ಒಟ್ಟು 4 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಸುಬಾರಿ ಬೇಡಿದರೆ ಹೇಗಾಯಿತು ಹರೇ ವಾಸುದೇವನೆ ನಿನ್ನ ಧ್ಯಾನಕೆ ಸರಿಬಾರದಿರೆ ಪ ಪರಿ ಘಾಸಿಗೊಳಗಾಗಿ ಬಹು ಕ್ಲೇಶದಿಂದಲಿ ನಿನ್ನ ಆಶಿಸಿದವನಾ ಭೂಸುರ ಧೊರಿಯೆ ಶ್ರೀನಿವಾಸ ವೇಣುಗೋಪಾಲ ಕೂಸಿನಂದದಿ ಎತ್ತಿ ಪೋಷಿಸುವುದು ನಿನಗೆ ಹುಟ್ಟದೊ 1 ಸಂಸಾರ ವೆಂಬಂಥ ಶರಧಿಯೊಳು ಮುಳುಗಿ ಬಹು ಹಿಂಸೆ ಬಡುತಲಿ ಬಹಳ ಹೀನನಾಗಿ ಕಂಸಮರ್ದನನಾದ ಘನಮಹಿಮಗೋವಿಂದ ಸಂಶಯವಿಲ್ಲದೆ ನಿಮ್ಮ ಸ್ಮರಿಸುತಲಿ ಅನುದಿನವೂ 2 ಅಘಹರನೆ ನಗಧರನೆ ಆದಿ ಪರಾಕ್ರಮನೆ ನಿಗಮಗೋಚರನಾದ ಘನ 'ಹೊನ್ನ ವಿಠ್ಠಲ 'ನೆ ಜಗತ್ಕರ್ತನೆ ನಿನ್ನ ಚಿಂತನೆಯೆ ಅನುದಿನವೂ ಕರುಣಹುಟ್ಟದೇನು 3
--------------
ಹೆನ್ನೆರಂಗದಾಸರು
ಸಕಲಕಾರ್ಯಾಂತರ್ಗತನಾಗಿ ಹರಿ ಭಕುತರ ಹೃದಯದಲಿ ನೆಲಸಿ ಭಕುತರ ಮನ ಬಂದಂತೆ ಕುಣಿಸೆ ಅವರನು ಹರಿ ಸಕಲಕಾಲದಲ್ಲೂ ಕಾದು ಕೊಂಡಿದ್ದು ಸಲಹುವ ಶ್ರೀ ಶ್ರೀನಿವಾಸ ಪ. ಯಾವಾಗ ಬರುವನೋ ಭಕ್ತರೆಡೆಗೆ ಹರಿ ಹರಿ ಆವಾಗಲಾಗಮಿಸುವುದೇ ಪರ್ವಕಾಲ ಹರಿಯ ಆವಾಗಲೇ ನೆನದು ಮಿಂದು ಧ್ಯಾನಿಸೆ ಆವಾಗಲೇ ಸಂಧ್ಯಾಸಕಲ ಕರ್ಮವ ನಡೆಸೆ ಯಾವಾಗಲೂ ಹರಿ ತಾ ತನ್ನ ಭಕ್ತರ ಕೈ ಬಿಡ ಯಾವ ಕಾಲದಲ್ಲೂ ಶ್ರೀ ಶ್ರೀನಿವಾಸ 1 ನಾನು ದೊಡ್ಡವ ನೀನು ದೊಡ್ಡವನೆಂದು ಹೊಡೆದಾಡದೇ ನಿಮಗೂ ನಮಗೂ ಮತ್ತೊಬ್ಬನಿಹನು ಹರಿ ನಿಮಗ್ಯಾತಕೀ ಛಲದ ವಾದ ಮನುಜರೇ ಅನುದಿನವೂ ನೆನೆಯಿರಿ ಶ್ರೀಹರಿ ಶ್ರೀ ಶ್ರೀನಿವಾಸನ್ನ ಸಕಲರಿಗೂ ದೊಡ್ಡವನವನೇ ಕೇಳಿ ಸಜ್ಜನರೇ 2 ಕಾಲ ಆ ಕಾಲವೆಂದಿಲ್ಲ ಹರಿಗೆ ತನ್ನ ಭಕ್ತರ ಸಾಕಲು ಈ ಸಮಯ ಆ ಸಮಯವೆಂದು ನೋಡನು ಹರಿ ಇಂಥಾ ಈ ಕರುಣದೊರೆಯೆಲ್ಲಾದರುಂಟೆ ಜಗದಿ ಈ ತನುವಿರುವ ತನಕ ಈ ಪರಮ ಪುರುಷನನು ಬೇಕಾದ ಕಾಲದಲಿ ಈ ಮನುಜ ಜಪಿಸುತಿರೆ ಕಮಲನಾಭ ಶ್ರೀ ಶ್ರೀನಿವಾಸ ಸಲಹದಿರನೇ ನಿನ್ನ ಆಪತ್ತಿಗಾಹ ಶ್ರೀಶ ಶ್ರೀ ವೆಂಕಟೇಶಾ 3 ಜಾಗರದಲೂ ಹರಿ ಕಾವ ನಿದ್ರೆಯಲೂ ಹರಿಕಾವ ಜಾಗರ ಸುಷುಪ್ತಿಯಲಿ ಹರಿ ಜಾಗರಮೂರುತಿ ನಿನ್ನ ಕಾವ ಜಾಗು ಮಾಡದೆ ಭಜಿಸು ಜಾನಕಿರಮಣ ಶ್ರೀ ರಾಮಚಂದ್ರನ್ನ ನಿತ್ಯ ಶ್ರೀ ಶ್ರೀನಿವಾಸನ್ನ ಮನವೆ 4 ಬುದ್ಧಿ ಬಂದಿದ್ದು ಅವನಿಂದ ಬುದ್ಧಿ ಅರಿವುದು ಅವನಿಂದ ಅಪ್ರಬುದ್ಧನಾಗದೇ ಬುದ್ಧಿ ಪೂರ್ವಕ ನೀ ನೆನೆದರೆ ಹರಿ ಬದ್ಧಕಂಕಣ ತೊಟ್ಟಿಹನು ಭಕ್ತರ ಕಾಯೆ ಆ ಶ್ರೀ ಶ್ರೀನಿವಾಸನ ಶುದ್ಧ ಮನದಿ ನೆನೆಮನವೆ 5 ವೈರಿ ಗೆಲ್ಲು ಮೊದಲು ನೀನವರ ವಶವಾಗದೆ ನಿನ್ನ ಮನ ಶುದ್ಧಮಾಡಿಕೊ ಮೊದಲು ನಿನ್ನ ಮನಸಿನಶ್ವಕ್ಕೆ ಬುದ್ಧಿಲಗಾಮು ಹಾಕು ನಿನ್ನ ಬುದ್ಧಿಯಲಿ ಮೊದಲನೆ ಕಾರ್ಯವಿದು ಎಂದರಿ ಈ ಮೊದಲು ನನಿಕಾರ್ಯ ನೋಡಿ ಶ್ರೀ ಶ್ರೀನಿವಾಸ ಒಲಿವ ನಿನಗೆಂದೆಂದು ಮನವೆ6 ಈ ತನವು ಈ ನುಡಿ ಈ ಕಾರ್ಯ ಈ ವಾರ್ತೆ ಈ ಕೃಪೆಯು ಶ್ರೀ ಶ್ರೀನಿವಾಸಗಲದೆ ಅನ್ಯತ್ರವಿಲ್ಲ ಹರಿ ಭಕ್ತರ ಸುಳಾದಿ ಭಕ್ತವತ್ಸಲ ಶ್ರೀ ಶ್ರೀನಿವಾಸಗರ್ಪಿತವೆಂದು ತಿಳಿ ಮನವೆ 7
--------------
ಸರಸ್ವತಿ ಬಾಯಿ
ನೆನೆಯಿರೊ ಭಕುತ ಜನರು-ಅನುದಿನವೂನೆನೆಯಿರೊ ಭಕುತ ಜನರುಗಳು ಪಘನಮಹಿಮನ ಸೇವೆಯ ಮಾಡಿದರಾಮನದಲಿ ನೆನೆದ ಅಭೀಷ್ಟವೀವ ಹನುಮಂತ ಅ.ಪಒಂದು ಯುಗದಿ ಹನುಮಂತಾವತಾರನಾಗಿಬಂದು ನೆರೆದಯೋಧ್ಯಾಪುರಕಾ ||ಬಂದ ಧೀರನ ನೋಡಿ ಸುಜನರೆಲ್ಲ-ನಂದದಿಂದಲಿ ಪಾಡಿ 1ವಾಯು ಕುಮಾರಕ ದ್ವಾಪರದಲಿ ಭೀಮ-ರಾಯನೆಂದೆನಿಸಿದ ಕೌರವ ಬಲದಿ ||ನಾಯಕನಾಗಿ ಬಂದ ದುಃಶಾಸನ-ಕಾಯವಳಿದು ನಿಂದ 2ಕಾಯಜಪಿತನ ಮುಂದೆ ಕೌರವರ ತಂದು ರಾಜ-ಸೂಯಯಾಗವ ಮಾಡಿದ ಬಲವಂತ ||ರಾಯರಾಯರ ಧೀರ-ಹನುಮಂತ-ಪ್ರಿಯ ಜನ ಮಂದಾರ 3ಗುರುಮಧ್ವಮುನಿಯಾಗಿ ಹರಿಗತಿಪ್ರಿಯನಾಗಿ-ಕರುಣಾಕರನಾಗಿ ಶರಣರ ಪೊರೆವ ||ಮೆರೆವ ಶ್ರೀ ಹನುಮಂತನ-ದೇವನ ಸ್ಮರಿಸಿರೊ ಗುಣವಂತನ 4ಲಂಕಾಪಟ್ಟಣದ ಸಮೀಪ ಸಮುದ್ರ ದಾಟಿಪಂಕಜನಾಭಶ್ರೀ ಪುರಂದರವಿಠಲನಲೆಂಕ ರಾವಣನ ಗೆದ್ದ-ಈ ಹನುಮಂತ-ಪಂಕಜಮುಖಿಯ ಕಂಡ 5
--------------
ಪುರಂದರದಾಸರು