ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆನಂದ ಗಿರಿ ವಿಠಲ | ಕಾಪಾಡೊ ಇವಳಾ ಪ ನೀನೊಲಿಯದಿನ್ನಿಲ್ಲ | ಕಾರುಣ್ಯ ಮೂರ್ತೆ ಅ.ಪ. ಮೋದ ಪಡಿಸುವ ಭಾರಾಶ್ರೀಧರನೆ ನೀನದಲ್ಲೆ | ಹೇ ದಯಾಪರನೇ |ಮಾಧವನೆ ತವದಾಸ್ಯ | ಸಾದರದಿ ಬಯಸುವಳುಹೇ ದಯಾಂಬುಧೆ ಚೆನ್ನ | ಉಪದೇಶಿಮನ್ನಿಸೋ 1 ಕಾಮಾದಿ ಅರಿಗಳನ | ನೇಮದಿಂದಲಿ ಸವರಿಭೂಮಗುಣಿತವ ಸ್ತವನ | ಕಾಮದಲಿ ಇರಿಸೀನೇಮ ಸಾಧನೆಗೈಸೀ | ಕಾಮಿತಾರ್ಥವನೀಗೋಶ್ರೀ ಮಹೀಸೇವಿತನೆ | ರಾಮಗುಣಧಾಮಾ 2 ಮೋದ ಮುನಿ ವಂದ್ಯಾ |ಬೇಧ ಸುಖದ್ವಂದಾದಿ | ಸಾದರದಿ ಅನುಭವಿಪಹಾದಿಯಲ್ಲಿರಿಸೊ ಗುರು | ಗೋವಿಂದ ವಿಠಲಾ 3
--------------
ಗುರುಗೋವಿಂದವಿಠಲರು
ಇರಬೇಕು ನಿಂದಕರು ಸಜ್ಜನರಿಗೆ ಪ ದುರಿತ ರಾಶಿಗಳ ಪರಿಹರಿಸಲೋಸುಗ ಅ.ಪ. ಕಲುಷ ಕರ್ಮವ ಮಾಡೆ ಕಳೆವರಿನ್ನಾರೆಂದು ಕಮಲಭವನು ತಿಳಿದು ನಿರ್ಮಿಸಿದವನಿಯೊಳಗೆ ನಿಂದಕರ ಕಲುಷರನ ಮಾಡಿ ತನ್ನವರ ಸಲಹುವ 1 ದಿವಿಜರಿಳೆಯೊಳಗೆ ಜನ್ಮಗಳೊಲ್ಲೆವೆಂದಬ್ಜ ಭವಗೆ ಮೊರೆಯಿಡಲು ವರವಿತ್ತನಂದು ಕರ್ಮ ಮಾಡಿದರು ಸರಿಯೆತ ನ್ನವನೆನಿಸದವಗೆ ತಜ್ಜನ್ಯ ಫಲ ಬರಲೆಂದು 2 ಮಾನವಾಧಮ ಜನರು ನೋಡಿ ಸಹಿಸದಲೆ ಹೀನ ಮತಿಯಿಂದ ಮಾತುಗಳಾಡಲು ಭಾನು ಮಂಡಲಕೆ ಮೊಗವೆತ್ತಿ ಉಗುಳಿದರೆ ನ್ನಾನನವೆ ತೊಯ್ವುದಲ್ಲದರ್ಕಗೇನಪಮಾನ 3 ಮಲವ ತೊಳೆವಳು ತಾಯಿ ಕೈಗಳಿಂದಲಿ ನಿತ್ಯ ತೊಳೆವ ನಿಂದಕ ತನ್ನ ನಾಲಗಿಂದ ಬಲು ಮಿತ್ರನಿವನೆಂದು ಕರೆದು ಮನ್ನಿಸಬೇಕು ಹಲವು ಮಹ ಪಾಪಗಳ ಕಳೆದು ಪುಣ್ಯವನೀವ 