ಒಟ್ಟು 12 ಕಡೆಗಳಲ್ಲಿ , 6 ದಾಸರು , 11 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಭಿಮಾನ ಕಳೆವಂಥ | ಸುಲಭ ಮಾರ್ಗವನೇ |ಪ್ರಭುವೆ ಹರಿ ನಿನ್ನ ಸ್ಮøತಿ | ಸರ್ಬದಲಿ ಈಯೋ ಪ ಕರ್ಮ | ಸೃಷ್ಟಿ ನಡೆಸುವಲಿ |ಇಷ್ಟು ತತ್ವೇಶರನು | ಸುಷ್ಠು ಕರ್ಮವ ನಡೆಸೆಭ್ರಷ್ಟ ಎನ್ನಿಂದೆಂಬ | ಕರ್ತೃತ್ವದಲ್ಲಿರುವಾ 1 ಕರ್ಮ ಕರ್ಮ ನಾಮಕನೇ 2 ತನುನಿಷ್ಠ ತತ್ವೇಶರ | ಗಣಿತದ ಕರ್ಮಗಳತನು ತಮ್ಮ ಇಂದ್ರಿಯದಿ | ಅನುನಯದಿ ಗೈಯ್ಯೋ |ಎನ ತನುವು ಇಂದ್ರಿಯವೆ | ಕಾರಣವು ಎಂಬಂಥಹೀನ ಕಾರಕ ಸ್ವಾಮ್ಯ | ಮಾನವೆಂಬಂಥಾ 3 ಹಲವು ತತ್ವರು ದೇಹ | ದಲಿ ನಿಂತು ಕರ್ಮಗಳಹಲವು ಗೈಯುತ ಹರಿಗೆ | ಒಲಿದು ಅರ್ಪಿಸುತಿರೇ |ಫಲವು ಹಂಚಿಪ ಹರಿಯ | ಫಲಸ್ವಾಮ್ಯ ತಿಳಿಯದಿಹತಿಳಿಗೇಡಿ ಯೆನ್ನ ಭ್ರಮ | ಒಲಿದು ನೀ ಕಳೆಯೋ 4 ಅಹಿಕ ಪಾರತ್ರಿಕವು | ವಿಹಿತ ಸುಖವೆರಡರಲಿಅಹಿಕ ದುಃಖದ ವಿರಲು | ಬಹುದು ಮೋಕ್ಷೆರಿ ಬಾ |ಅಹಿತ ಮತಿ ಕಳೆಯುತ | ಶ್ರೀಹರಿಯೆ ನಿನ್ವೊಲಿಮೆಮಹಿತ ಮೋಕ್ಷದವೆಂಬ | ವಿಹಿತ ಮತಿ ಈ ಯೋ 5 ವಿಷಯದಲಿ ಮೈ ಮೆರೆತು | ವಿಷಯೋಪ ಭೋಗಗಳೆಅಸಮ ಪುರುಷಾರ್ಥಗಳ | ಲೇಸು ಪ್ರದವೆಂಬಾ |ವಿಷಯಾಭಿಮಾನಗಳು | ನಶಿಪಂತೆ ನೀ ಮಾಡಿವಿಷಯಾದಿಗಳಿಗೆಲ್ಲ | ಈಶ ನೀವೆನೆ ತಿಳಿಸೋ 6 ಕಕ್ಕಸದ ಅಭಿಮಾನ | ಷಟ್ಕಗಳ ನೀ ಕಳೆದುಅಕ್ಕರದಿ ತಾಯ್ತನ್ನ | ಮಕ್ಕಳನು ಪೊರೆವಂತೇ |ಲೆಕ್ಕಿಸದಲೆನ್ನಯ | ಲಕ್ಷ ಅಪರಾಧಗಳ ಕ್ಷಮಿಸಿಚೊಕ್ಕ ಗುರು ಗೋವಿಂದ | ವಿಠ್ಠಲನೆ ಸಲಹೋ 7
--------------
ಗುರುಗೋವಿಂದವಿಠಲರು
ಅರಿ ಬೇಗನೇ ಪರಮಾತ್ಮ ನೀನೈ ಪರತತ್ವನಾ ತ್ವರಿತದಲಿ ತಿಳಿಯೊ ಪ ಮೂರು ತಾಣಗಳ ಮೀರಿ ಗೋಚರಿಪ ತೋರುತಿಹ ಈ ದೇಹಾದಿಗಳಿಗೆ ಬೇರೆಯಾಗಿಪುದೆ ಪರಮಪದವು ಧೀರ ನೀನರಿಯೊ ಅದೆ ನಾನು ಎಂದು 1 ಕೋಶಪಂಚಕವ ಲೇಸಾಗಿ ಕಳೆದು ವಾಸನೆಯ ಪಾಶವನೆ ಹರಿದೊಗೆದು ಕ್ಲೇಶ ಪಡುವದನು ತ್ಯಜಿಸಿ ಮುದದಿ ನಾಶರಹಿತಾದ ಪದವು ತಾನೆಂದು 2 ಜನನಮರಣಗಳಿಗಾಚೆಗಿರುವಂಥ ಮನವಾಣಿಗಳಿಗೆ ನಿಲುಕದಿರುವಂಥ ಘನಪದವು ಇದುವೆ ಪರಮಾತ್ಮನೈ ಅನುನಯದಿ ಪೇಳ್ವ ಗುರುಶಂಕರಾರ್ಯ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಕೈಬಿಡದೆ ಕಾಪಾಡು ಕರುಣಾಳು ಹರಿಯೇ ನಾಬಿಡದೆ ನಿನ್ನಡಿಯ ಮೊರೆಹೊಕ್ಕೆ ದೊರೆಯೇ ಪ ಎಲ್ಲಿನೋಡಿದರಲ್ಲಿ ನಿನ್ನ ಮೂರ್ತಿಯ ತೋರಿ ಎಲ್ಲಕಾಲಗಳೊಳಗು ಭಜನೆ ಬಲಿಸಿ ಉಲ್ಲಸದಿ ಕಾರ್ಯಗಳೊಳೆಲ್ಲ ಸೇವೆಯಗೈಸಿ ನಿಲ್ಲದೆಯ ನೀನಂತ್ಯಕೊದಗು ಸಂತೈಸಿ1 ಧನ್ಯ ಭಕ್ತರೊಳಾಡಿ ಚನ್ನಚರಿತೆಯ ಪಾಡಿ ಉನ್ನತೋತ್ಸವಗಳನು ನೋಡಿ ನೋಡಿ ಯನ್ನ ಮನಕಿನ್ನೊಂದ ತೋರಿಸದೆಯೆ ಸಂ ಪನ್ನ ಪದಯುಗಪೂಜೆ ಕೊಡು ಮುನ್ನ 2 ಘನಜಾಜಿ ಪಟ್ಟಣವಾಸ ಇನಕರ ಪ್ರಭುಶ್ರೀಶ ವನಜಸಂಭವನಯ್ಯ ವರದ ಜೀಯ ಅನುನಯದಿ ಬೇಡುವೆನು ನಾನಂಬೆನನ್ಯರನು ತನಯನೊಳು ಕನಿಕರಿಸು ನಿನ್ನಡಿಯೊಳಿರಿಸು 3
--------------
ಶಾಮಶರ್ಮರು
ದಯ ಮಾಡೊ ಪ್ರೀಯಾ ದಾಸರ ಶುಭೋ-ದಯ ವಿಜಯರಾಯ ಸಾ |ಹಯವಾಗಿ ಒದಗುವೋಭಯ ನಿವಾರಣ ಮಾಡಿ ಪ ಪ್ರಬಲವಾಗಿಹ ಮೋಹ ನಿಬಿಡವಾದದರಿಂದಅಭಯದಾಯಕ ನಿನ್ನ ಶುಭವಾದ ಪಾದಕ್ಕೆಅಭಿವಂದಿಸದಲೆ ಅಲ್ಪರ ಸೇರಿಅಬಲನಾಗುತಲೆ ಪಾಪದ ವನಧಿUಭೀರ ನೋಡದಲೆ ಬಾಳಿದೆ ಯನ್ನಅಭಿಮಾನದೊಡೆಯನೆ ಅಗಡು ಮಾಡದಲೆ 1 ದುರಿತ ಪರಿ ವರಗಳ ಗರೆವ ಕಾರಣ ನಿನ್ನಬಿರಿದು ನಾ ಬಲ್ಲೆ ಎನ್ನಯ ಭಾರಸರಿ ನಿನ್ನದಲ್ಲೆ ಲೌಕೀಕದಪರಿ ಮತ್ತೊಂದೊಲ್ಲೆ ಇಹಪರದಲ್ಲೆ ಪರಮ ಸೌಖ್ಯಕೆ ನಿನ್ನ ಸ್ಮರಣೆ ವಂದಲ್ಲೆ 2 ಪಾಮರ ಜನರಿಗೆ ಸುಮಾರ್ಗಗೋಸುಗಶ್ರೀಮನೋಹರ ನಿನ್ನ ಪ್ರೇಮದಿಂದಲಿ ಸೃಜಿಸಿಭೂಮಿಯೊಳಿಡಲೂ ಹರಿಯ ದಿವ್ಯನಾಮ ನಾ ಬಿಡಲು ದುರ್ವಿಷಯವಕಾಮಿಸಿ ಕೆಡಲೂ | ಸುಮ್ಮನಿರದೆಯಾಮ ಯಾಮಕೆ ನಿನಗೆ ನಾ ಮೊರೆಯಿಡಲೂ 3 ಜಗದಂತರ್ಯಾಮಿಯ ಹಗಲು ಇರುಳು ಬಿಡದೆಸುಗುಣ ಮಾರ್ಗದಲಿದ್ದು ಬಿಗಿಯಾದ ಕವನಕ್ಕೆಬಗೆ ತೋರಿದವನೆ ಹರಿಯ ಕ್ಷಣ ಅಗಲದಿದ್ದವನೆ ಕಾಮದ ಬಲಿಗೆಸಿಗದೆ ನಡೆವವನೆ ಅನುನಯದಿ ಕರವಮುಗಿದು ಬೇಡುವರಲ್ಲಿ ಮುದದಿಂದ ನಲಿವನೆ 4 ಎನ್ನೊಬ್ಬಗಲ್ಲ ಈ ಬಿನ್ನಪ ಕರುಣಾಳೆನಿನ್ನ ಪೊಂದಿದವರ ಮನ್ನಿಸಿ ಸಲಹಯ್ಯಾಬೆನ್ನು ಬಿಡದಲೆ ವ್ಯಾಸ ವಿಠ-ಲನ್ನ ಪಾಡುತಲೆ ಕಾಲವ ಕಳೆವ ಸನ್ಮಾರ್ಗವನೆ ತೋರೋ ತಡಮಾಡದಲೆ 5
--------------
ವ್ಯಾಸವಿಠ್ಠಲರು
ಬಡತನವೆನ್ನನು ಬಾಧಿಪುದೈ ಹರಿ ನುಡಿಯಲೆನಗೆ ನಾಲಗೆ ಬರದೀಪರಿಪ ಅಡಿಯೊಳು ಕೆಡೆದಿಹೆ ತಡಿಗಾಣದೆಯೆ ಕಡಲಣುಗಿಗೊರೆದು ಕಡೆಹಾಯಿಸೊ ದೊರೆ ಅ.ಪ ಮನುಜರು ಯೆನ್ನನು ಮಾನಿಸದಿರುವರು ಮನೆಯೊಳು ಮಕ್ಕಳು ಮಾತನಾಲಿಸರು ಅನುನಯದಿಂ ಸವಿ ವಚನವನುಸುರಲು ವನಿತೆಯುತಾಂ ಕೇಳದೆ ಕೋಪಿಪಳು 1 ಬಂದ ಭಾಗವತರ ಪೂಜೆಯ ಮಾಡಲು ಒಂದಾದರು ಸವಿ ವಸ್ತುವಿಲ್ಲವೈ ಸಂದಣಿ ಸೇರಲು ಮನಸು ಬಾರದು ಕುಂದಹರಿಸು ಮನಕಂಕೆಯ ತಂದು 2 ದಾನವ ಮಾಡಲು ದೀನತೆ ಬಿಡದು ಕಾನನದಿರುತಿಹ ಕುರುಡನಂತಿಹೆನೆ ಏನು ಮಾಡಲೊ ಯೆನ್ನ ಮನದೊಲುಮೆಯ ಬಲ್ಲ ಸಿರಿನಲ್ಲ 3 ಸಾಲದವರು ಗಂಟಲೊಳು ಕೋಲಿಡುವರೊ ಶ್ರೀಲೊಲನೆ ನಾಂ ಮಾಡುವುದೇನು ಲಾಲಿಸಿ ಹೆಜ್ಜಾಜಿಕೇಶವ ಪಾಲಿಸು ಲೀಲೆಯಿಂ ಬಿನ್ನೈಸಿ ಯನ್ನೊಲಿಸು 4
