಾಸ
ಕೃಷ್ಣಚಿತ್ತ ಕೃಷ್ಣಚಿತ್ತ ಕೃಷ್ಣಚಿತ್ತ ಎನ್ನಿರೊ ಪ. ಕೃಷ್ಣಧ್ಯಾನದಿಂದ ಪರಮ ತುಷ್ಟರಾಗಿ ಸುಖದುಃಖ ಕಷ್ಟ ಕರ್ಮಂಗಳು ಎಲ್ಲ ಅಷ್ಟು ಹರಿಯಾಧೀನವೆಂದು ಅ.ಪ. ಜನನವಾದ ಕಾಲದಿಂದ ಇನಿತು ಪರ್ಯಂಕಾರದಲ್ಲಿ ಅನುಭವಿಸಿದಂಥ ಕರ್ಮ ಗುಣನಿಧಿಯಾಧೀನವೆಂದು1 ಕಷ್ಟದಲ್ಲಿ ಕಳೆದ ಕಾಲ ಅಷ್ಟರಲ್ಲೆ ಪಟ್ಟ ಸುಖ ಕೊಟ್ಟ ಹರಿಯು ಎನಗೆ ಎನುತ ಕೆಟ್ಟ ವಿಷಯ ಮನಕೆ ತರದೆ 2 ಕಾಮ ಕ್ರೊಧ ಲೋಭ ಮೋಹ ಆ ಮಹಾ ಮದ ಮತ್ಸರಗಳು ಕಾಮಿಸಿ ಮನ ಕೆಡಿಸುತಿರಲು ಶ್ರೀ ಮನೋಹರನಾಟವೆಂದು 3 ಪೊಂದಿದಂಥ ಮನುಜರಿಂದ ಕುಂದು ನಿಂದೆ ಒದಗುತಿರಲು ಇಂದಿರೇಶನ ಕರುಣವೆಂದು ಒಂದು ಮನಕೆ ತಾರದಂತೆ 4 ಮಾನ ಅಪಮಾನಗಳು ದೀನನಾಥನಧೀನವೆಂದು ಜ್ಞಾನಿಗಳ ವಾಕ್ಯ ನೆನೆದು ಮಾನಸದ ದುಃಖ ಕಳೆದು 5 ಹೊಟ್ಟೆ ಬಟ್ಟೆಗೊದಗುವಂಥ ಅಷ್ಟು ಕಷ್ಟ ಸುಖಗಳೆಲ್ಲ ವಿಷ್ಣುಮೂರ್ತಿ ಕೊಟ್ಟನೆಂದು ಮುಟ್ಟಿ ಮನದಿ ಹರಿಯ ಪದವ 6 ಹರಿಯ ಧ್ಯಾನ ಮಾಡುವುದು ಹರಿಯ ಧ್ಯಾನ ಅರಿಯುವುದು ಮೂರ್ತಿ ಕಾಣುವುದು ಹರಿಯಧೀನವೆಂದು ತಿಳಿದು 7 ಗುರುಕೃಪೆಯಿಂ ದತ್ತವಾದ ವರ ಸುಜ್ಞಾನವರೆಯ ತಿಳಿದು ಹರುಷ ಕ್ಲೇಶಾ ಮನಕೆ ತರದೆ ಮೂರ್ತಿ ಮನಕೆ ತಂದು 8 ನಿಷ್ಟೆಯಿಂ ಗೋಪಾಲ ಕೃಷ್ಣವಿಠ್ಠಲಾಧೀನ ಜಗವು ಇಟ್ಟ ಹಾಗೆ ಇರುವೆನೆಂದು ಗಟ್ಟಿಮನದಿ ಹರಿಯ ಪೊಂದಿ 9
--------------
ಅಂಬಾಬಾಯಿ
ಕೇಳಿ ನಗಬಹುದು ಮಜಾತ್ಮರು | ಕೇಳಿ ನಗಬಹುದು | ಹೋಲಿಕೀಲ್ಯಾಡುವ ಜನದ ಜ್ಞಾನದ ನುಡಿ ಪ ದಂಭಮಾನದಲಿ | ಮನಸಿನ | ಹಂಬಲ ಘನವಿರಲಿ | ಥಂಬಿಸಿ ಕರ್ಮವ | ಸರ್ವಂ ಬ್ರಹ್ಮಮಯ | ವೆಂಬುದು ತೋರುವರಾ ನುಡಿಗಳಾ 1 ಆಶಾಪಾಶಗಳು | ವಿಷಯದಿ | ಲೇಸಿಗೆ ಬಿಗಿದಿರಲು | ನಾಶಿವ ನಾ ಬ್ರಹ್ಮನೆಂ | ದೊದರುತ ನಾನಾ | ವೇಷವ ಧರಿಸುವರಾ | ನುಡಿಗಳು 2 ಚಿನುಮಯ ನಿಜ ಸುಖವಾ | ಕಂಗಳ ಕೊನಿಯಲಿ ದೋರಿಸುವಾ | ಘನ ಗುರು ಮಹಿಪತಿ ಪ್ರಭು ಕರುಣಾನಂದ | ಅನುಭವಿಸಿದ ಲ್ಯಾಡುವ ನುಡಿಗಳಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬೇಡಿದ್ದು ಕೊಡಬಾರದೇನೊ ಬ್ಯಾಡಾದದ್ದು ಕೊಟ್ಟರೆ ಮಾಡಬೇಕೇನೊ ಪ ಯೆನಗದು ಬೇಕಾಗಿಲ್ಲ ಹಂಸರೂಪವ ಕಾಣಲಿಲ್ಲ 1 ಶ್ರಮ ಪಡಲಾರೆನಿನ್ನು ಅಡಿಗಳಿಗೆರಗುವೆ ಕೊಡು ಮತಿಯನ್ನು2 ಮಾಡಿಕೊಂಡು ಮೆರೆವೆನೆಂಬುವರೊ ನಿನ್ನ ಮುಖವನ್ನು ತೋರೊ 3 ಚಾರು ತೋರದಿರುವರೆ ಮುಕುಂದ ಮುರಾರೆ 4 ಅನುಭವಿಸಿದ್ದು ಸಾಕಿನ್ನು ವಿಠಲನೆ ಕೊಡು ಮುಕ್ತಿಯನ್ನು5
--------------
ಹನುಮೇಶವಿಠಲ
ಮಧುಹರನಿಗರ್ಪಿತವು ಸರ್ವಕರ್ಮ ಪ ಕರ್ಮ ಅನುಭವವು ಅ.ಪ ಸ್ಮøತಿ ವಿಸ್ಮøತಿಯಲ್ಲಿ ಕೃತ ಉತ್ತಮಾಧಮ ಕರ್ಮ ಮತ್ತೆ ಅನುಭವಿಸಿದ ಸುಖ ದುಃಖಗಳಿಗೆ ಚಿತ್ತ ನಿನ್ನದು ಮೂಲ ಸರ್ವ ಸ್ಥಿತಿಗತಿ ಧರ್ಮ ವೃತ್ತಿಗಳಿಗನವರತ ಸತ್ಯ ಸಂಕಲ್ಪನೆ 1 ನೀನಮ್ಮನಿಟ್ಟಪರಿ ನಿನ್ನಿಷ್ಟವಾಗಿರಲು ಎನ್ನಿಷ್ಟವೆನಲ್ಯಾಕೊ ಪ್ರೇಷ್ಠತಮನೆ ವಾಣೀಶ ಹರಸುರರು ನಿನ್ನ ಪ್ರೀತಿಗಾಗಿ ಏನು ಕೊಟ್ಟರು ಮುದದಿ ಉಂಡು ನಿನಗರ್ಪಿಪರೊ 2 ಅಧಿಕಾರಿ ನಾನಲ್ಲದದರಿಂದ ಬೆದರುವೆನು ಮದನನಯ್ಯನೆ ದಯದಿ ಮನ್ನಿಸೆನ್ನ ಉದಯಾಸ್ತ ಕೃತಕರ್ಮ ಜಯೇಶವಿಠಲ ಮುದಖೇದಗಳು ನಿನ್ನ ಪ್ರೀತಿಗೊದಗಲೋ ದೇವ 3
--------------
ಜಯೇಶವಿಠಲ
ಹರಿ ಭಜನೆ ಮಾಡು ನೀ ತ್ವರದಿ ತ್ವರದಿ ಪ ಸಲಹುವ ನಮ್ಮ ಪರಮ ಪಾವನ 1 ವರಧ್ರುವರಾಜನು ನರಹರಿ ಸ್ಮರಿಸಲು ಕರುಣಿಸ್ಯೆವನ ಹರಿ ಭರದಿ ಪೊರೆದೆ 2 ವನವಾಸದಲಿ ಶ್ರಮ ಅನುಭವಿಸಿದ ಪಾಂಡು ತನಯರ ಸಲಹಿದ ಹನುಮೇಶವಿಠಲ 3