4 ಅನುಭವಿಪ ದುಷ್ಕರ್ಮಗಳ ಜನ್ಯ ಫಲವು ತ ನ್ನಣುಗರಿಗೆ ಅಪವಾದ ರೂಪದಿಂದ ಉಣಿಸಿ ಮುಕ್ತರ ಮಾಡಿ ಸಂತೈಪ ನರಕ ಯಾ ತನೆಗಳವರಿಗೆ ಇಲ್ಲದುದರಿಂದ ಎಂದೆಂದೂ 5 ಮನುಜಾಧಮರಿಗೆ ಹರಿದಾಸರಲಿ ದ್ವೇಷ ವೆನಿಪ ಸಾಧನವೆ ನಿಸ್ಸಂದೇಹವು ಅನುತಾಪ ಬಿಡದೆ ಹರುಷಿತರಾಗಿ ನಿಷ್ಪ್ರಯೋ ಜನದಿ ಹರಿಪದಾಬ್ಜ ಭಜಿಪ ಭಜಕರಿಗೆ 6 ಲೋಕದೊಳು ನಿರ್ಮಿಸಿದನಿರ್ವರನು ಹರಿ ತಾನು ಭೂ ಕೋವಿದರ ಮಲವು ಪೋಗಲೆಂದು ಶ್ರೀ ಕರಾರ್ಚಿತ ಜಗನ್ನಾಥವಿಠಲ ಗ್ರಾಮ ಸೂಕರರು ನಿಂದಕರು ಕರುಣಾಳು ಇಳೆಯೊಳಗೆ 7
--------------
ಜಗನ್ನಾಥದಾಸರು
ಋಗ್ವೇದ ಪ್ರಿಯ ವಿಠಲ | ಸದ್ಗುಣಾರ್ಣವನೇ ಪ ಋಗ್ವಿನುತ ನೀನಾಗಿ | ಈಕೆಯನು ಪೊರೆಯೋ ಅ.ಪ. ವೇದಾಧಿಕಾರವನು | ನೀ ದಯದಿ ತ್ಯಜಿಸದೆಮೋದದಿಂ ತೋರಿ | ಋಗ್ವೇದ ವಾಚಿಸಿದೇ |ಮೋದ ಮುನಿ ಮತದಲ್ಲಿ | ಸಾಧಿಸಿವಳಲಿ ದೀಕ್ಷೆಭೇದ ಪಂಚಕ ತಿಳಿಸಿ | ಉದ್ಧರಿಸೊ ಇವಳಾ 1 ಹರಿದಾಸ್ಯ ಕಷ್ಟವೆನೆ | ಹಿರಿಯರ ಮತವಿಹುದುತರಳೆ ಆದ ಕಾಂಕ್ಷಿಪಳು | ಪೂರ್ವ ಪುಣ್ಯದಲೀಮುರವೈರಿ ನೀನಾಗಿ ಕರುಣಿಸುತ ತವದಾಸ್ಯಪರಿಹರಿಸು ಭವನೋವ | ಕಾರುಣ್ಯಮೂರ್ತೇ 2 ಭವ | ಮೋಚನವ ಗೈಯ್ಯೋ 3 ಲೌಕಿಕವು ವೈದಿಕವು | ಸಕಲವರ್ಣಾತ್ಮಕನೆವಾಕು ಸಕಲವು ತವ ಆ | ಲೌಕಿಕದ ಮಹಿಮಾವಾಕಾಗಿ ವರ್ತಿಸುತ | ಬೇಕಾದ ವರ ನೀಡಿನೋಕ ನೀಯನೆ ಕಾಯೊ | ಈಕೆಯನು ಹರಿಯೇ 4 ಭಾವಿ ಮರುತರ ಪ್ರೀಯ | ಆವಾವ ಕಾಲಕ್ಕುದೇವ ತವ ಸ್ಮøತಿಯಿತ್ತು | ಕಾವುದೀಕೆಯನೂನೋವು ಸುಖಗಳ ಸಮತೆ | ಭಾವದಲಿ ಅನುಭವಿಪಭಾವ ಕೊಡುವುದು