--------------
ಶಾಮಶರ್ಮರು
ಭವ ಭಯ ಪರಿಹರಾ ಪ ಸನಕಾದಿ ಮುನಿವಂದ್ಯ | ಕನಕ ಗರ್ಭಜ ಜನಕಅನುನಯದಿ ಗೀತೆ ಫ | ಲ್ಗುಣಗೆ ಭೋಧಿಸಿದೇಎಣೆಯೆ ತವ ಕರುಣ | ಘನವರ್ಷಣಕೆ ಹರಿಅನಘ ನಿನ್ನಡಿ ನೆಳಲ | ನಾಶ್ರಯಿಪೆ ಎಂದೆಂದೂ 1 ಭುವನ ಮೋಹನ ದೇವ | ಭವಗು ಮೋಹಿಪ ಭಾವದಿವಿಭವರು ತವರೂಪ | ಯುವಗಳಿಕ್ಕದಲೇ |ಸುವನ ತ್ರಯದಲಿ ಕಂಡು | ಪವನಾಂತರಾತ್ಮಮಾಧವನೆ ಹಿಗ್ಗುತಲಿ | ಹವಿಷನರ್ಪಿಪರೋ 2 ಸರ್ವಶಬ್ಧಾಭಿಧನೆ | ಸರ್ವ ದೇವೋತ್ತಮನೆಪರ್ವ ಪರ್ವದಿ ಇದ್ದು | ಪರ್ವ ವಾಚ್ಯಾ |ದರ್ವಿಯಂದದಲಿಪ್ಪ | ಜೀವನ್ನ ಪೊರೆಯುವಸರ್ವಭಾರವು ನಿನ್ನದೊ | ಶರ್ವನೊಡೆಯಾ 3 ಇಂಬು ಅರಿ ತುಂಬಿ ಎನ್ನೊಳು ನೀನುಸಂಭ್ರಮದಿ ಕಾಯುವುದು | ಕುಂಭಿಣಿಯ ರಮಣಾ 4 ವಿಶ್ವ ತೈಜಸ ಪ್ರಾಜ್ಞ | ತ್ರೈಯವಸ್ಥೆ ಪ್ರವರ್ತಕನೆವಿಶ್ವ ವ್ಯಾಪಿಯೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ವನರುಹ ನಯನಾ | ವನಜೇಕ್ಷಣ ಪ್ರಿಯವನರುಹ ನಯನಾ | ಪ ತನುಮನ ಧನಗಳಾ | ನಿನಗರ್ಪಿಸುವಂಥಜನರ ಮನೋರಥ | ಅನುನಯದಿಂದಲೀವೆ 1 ಮನಸಿಜ ಜನಕನೇ | ಫಣಿಶೈಲ ಸದನನೇಅನಲಾಕ್ಷನ ಪ್ರಿಯ | ಗುಣ ಪರಿಪೂರ್ಣ 2 ಮನೆ ಮಗ ಮಡಧ್ಯಬಿ | ಮಾನವು ಪೋಗಲಿಲ್ಲಘನ ವಿಷಯಕೆ ಮನ | ಅನುಸರಿಸುವುದಯ್ಯ 3 ಕನಸು ಮನಸಿನೊಳು | ನಿನಪದ ಧ್ಯಾನವಅನುನಯದಿಂದಲಿತ್ತು | ಜನುಮ ಸಾರ್ಥಕ ಮಾಡೊ 4 ವ್ರಜ ಕರ ಪಿಡಿದು 5
--------------
ಗುರುಗೋವಿಂದವಿಠಲರು