--------------
ಹನುಮೇಶವಿಠಲ
ಮುಂಚೆ ಕೈವಿಡಿದಂತೆ ಮಿಂಚೆನ್ನ ಎದೆಗುಡಿಲಿಪಂಚಬಾಣನ ಜನಕನೆ ಪ.ಸಂಚಿತಾರಬ್ಧಾಗಾಮಿ ಸಂಚಂಚಲಿಪ ಮನದ ಪ್ರಪಂಚವನು ಬಿಡಿಸು ತಂದೆ ನೊಂದೆ ಅ.ಪ.ಭವಬವಣೆಗಳನು ಅನುಭವಿಸಿದನ ಸತ್ಕುಲೋದ್ಭವನ ಮಾಡಿದ ಕೃಪೆಗೆ ನವಭಕುತಿ ಕಲಿಸು ಎನ್ನವಗುಣವ ಬಿಡಿಸು ದಾನವವೈರಿನರಮುರಾರಿಶೌರಿ1ಲೇಸು ಹೊಲ್ಲೆಯನರಿಯೆ ಲೇಶ ನಿಷ್ಠೆಯನರಿಯೆ ನಾಲೇಶದೊಳು ನಿನ್ನ ಮರೆದೆ ದಾಸಾಭಿಮಾನಿಯೆ ಸದಾ ಸರ್ವಕಾಲದಿ ಉದಾಸೀನವ ಮಾಡಬೇಡೈ ನೋಡೈ 2ಸ್ಮøತಿಯೊಳಗೆ ಕೂಡಿ ವಿಸ್ಮøತಿಯ ಕೂಡೋಡಾಡಿಸ್ಮøತಿದಾರಿ ಕೊಳದು ಮನವು ಸ್ಮøತಿವಂದ್ಯ ಪ್ರಸನ್ವೆಂಕಟಸ್ಮಿತವದನದಾತಅಸ್ಮತ್ ಪಾಪ ಪಂಕಶೋಷ ನಿರ್ದೋಷ3
--------------
ಪ್ರಸನ್ನವೆಂಕಟದಾಸರು
ಶ್ರೀನಿವಾಸಾ ನೀನೇ ಪಾಲಿಸೋ ಶ್ರೀಯುತಜನಪಾಲಗಾನಲೋಲ ಶ್ರೀ ಮುಕುಂದನೇ ಪಧ್ಯಾನಮಾಳ್ಪ ಸಜ್ಜನರ ಮಾನದಿಂ ಪರಿಪಾಲಿಸುವವೇಣುಗೋಪಾಲಾ ಗೋವಿಂದಾ ವೇದವೇದ್ಯ ನಿತ್ಯಾನಂದಾಅ.ಪಎಂದಿಗೆ ನಿನ್ನ ಪದಾಬ್ಜವ-ಪೊಂದುವ ಸುಖಎಂದಿಗೆ ಲಭ್ಯವೋ ಮಾಧವಾ ||ಅಂಧಕಾರಣ್ಯದಲ್ಲಿ ನೊಂದು ತತ್ತಳಿಸುತಿಹಅಂದದಿಂದ ಈ ಭವದಿನಿಂದುನೊಂದೆನೋ ಮುಕುಂದ1ಎಷ್ಟುದಿನ ಕಷ್ಟಪಡುವುದೋ-ಯಶೋದೆಯ ಕಂದದೃಷ್ಟಿಯಿಂದ ನೋಡಲಾಗದೆ ||ಮುಟ್ಟಿ ಭಜಿಸುವನಲ್ಲ ಕೆಟ್ಟ ನರಜನ್ಮದವನುದುಷ್ಟಕಾರ್ಯ ಮಾಡಿದರು ಇಷ್ಟನಾಗಿ ಕೈಯ ಹಿಡಿದು 2ಅನುದಿನಅನೇಕ ರೋಗಗಳ-ಅನುಭವಿಸಿದೆನೊಘನಮಹಿಮ ನೀನೆ ಬಲ್ಲೆಯಾ ||ತನುವಿನಲ್ಲಿ ಬಲವಿಲ್ಲ ನೆನೆದ ಮಾತ್ರ ಸಲಹುವಹನುಮದೀಶಪುರಂದರವಿಠಲ ನೀ ಎನಗೆ ಒಲಿದು3
--------------
ಪುರಂದರದಾಸರು