ಗುರೂ | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಕಂಡು ಎಂದಿಗೆ ಧನ್ಯಳಾಗುವೆ ನಾನು ಪಾದ ಪುಂಡರೀಕವನೂ ಪ. ಪುಂಡರೀಕನಿಗೊಲಿದು ಒಂದು ಇಟ್ಟಿಗೆ ಮೇಲೆ ಪಾಂಡವರ ಪ್ರಿಯ ಬಂಧು ನೆಲಸಿದಂಥಾ ಪಂಡರೀ ಕ್ಷೇತ್ರದಲಿ ಚಂದ್ರಭಾಗದಿ ಮಿಂದು ಮಂಡೆ ಬಾಗುತ ಹರಿಗೆ ಹಿಂಡಘವ ಕಳೆದೂ 1 ಕೋಮಲದ ಚರಣಕಭಿನಮಿಸಿ ಕರಯುಗದಿಂದ ಶ್ಯಾಮವರ್ಣನ ಪಾದಕಮಲ ಮುಟ್ಟೆ ಆ ಮಹಾ ಆನಂದ ಅನುಭವಿಪ ಭಾಗ್ಯವನು ಶ್ರೀ ಮಹಾಲಕುಮಿಪತಿ ಎಂದು ಕಾಂಬುವೆನೋ 2 ಆಪಾರಭಕ್ತರಿಗೆ ವಲಿದ ವಿಠಲನ ಮೂರ್ತಿ ಆಪಾದ ಮೌಳಿ ಈಕ್ಷಿಸುತ ಹೃದಯದಲಿ ಇರ್ಪಮೂರ್ತಿಯ ತಂದು ಗುರುಬಿಂಬ ಸಹಿತದಲಿ ಗೋಪಾಲಕೃಷ್ಣವಿಠಲನ ಎಂದು ಕಾಂಬೆ 3
--------------
ಅಂಬಾಬಾಯಿ
ನೆಲೆಗೊಂಡದೇನು ಮನಮೇಗಚಲಿಸುವೆ ನೀನು ಹಲವು ವಿಷಯದೊಳು ಪಸಿಲುಕಿದ ಬಗೆುಂದ ಹೊಲಬುದಪ್ಪಿತು[ಸಲೆ]ನಿನ್ನ ನಿಜವ ನೀ ಕಾಣು ಅ.ಪಗುರುವಿನಂಘ್ರಿಗೆ ನೀನು ನಮಿಸಿ ನಿನ್ನಮರವೆಯ ಭಾವವ ಕೆಡಿಸಿಕರಣವ ನಿಲುಕಡೆಗೊಳಿಸಿ ಬಹುಕರುಣವ ನಿನ್ನೊಳಗಿರಿಸಿಪರಮಾತ್ಮನಾಗ್ಯನ್ಯ ವಿಷಯಮೊಂದಲಾಶೆಪರಿದು ಭ್ರಾಂತಿಯಲೊಂದಿದ ಸುಖವ ಸೂಸಿ 1ಮನೆಯೊಂದು ನನಗಿಹುದೆಂದು ಅಲ್ಲಿಜನರೆಡೆಗೊಳೆ ದುಃಖ ಬಂದುಅನುಭವಿಪುದು ಯುಕ್ತವೆಂದು ಅದ[ಕನು]ಕೂಲವಾಗಬೇಕೆಂದುಅನುದಿನವನು ಸಂಧಾನದಿ ನಿಂದು ಗುರು ಕೊಟ್ಟಅನುಭವ ಬಯಲಾಗಿ ಭ್ರಮೆಗೆ ನೀ ಸಂದು 2ನೀನೊದು ಕೊಡಹೇಳಿ ಕೇಳಿ ಅಲ್ಲಿಹೀನತೆಯನು ಬಹುತಾಳಿದೀನರು ನೀವೆಂದು ಪೇಳಿ ಅನುಮಾನದ ಬಲು ಬಿರುಗಾಳಿಏನೆಂಬೆ ಬೀಸಲು [ತಾ] ನದರೊಳಗಾಳಿಜ್ಞಾನಹೋುತು ಭೇದ ಬುದ್ಧಿಯ ತಾಳಿ 3ಮಾಯಕವಾಗಿರೆ ಜಗವೂ ಬಹೂಪಾಯಗಳಿಂದ್ರಜಾಲಕವೂಆಯವರಿಯದದರಿರವೂ ತನ್ನತಾಯ ಕಾಣದ ಶಿಶುತನವೂಈಯಶೇಷವು ಸ್ವಪ್ನದನುಭವವಳಿವವುಬಾಯಮಾತಿನಜ್ಞಾನ ಕಪಟ ಸಂಭ್ರಮವೂ 4ಪರಮಾತ್ಮನೊಬ್ಬನಾಗಿಹನೂ ತಾನುಪರಿ ಪರಿ ರೂಪ ತೋರುವನುಅರಿತೆ ಭೇದವನಿದ ನೀನು ಬಹುಜರೆಯುತ ಗುಣದೋಷಗಳನುಗುರುವಾಸುದೇವರೂಪಿಲಿ ನಿನ್ನ ಕರವನುತಿರುಪತಿ ವೆಂಕಟ ಪಿಡಿಯೆ ಭ್ರಾಂತೇನು 5
--------------
ತಿಮ್ಮಪ್ಪದಾಸರು
ರಕ್ಷಿಸೋ ಶ್ರೀ ವೇದವ್ಯಾಸ | ಬದರಿನಿವಾಸ | ಆಶ್ರಿತ ಜನತೋಷ ಪ ಭೃತ್ಯ ಮತ್ಸ್ಯ | ವ್ಯಕ್ತನಾದನು ಹರಿ ಅವ್ಯಕ್ತ | ಕರೆಸಿದ ಸತ್ಯ | ವತಿಯಸುತ ಗೋಪ್ತ 1 ಕಾಲ ತಾಪ | ಬಟ್ಟರು ಜನ ಪ್ರಲಾಪ |ಶ್ರೀಪತಿ ತಾಳ್ದನು ರೂಪ | ವ್ಯಾಸ ರೂಪ | ದೋಷ ನಿರ್ಲೇಪ |ದ್ವೀಪದೊಳುದಿಸಿತೀರೂಪ | ಯಮುನಾ ಸಮೀಪ | ಪರಾಶರ ಜನೆನಿಪ 2 ಸೂತ್ರ ದಾತ | ಎನ್ನೊಳು ಪ್ರೀತ | ನಾಗು ಭಕ್ತಿ ಪ್ರದಾತ 3 ಜನಿತ | ಸಕಲ ಭಸ್ಮೀಭೂತ 4 ಭೋಗಾದಿಂ ಪ್ರಾರಬ್ಧ ಪೋಗಾಡಿದಂಥ | ಕಾರ್ಯಾಖ್ಯ ಬ್ರಹ್ಮಪ್ರಾಪ್ತ |ಯೋಗೀಜನ ಪ್ರಳಯೇಪಿ ಅಜನ ಪ್ರಾಪ್ತ | ಇತ್ಯಾದ್ಯವಸ್ಥಾದಿಯೊಳ್ಗತ |ಮಾರ್ಗಗಳು ಶೇಷ ಗರುಡಾದಿಯೋಳ್ಗತ | ಈ ಪರೀಯಿಂ ಸಮಸ್ತ |ಯೋಗೀ ಜನಂಗಳಿಗೆ ಆ ಅಜಸಮೇತ | ವಿರಜಾ ಸ್ನಾನ ಪ್ರಾಪ್ತ ||ಸ್ನಾನದಿಂದಲಿ ಲಿಂಗನಾಶ | ಮಾಡುವೆ ಶ್ರೀಶ | ಆದರವರು ನಿರ್ದೋಷ |ಅನಂತರ್ಹರಿ ಉದರ ಪ್ರವೇಶ | ಕೆಲವರು ಶ್ರೀಶ | ಆನಂದವೇ ವಪುಷ |ಜ್ಞಾನಿ ಇನ್ನಿತರರು ತದ್ದೇಶ | ದಲ್ಲಿವಾಸ | ಆನಂದಾನನುಭವ ಶ್ರೀಶ |ನಾನಾ ಪರಿಯೋಗ್ಯರ ಶ್ರೀಶ | ಪ್ರಳಯದಲ್ಲೀಶ | ಧರಿಸುವಸರ್ವೇಶ 5 ಪರಿ ಕಾರಣಂಗಳಿಂದ ನಿನ್ನ | ಇಚ್ಚಾಖ್ಯ ಆವರಣವಪಸಾರಿಸೀ |ತುಷ್ಟೀಯಿಂದಲಿ ಸ್ವಸ್ತಯೋಗ್ಯಸುಖವ | ಅಭಿವ್ಯಕ್ತಿಂಗಳಂ ಗೈಯ್ಯುವಾ |ಲಕ್ಷ್ಣ ಮುಕ್ತಿದ ಮಾಯೆ ಪತಿಯು ಆದ | ಶ್ರೀವಾಸುದೇವನ ದರ್ಶನ ||ವಾಸುದೇವನ ಕಂಡನಂತರ | ಮತಿವಂತರ | ಪೊಗಿಸುವಾಗಾರ |ಶ್ರೀಸಿತ ದ್ವೀಪಾದಿ ಆಗಾರ | ವರ ಮಂದಿರ | ವೈಕುಂಠಾಗಾರ | ಲೇಸಾಗಿ ಸ್ವಯೋಗ್ಯ ಸುಖಸಾರ | ಅತಿಪರತರ | ಅನುಭವಿಪ ವಿಸ್ತಾರ | ಆಶಾಮಾತ್ರದಿ ಸರ್ವ ಸುಖಸಾರ | ಸೃಷ್ಟ್ಯಾದಿ ಇತರ | ಇತ್ತು ತೋಷಿಪೆ ಅವರ 6 ಚಾರು ಕೌಪೀನ ಮದನ ದರ ಪೋಲ್ವಧದನ | ತುಳಸಿಯ ವನ | ಮಾಲೆಗಳ್ಹಸನ |ನಂದನಂದನ ನಿನ್ನ ಕರುಣ | ಗುಣಾಭರಣ | ತೊಡಿಸಯ್ಯ ಪ್ರಧನ 6 ಪ್ರೀಯಾ ಪ್ರೀಯ ಸರ್ವ ವಿಷಯಕೆಲ್ಲ | ನೀನೇ ಮೂಲನೆಂದು ತಿಳಿಸೋ |ಕಾಯಾ ವಾಚಕ ಮಾನಸೀಕ ಸರ್ವಾ | ಕರ್ಮಾದಿಗಳೆಲ್ಲವಾ ||ಜೀಯಾ ನಿನ್ನಯ ಚರಣಕಿತ್ತು ನಮಿಪ | ಬಿಂಬಕ್ರಿಯಾಜ್ಞಾನವಾ ||ರಾಯಾ ನೀನೆನಗಿತ್ತು ಪಾಲಿಸಯ್ಯ ಮುದದೀ | ನಿನ್ನನ್ನು ನಾ ಬೇಡುವೆ ||ತುತಿಪ ಜನರ ಸುರಧೇನು | ಕಾಮಿತವನೆ | ಕರುಣಿಪ ಕಲ್ಪದ್ರುಮನೆ |ಮತಿಗೆಟ್ಟ ಮನುಜನು ನಾನೆ | ನಿನ್ನ ಪಾದವನೆ | ನಂಬಿ ಬಂದಿಹೆ ನಾನೇ |ಹಿತದಿಂದ ನೀನೆನ್ನ ಕರವನೆ | ಪಿಡಿ ಎಂಬೆನೆ | ನಾ ಬೇಡುವೆ ನಿದನೆ |ಅತುಳ ಮಹಿಮ ಜಗದೀಶನೆ | ಮಧ್ವೇಶನೆ | ಗುರು ಗೋವಿಂದ ವಿಠಲನೆ 8
--------------
ಗುರುಗೋವಿಂದವಿಠಲರು