ಶರಣಾಗತ ರಕ್ಷಾಮಣಿಯೆ ಶ್ರೀ ಹರಿಯೆ ಪ ಶರಣಾಗತ ಜನ ವರ ರಕ್ಷಾಮಣಿಯೆಂಬ ಬಿರುದಿನಿಂದಲಿ ಮೆರೆವ ಕರುಣಾ ಭರಣ ಕಾಮಿತ ವರಪ್ರದಾಯಕ ಅ.ಪ. ಜನನ ಮರಣ ರಹಿತ ಜಗದ ಜನ್ಮಾದಿ ಕರ್ತ ಜನುಮ ಜನುಮದಲ್ಲಿ ಜಗದ ಜೀವರಿಗೆಲ್ಲಾ ಅನಿಮಿತ್ತ ಬಂಧುವೆಂದು ನಿನ್ನಯ ಪಾದ ವನಜಗಳನು ನಾವಿಂದು ನಂಬಿಹೆವಿನ್ನು ವನಜನಾಭನೇ ನೀ ಬಂದು ಕಾಯಬೇಕೆಂದು ತನುಮನಂಗಳ ನಿನಗೆ ಒಪ್ಪಿಸಿ ಅನುನಯದಿ ಶಿರ ಮಣಿದು ಬೇಡುವೆ ಅನಘ ಅನುಪಮ ಗುಣಗಣಾಂಬುಧಿ ಅನಿಮಿಷೋತ್ತಮ ಅಪ್ರಮೇಯನೆ 1 ಕಾಮಜನಕ ಪೂರ್ಣಕಾಮ ಆಶ್ರಿತ ಜನ ಕಾಮಧೇನುವೆ ಕೋಟಿ ಕಾಮಲಾವಣ್ಯನೆ ಶ್ರೀ ಮನೋಹರ ಗಂಭೀರ ಸುರುಚಿರ ಘನ ಸನ್ನುತ ಮಹಿಮ ಸಾಮಜನರ ಉದ್ಧಾರ ಭಕ್ತ ಮಂದಾರ ಸಾಮಗಾನ ಪ್ರೇಮ ಜಗದಭಿ ರಾಮ ರಾಕ್ಷಸ ಭೀಮ ಮಂಗಳ ನಾಮ ಸುರಮುನಿ ಸ್ತೋಮ ಸನ್ನುತ ಸ್ವಾಮಿದೇವ ಲಲಾಮ ನಮೊ ನಮೊ 2 ಮಾಧವ ಅರ ವಿಂದಲೋಚನ ಪೂರ್ಣಾನಂದ ಸ್ವರೂಪನೆ ಎಂದೆಂದು ನೀನಲ್ಲದೆ ಗತಿ ಎಮಗಿಲ್ಲ ವೆಂದು ನಿನ್ನನು ಬಿಡದೆ ಕರಿಗಿರೀಶನೆ ತಂದೆ ಯೆಮ್ಮಯ ಕುಂದುಗಳ ನೀ ನೊಂದನೆಣಿಸದೆ ಬಂದು ಸಲಹುವು ಇಂದು ಕರುಣಾ ಸಿಂಧು ನತಜನ ಬಂಧು ನರಹರಿ3
--------------
ವರಾವಾಣಿರಾಮರಾಯದಾಸರು
ಶ್ರೀಮನೋಹರ ನಿನ್ನ ನಾಮವೇ ಯೆನ್ನುಸಿರು ಕ್ಷೇಮ ನಾಡಿಗಳಲ್ಲಿ ತಿರುಗುತಿರಲಿ ಪ ಕಾಮಾದಿ ಷಡ್ವರ್ಗವ್ಯಾಪನೆಯನೋಡಿಸುತ ಪ್ರೇಮದಿಂ ಹೃತ್ಪದ್ಮದಲಿ ತೋರು ಸತತ ಅ.ಪ ಪ್ರಾಪಂಚಿಕರ ಮನವು ವಿಷಯಗಳಿಗೆಳೆವಂತೆ ಪಾಪಹರ ನಿನ್ನೊಳಗೆ ಯನ್ನ ಮನವಿರಲಿ ತಾಪತ್ರಯಂಗಳಿಗೆ ತನಯನನು ಸಿಲುಕಿಸದೆ ಕಾಪಾಡಿಕೋ ಸ್ವಾಮಿ ದಾಸಾನುದಾಸನಂ1 ಕನಸು ಎಚ್ಚರ ನಿದ್ದೆ ಎಂಬವಸ್ಥೆಗಳಲ್ಲಿ ದಿನಕರಪ್ರಭು ಮೂರ್ತಿಯವತಾರ ತೋರಿ ಅನುನಯದಿ ಪದಯುಗವ ಶರಣು ಹೊಂದುವ ಪರಿಯ ಕನಿಕರದಿ ಕರುಣಿಸೈ ಕಮಲನಯನ 2 ಕಫವಾತ ಪಿತ್ಥಗಳ ವಿಕೃತಿಗಳು ಬಾರದೆಲೆ ಅಪರಿಮಿತ ಸುಂದರಾನಂದ ನೀಡಿ ಸಫಲಮಂತ್ರವ ನುಡಿಸಿ ಕೃಪೆಯಿಂದ ಕೈಪಿಡಿದು ಸುಪಥದಿಂ ನದಿದಾಟಿ ಸೇರಿಸಿಕೊ ಅಡಿಗೆ 3 ಹರಿಹರೀ ಹರಿಯೆಂಬೆ ತಾಯಿ ತಂದೆಯೆ ಗುರುವೆ ದೊರೆಯೆನೀ ಸೋದರನು ಸಖನು ಬಂಧೂ ಧರಣೀಧರ ಸರ್ವತ್ರ ಬೆಂಬಿಡದೆ ಸಹಕರಿಸಿ ಪೊರೆವುದೈ ಭವನಾಶ ಹೆಜ್ಜಾಜಿ ಶ್ರೀಶಾ 4
--------------
ಶಾಮಶರ್ಮರು
ಹನುಮಂತಾ | ಮದ್ಗುರುವೆ | ಹನುಮಂತ ಪ ಹನುಮಂತ - ಗುಣಗಣ ನಿಲಯ | ಮುನಿಸನಕಾದಿ ಜನ ಮನಾಲಯ | ಆಹಮನ ಆದೀಂದ್ರಿಯ ನಿಯ | ಮನವನೆ ಮಾಡುತ್ತಅನುನಯದಿಂದಲಿ | ಪಾಲಿಪೆ ಸರ್ವರ ಅ.ಪ. ಅಂಜನೆ ಕುವರನೆ ಹನುಮ | ಚಿಣ್ಣಕಂಜ ಸಖಗೆ ಹಾರ್ದನಮ್ಮಾ | ಇಂದ್ರಸಂಜಯನನ ಹೊಡೆದನಮ್ಮಾ | ಶಿಶುಅಂಜಲಿಲ್ಲವು ನೀ ನೋಡಮ್ಮಾ | ಆಹಸಂಜಯಪಿತ ತನ್ನ | ಶ್ವಾಸ ನಿರೋಧಿಸೆಅಂಜಲು ಮೂರ್ಜಗ | ಕಂಜಾಕ್ಷ ಸಲಹೀದ 1 ರಾಮರ ಭಂಟ ಧೀಮಂತಾ | ಬಲಭೀಮ ಭಯಂಕರ ಅಮಿತಾ | ರೂಪನಾಮಗಳ್ ಪೊಂದುವ ಸತತಾ | ನೋಡುಕಾಮನಯ್ಯನ ಕಾಣ್ವ ನಿರತಾ | ಆಹಭೀಮ ಪ್ರಾಣಾನಂದ | ಮುನಿಯೆಂದು ಕರೆಸುತ್ತಬೊಮ್ಮನ ಪದವಿಯ | ಸಮ್ಮುದದಿ ಪಡೆವಂಥ 2 ಹರಿಯೆ ನೀನು ಪ್ರತಿಬಿಂಬಾ | ಪುರಹರಿಗೆ ನೀನು ಗುರು ಬಿಂಬಾ | ಸುರಾಸುರರ ನೀದಂಡಿಪಾ ಡಿಂಬಾ | ನಿನ್ನವರಣ ವರ್ಣಿಸುವುದು ಗುಂಭಾ | ಆಹಹರ ಮುಖಾದ್ಯರು ನಿನ್ನ | ನಿರುತದಿ ಸುತ್ತಿಸುತ್ತಪರಿಪರಿ ಗುಣರೂಪ | ಕ್ರಿಯೆಗಳ ನೋಳ್ಪರು 3 ನಿನಗೆಣೆ ಯಾರೊ ಸಮೀರ | ಮಹವನಧಿಯ ದಾಟಿದ ಧೀರ | ದೈತ್ಯಜನರ ನೀ ಸವರಿದ್ಯೋ ವೀರ | ದಶಾನನನ ನೀ ಸದದೆಯಾ ಶೂರ | ಆಹಜನಕಜ ರಮಣನ | ನೆನೆ ನೆನೆ ನೆನೆಯುತಅನುಗಾಲ ಕಿಂಪುರುಷ | ಖಂಡದಲಿರುವಂಥ 4 ಕುರುಕುಲ ವನಕೆ ಕುಠಾರ | ದುಷ್ಟಜರೆಯ ಸುತನ ಸೀಳ್ದ ಧೀರ | ಸತಿತರಳೆ ದ್ರೌಪದಿ ಕಾಯ್ದ ವೀರ | ದುರುಳದುರ್ಯೋಧನನ ಅಸು ಹರ | ಆಹಕುರುವಂಶಕನಳನೆ | ಧರಣಿ ಭಾರವ ನಿಳುಹನರಮೃಗ ಲೀಲೆಯಂ | ದರಿಗಳ ತರಿದಂಥ 5 ಯತಿಕುಲ ಕುಮುದಕೆ ಸೋಮ | ದಶಮತಿಯೆ ಮಾಯ್ಗಳ ತರಿದ ಭೀಮ | ಅಹಂಮತಿಯ ಕಳೆ ಸಾರ್ವಭೌಮ | ಜಗತ್ಪತಿಗೆ ನೀ ಸುಪವಿತ್ರ ಧಾಮಾ | ಆಹವಿತತ ಶ್ರೀ ಹರಿಯೆ ಸ | ರ್ವೋತ್ತಮನೆಂಬಂಥಸೂತ್ರಾರ್ಥ ರಚಿಸಿ ಸ | ಚ್ಛಾಸ್ತ್ರವನರುಹಿದ 6 ಪವಮಾನ ಪೊಗಳುವೆ ನಿನ್ನ | ಭವಭವಣೆಯ ಪಡಲಾರೆ ಘನ್ನ | ಗುರುಗೋವಿಂದ ವಿಠಲಾನ | ಚರಣ | ತೋರೊತವಕದಿ ನಿನ್ನೊಳು ಪವನ | ಆಹನವ ವಿಧ ಭಕುತಿಗೆ | ನೆಲೆಯು ನೀನಾಗಿಹೆತವಕೀರ್ತಿ ಪೊಗಳಲು | ಶಿವನಿಗು ಅಳವಲ್ಲ 7
--------------
ಗುರುಗೋವಿಂದವಿಠಲರು
ಹಸೆಗೆ ಬಾರೊ ಕುಸುಮನಯನ ಕುಶಲದಿಂದಲಿ ಬೇಗನೆಶಶಿಮುಖಿಯರ್ ಕರೆವರು ನಿನ್ನ ವಸುಧೆಪಾಲ ರಾಮನೊಪಅಸಮ ವೀರನನೆ ಗೆಲಿದು ಪಶುಪತಿಯ ಬಿಲ್ಲಮುರಿದುಕುಸುಮಬಾಲೆ ಕೊರಳೊಳ್ ಧರಿಸಿವಸುಧೆಸುತೆಯಕರವಪಿಡಿದು1ಕುಶಲದೀ ನಗುನಗುತಾ ಪಸರಿಸುವಿ ಮಂಟಪಕೆ ಹಸೆಗೆಧರಣಿ ಪಾಲರ್ ಲಜ್ಜೆವೆರಸಿ ಮೆರೆವ ಕೀರ್ತಿ ವಿಬುಧರೊಲಿಸೆದುರುಳದೈತ್ಯ ಕ್ರೋಧವರಿಸಿ ಸುರರುರಗದಲ್ಲಿನಿಂದುಹರುಷದಿ ಸುಮ ವರ್ಷವನ್ನು ಕರೆಯುವರೈ ಸರಸದೀ2ಜನಕರಾಯ ಹರುಷದಿಂದ ಜನಕೆ ಓಲೆ ಬರೆಯೆ ಕಂಡುಘನದಿ ದಿಬ್ಬಣ ಕೂಡಿ ಬಂದ ಜನಕ ಜನನಿಯರಿಗೆ ನಮಿಸಿಅನುನಯದಿಂ ಮನ ಓಲೈಸಿ ದನುಜಾಂತಕ ಗೋವಿಂದನೇ3<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>
--------------
ಗೋವಿಂದದಾಸ